ಮಂಗಳೂರು : ಪಣಂಬೂರ್ ನವ ಮಂಗಳೂರು ಬಂದರನಲ್ಲಿ ಕರ್ನಾಟಕದ ಕಾರ್ಮಿಕರಿಗೆ ಅನ್ಯಾಯ ಎಸಗಿದ JSW ಸಂಸ್ಥೆಯ ವಿರುದ್ಧ ಸಾರ್ವಜನಿಕ ಪ್ರತಿಭಟನೆ ತಾ 22/05/24 ರಂದು ನವ ಮಂಗಳೂರು ಬಂದರ್ ನ ಗೇಟ್ ಬಳಿ ನಡೆಯಿತು.
ಈ ಪ್ರತಿಭಟನೆಯಲ್ಲಿ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಭಾಗಿಯಾಗಿದ್ದು ನಮ್ಮ ರಾಜ್ಯದ ಕಾರ್ಮಿಕರಿಗೆ ಅನ್ಯಾಯ ಎಸಗಿದ JSW ಸಂಸ್ಥೆಯ ವಿರುದ್ಧ ದಿಕ್ಕಾರ ಕೂಗಿದರು, ತಕ್ಷಣ ಸರಿಯಾದ ಕ್ರಮ ಜರಗಿಸುವಂತೆ ಒತ್ತಾಯಗಳು ಕೇಳಿಬಂತು. ಕರ್ನಾಟಕದ ಬಡ ಕಾರ್ಮಿಕರನ್ನು ಸಂಸ್ಥೆ ತೆಗೆದು ಹಾಕಿದ್ದು, ಬೇರೆ ರಾಜ್ಯದ ಕಾರ್ಮಿಕರಿಗೆ ಕೆಲಸ ಕೊಟ್ಟಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ. ಈ ಅನ್ಯಾಯವನ್ನು ಸಾರ್ವಜನಿಕರು ಹಲವು ಸಂಘ ಸಂಸ್ಥೆಗಳು ವಿರೋಧಿಸಿದೆ.
ಪ್ರತಿಭಟನೆ ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು. ಪ್ರತಿಭಟನೆಯಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರು ಬಡ ಕಾರ್ಮಿಕರ ವಿರೋಧಿ JSW ಸಂಸ್ಥೆ ಎಂದು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
“ನಮ್ಮನ್ನು ಕೆಲಸದಿಂದ ಕಿತ್ತುಹಾಕಿದ್ದಾರೆ ನಮ್ಮನ್ನು ನಂಬಿ ಬದುಕಿತ್ತಿದ್ದ ನಮ್ಮ ಕುಟುಂಬ ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ, ನಮಗೆ ನ್ಯಾಯಬೇಕು” ಎಂದು ಕೆಲಸಕಳೆದುಕೊಂಡ ಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ.