ಬೆಂಗಳೂರು: ಸಿಂಥೆಟಿಕ್ ಮೋಟಾರ್ ಆಯಿಲ್ ನ ಜಾಗತಿಕ ನಾಯಕನಾಗಿರುವ ಎಕ್ಸಾನ್ ಮೊಬಿಲ್ ಇತ್ತೀಚೆಗೆ ಮರ್ಸಿಡಿಸ್ ಬೆಂಝ್ ಇಂಡಿಯಾದೊಂದಿಗಿನ 30 ವರ್ಷಗಳ ಯಶಸ್ವಿ ಪಾಲುದಾರಿಕೆಯನ್ನು ಸ್ಮರಿಸಿಕೊಂಡಿದೆ. ಪುಣೆಯ ಚಕನ್ ನಲ್ಲಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ಘಟಕದಲ್ಲಿ ನಡೆದ ಈ ಮೈಲಿಗಲ್ಲು ಕಾರ್ಯಕ್ರಮ ಇಬ್ಬರು ಪ್ರವರ್ತಕರ ನಡುವಿನ ನಿರಂತರ ಸಹಯೋಗ ಮತ್ತು ಈ ವಲಯದಲ್ಲಿ ನಾವೀನ್ಯತೆ ಮತ್ತು ಪರಸ್ಪರ ಬೆಳವಣಿಗೆಯನ್ನು ಹೆಚ್ಚಿಸುವ ಬದ್ಧತೆಗೆ ನಿದರ್ಶನವಾಗಿದೆ.
ಎ-ಕ್ಲಾಸ್ ಲಿಮೋಸಿನ್, ಮರ್ಸಿಡಿಸ್ ಮೇಬ್ಯಾಕ್ ಎಸ್ 580 ಲಿಮೋಸಿನ್ಸ್ ಮತ್ತು ಜಿಎಲ್ ಇ ಮತ್ತು ಜಿಎಲ್ ಎಸ್ ನಂತಹ ಎಸ್ ಯುವಿಗಳನ್ನು ಒಳಗೊಂಡಿರುವ ಭಾರತದಲ್ಲಿ ಬೆಳೆಯುತ್ತಿರುವ ಐಷಾರಾಮಿ ಪೋರ್ಟ್ ಫೋಲಿಯೊ ವಿಕಸನದ ಅಗತ್ಯಗಳನ್ನು ಪೂರೈಸಲು ಎಕ್ಸಾನ್ ಮೊಬಿಲ್ ಮರ್ಸಿಡಿಸ್ ಬೆಂಝ್ ನೊಂದಿಗೆ ನಿಕಟವಾಗಿ ಕೆಲಸ ಮಾಡಿದೆ.
ಮರ್ಸಿಡಿಸ್ ಬೆಂಝ್ ತನ್ನ ಪ್ರೀಮಿಯಂ ಮತ್ತು ಐಷಾರಾಮಿ ಕಾರುಗಳ ಲೂಬ್ರಿಕೇಷನ್ ಬೇಡಿಕೆಗಳನ್ನು ಪೂರೈಸಲು ಭಾರತದಲ್ಲಿ ತನ್ನ ಬಲವಾದ ಸೇವೆ ಮತ್ತು ಮಾರಾಟದ ನಂತರದ ಕೇರ್ ನೆಟ್ ವರ್ಕ್ ಮೂಲಕ ಉನ್ನತ ಮಟ್ಟದ ಗ್ರಾಹಕರು ಎಕ್ಸಾನ್ ಮೊಬಿಲ್ ಅನ್ನು ಅವಲಂಬಿಸಿದೆ.
ಈ ಸಹಭಾಗಿತ್ವವು ಟೆಸ್ಟಿಂಗ್ , ಫೀಲ್ಟ್ ಟ್ರಯಲ್ ಮತ್ತು ದೇಶದ ಕಾರ್ಖಾನೆ ಮತ್ತು ಸೇವಾ ಜಾಲಗಳಿಗೆ ಉತ್ತಮ-ಗುಣಮಟ್ಟದ ಸಂಪೂರ್ಣ ಸಿಂಥೆಟಿಕ್ ಎಂಜಿನ್ ತೈಲಗಳ ಪೂರೈಕೆಯನ್ನು ಒಳಗೊಂಡಿದೆ. ಈ ಪಾಲುದಾರಿಕೆಯು ಭಾರತದಲ್ಲಿ ವಿಕಸನಗೊಳ್ಳುತ್ತಿರುವ ಅತ್ಯಾಧುನಿಕ, ಆಧುನಿಕ ಮತ್ತು ಮಹತ್ವಾಕಾಂಕ್ಷೆಯ ಗ್ರಾಹಕರ ಅಗತ್ಯಗಳಿಗೆ ವಿಶ್ವಾಸ ಮತ್ತು ಮೌಲ್ಯವನ್ನು ತಲುಪಿದೆ. ಇದರಿಂದ ಎಂಜಿನ್ ಗಳು ಅತ್ಯಂತ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.
ಎಕ್ಸಾನ್ ಮೊಬಿಲ್ ಮಹಾರಾಷ್ಟ್ರದಲ್ಲಿ ವಿಶ್ವದರ್ಜೆಯ ಲೂಬ್ರಿಕೆಂಟ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಹೂಡಿಕೆ ಮಾಡುವ ಮೂಲಕ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿದೆ. ಸಿಂಥೆಟಿಕ್ ಲೂಬ್ರಿಕೇಷನ್ ಸೈನ್ಸ್ ನ ಪ್ರವರ್ತಕರಾದ ಇದು 1974 ರಲ್ಲಿ ಮೊಬಿಲ್ 1™ ಅನ್ನು ಪ್ರಾರಂಭಿಸುವುದರೊಂದಿಗೆ ಜಾಗತಿಕವಾಗಿ ಸಿಂಥೇಟಿಕ್ ಲೂಬ್ರಿಕೆಂಟ್ ಗಳನ್ನು ಪರಿಚಯಿಸಿದ ಮೊದಲ ಸಂಸ್ಥೆಯಾಗಿದೆ. ಮೊಬಿಲ್ 1™ ಜಾಗತಿಕವಾಗಿ ಅತ್ಯಂತ ವಿಶ್ವಾಸಾರ್ಹ ಮತ್ತು ಸುಧಾರಿತ ಸಿಂಥೆಟಿಕ್ ಮೋಟಾರ್ ಆಯಿಲ್ ಬ್ರಾಂಡ್ ಆಗಿ ತನ್ನ ಸ್ಥಾನಮಾನವನ್ನು ಉಳಿಸಿಕೊಂಡಿದೆ. ಮೊಬಿಲ್ 1™ ಎಂಜಿನ್ ಕಾರ್ಯಕ್ಷಮತೆ ಮತ್ತು ರಕ್ಷಣೆಯಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸುತ್ತಿದೆ. ಇದು ವಿಶ್ವದಾದ್ಯಂತದ ಪ್ರಮುಖ ಒಇಎಂಗಳಿಗೆ ವಿಶ್ವಾಸಾರ್ಹ ಲೂಬ್ರಿಕೆಂಟ್ ಆಗಿ ಹೊರಹೊಮ್ಮಿದೆ.
ಈ ಕುರಿತು ಮಾತನಾಡಿದ ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಅವರು, “ಮರ್ಸಿಡಿಸ್ ಬೆಂಝ್ ಮತ್ತು ಎಕ್ಸಾನ್ ಮೊಬಿಲ್ ಭಾರತದಲ್ಲಿ 30 ವರ್ಷಗಳನ್ನು ಪೂರೈಸಿದ ಮೈಲಿಗಲ್ಲನ್ನು ಹಂಚಿಕೊಂಡಿವೆ. ನಿರಂತರ ಆವಿಷ್ಕಾರಗಳ ಮೂಲಕ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವ ದೃಷ್ಟಿಕೋನವನ್ನು ಹೊಂದಿವೆ. ಎಕ್ಸಾನ್ ಮೊಬಿಲ್ ನಮ್ಮ ಮೋಟಾರು ಆಯಿಲ್ ಸರಬರಾಜಿನೊಂದಿಗೆ ಮರ್ಸಿಡಿಸ್ ಬೆಂಝ್ ಗ್ರಾಹಕರು ಮತ್ತು ಡೀಲರ್ ನೆಟ್ ವರ್ಕ್ ಅನ್ನು ಬೆಂಬಲಿಸುವ ನಮ್ಮ ಅತ್ಯಂತ ವಿಶ್ವಾಸಾರ್ಹ ಪಾಲುದಾರನಾಗಿದೆ. ವಿಶೇಷವಾಗಿ ಸಾಂಕ್ರಾಮಿಕ ರೋಗದಿಂದ ಪೂರೈಕೆ ಅಡೆತಡೆಗಳ ನ್ನೂ ಮಿರಿಯೂ ಸಹ ಭಾತರದಲ್ಲಿ ಉತ್ಪನ್ನ ಮತ್ತು ಸೇವೆಗಳನ್ನು ಒದಗಿಸಿದೆ. ಇವು ವಿಶ್ವ ದರ್ಜೆಯ ಕೊಡುಗೆಗಳಾಗಿದ್ದು, ನಮ್ಮ ಸಹಯೋಗದ ಮನೋಭಾವವನ್ನು ಪ್ರೇರೇಪಿಸುವ ಗ್ರಾಹಕರ ಉತ್ಸಾಹವನ್ನು ಒತ್ತಿಹೇಳುತ್ತವೆ ಎಂದರು.
ಎಕ್ಸಾನ್ ಮೊಬಿಲ್ ಲೂಬ್ರಿಕೆಂಟ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ವಿಪಿನ್ ರಾಣಾ ಅವರು ಈ ಕುರಿತು ಮಾತನಾಡಿ, ಮರ್ಸಿಡಿಸ್ ಬೆಂಝ್ ಇಂಡಿಯಾದೊಂದಿಗಿನ ನಮ್ಮ ದೀರ್ಘಕಾಲದ ಪಾಲುದಾರಿಕೆ ಜಾಗತಿಕ ಆಟೋಮೊಬೈಲ್ ಕಂಪನಿಗಳು ನಂಬಿರುವ ಅತ್ಯಾಧುನಿಕ ಲೂಬ್ರಿಕೇಷನ್ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಭಾರತದಾದ್ಯಂತ ಮರ್ಸಿಡಿಸ್ ಬೆಂಝ್ ವಿತರಕರಿಗೆ ಪೂರೈಕೆ ಸರಪಳಿ ಭದ್ರತೆ ಮತ್ತು ವಿಶ್ವಾಸಾರ್ಹತೆಯನ್ನು ಗಳಿಸಿದೆ. ಮರ್ಸಿಡಿಸ್ ಬೆಂಝ್ ಇಂಡಿಯಾ ತನ್ನ ಮುಂದಿನ ಬೆಳವಣಿಗೆಯ ಯುಗದಲ್ಲಿ ಮರ್ಸಿಡಿಸ್ ಬೆಂಝ್ ಇಂಡಿಯಾದ ಕಾರುಗಳಿಗಾಗಿ ವಿನ್ಯಾಸಗೊಳಿಸಲಾದ ಅತ್ಯುತ್ತಮ ದರ್ಜೆಯ ಎಂಜಿನ್ ಆಯಿಲ್ ಗಳನ್ನು ಒದಗಿಸುವ ಮೂಲಕ ಮತ್ತು ವಿತರಕರು ಗ್ರಾಹಕರನ್ನು ಸಂತೋಷಪಡಿಸಲು ಅನುವು ಮಾಡಿಕೊಡುವ ಮೂಲಕ ಮರ್ಸಿಡಿಸ್ ಬೆಂಝ್ ಇಂಡಿಯಾದ ಪ್ರಯಾಣವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಅಂತಿಮ ಎಂಜಿನ್ ರಕ್ಷಣೆಯನ್ನು ಒದಗಿಸುವ ನಮ್ಮ ಪ್ರಮುಖ ಸಿಂಥೆಟಿಕ್ ಎಂಜಿನ್ ತೈಲವಾದ ಮೊಬಿಲ್ 1™ ನ 50 ವರ್ಷಗಳ ಸಂಭ್ರಮವನ್ನು ನಾವು ಆಚರಿಸುತ್ತಿರುವುದರಿಂದ ಭಾರತದಲ್ಲಿ ನಮ್ಮ 30 ವರ್ಷಗಳ ಒಡನಾಟವನ್ನು ಸಂಭ್ರಮಿಸುವುದು ನಮಗೆ ತುಂಬಾ ಹೆಮ್ಮೆಯ ಕ್ಷಣವಾಗಿದೆ. ದೇಶದ ಆಟೋಮೋಟಿವ್ ಕ್ಷೇತ್ರದ ಬೆಳವಣಿಗೆಯನ್ನು ಮುನ್ನಡೆಸುವಲ್ಲಿ ಕೀ ಪ್ಲೇಯರ್ ಆಗಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.