ಬೆಂಗಳೂರು: ಪ್ರೀಮಿಯಂ ಕಾಫಿ ಉತ್ಪನ್ನ ವಿಭಾಗದ ಪ್ರವರ್ತಕನಾಗಿರುವ, ಬಹು ನಿರೀಕ್ಷಿತ ನೆಸ್ಪ್ರೆಸ್ಸೊ ಅದರ ಎಕ್ಸ್ ಕ್ಲೂಸಿವ್ ಕಾಫಿಗಳ ಶ್ರೇಣಿಯ ಜೊತೆಗೆ 2024ರ ಅಂತ್ಯದ ವೇಳೆಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ನೆಸ್ಪ್ರೆಸ್ಸೊಕಾಫಿಗಳು ಮತ್ತು ಯಂತ್ರಗಳು ಒರಿಜಿನಲ್ ಮತ್ತು ಪ್ರೊಫೆಷನಲ್ ವಿಭಾಗದಲ್ಲಿ ಲಭ್ಯವಾಗಲಿದ್ದು, ಸ್ಥಳೀಯ ಮತ್ತು ವೃತ್ತಿಪರ ಗ್ರಾಹಕರಿಗೆ ಇದು ದೊರೆಯಲಿದೆ. ಮೊದಲ ನೆಸ್ಪ್ರೆಸ್ಸೊಅಂಗಡಿಯನ್ನು ದೆಹಲಿಯಲ್ಲಿ ತೆರೆಯಲು ಕಂಪನಿ ಉದ್ದೇಶಿಸಿದೆ. ಅನಂತರ ಇತರ ಪ್ರಮುಖ ನಗರಗಳಿಗೆ ವಿಸ್ತರಿಸುವ ಯೋಜನೆಯನ್ನು ಕಂಪನಿ ಹೊಂದಿದೆ. ಜೊತೆಗೆ ನೆಸ್ಪ್ರೆಸ್ಸೊಉತ್ಪನ್ನವನ್ನು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕವೂ ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತದೆ. ಈ ಬಿಡುಗಡೆಯು ನೆಸ್ಲೆ ಇಂಡಿಯಾದ ಪ್ರೀಮಿಯಂ ಕಾಫಿ ಉತ್ಪನ್ನಗಳ ಘನತೆಯನ್ನು ಹೆಚ್ಚಿಸಲಿದೆ.
ನೆಸ್ಪ್ರೆಸ್ಸೊ- ಒಂದು ಪ್ರಮಾಣೀಕೃತ ಬಿ ಕಾರ್ಪ್™ ಆಗಿದ್ದು ಕಾಫಿ ಹೊಸ ಮಿಶ್ರಣಗಳನ್ನು,ಆವಿಷ್ಕಾರಗಳನ್ನು ಗ್ರಾಹಕರಿಗೆ ಒದಗಿಸುವಲ್ಲಿ ಮತ್ತು ಗ್ರಾಹಕರಿಗೆ ಪ್ರೀಮಿಯಂ ಕಾಫಿ ಅನುಭವವನ್ನು ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಲ್ಲಾ ನೆಸ್ಪ್ರೆಸ್ಸೊಕಾಫಿಗಳನ್ನು ಸ್ವಿಟ್ಜರ್ಲೆಂಡ್ನ ಉತ್ತಮ ಗುಣಮಟ್ಟದ, ಅತ್ಯಾಧುನಿಕ ಉತ್ಪಾದನಾ ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ ಮತ್ತು ವಿಶ್ವಾದ್ಯಂತ ನೆಸ್ಲೆ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತದೆ.
ನೆಸ್ಲೆ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ಮಾತನಾಡಿ, “ಭಾರತದ ಗ್ರಾಹಕರು, ಕಾಫಿ ಅಭಿಮಾನಿಗಳು ಮತ್ತು ಕಾಫಿ ಪ್ರಿಯರಿಗೆ ಹೊಸ ಅನುಭವಗಳನ್ನು ದೊರಕಿಸಲು ಮತ್ತು ಅಸಾಮಾನ್ಯ ಕಾಫಿಗಳ ರುಚಿ ನೋಡುವಂತೆ ಮಾಡಲು ನೆಸ್ಪ್ರೆಸ್ಸೊಶೀಘ್ರದಲ್ಲೇ ಲಭ್ಯವಾಗಲಿದ ಎಂದು ತಿಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಕಾಫಿ ಸೇವನೆ ಅಭ್ಯಾಸದಲ್ಲಿ ಬೆಳವಣಿಗೆ ಕಂಡು ಬಂದಿದೆ. ಹೆಚ್ಚುತ್ತಿರುವ ಯುವ ಜನಸಂಖ್ಯೆ, ಜಾಗತಿಕ ಟ್ರೆಂಡ್ ಗಳ ಪ್ರಭಾವ ಮತ್ತುಹೊಸ ಅನುಭವಗಳಿಗೆ ಒಡ್ಡಿಕೊಳ್ಳುವಿಕೆ ಕಾರಣಗಳಿಂದ ಭಾರತವು ನೆಸ್ಲೆಗೆ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಕಾಫಿ ಮಾರುಕಟ್ಟೆಗಳಲ್ಲಿ ಒಂದನ್ನಾಗಿ ಮಾಡಿದೆ” ಎಂದು ಹೇಳಿದರು.
ನೆಸ್ಲೆ ನೆಸ್ಪ್ರೆಸ್ಸೊ ಎಸ್.ಎ.ನ ಸಿಇಓ ಗಿಲ್ಲಾಮ್ ಲ ಕಂಫ್ ಮಾತನಾಡಿ,”ಭಾರತದಲ್ಲಿನ ಕಾಫಿ ಪ್ರಿಯರಿಗೆ ನೆಸ್ಪ್ರೆಸ್ಸೊಅನ್ನು ಪರಿಚಯಿಸುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಸುಮಾರು 40 ವರ್ಷಗಳಿಂದ, ನೆಸ್ಪ್ರೆಸ್ಸೊನಮ್ಮ ಸಿಗ್ನೇಚರ್ ರುಚಿಯನ್ನು ಒದಗಿಸುವ ಮೂಲಕ ಕಾಫಿ ಅನುಭವವನ್ನು ಹೆಚ್ಚಿಸುವ ಕೆಲಸ ಮಾಡಿದೆ. ಸುಸ್ಥಿರತೆ ಕಡೆಗೆ ಬದ್ಧತೆ ತೋರುತ್ತಾ ಬಂದಿರುವ ನಾವು ಕಾಫಿಯಿಂದ ಒಳ್ಳೆಯ ಶಕ್ತಿ ನೀಡಬಲ್ಲದು ಎಂದು ನಂಬಿದ್ದೇವೆ. 2011ರಿಂದ ಭಾರತದಿಂದ ಹಸಿರು ಕಾಫಿಯನ್ನು ಬಳಸಲು ಆರಂಭಿಸಿದ ನಂತರ ಈ ಕಾಫಿ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ದೊಡ್ಡದಾಗಿ ಬೆಳೆಯುವುದನ್ನು ನೋಡಲು ನಾನು ಖುಷಿ ಹೊಂದಿದ್ದೇನೆ” ಎಂದು ಹೇಳಿದರು.
ನೆಸ್ಪ್ರೆಸ್ಸೊ ಎಎಎ ಸಸ್ಟೇನೇಬಲ್ ಕ್ವಾಲಿಟಿ™ ಕಾರ್ಯಕ್ರಮದ ಮೂಲಕ ನೆಸ್ಪ್ರೆಸ್ಸೊ ಉತ್ತಮ ಗುಣಮಟ್ಟದ ಕಾಫಿ ಬೀಜಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. 2003ರಲ್ಲಿ ರೈನ್ಫಾರೆಸ್ಟ್ ಅಲೈಯನ್ಸ್ನ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಕಾರ್ಯಕ್ರಮವು ಈಗ 18 ದೇಶಗಳಲ್ಲಿ ಜಾರಿಗೊಂಡಿದ್ದು, 150,000 ಕಾಫಿ ರೈತರನ್ನು ಒಳಗೊಂಡಿದೆ. ಸುಮಾರು 600ನೆಸ್ಪ್ರೆಸ್ಸೊಕೃಷಿಶಾಸ್ತ್ರಜ್ಞರು ನೇರವಾಗಿ ರೈತರೊಂದಿಗೆ ಕೆಲಸ ಮಾಡುತ್ತಾರೆ.ಕಾಫಿ ಗುಣಮಟ್ಟ, ಕೃಷಿ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಸುಧಾರಿಸಲು ತರಬೇತಿ ನೀಡುತ್ತಾರೆ ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತಾರೆ. ನೆಸ್ಪ್ರೆಸ್ಸೊಗೆ ಉತ್ತಮ ಗುಣಮಟ್ಟದ ಕಾಫಿಯನ್ನು ಮಾರಾಟ ಮಾಡುವ ಮೂಲಕ, ರೈತರು ತಮ್ಮ ಆದಾಯ ಹೆಚ್ಚಿಸಿಕೊಂಡಿದ್ದಾರೆ ಮತ್ತು ಹೆಚ್ಚು ಸುರಕ್ಷಿತ ಕೃಷಿ ಪದ್ಧತಿ ತಮ್ಮದಾಗಿಸಿಕೊಂಡಿದ್ದಾರೆ. 93%ಕ್ಕಿಂತ ಹೆಚ್ಚು ಕಾಫಿಯನ್ನು ನೆಸ್ಪ್ರೆಸ್ಸೊ ಎಎಎ ಸಸ್ಟೇನೇಬಲ್ ಕ್ವಾಲಿಟಿ™ ಕಾರ್ಯಕ್ರಮದ ಮೂಲಕ ಪಡೆಯಲಾಗುತ್ತದೆ. ನೆಸ್ಪ್ರೆಸ್ಸೊ2011ರಿಂದ ಭಾರತದಿಂದ ಉತ್ತಮ ಗುಣಮಟ್ಟದ ಹಸಿರು ಕಾಫಿಯನ್ನು ಪಡೆಯುತ್ತಿದೆ ಮತ್ತು ದೇಶದ ಸುಮಾರು 2,000 ಕಾಫಿ ರೈತರೊಂದಿಗೆ ನೇರವಾಗಿ ಕಾರ್ಯನಿರ್ವಹಿಸುತ್ತದೆ.
ಸ್ವಿಟ್ಜರ್ಲೆಂಡ್ನ ಲೌಸನ್ನೆಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ನೆಸ್ಪ್ರೆಸ್ಸೊ 90ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದೆ ಮತ್ತು ಸರಿಸುಮಾರು 500 ನಗರಗಳಲ್ಲಿ 800 ಕ್ಕೂ ಹೆಚ್ಚು ಅಂಗಡಿಗಳ ಜಾಲಹೊಂದಿದೆ.