ಬೆಂಗಳೂರು: ಭಾರತ ಮತ್ತು ಇನ್ನಿತರ ದೇಶಗಳಿಗೆ ಪೌಷ್ಟಿಕಾಂಶ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ನೆಸ್ಲೆ ಇಂಡಿಯಾ ಲಿಮಿಟೆಡ್ ಮತ್ತು ಡಾ.ರೆಡ್ಡೀಸ್ ಲ್ಯಾಬರೇಟರೀಸ್ ಲಿಮಿಟೆಡ್ ಜಂಟಿ ಸಹಭಾಗಿತ್ವವನ್ನು ಮಾಡಿಕೊಂಡಿವೆ. ಇನ್ನು ಮುಂದೆ ನೆಸ್ಲೆ ಇಂಡಿಯಾ ಲಿಮಿಟೆಡ್ (BSE : 500790, NSE: NESTLEIND) ನೆಸ್ಲೆ ಇಂಡಿಯಾ ಎಂದು ಮತ್ತು ಡಾ.ರೆಡ್ಡೀಸ್ ಲ್ಯಾಬರೇಟರೀಸ್ ಲಿಮಿಟೆಡ್ ಡಾ.ರೆಡ್ಡೀಸ್ ಆಗಲಿದ್ದು, ಈ ಎರಡೂ ಸಂಸ್ಥೆಗಳ ಸಹಭಾಗಿತ್ವ ಆರಂಭವಾಗಿದೆ. ಭಾರತ ಮತ್ತು ಎರಡೂ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿರುವ ಪ್ರದೇಶಗಳಲ್ಲಿನ ಗ್ರಾಹಕರಿಗೆ ನವೀನ ನ್ಯೂಟ್ರಾಸ್ಯುಟಿಕಲ್ ಬ್ರ್ಯಾಂಡ್ ಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು, ಜಂಟಿ ಕಂಪನಿಯನ್ನು ಆರಂಭಿಸುತ್ತಿರುವುದಾಗಿ ಘೋಷಿಸಿವೆ. ಈ ಪಾಲುದಾರಿಕೆಯು ಭಾರತದಲ್ಲಿನ ಡಾ.ರೆಡ್ಡೀಸ್ ನ ಶಕ್ತಿಯುತವಾದ ಮತ್ತು ಸ್ಥಾಪಿತ ವಾಣಿಜ್ಯ ಸಾಮರ್ಥ್ಯಗಳೊಂದಿಗೆ ಪ್ರಸಿದ್ಧ ಜಾಗತಿಕ ಶ್ರೇಣಿಯ ಪೌಷ್ಟಿಕಾಂಶದ ಆರೋಗ್ಯ ಪರಿಹಾರಗಳ ಜೊತೆಗೆ ವಿಟಮಿನ್, ಮಿನರಲ್ಸ್, ಗಿಡಮೂಲಿಕೆಗಳು ಮತ್ತು ನೆಸ್ಲೆ ಹೆಲ್ತ್ ಸೈನ್ಸ್ (NHSc) ನ ಪೂರಕಗಳನ್ನು ಒಟ್ಟುಗೂಡಿಸುತ್ತದೆ. ಈ ಜಂಟಿ ಉದ್ಯಮವು ಜಂಟಿ ಪಾಲುದಾರರು ತಮ್ಮ ಸಾಮರ್ಥ್ಯಗಳನ್ನು ಸಂಯೋಜನೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೇ, ದೇಶಾದ್ಯಂತ ಗ್ರಾಹಕರಿಗೆ ಮೆಟಾಬಾಲಿಕ್, ಹಾಸ್ಪಿಟಲ್ ನ್ಯೂಟ್ರಿಶನ್, ಜನರಲ್ ವೆಲ್ ನೆಸ್, ಮಹಿಳೆಯರ ಆರೋಗ್ಯ ಮತ್ತು ಮಕ್ಕಳ ಪೋಷಣೆಯಂತಹ ವಿಭಾಗಗಳಲ್ಲಿ ಪೂರಕ ನ್ಯಾಟ್ರಾಸ್ಯುಟಿಕಲ್ಸ್ ಪೋರ್ಟ್ ಫೋಲಿಯೋಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ.
ಈ ಜಂಟಿ ಉದ್ಯಮದ ಕೇಂದ್ರ ಕಚೇರಿ ಹೈದ್ರಾಬಾದ್ ನಿಂದ ಕಾರ್ಯನಿರ್ವಹಣೆ ಮಾಡಲಿದೆ. ಈ ಜಂಟಿ ಉದ್ಯಮವು ನೆಸ್ಲೆ ಗ್ರೂಪ್ ಮತ್ತು ಡಾ.ರೆಡ್ಡೀಸ್ ನ ಸೇವೆಗಳು ಸೇರಿದಂತೆ ಎಲ್ಲಾ ಸಾಮರ್ಥ್ಯಗಳನ್ನು ಬಳಸಿಕೊಳ್ಳಲಿದೆ.
ಜಂಟಿ ಕಂಪನಿಯಡಿಯಲ್ಲಿ ಜಂಟಿ ಪಾಲುದಾರಿಕೆಯ ಆಯ್ದ ಬ್ರ್ಯಾಂಡ್ ಗಳು ಪರವಾನಗಿ ಪಡೆಯಲಿವೆ. ನೆಸ್ಲೆ ಗ್ರೂಪ್ ನೇಚರ್ಸ್ ಬೌಂಟಿ, ಒಸ್ಟಿಯೊ ಬೈ-ಫ್ಲೆಕ್ಸ್, ಎಸ್ಟರ್ –ಸಿ, ರಿಸೋರ್ಸ್ ಹೈ ಪ್ರೋಟೀನ್, ಆಪ್ಟಿಫಾಸ್ಟ್, ರಿಸೋರ್ಸ್ ಡಯಾಬಿಟಿಕ್, ಪೆಪ್ಟಾಮೆನ್, ರಿಸೋರ್ಸ್ ರೆನಲ್ ಮತ್ತು ರಿಸೋರ್ಸ್ ಡಯಾಲಿಸಿಸ್ ಗೆ ಪರವಾನಗಿ ನೀಡಲಿದೆ. ಅದೇ ರೀತಿ ಡಾ.ರೆಡ್ಡೀಸ್ ರೆಬಲಾನ್ಝ್, ಸೆಲೆವಿಡಾ, ಆಂಟಾಕ್ಸಿಡ್, ಕಿಡ್ ರಿಚ್-ಡಿ3, ನ್ಯೂಟ್ರಿಶನ್ ನ ಬೆಕಾಝಿಂಕ್ ಮತ್ತು ಒಟಿಸಿ ವಿಭಾಗಗಳ ಬ್ರ್ಯಾಂಡ್ ಗಳಿಗೆ ಪರವಾನಗಿ ನೀಡಲಿದೆ. ಈ ಜಂಟಿ ಕಂಪನಿಯು 2025 ನೇ ಹಣಕಾಸು ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ.
ಈ ಜಂಟಿ ಸಹಭಾಗಿತ್ವದ ಬಗ್ಗೆ ಮಾತನಾಡಿದ ನೆಸ್ಲೆ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ಅವರು, “ಡಾ,ರೆಡ್ಡೀಸ್ ಲ್ಯಾಬರೇಟರೀಸ್ ಲಿಮಿಟೆಡ್ ಜೊತೆಗೆ ಜಂಟಿ ಸಹಭಾಗಿತ್ವವನ್ನು ಮಾಡಿಕೊಳ್ಳುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ. ಶಕ್ತಿಶಾಲಿ ಬ್ರ್ಯಾಂಡ್ ಗಳು ಮತ್ತು ಉತ್ಪನ್ನಗಳ ಮೂಲಕ ನಾವು ನಮ್ಮ ಗ್ರಾಹಕರ ಜೀವನಕ್ಕೆ ಮೌಲ್ಯವನ್ನು ಸೇರಿಸುವ ಪ್ರಯತ್ನಕ್ಕೆ ಕೈ ಹಾಕಿ, ಈ ನಿಟ್ಟಿನಲ್ಲಿ ಪ್ರಯಾಣವನ್ನೂ ಆರಂಭಿಸಿದ್ದೇವೆ. ಈ ಜಂಟಿ ಉದ್ಯಮವು ಆ ದಿಕ್ಕಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಇದು ನಮ್ಮ ವಿಜ್ಞಾನ ಬೆಂಬಲಿತ ಪೌಷ್ಟಿಕಾಂಶದ ಪರಿಹಾರಗಳನ್ನು ದೇಶಾದ್ಯಂತ ಹೆಚ್ಚಿನ ಜನರಿಗೆ ತಲುಪಿಸಲು ಅವಕಾಶವನ್ನು ಮಾಡಿಕೊಡುತ್ತದೆ. ಡಾ.ರೆಡ್ಡೀಸ್ ಔಷಧೀಯ ಕ್ಷೇತ್ರದಲ್ಲಿ ವಿಶ್ವಾಸಾರ್ಹವಾದ ಹೆಸರನ್ನು ಹೊಂದಿದೆ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪೂರೈಸುವ ನಮ್ಮ ಬದ್ಧತೆಗೆ ಪೂರಕವಾಗಿದೆ. ಈ ಜಂಟಿ ಉದ್ಯಮವು ನಮ್ಮ ಬ್ರ್ಯಾಂಡ್ ಗಳನ್ನು ಗ್ರಾಹಕರ ಹತ್ತಿರಕ್ಕೆ ಕೊಂಡೊಯ್ಯಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಅರ್ಥಪೂರ್ಣವಾದ ಬದಲಾವಣೆಯನ್ನು ತರಲು ದೃಢವಾದ ರೀಟೇಲ್ ಮತ್ತು ವಿತರಣಾ ಜಾಲವನ್ನು ನಿರ್ಮಾಣ ಮಾಡಲು ನಮಗೆ ಅವಕಾಶವನ್ನು ಕಲ್ಪಿಸುತ್ತದೆ’’ ಎಂದು ತಿಳಿಸಿದರು.
ಡಾ.ರೆಡ್ಡೀಸ್ ನ ಬ್ರ್ಯಾಂಡೆಡ್ ಮಾರ್ಕೆಟ್ಸ್ (India & Emerging Markets) ಸಿಇಒ ಎಂ.ವಿ.ರಮಣ ಅವರು ಮಾತನಾಡಿ, “ಈ ಜಂಟಿ ಉದ್ಯಮವು ಉತ್ತಮ ಆರೋಗ್ಯದ ಹಂಚಿಕೆಯ ಉದ್ದೇಶವನ್ನು ಹೊಂದಿರುವ ಎರಡು ಕಂಪನಿಗಳ ನವೀನ ವಿಧಾನವಾಗಿದೆ. ಭಾರತದಲ್ಲಿನ ಗ್ರಾಹಕರಿಗೆ ನೆಸ್ಲೆ ಹೆಲ್ತ್ ಸೈನ್ಸ್ ಗ್ಲೋಬಲ್ ಪೋರ್ಟ್ ಫೋಲಿಯೊದಿಂದ ನಾವೀನ್ಯತೆಗಳನ್ನು ತರುವ ನಿಟ್ಟಿನಲ್ಲಿ ನೆಸ್ಲೆ ಇಂಡಿಯಾದೊಂದಿಗೆ ಪಾಲುದಾರರಾಗಲು ನಾವು ಸಂತೋಷಪಡುತ್ತೇವೆ. ಎರಡೂ ಕಂಪನಿಗಳ ಪರಸ್ಪರ ಪೂರಕ ಸಾಮರ್ಥ್ಯಗಳನ್ನು ನಿಯಂತ್ರಿಸುವ ಈ ಹೊಸ ವಿಧಾನವು ಗ್ರಾಹಕರಿಗೆ ಉತ್ತಮ ಪ್ರವೇಶವನ್ನು ಕಲ್ಪಿಸಲಿದೆ ಮತ್ತು ಕೈಗೆಟುಕುವಂತೆ ಮಾಡಲಿದೆ’’ ಎಂದರು.