ಭಾರತ/ಯುರೋಪ್: ವಿಶ್ವದ ಪ್ರಮುಖ ಏರ್ ಕಂಪ್ರೆಸರ್ ತಯಾರಕರಲ್ಲಿ ಒಂದಾದ ಎಲ್ಜಿ ಈಕ್ವಿಪ್ ಮೆಂಟ್ಸ್ (BSE: 522074 NSE: ELGIEQUIP) ತಮ್ಮ ಹೊಸ ಉತ್ಪನ್ನ ಇಜಿ ಎಸ್ಪಿ(ಸೂಪರ್ ಪ್ರೀಮಿಯಂ) ಅನ್ನು ಬಿಡುಗಡೆ ಮಾಡಿದೆ. ಈ ಮೂಲಕಜನಪ್ರಿಯ ಇಜಿ ಸರಣಿಯಆಯಿಲ್-ಲೂಬ್ರಿಕೇಟೆಡ್ಸ್ಕ್ರೂ ಏರ್ ಕಂಪ್ರೆಸರ್ ಗಳ ಪೋರ್ಟ್ಫೋಲಿಯೊ ಅನ್ನು ಅಪ್ ಗ್ರೇಡ್ ಮಾಡಲಾಗಿದೆ. ಈ ಹೊಸ ಯಂತ್ರಗಳು ಕಂಪ್ರೆಸ್ಡ್ ಏರ್ ತಂತ್ರಜ್ಞಾನದಗಮನಾರ್ಹ ಅಭಿವೃದ್ಧಿಗೆ ಸಾಕ್ಷಿಯಾಗಿದೆ.90-110ಕೆಡಬ್ಲ್ಯೂ ಕಂಪ್ರೆಸರ್ ಶ್ರೇಣಿಯ ಉತ್ಪನ್ನಗಳುಕಡಿಮೆ ಲೈಫ್ ಸೈಕಲ್ ವೆಚ್ಚ ಹೊಂದಿವೆ, ಗ್ರಾಹಕರಿಗೆ 15% ವರೆಗೆ ಇಂಧನ ದಕ್ಷಣೆ ಹೊಂದಿವೆ ಮತ್ತು ಅತ್ಯುತ್ತಮ ವಾರಂಟಿ ಮತ್ತು ಕಾರ್ಯಕ್ಷಮತೆ ಒದಗಿಸುತ್ತದೆ.
ಈ ಅಪ್ ಗ್ರೇಡ್ ಮಾಡಲಾದ ಎಲ್ಜಿಇಜಿ ಎಸ್ಪಿ ಘಟಕಗಳು ಹೊಸದಾಗಿ ಕಾನ್ಫಿಗರ್ ಮಾಡಲಾದ ಎರಡು-ಹಂತದ ಏರ್ ಎಂಡ್ಗಳನ್ನು ಒಳಗೊಂಡಿವೆ. ಜೊತೆಗೆη-V ಪ್ರೊಫೈಲ್ ಅನ್ನು ಕೂಡಹೊಂದಿವೆ. ಇವುಗಳುಕಂಪ್ರೆಷನ್ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತುವಿದ್ಯುತ್ ಬಳಕೆಯಲ್ಲಿ 15% ವರೆಗೆ ಉಳಿತಾಯ ಉಂಟು ಮಾಡುತ್ತವೆ. ಪ್ರತೀ ಹಂತದಲ್ಲಿಯೂ ಲೋ ಸ್ಪೀಡ್ ಏರ್ ಎಂಡ್ ಗಳು ಮತ್ತು ಹಗುರವಾದ ಹೊರೆ ಉಂಟಾಗಲಿದ್ದು, ಘಟಕದ ಜೀವಿತಾವಧಿ ಹೆಚ್ಚಳವಾಗಲಿದೆ. ಐಇ4 ಸೂಪರ್ ಪ್ರೀಮಿಯಂ ಮೋಟಾರ್ಗಳು, ಸುಧಾರಿತ ವಿನ್ಯಾಸಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮಿಶ್ರಣವಾಗಿದ್ದು, ಇದರಿಂದಾಗಿ ಶಕ್ತಿ ದಕ್ಷತೆ ಹೆಚ್ಚಾಗುತ್ತದೆ.ಎಲ್ಲಾ ಇಜಿ ಸೂಪರ್ ಪ್ರೀಮಿಯಂ ಯಂತ್ರಗಳು ನ್ಯೂರಾನ್ 4 ಇಂಡಸ್ಟ್ರಿಯಲ್ ಕಂಟ್ರೋಲರ್ ಗಳನ್ನು ಹೊಂದಿದ್ದು, ಅದರಿಂದ ಅತ್ಯುತ್ತಮ ಕಾರ್ಯಕ್ಷಮತೆ ದೊರೆಯಲಿದೆ. ಇಜಿಸೂಪರ್ ಪ್ರೀಮಿಯಂ ವಿಶಿಷ್ಟವಾದ ಆಯಿಲ್ ಫಿಲ್ಟರ್ ಹೊಂದಿದ್ದು, ಇದರಿಂದ ಉತ್ಪನ್ನವು ಹೆಚ್ಚುವರಿ 4000-ಗಂಟೆಗಳ ಹೆಚ್ಚಿನ ಜೀವಿತಾವಧಿ ಒದಗಿಸುತ್ತದೆ. ಈ ಫಿಲ್ಟರ್ ಕಂಪ್ರೆಸ್ಸರ್ ನ ಲುಬ್ರಿಕೇಷನ್ ಸಿಸ್ಟಮ್ ನಿಂದ ಮಾಲಿನ್ಯಕಾರಕಗಳನ್ನು ಯಶಸ್ವಿಯಾಗಿ ತೆಗೆದುಹಾಕುತ್ತದೆ. ಅದರಿಂದ ಅಸಾಧಾರಣ ಬಾಳಿಕೆ ಮತ್ತು ದೀರ್ಘಾಯುಷ್ಯ ಸಿಗಲಿದೆ. ಹೆಚ್ಚುವರಿಯಾಗಿ, ಎಲ್ಲಾ ಇಜಿಸೂಪರ್ ಪ್ರೀಮಿಯಂ ಘಟಕಗಳು ಏರ್~ಅಲರ್ಟ್, ಎಲ್ಜಿಯ ಐಓಟಿ ಪರಿಹಾರದೊಂದಿಗೆ ಹೊಂದಿಕೊಳ್ಳುತ್ತವೆ, ಅದು ನ್ಯೂರಾನ್ 4 ಕಂಟ್ರೋಲರ್ ಜೊತೆ ಸಂಯೋಜನೆಗೊಂಡು ಶಕ್ತಿ ದಕ್ಷತೆ ನೀಡುತ್ತವೆ ಮತ್ತು 24×7 ಗ್ಲೋಬಲ್ ರಿಮೋಟ್ ಮಾನಿಟರಿಂಗ್ ಮಾಡುವ ಅವಕಾಶ ಒದಗಿಸುವ ಮೂಲಕ ಕಂಪ್ರೆಸ್ಸರ್ ನಿರ್ವಹಣೆಯನ್ನು ಸುಲಭಗೊಳಿಸುತ್ತದೆ.
ಎಲ್ಜಿ ಈಕ್ವಿಪ್ ಮೆಂಟ್ಸ್ ಲಿಮಿಟೆಡ್ ನ ಐಎಸ್ಎಎಎಂಇ(ಭಾರತ, ದಕ್ಷಿಣ ಏಷ್ಯಾ, ಆಫ್ರಿಕಾ, ಮತ್ತು ಮಧ್ಯಪ್ರಾಚ್ಯ) ಮತ್ತು ಎಸ್ಇಎ (ಸೌತ್ ಈಸ್ಟ್ ಏಷ್ಯಾ)ಅಧ್ಯಕ್ಷ ಭಾವೇಶ್ ಕರಿಯಾ ಮಾತನಾಡಿ, “ಎಲ್ಜಿ ಕಂಪನಿಯುಗ್ರಾಹಕರಿಗೆ ದಕ್ಷತೆಯ ಲಾಭ ಮತ್ತು ತಾಂತ್ರಿಕ ಪ್ರಗತಿ ದೊರಕಿಸುವ ಅಚಲ ಬದ್ಧತೆಯನ್ನು ಹೊಂದಿದೆ. ಇಜಿಸೂಪರ್ ಪ್ರೀಮಿಯಂ ಮೂಲಕ ಕಂಪ್ರೆಸ್ಡ್ಏರ್ ತಂತ್ರಜ್ಞಾನದಲ್ಲಿ ದಕ್ಷತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿ ಹೆಚ್ಚು ಕಾರ್ಯಕ್ಷಮತೆ ಒದಗಿಸುವ ನಮ್ಮ ಅನ್ವೇಷಣೆಯಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ.ಕಂಪ್ರೆಸರ್ನ ಒಟ್ಟು ಲೈಫ್ ಸೈಕಲ್ ವೆಚ್ಚದ 80%ಕ್ಕಿಂತಲೂ ಹೆಚ್ಚು ವಿದ್ಯುತ್ ವೆಚ್ಚ ಉಂಟಾಗುತ್ತದೆ ಎಂಬುದನ್ನು ಗಮನಿಸಿ ಇಜಿ ಸೂಪರ್ ಪ್ರೀಮಿಯಂ ಕಂಪ್ರೆಸರ್ಗಳಲ್ಲಿ 15% ವಿದ್ಯುತ್ ಉಳಿತಾಯ ಪ್ರಯೋಜನ ಒದಗಿಸಿದ್ದೇವೆ. ಅವುಗಳನ್ನು ಇಂಧನ ದಕ್ಷತೆ ಮತ್ತು ಪರಿಸರ ನಿರ್ವಹಣೆಗೆ ಒತ್ತು ನೀಡುವ ಉತ್ಪಾದನಾ ಉದ್ಯಮಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತುತಮ್ಮ ನವೀನ ವೈಶಿಷ್ಟ್ಯಗಳ ಮೂಲಕ ಗಣನೀಯ ವಿದ್ಯುತ್ ಉಳಿತಾಯದ ಭರವಸೆ ನೀಡುತ್ತವೆ.ಸ್ಪರ್ಧಾತ್ಮಕ ಒಟ್ಟು ದರದಲ್ಲಿ ಲಭ್ಯವಾಗುತ್ತದೆ” ಎಂದು ಹೇಳಿದರು.
ಪ್ರತಿ ಇಜಿ ಸೂಪರ್ ಪ್ರೀಮಿಯಂ ಕಂಪ್ರೆಸರ್ ನ ಏರ್ಎಂಡ್ಗೆ 6 ವರ್ಷಗಳ ಸ್ಟಾಂಡರ್ಡ್ ವಾರಂಟಿ ಇರುತ್ತದೆ. ಪ್ರಮುಖ ಭಾಗಗಳಿಗೆ 3 ವರ್ಷಗಳು ಮತ್ತು ಪ್ಯಾಕೇಜ್ನಲ್ಲಿ ಒಂದು ವರ್ಷ ಮತ್ತು ಏರ್ಎಂಡ್ಗೆ 10* ವರ್ಷಗಳ ವಿಸ್ತೃತ ವಾರಂಟಿ ಮತ್ತು ಪ್ಯಾಕೇಜ್ನಲ್ಲಿ 5* ವರ್ಷಗಳವರೆಗಿನ ವಾರಂಟಿ ಲಭ್ಯವಿದೆ. ದೀರ್ಘಾಯುಷ್ಯ,ವಿಶ್ವಾಸಾರ್ಹತೆ ಮತ್ತು ಬಾಳಿಕೆಒದಗಿಸುವ ನಿಟ್ಟಿನಲ್ಲಿ ಎಲ್ಜಿ ಇಜಿ ಸೂಪರ್ ಪ್ರೀಮಿಯಂ ಅನ್ನು ನಿರ್ಮಿಸಲಾಗಿದೆ.