ಬೆಂಗಳೂರು: ನೆಸ್ಲೆ ಇಂಡಿಯಾವು ಜವಾಬ್ದಾರಿಯುತ ಮೂಲ ಮತ್ತು ಡೈರಿ ಫಾರ್ಮ್ ಗಳಿಂದ ಆಗುತ್ತಿರುವ ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತನ್ನ ಅಚಲವಾದ ಬದ್ಧತೆಯನ್ನು ಮುಂದುವರಿಸಿದ್ದು, ಇದೀಗ ಡೈರಿ ಫಾರ್ಮ್ ಗಳಿಗೆಂದೇ “ಬಯೋಡೈಜೆಸ್ಟರ್ ಯೋಜನೆ’’ಯನ್ನು ಪರಿಚಯಿಸಿದೆ. ಈ ಬಯೋಡೈಜೆಸ್ಟರ್ ತಂತ್ರಜ್ಞಾನವು ಜಾನುವಾರುಗಳ ಗೊಬ್ಬರವನ್ನು ಶುದ್ಧ ಜೈವಿಕ ಅನಿಲವಾಗಿ ಪರಿವರ್ತಿಸುತ್ತದೆ. ಈ ಮೂಲಕ ಹೈನುಗಾರಿಕೆ ಫಾರ್ಮ್ ಗಳು ಅಂದರೆ ಡೈರಿ ಫಾರ್ಮ್ ಗಳ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇನ್ನು ಇದರಿಂದ ಉಳಿಯುವ ಸ್ಲರಿ ಅಂದರೆ ದ್ರವರೂಪದ ಗೊಬ್ಬರವನ್ನು ನೈಸರ್ಗಿಕ ಗೊಬ್ಬರವಾಗಿ ಬಳಸಲಾಗುತ್ತದೆ. ಇದು ಪುನರುತ್ಪಾದಕ ಕೃಷಿ ಪದ್ಧತಿಗಳಿಗೆ ಕೊಡುಗೆಯನ್ನು ನೀಡುತ್ತದೆ. ಈ ಉಪಕ್ರಮದ ಭಾಗವಾಗಿ ನೆಸ್ಲೆ ಇಂಡಿಯಾ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ 24 ಜಿಲ್ಲೆಗಳಲ್ಲಿ ಸುಮಾರು 70 ಕ್ಕೂ ಹೆಚ್ಚು ದೊಡ್ಡ ಬಯೋಡೈಜೆಸ್ಟರ್ ಗಳನ್ನು ಹಾಗೂ 3,000 ಕ್ಕೂ ಹೆಚ್ಚು ಸಣ್ಣ ಬಯೋಡೈಜೆಸ್ಟರ್ ಗಳನ್ನು ಸ್ಥಾಪಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಸಣ್ಣ ಡೈರಿ ಫಾರ್ಮ್ ಗಳಲ್ಲಿ ಜಾನುವಾರುಗಳ ಗೊಬ್ಬರವನ್ನು ಬಯಲು ಪ್ರದೇಶದಲ್ಲಿ ಸುರಿಯಲಾಗುತ್ತದೆ. ಇದು ಜಿಎಚ್ ಜಿ ಮಾಲಿನ್ಯಕ್ಕೆ ಪ್ರಮುಖ ಮೂಲವಾಗಿದೆ. ಒಂದು ಬಾರಿ ಈ ಬಯೋಡೈಜೆಸ್ಟರ್ ಗಳಿಗೆ ಈ ಗೊಬ್ಬರವನ್ನು ಹಾಕಿದ ನಂತರ ಆ ಗೊಬ್ಬರವು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ವಿಭಜನೆಯಾಗುತ್ತದೆ ಮತ್ತು ಅದರಿಂದ ಜೈವಿಕ ಅನಿಲ ಉತ್ಪಾದನೆಯಾಗುತ್ತದೆ. ಸಣ್ಣ ಬಯೋಡೈಜೆಸ್ಟರ್ ಗಳು ಎಲ್ ಪಿಜಿ ಮತ್ತು ಉರುವಲಿಗೆ ಬದಲಾಗಿ ಜೈವಿಕ ಅನಿಲವನ್ನು ಉತ್ಪಾದಿಸಬಹುದು. ಇದರಿಂದಾಗಿ ರೈತರಿಗೆ ಹೊಗೆ ಸಂಬಂಧಿತ ಆರೋಗ್ಯ ಅಪಾಯಗಳು ದೂರಾಗುತ್ತವೆ ಮತ್ತು ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ. ಈ ಪ್ರಯೋಜನಗಳಲ್ಲದೇ, ದೊಡ್ಡ ಬಯೋಡೈಜೆಸ್ಟರ್ ಗಳು ಶೇ.100 ರಷ್ಟು ನವೀಕರಿಬಹುದಾದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇದು ಪರಿಸರದ ಮೇಲೆ ಉತ್ತಮ ಧನಾತ್ಮಕ ಪರಿಣಾವನ್ನು ಬೀರುತ್ತದೆ. ಈ ಬಯೋಡೈಜೆಸ್ಟರ್ ಗಳಲ್ಲಿ ಉಳಿಯುವ ಗೊಬ್ಬರವನ್ನು ಜೈವಿಕ ಗೊಬ್ಬರವಾಗಿ ಪರಿವರ್ತಿಸಿ ಅದನ್ನು ತೋಟಗಳು ಕಿಚನ್ ಗಾರ್ಡನ್ ಗಳಿಗೆ ಬಳಸಲಾಗುತ್ತದೆ.
ಈ ಉಪಕ್ರಮದ ಬಗ್ಗೆ ಮಾತನಾಡಿದ ನೆಸ್ಲೆ ಇಂಡಿಯಾದ ಕಾರ್ಪೊರೇಟ್ ಅಫೇರ್ಸ್ ಅಂಡ್ ಸಸ್ಟೇನೇಬಿಲಿಟಿಯ ನಿರ್ದೇಶಕ ಸಂಜಯ್ ಖಜೂರಿಯಾ ಅವರು, “ನೆಸ್ಲೆ ಇಂಡಿಯಾದ ಬಯೋಡೈಜೆಸ್ಟರ್ ಯೋಜನೆಯು ಸುಸ್ಥಿರತೆ, ಸಂಪನ್ಮೂಲಗಳ ಹೆಚ್ಚು ಹೆಚ್ಚು ಬಳಕೆ ಮತ್ತು ಪುನರುತ್ಪಾದಕ ಕೃಷಿಯೊಂದಿಗೆ ಭಾರತದ ಕಾರ್ಯತಂತ್ರದ ಆದ್ಯತೆಗಳೊಂದಿಗೆ ಹೇಗೆ ಸಹಭಾಗಿತ್ವ ಆಗಿದೆ ಎಂಬುದಕ್ಕೆ ಒಂದು ಉದಾಹರಣೆಯಾಗಿದೆ. ಬಯೋಡೈಜೆಸ್ಟರ್ ಗಳಿಂದ ಉತ್ಪತ್ತಿಯಾಗುವ ಜೈವಿಕ ಅನಿಲವು ಹಿಂದಿನಿಂದಲೂ ಬಂದಿರುವ ಇಂಧನಗಳ ಬಳಕೆ ಮೇಲಿನ ರೈತರ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಹಾಗೂ ಜೈವಿಕ ಗೊಬ್ಬರಗಳು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ. ಈ ಉಳಿತಾಯವು ರೈತರಿಗೆ ತಮ್ಮ ಹೊಲಗಳಲ್ಲಿ ಮತ್ತು ಅವರ ಯೋಗಕ್ಷೇಮದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಸಹಾಯ ಮಾಡುತ್ತದೆ’’ ಎಂದು ಅಭಿಪ್ರಾಯಪಟ್ಟರು.
ಪಂಜಾಬಿನ ಮೊಗಾ ಜಿಲ್ಲೆಯ ಜಲಾಲಾಬಾದ್ ಗ್ರಾಮದ ಡೈರಿ ರೈತರಾದ ಮನ್ ದೀಪ್ ಕೌರ್ ಅವರು ಮಾತನಾಡಿ, “ನಮ್ಮ ಫಾರ್ಮ್ ನಲ್ಲಿ ಬಯೋಡೈಜೆಸ್ಟರ್ ಅಳವಡಿಕೆ ಮಾಡಿಕೊಳ್ಳುವ ಮೂಲಕ ನಮ್ಮ ಗ್ರಾಮದಲ್ಲಿ ಬಯೋಡೈಜೆಸ್ಟರ್ ಅಳವಡಿಕೆ ಮಾಡಿಕೊಂಡ ಮೊದಲ ಕುಟುಂಬ ಎನಿಸಿದೆ. ನಮ್ಮ ಹೆಚ್ಚಿನ ಕೃಷಿ ಅಗತ್ಯತೆಗಳಿಗೆ ಸ್ವಾವಲಂಬಿಯಾಗಲು ಇದು ಸಹಾಯ ಮಾಡಿದೆ ಮತ್ತು ನಮಗೆ ಸಾಕಷ್ಟು ಹಣ ಹಾಗೂ ಶ್ರಮವನ್ನು ಉಳಿಸಿದೆ. ನಮ್ಮ ಜಮೀನಿನಲ್ಲಿ ಉತ್ಪತ್ತಿಯಾಗುವ ಜೈವಿಕ ಅನಿಲವು ನಮ್ಮ ಮನೆಯ ಅಡುಗೆ ಇಂಧನದ ಅಗತ್ಯತೆಯನ್ನು ಕಡಿಮೆ ಮಾಡಿದೆ. ಉರುವಲಿಗಾಗಿ ನಾವು ಹುಟುಕಾಟ ನಡೆಸುವಂತಿಲ್ಲ ಮತ್ತು ಉರುವಲು ಒಲೆಯಿಂದ ಉಂಟಾಗುತ್ತಿದ್ದ ಹೊಗೆಯಿಂದಲೂ ಮುಕ್ತಿ ಪಡೆದಿದ್ದೇವೆ. ಇದರಿಂದ ನನ್ನ ಶ್ವಾಸಕೋಶಗಳು ಹಾನಿಯಾಗುವುದರಿಂದ ತಪ್ಪಿಸಿಕೊಂಡಂತಾಗಿದೆ ಅಥವಾ ಕಣ್ಣುಗಳಲ್ಲಿ ಆಗುತ್ತಿದ್ದ ಕಿರಿಕಿರಿ ತಪ್ಪಿದಂತಾಗಿದೆ’’ ಎಂದರು.
ಭವಿಷ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಡೈರಿ ಸಮುದಾಯಗಳು ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಗಳು ಪರಸ್ಪರ ಕೈಜೋಡಿಸುವ ಮೂಲಕ ಸಮಾಜದಲ್ಲಿ ಆರೋಗ್ಯಕರ ವಾತಾವರಣ ಸೃಷ್ಟಿಯಾಗಲಿದೆ ಎಂಬುದನ್ನು ನೆಸ್ಲೆ ಇಂಡಿಯಾ ನಂಬುತ್ತದೆ. ಈ ಡೈರಿ ಅಥವಾ ಹಾಲಿನ ಆರ್ಥಿಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೇಶಾದ್ಯಂತ ಸುಮಾರು 80,000 ಹಾಲು ಉತ್ಪಾದಕರನ್ನು ತೊಡಗಿಸಿಕೊಂಡಿದೆ. ನೆಸ್ಲೆ ಇಂಡಿಯಾವು ಹಾಲು ಉತ್ಪಾದಕ ರೈತರನ್ನು ಇಂಗಾಲ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಮರಗಳನ್ನು ನೆಡಲು ಪ್ರೋತ್ಸಾಹಿಸುತ್ತಿದೆ ಮತ್ತು ಕಡಿಮೆ ಇಂಗಾಲ ಹೊರಸೂಸುವ ಇಂಧನ ಮೂಲಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನೆಸ್ಲೆ ಇಂಡಿಯಾದ ಈ ಪ್ರಯತ್ನಗಳು ರೈತರು ಮತ್ತು ಅವರ ಕುಟುಂಬಗಳಿಗೆ ಸ್ಥಿರವಾದ ಜೀವನೋಪಾಯವನ್ನು ಸುರಕ್ಷಿತಗೊಳಿಸುವುದರ ಜೊತೆಗೆ ಡೈರಿ ಫಾರ್ಮ್ ಗಳಿಂದ ಜಿಎಚ್ ಜಿ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕೊಡುಗೆ ನೀಡುತ್ತವೆ.