ಮಂಗಳೂರು : ಶಾಸಕ ಹರೀಶ್ ಪೂಂಜಾ ವರ್ತನೆ ಬೆಳ್ತಂಗಡಿ ಜನತೆಗೆ ಮಾಡಿದ ಅವಮಾನ ಒಬ್ಬ ಶಾಸಕ ರೌಡಿಯಂತೆ ವರ್ತಿಸಿರುವುದು ಖಂಡನೀಯವಾಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಇಂತಹ ಶಾಸಕ ಬಂದಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದಿ.ವಸಂತ ಬಂಗೇರ ಅವರ ಕಾರ್ಯ ಶೈಲಿ ವಿಭಿನ್ನವಾಗಿತ್ತು. ಬಂಗೇರ ಅವರು ನ್ಯಾಯಪರವಾಗಿದ್ದರು.ಆದ್ರೆ ಹರೀಶ್ ಪೂಂಜಾ ಮೀತಿ ಮೀರಿದ್ದಾರೆ.ರೌಡಿ ಶೀಟರ್ ಪರ ನಿಂತು ಪೋಲಿಸರಿಗೆ ಅವಮಾನ ಮಾಡ್ತಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸವಾಗಿದೆ.ಡಿಜೆ ಹಳ್ಳಿ ಕೆಜೆ ಹಳ್ಳಿ ಗಲಾಟೆಯಲ್ಲಿ ಬಿಜೆಪಿಯ ಕೈವಾಡ ಇದೆ ಅಂತ ಅನಿಸುತ್ತೆ.ಅಧಿಕಾರಿಗಳ ಮೇಲೆ ದರ್ಪತೊರುವುದು ಈ ಶಾಸಕನ ನಿತ್ಯ ಕೆಲಸವಾಗಿದೆ.ಪೋಲಿಸರು ಅರೆಸ್ಟ್ ಮಾಡಲು ಹೋದಾಗ ಅವಿತು ಕೊಳ್ತಾರೆ. ಹಾಗಾಗಿ ಯಾರು ಹೆದರಿದ್ದಾರೆ ಎಂದು ವಿಡಿಯೋ ಕ್ಲಿಪ್ಸ್ ನೋಡಿದರೆ ಗೊತ್ತಾಗುತ್ತೆ.ಸಿದ್ದರಾಮಯ್ಯ ಬಗ್ಗೆ ಮಾತನಾಡುವಷ್ಟು ಪ್ರಾಯವಾಗಿಲ್ಲ ಅವರಿನ್ನೂ ಬಚ್ಚ.ಬಿಜೆಪಿ ನಾಯಕರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಡಿಸುತ್ತಿದ್ದಾರೆ ಎಂದು ಕಿಡಿ ಕಿಡಿಕಾರಿದ್ದಾರೆ.
ನೈತಿಕ ಹೊಣೆಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮರು ಚುನಾವಣೆಯಲ್ಲಿ ಸ್ಪರ್ಧಿಸಿ ತಾಕತ್ತಿದ್ದರೆ ಜಯಗಳಿಸಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.