ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್, ಗ್ರಾಹಕರಿಗೆ ವಿಶೇಷ ಸೌಲಭ್ಯ ಒದಗಿಸುವ ಮತ್ತು ಆ ಮೂಲಕ ಭಾರತೀಯ ಮನೆಗಳಿಗೆ ಬುದ್ಧಿವಂತ ಜೀವನ ಶೈಲಿಯನ್ನು ಪರಿಚಯಿಸುವ ಮೂರು ಹೊಸ ರೆಫ್ರಿಜರೇಟರ್ಗಳನ್ನು ಬಿಡುಗಡೆ ಮಾಡಿದೆ. ಹೊಸ ರೆಫ್ರಿಜರೇಟರ್ಗಳು ಸ್ಯಾಮ್ಸಂಗ್ನ ಮುಂದಿನ ಪೀಳಿಗೆಯ ಕೃತಕ ಬುದ್ಧಿಮತ್ತೆ- ಚಾಲಿತ ಇನ್ವರ್ಟರ್ ಕಂಪ್ರೆಸರ್ ಅನ್ನು ಒಳಗೊಂಡಿವೆ. ಸ್ಯಾಮ್ಸಂಗ್ನ ಹೊಸ ರೆಫ್ರಿಜರೇಟರ್ಗಳ ಹೃದಯವಾಗಿರುವ ಈ ಎಐ ಇನ್ವರ್ಟರ್ ಕಂಪ್ರೆಸರ್ ಮೋಟಾರ್ ದಕ್ಷತೆ ಮತ್ತು ಶಕ್ತಿ ದಕ್ಷತೆಯನ್ನು ಪ್ರದರ್ಶಿಸಲಿದ್ದು, ವಿದ್ಯುತ್ ವೆಚ್ಚವನ್ನು ಗಣನೀಯವಾಗಿ ಉಳಿಸಲಿದೆ.
ಸ್ಯಾಮ್ಸಂಗ್ನ ಎಂಟನೇ ಜನರೇಷನ್ ನ ಈ ಕಂಪ್ರೆಸರ್ ಎಐ ವಿಶೇಷತೆಯನ್ನು ಹೊಂದಿದೆ. 27 ವರ್ಷಗಳ ಹಿಂದೆ ಪರಿಚಯಿಸಲಾದ ಅದರ ಮೊದಲ ಕಂಪ್ರೆಸರ್ನಿಂದ ಈ ಕಂಪ್ರೆಸರ್ ಗೆ ಕ್ರಾಂತಿಕಾರಕ ಬದಲಾವಣೆಯನ್ನು ಕಾಣಬಹುದಾಗಿದೆ. ಎಐ ಇನ್ವರ್ಟರ್ ಕಂಪ್ರೆಸರ್ ಸೆಗ್ಮೆಂಟಿನಲ್ಲಿಯೇ ವಿಶೇಷವಾಗಿರುವ 20-ವರ್ಷದ ವಾರಂಟಿ ಹೊಂದಿದೆ. ಇದು ದೀರ್ಘಾವಧಿಯ ಕಾರ್ಯಕ್ಷಮತೆ ಮತ್ತು ಶಕ್ತಿಯ ದಕ್ಷತೆಯನ್ನು ನೀಡುತ್ತದೆ.
ಹೊಸ ಎಐ ರೆಫ್ರಿಜರೇಟರ್ಗಳು ಮೂರು ಮಾದರಿಗಳಲ್ಲಿ ಬರುತ್ತವೆ, ಆ ಮಾದರಿಗಳು ಹೀಗಿವೆ- 809ಲೀ 4-ಡೋರ್ ಫ್ಲೆಕ್ಸ್ ಫ್ರೆಂಚ್ ಡೋರ್ ಬೆಸ್ಪೋಕ್ ಫ್ಯಾಮಿಲಿ ಹಬ್™ ರೆಫ್ರಿಜರೇಟರ್, ಇದು ಕ್ಲೀನ್ ಚಾರ್ಕೋಲ್ + ಸ್ಟೇನ್ಲೆಸ್ ಸ್ಟೀಲ್ ಬಣ್ಣದಲ್ಲಿ ಲಭ್ಯ. 650ಲೀ 4-ಡೋರ್ ಕನ್ವರ್ಟಿಬಲ್ ಫ್ರೆಂಚ್ ಡೋರ್ ಮಾಡೆಲ್ಗಳು, ಇವು ಗ್ಲಾಸ್ ಫಿನಿಶ್ ಹೊಂದಿರುವ ಶುದ್ಧ ಬಿಳಿ ಮತ್ತು ಸ್ಟೀಲ್ ಫಿನಿಶಿಂಗ್ ಹೊಂದಿರುವ ಬ್ಲ್ಯಾಕ್ ಕ್ಯಾವಿಯರ್ ಬಣ್ಣಗಳಲ್ಲಿ ಲಭ್ಯವಿದೆ.
“ಬೀಸ್ಪೋಕ್ ಎಐ ಹೊಂದಿರುವ ಗೃಹೋಪಯೋಗಿ ಉಪಕರಣಗಳ ಹೊಸ ಯುಗಕ್ಕೆ ಸ್ಯಾಮ್ ಸಂಗ್ ಪ್ರವೇಶಿಸುತ್ತಿದೆ. ಅಸಾಧಾರಣ ಕಾರ್ಯಕ್ಷಮತೆಯನ್ನು ಒದಗಿಸುವ ಉನ್ನತ- ದಕ್ಷತೆಯ ಎಐ ಇನ್ವರ್ಟರ್ ಕಂಪ್ರೆಸರ್ ಅನ್ನು ಒಳಗೊಂಡಿರುವ ರೆಫ್ರಿಜರೇಟರ್ ಗಳನ್ನು ಬಿಡುಗಡೆ ಮಾಡಿದೆ. ಎಐ ಎನರ್ಜಿ ಮೋಡ್ ಅನ್ನು ಬಳಸುವ ಮೂಲಕ ಗ್ರಾಹಕರು 10% ವರೆಗೆ ಇಂಧನ ಉಳಿತಾಯ ಮಾಡಬಹುದು. ಎಐ ಇನ್ವರ್ಟರ್ ಕಂಪ್ರೆಸರ್ಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸ್ಯಾಮ್ಸಂಗ್ ಬದ್ಧವಾಗಿದೆ. ನಮ್ಮ ರೆಫ್ರಿಜರೇಟರ್ಗಳು ದೀರ್ಘಕಾಲದ ವಿಶ್ವಾಸಾರ್ಹತೆ ಮತ್ತು ಕಡಿಮೆ ಶಕ್ತಿಯ ಬಳಕೆ ಸಾಮರ್ಥ್ಯ ಹೊಂದಿದೆ,” ಎಂದು ಸ್ಯಾಮ್ಸಂಗ್ ಇಂಡಿಯಾದ ಡಿಜಿಟಲ್ ಉಪಕರಣಗಳ ವ್ಯವಹಾರದ ಹಿರಿಯ ನಿರ್ದೇಶಕ ಸೌರಭ್ ಬೈಶಾಖಿಯಾ ಹೇಳಿದ್ದಾರೆ.
ಎಐ ಇನ್ವರ್ಟರ್ ಕಂಪ್ರೆಸರ್ ಕೆಲಸ ಮಾಡುವ ಸಮಯದಲ್ಲಿ 35 dB/A ಗಿಂತ ಕಡಿಮೆ ಶಬ್ದವನ್ನು ಉಂಟುಮಾಡುತ್ತದೆ. ಪ್ರಶಾಂತವಾದ ಗ್ರಂಥಾಲಯದಷ್ಟೇ ಶಾಂತವಾಗಿ ಕಾರ್ಯ ನಿರ್ವಹಿಸುತ್ತದೆ. ಸಾಂಪ್ರದಾಯಿಕ ಸ್ಥಿರ- ವೇಗದ ಕಂಪ್ರೆಸರ್ಗಳಿಗಿಂತ ಭಿನ್ನವಾಗಿ ಕಾರ್ಯನಿರ್ವಹಿಸುವ ಈ ಕಂಪ್ರೆಸರ್ ಸುಧಾರಿತ ತಂತ್ರಜ್ಞಾನ ಹೊಂದಿದ್ದು, ತಾಪಮಾನದಲ್ಲಿನ ಸಣ್ಣ ಏರಿಳಿತಗಳಿಗೆ ತಕ್ಷಣವೇ ಪ್ರತಿಕ್ರಿಯಿಸುತ್ತದೆ. ವಾತಾವರಣದ ತಾಪಮಾನ, ಕಾರ್ಯಾಚರಣೆಯ ಮೋಡ್ ಮತ್ತು ಬಾಗಿಲು ತೆರೆಯುವಿಕೆ- ಮುಚ್ಚುವಿಕೆಯಿಂದ ಉಂಟಾಗುವ ತಾಪಮಾನ ಬದಲಾವಣೆಗಳಂತಹ ಅಂಶಗಳ ಆಧಾರದ ಮೇಲೆ ಮೋಟಾರ್ ವೇಗವನ್ನು ಹೊಂದಿಸಿಕೊಳ್ಳುವ ಮೂಲಕ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಲೇ ಉತ್ತಮ ರೀತಿಯಲ್ಲಿ ತಂಪಾದ ಗಾಳಿಯನ್ನು ಉತ್ಪಾದಿಸುತ್ತದೆ.
ಸ್ಯಾಮ್ ಸಂಗ್ 809ಲೀ ಫ್ಯಾಮಿಲಿ ಹಬ್™ ಎಐ ರೆಫ್ರಿಜಿರೇಟರ್ ನಲ್ಲಿ 80 ಸೆಂಮೀನ ಫ್ಯಾಮಿಲಿ ಹಬ್™ ಸ್ಕ್ರೀನ್ ಇದೆ. ಇದು ನವೀನವಾದ “ಎಐ ವಿಷನ್ ಇನ್ಸೈಡ್” ಎಂಬ ಫೀಚರನ್ನು ಹೊಂದಿದೆ. ಆ ಮೂಲಕ ಆಂತರಿಕ ಕ್ಯಾಮೆರಾಗಳನ್ನು ಬಳಸಿಕೊಂಡು ಒಳಗಿನ 33 ಆಹಾರ ಪದಾರ್ಥಗಳನ್ನು ಗುರುತಿಸಬಹುದಾಗಿದೆ ಮತ್ತು ದಾಸ್ತಾನು ಇರುವ ಆಹಾರ ಸಾಮಾಗ್ರಿಗಳನ್ನು ಸುಲಭವಾಗಿ ನಿರ್ವಹಣೆ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಜೊತೆಗೆ ಎಐ ತಂತ್ರಜ್ಞಾನವು ಈ ಆಹಾರ ಪದಾರ್ಥಗಳಿಗೆ ಅನುಗುಣವಾಗಿ ರೆಸಿಪಿ ಸಲಹೆಗಳನ್ನು ಕೂಡ ಒದಗಿಸುತ್ತದೆ. 650ಲೀ ಕನ್ವರ್ಟಿಬಲ್ ಫ್ರೆಂಚ್ ಡೋರ್ ಎಐ ರೆಫ್ರಿಜರೇಟರ್ಗಳು ಇಂಟಿಗ್ರೇಟೆಡ್ ವೈಫೈ ಸಂಪರ್ಕ ಸೌಲಭ್ಯವನ್ನು ಹೊಂದಿವೆ. ಇದರ ಮೂಲಕ ಬಳಕೆದಾರರು ರೆಫ್ರಿಜಿರೇಟರ್ನ ಸೆಟ್ಟಿಂಗ್ಗಳನ್ನು ದೂರದಲ್ಲಿದ್ದೇ ಮೇಲ್ವಿಚಾರಣೆ ಮಾಡಬಹುದು ಮತ್ತು ನಿರ್ವಹಿಸಬಹುದು.
ಜೊತೆಗೆ, ಎಐ ಇನ್ವರ್ಟರ್ ಕಂಪ್ರೆಸರ್ನ ದಕ್ಷತೆ ಮತ್ತು ಬಾಳಿಕೆಯನ್ನು ಹೆಚ್ಚಿಸಲು ಸ್ಯಾಮ್ಸಂಗ್ ಇಂಟರ್ನಲ್ ಮೋಟಾರ್, ಬಾಲ್ ಬೇರಿಂಗ್ಗಳು, ಪಿಸ್ಟನ್ಗಳು, ವಾಲ್ವ್ ಗಳು ಮತ್ತು ಇತರ ಘಟಕಗಳ ಉತ್ಪಾದನಾ ಪ್ರಕ್ರಿಯೆಯನ್ನು ನಿರಂತರವಾಗಿ ಮರು ಸಂಶೋಧನೆ ನಡೆಸುತ್ತದೆ, ಅಭಿವೃದ್ಧಿಪಡಿಸುತ್ತದೆ ಮತ್ತು ಸುಧಾರಿಸುತ್ತದೆ. ಪರಿಣಾಮವಾಗಿ ಎಐ ಇನ್ವರ್ಟರ್ ಕಂಪ್ರೆಸರ್ 95 ಪ್ರತಿಶತದಷ್ಟು ಇಂಟರ್ನಲ್ ಮೋಟಾರ್ ದಕ್ಷತೆಯನ್ನು ಹೊಂದಿದೆ. ಹಿಂದಿನ ಕಂಪ್ರೆಸರ್ ಗೆ ಹೋಲಿಸಿದರೆ, ಹೊಸ ಎಐ ಇನ್ವರ್ಟರ್ ಕಂಪ್ರೆಸರ್ ನಲ್ಲಿ 950- 1,450 ಆರ್ಪಿಎಂ (ರೆಫ್ರಿಜರೇಟರ್ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ಶ್ರೇಣಿ) ಕಡಿಮೆ-ವೇಗದ ಕಾರ್ಯಾಚರಣೆಯ ರೇಂಜ್ ನಲ್ಲಿ ಶಕ್ತಿ ದಕ್ಷತೆಯು 10 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಇದಲ್ಲದೆ, ಹೊಸ ಎಐ ಇನ್ವರ್ಟರ್ ಕಂಪ್ರೆಸರ್ ಸಾಂಪ್ರದಾಯಿಕ ಮಾದರಿಗೆ ಹೋಲಿಸಿದರೆ ಮೋಟಾರ್ ಕಾರ್ಯಾಚರಣೆಯ ಸಮಯದಲ್ಲಿ ನಾಲ್ಕು ಪಟ್ಟು ಹೆಚ್ಚು ನಿಯಂತ್ರಣವನ್ನು ಹೊಂದಿದೆ.
ಬೆಲೆಗಳು ಮತ್ತು ಲಭ್ಯತೆ
809ಲೀ 4-ಡೋರ್ ಫ್ಲೆಕ್ಸ್ ಫ್ರೆಂಚ್ ಡೋರ್ ಬೆಸ್ಪೋಕ್ ಫ್ಯಾಮಿಲಿ ಹಬ್™ ರೆಫ್ರಿಜರೇಟರ್:
ಕ್ಲೀನ್ ಚಾರ್ಕೋಲ್ + ಸ್ಟೇನ್ಲೆಸ್ ಸ್ಟೀಲ್ ಬಣ್ಣದ ಮಾಡೆಲ್: ರೂ. 355000
650ಲೀ 4-ಡೋರ್ ಕನ್ವರ್ಟಿಬಲ್ ಫ್ರೆಂಚ್ ಡೋರ್ ರೆಫ್ರಿಜರೇಟರ್ಗಳು:
ಗ್ಲಾಸ್ ಫಿನಿಶ್ ಇರುವ ಶುದ್ಧ ಬಿಳಿ ಬಣ್ಣದ ಮಾಡೆಲ್: ರೂ. 188900
ಸ್ಟೀಲ್ ಫಿನಿಶ್ ಇರುವ ಬ್ಲ್ಯಾಕ್ ಕ್ಯಾವಿಯರ್ ಬಣ್ಣದ ಮಾಡೆಲ್: ರೂ. 172900
ಮೂರು ಹೊಸ ರೆಫ್ರಿಜರೇಟರ್ಗಳು ಈಗ Samsung.com, ರಿಟೇಲ್ ಅಂಗಡಿಗಳು ಮತ್ತು ಇತರ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿದೆ.