ಬಂಟ್ವಾಳ: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳಿಗೆ ಗುಂಡ್ಯದಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದ್ದು, ಸಂತ್ರಸ್ತ ಯುವತಿಯ ಮನೆಗೆ ಆರ್.ಎಸ್.ಎಸ್.ಪ್ರಮುಖರಾದ ಡಾ| ಪ್ರಭಾಕರ್ ಭಟ್ ಬೇಟಿ ನೀಡಿ ಪ್ರಕರಣವನ್ನು ದೈರ್ಯವಾಗಿ ಎದುರಿಸಿದ ಯುವತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಘಟನೆಯ ಸಂಪೂರ್ಣ ಮಾಹಿತಿ ಪಡೆದುಕೊಂಡ ಅವರು ಕಾನೂನು ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.
ಇಂತಹ ಪ್ರಕರಣಗಳು ನಿತ್ಯನಿರಂತರವಾಗಿ ನಡೆಯುತ್ತಿದೆ, ಭಯೋತ್ಪಾದಕರ ರೀತಿಯಲ್ಲಿ ಹೆಣ್ಮಕ್ಕಳ ಮೇಲೆ ಅನಾಚಾರ ಮಾಡುವಂತಹ ಘಟನೆಗಳು ನಡೆಯುತ್ತಿದೆ.
ಸರಕಾರ ಹಾಗೂ ಪೋಲಿಸ್ ಇಲಾಖೆ ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ.ಇಲ್ಲದಿದ್ದರೆ ಅರಾಜಕತೆ ನಿರ್ಮಾಣ ಮಾಡುವ ಸಾಧ್ಯತೆಗಳಿವೆ,ಇದು ದ.ಕ.ಜಿಲ್ಲೆ. ಎಚ್ಚರಿಕೆಯ ವಿಚಾರವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಸರಕಾರ ಬಂದ ಮೇಲೆ ಬಾರಿ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಮುಂದುವರಿದು ಹುಬ್ಬಳ್ಳಿಯಲ್ಲಿ ಹತ್ಯೆ ನಡೆದಿದೆ, ಇದೀಗ ಮತ್ತೊಂದು ಪ್ರಕರಣ ಅದೇ ಭಾಗದಲ್ಲಿ ನಡೆದಿದೆ. ಹಿಂದೂ ಸಮಾಜದ ಮೇಲೆ ಮತ್ತು ಹೆಣ್ಣ್ಮಕ್ಕಳ ಮೇಲೆ ಅನ್ಯಾಯಗಳು ನಡೆದರೆ ಅದನ್ನು ಬಲವಾಗಿ ಖಂಡಿಸುತ್ತೇವೆ. ಸರಕಾರ ಎಚ್ಚೆತ್ತು ಸರಿಯಾದ ಕ್ರಮಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.