ಮಂಗಳೂರು: ನಮ್ಮ ಎಲ್ಲ ಸಂಘಟನೆಯ ಕಾರ್ಯಕರ್ತರಿಗೆ ನೋವಾಗಿದೆ. ಮೋದಿ ಬಂದಾಗ ನಾರಾಯಣ ಗುರು ವೃತ್ತಕ್ಕಾಗಿ ಹೋರಾಡಿದ ಯಾರನ್ನು ಕೂಡ ಕರೆಯಲಿಲ್ಲ. ನಮಗೆ ಇದು ತುಂಬಾ ಬೇಸರ ತರಿಸಿದೆ ಎಂದು ಬಿರುವೆರ್ ಕುಡ್ಲ ಮುಖಂಡ ಉದಯ ಪೂಜಾರಿ ಹೇಳಿದರು.
ವಿಮಾನ ನಿಲ್ದಾಣಕ್ಕೆ ಉದ್ಯಮಿಗಳು,ಪಕ್ಷ ವಿರೋಧಿ ಕೆಲಸ ಮಾಡಿದವರು ಹೋಗಿದ್ದಾರೆ. ನಾರಾಯಣ ಗುರು ವೃತ್ತ ನಿರ್ಮಾಣ ಮಾಡುವಾಗ ಸತೀಶ್ ಕುಂಪಲ ಎಲ್ಲಿದ್ರೂ.ಅವರು ಬಿಲ್ಲವರಿಗೆ ಏನು ಮಾಡಿದ್ದಾರೆ.
ನಮ್ಮ ಸಮುದಾಯದವರನ್ನ ಕರೆಯದ ಬಗ್ಗೆ ನಮಗೆ ಬೇಸರವಾಗಿದೆ.ಕುದ್ರೋಳಿ ದೇವಸ್ಥಾನ ನಮ್ಮ ಆರಾಧ್ಯ ಕ್ಷೇತ್ರ ಅಲ್ಲಿಯ ಅಧ್ಯಕ್ಷರನ್ನ ಕರೆಯುತ್ತಿದ್ದರೆ ಸಂತೋಷವಾಗುತಿತ್ತು.
ನಾವು ನಳಿನ್ ಕುಮಾರ್ ಕಟೀಲ್ ಜೊತೆ ಉತ್ತಮ ಬಾಂದವ್ಯ ಹೊಂದಿದ್ದೆವು.ಇಲ್ಲಿ ನಳಿನ್, ಬ್ರಿಜೇಶ್ ಬಣ ನಿರ್ಮಾಣವಾಗಿದೆ.ನಳಿನ್ ಕುಮಾರ್ ಕಟೀಲ್ ಜೊತೆ ಇದ್ದವರನ್ನ ಸೈಡ್ ಲೈನ್ ಮಾಡಲಾಗುತ್ತಿದೆ.ಯಾವ ಜವಾಬ್ದಾರಿಯೂ ಇಲ್ಲ.
ಮುಂದಕ್ಕೆ ವೇದವ್ಯಾಸ ಕಾಮತ್ ,ಭರತ್ ಶೆಟ್ಟಿಗೆ ಸೀಟ್ ಸಿಗುವುದೇ ಡೌಟ್ ಇದೆ. ಯಾಕೆ ಬಣ ರಾಜಕೀಯ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ
ಏನು ಷಡ್ಯಂತ್ರ ನಡೆಯುತ್ತಿದೆ ,ಒಂದು ಎಂ ಎಲ್ ಈ ಎ ಗಳು ಇನ್ನೊಬ್ಬರನ್ನ ಬಿಲ್ಡ್ ಅಪ್ ಮಾಡುತ್ತಿದ್ದಾರೆ ಎಂದು ಉದಯ ಪೂಜಾರಿ ಹೇಳಿದರು.