ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಸ್ಯಾಮ್ಸಂಗ್, ಇಂದು ಬೆಂಗಳೂರಿನ ಸ್ಯಾಮ್ಸಂಗ್ ಒಪೆರಾ ಹೌಸ್ನಲ್ಲಿ ನಡೆದ ‘ಅನ್ಬಾಕ್ಸ್ & ಡಿಸ್ಕವರ್’ ಕಾರ್ಯಕ್ರಮದಲ್ಲಿ ತನ್ನ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಎಐ ಟಿವಿಗಳ ಹೊಸ ಯುಗವನ್ನು ಪ್ರಾರಂಭಿಸಿದೆ. 2024ರ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳ ಶ್ರೇಣಿಯು ಅತ್ಯಂತ ಶಕ್ತಿಶಾಲಿ ಎಐ ಫೀಚರ್ ಗಳನ್ನು ಹೊಂದಿದ್ದು, ನಿಮ್ಮ ಮನೆಯಲ್ಲಿ ಮನರಂಜನೆ ಪಡೆಯುವ ಅನುಭವವನ್ನು ಅದ್ಭುತಗೊಳಿಸಲಿದೆ.
“ಸ್ಯಾಮ್ಸಂಗ್ ಗ್ರಾಹಕರ ಜೀವನಶೈಲಿಯಲ್ಲಿ ಬದಲಾವಣೆ ತರಲು ತನ್ನ ಉನ್ನತ ವರ್ಗದ ಟಿವಿಗಳಲ್ಲಿ ಕೃತಕ ಬುದ್ಧಿಮತ್ತೆಯ(ಎಐ) ಅದ್ಭುತ ಶಕ್ತಿಯನ್ನು ಹೊಂದಿಸುತ್ತಿದೆ. ನಾವು ನಮ್ಮ ಗ್ರಾಹಕರಿಗೆ ಅಸಾಧಾರಣ ವೀಕ್ಷಣೆಯ ಅನುಭವಗಳನ್ನು ನೀಡಲು ಎಐ ಫೀಚರ್ ಗಳನ್ನು ನೀಡುತ್ತಿದ್ದೇವೆ. ನಮ್ಮ 2024ರ ಶ್ರೇಣಿಯ ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳು ಪ್ರತೀ ಮನೆಯ ಮನರಂಜನೆಯ ಅನುಭವವನ್ನೇ ಅಪೂರ್ವಗೊಳಿಸಲಿದೆ ಮತ್ತು ಎಐ ಮೂಲಕ ಸುಸ್ಥಿರತೆ ಮತ್ತು ಹೆಚ್ಚಿನ ಸುರಕ್ಷತೆ ಒದಗಿಸುವ ಹೊಸ ಆವಿಷ್ಕಾರಗಳನ್ನು ನೀಡುತ್ತವೆ” ಎಂದು ಸ್ಯಾಮ್ಸಂಗ್ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್ ಹೇಳಿದರು.
“ತಂತ್ರಜ್ಞಾನ ಮತ್ತು ಜೀವನಶೈಲಿಗೆ ಹತ್ತಿರದ ನಂಟು ಉಂಟು ಮಾಡಿರುವ ಟೆಲಿವಿಷನ್ಗಳು ಆಧುನಿಕ ಜೀವನದ ಪ್ರಮುಖ ಅಂಗಗಳಾಗಿವೆ. ಭಾರತದಲ್ಲಿ ದೊಡ್ಡ ಗಾತ್ರದ ಪರದೆಗಳ ಮೇಲೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಗ್ರಾಹಕರು ಪ್ರೀಮಿಯಂ ಟಿವಿಗಳಿಗೆ ಆದ್ಯತೆ ನೀಡುವುದನ್ನು ಗಮನಿಸಬಹುದಾಗಿದೆ. ದೃಶ್ಯ ವೀಕ್ಷಣೆ ಮತ್ತು ಧ್ವನಿ ಗುಣಮಟ್ಟದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲೆಂದೇ ವಿನ್ಯಾಸಗೊಳಿಸಲಾಗಿರುವ ಎಐ ಟಿವಿಗಳನ್ನು ನಾವು ಬಿಡುಗಡೆ ಮಾಡಿದ್ದೇವೆ. ನಮ್ಮ ಹೊಸ ಶ್ರೇಣಿಯ ಎಐ-ಚಾಲಿತ 8ಕೆ ನಿಯೋ ಕ್ಯೂಎಲ್ಇಡಿಗಳು, 4K ನಿಯೋ ಕ್ಯೂಎಲ್ಇಡಿಗಳು ಮತ್ತು ಓಎಲ್ಇಡಿ ಟಿವಿಗಳನ್ನು ಬಿಡುಗಡೆಯ ಮೂಲಕ ನಾವು ಭಾರತದಲ್ಲಿ ನಮ್ಮ ಮಾರುಕಟ್ಟೆ ನಾಯಕತ್ವವನ್ನು ವಿಸ್ತರಿಸುವ ವಿಶ್ವಾಸ ಹೊಂದಿದ್ದೇವೆ” ಎಂದು ಸ್ಯಾಮ್ಸಂಗ್ ಇಂಡಿಯಾದ ವಿಷುಯಲ್ ಡಿಸ್ಪ್ಲೇ ಬಿಸಿನೆಸ್ ನ ಹಿರಿಯ ಉಪಾಧ್ಯಕ್ಷ ಮೋಹನ್ದೀಪ್ ಸಿಂಗ್ ಹೇಳಿದ್ದಾರೆ.
ಸ್ಪಷ್ಟತೆ, ಅದ್ಭುತ ಧ್ವನಿ ಮತ್ತು ಅಪೂರ್ವ ಅನುಭವ ಒದಗಿಸುವ ಹೊಸ ಎನ್ಕ್ಯೂ8 ಎಐ ಜೆನ್3 ಪ್ರೊಸೆಸರ್ ಇರುವ ನಿಯೋ ಕ್ಯೂಎಲ್ಇಡಿ 8ಕೆ
ಸ್ಯಾಮ್ಸಂಗ್ನ ಪ್ರಮುಖ ಟಿವಿ ಆಗಿರುವ ನಿಯೋ ಕ್ಯೂಎಲ್ಇಡಿ 8ಕೆ ಟಿವಿಯು ಅತ್ಯಾಧುನಿಕ ಎನ್ಕ್ಯೂ8 ಎಐ ಜೆನ್3 ಪ್ರೊಸೆಸರ್ ಹೊಂದಿದೆ. ಇದು ಎಐ ಟಿವಿ ತಂತ್ರಜ್ಞಾನದಲ್ಲಿನ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. ಎನ್ಕ್ಯೂ8 ಎಐ ಜೆನ್3 ಪ್ರೊಸೆಸರ್ ನ್ಯೂರಲ್ ಪ್ರೊಸೆಸಿಂಗ್ ಯೂನಿಟ್ (ಎನ್ಪಿಯು) ಅನ್ನು ಹೊಂದಿದೆ, ಅದು ಅದರ ಹಿಂದಿನ ಪ್ರೊಸೆಸರ್ ಗಿಂತ ಎರಡು ಪಟ್ಟು ವೇಗವನ್ನು ಹೊಂದಿದೆ, ಜೊತೆಗೆ ನ್ಯೂರಲ್ ನೆಟ್ವರ್ಕ್ಗಳಲ್ಲಿ 64 ರಿಂದ 512 ವರೆಗೆ ಎಂಟು ಪಟ್ಟು ಹೆಚ್ಚಳವಾಗಿದ್ದು ಅತ್ಯಂತ ಸೂಕ್ಷ್ಮ ವಿವರಗಳನ್ನು ಕೂಡ ಕಾಣಿಸುವ ಮೂಲಕ ಗ್ರಾಹಕರಿಗೆ ಅಸಾಧಾರಣ ವೀಕ್ಷಣಾ ಅನುಭವ ಒದಗಿಸಲಿದೆ.
2024ರ ನಿಯೋ ಕ್ಯೂಎಲ್ಇಡಿ 8ಕೆಯಲ್ಲಿ ಲಭ್ಯವಿರುವ ಹಲವು ಎಐ ಫೀಚರ್ ಗಳು ಈ ಕೆಳಗಿನಂತಿವೆ:
ಎಐ ಪಿಚ್ಚರ್ ಟೆಕ್ನಾಲಜಿ – ಮುಖಭಾವ ಮತ್ತು ಇತರ ಅತ್ಯಂತ ಸೂಕ್ಷ್ಮ ವಿವರಗಳನ್ನು ಕೂಡ ಅತ್ಯುತ್ತಮವಾದ ಸ್ಪಷ್ಟತೆ ಮತ್ತು ಸಹಜತೆಯೊಂದಿಗೆ ಇದು ನೋಡುಗರಿಗೆ ದಾಟಿಸುವಂತೆ ಮಾಡುತ್ತದೆ.
ಎಐ ಅಪ್ಸ್ಕೇಲಿಂಗ್ ಪ್ರೊ – ಈ ವೈಶಿಷ್ಯ್ಟವು ಎಲ್ಲಾ ಕಂಟೆಂಟ್ ಅನ್ನು 8ಕೆ ಡಿಸ್ಪ್ಲೇಗೆ ಸರಿ ಹೊಂದಿಸುತ್ತದೆ.
ಎಐ ಮೋಷನ್ ಎನ್ ಹ್ಯಾನ್ಸರ್ ಪ್ರೊ- ಕ್ರೀಡೆಯಂತಹ ತೀವ್ರ ಭಾವನೆ ಉದ್ದೀಪಿಸುವ ಕಂಟೆಂಟ್ ಗಳನ್ನು ತುಂಬಾ ಸ್ಪಷ್ಟವಾಗಿ ಕಾಣಿಸಲು ಅತ್ಯಾಧುನಿಕ ಮೋಷನ್ ಡಿಟೆಕ್ಷನ್ ಅಲ್ಗಾರಿದಮ್ ಅನ್ನು ಈ ಫೀಚರ್ ಬಳಸುತ್ತದೆ. ಈ ಮೂಲಕ ಬಳಕೆದಾರರಿಗೆ ಪ್ರತಿ ಕ್ಷಣವನ್ನು ಆನಂದಿಸಲು ಸಹಾಯ ಮಾಡುತ್ತದೆ. ಪಂದ್ಯದ ಸಮಯದಲ್ಲಿ, ಯಾವುದೇ ಅಸ್ಪಷ್ಟತೆ ಇಲ್ಲದೆ ಚೆಂಡನ್ನು ನೋಡಲು ಇದು ಸಹಾಯ ಮಾಡುತ್ತದೆ. ಬಳಕೆದಾರರು ಕ್ರೀಡಾಂಗಣದಲ್ಲಿ ಪಂದ್ಯವನ್ನು ಲೈವ್ ಆಗಿ ವೀಕ್ಷಿಸುವ ಅನುಭವವನ್ನು ಹೊಂದಲಿದ್ದಾರೆ.
ರಿಯಲ್ ಡೆಪ್ತ್ ಎನ್ಹಾನ್ಸರ್ ಪ್ರೊ ವೈಶಿಷ್ಟ್ಯವು ಚಿತ್ರಗಳಿಗೆ ತೀವ್ರತೆಯನ್ನು ಒದಗಿಸುತ್ತದೆ ಮತ್ತು ವೀಕ್ಷಕರು ದೃಶ್ಯದಲ್ಲಿ ಮುಳುಗಿಹೋಗುವಂತೆ ಮಾಡುತ್ತದೆ.
ಎಐ ಸೌಂಡ್ ಟೆಕ್ನಾಲಜಿ – ಇದು ಆಕ್ಟಿವ್ ವಾಯ್ಸ್ ಆಂಪ್ಲಿಫೈಯರ್ ಪ್ರೊ ಮೂಲಕ ನಿಖರವಾದ ಆಡಿಯೊವನ್ನು ಒದಗಿಸಲು ಸಹಾಯ ಮಾಡುತ್ತದೆ. ಹಿನ್ನೆಲೆ ಶಬ್ದಗಳನ್ನು ಗ್ರಹಿಸುತ್ತದೆ ಮತ್ತು ಸ್ವಯಂಚಾಲಿತವಾಗಿ ವಾಲ್ಯೂಮ್ ಅನ್ನು ಅದಕ್ಕೆ ತಕ್ಕಂತೆ ಸರಿಹೊಂದಿಸುತ್ತದೆ. ಆಬ್ಜೆಕ್ಟ್ ಟ್ರ್ಯಾಕಿಂಗ್ ಸೌಂಡ್ ಪ್ರೊ ತೆರೆಯ ಮೇಲಿನ ದೃಶ್ಯಕ್ಕೆ ಸೂಕ್ತವಾಗಿ ಧ್ವನಿಯನ್ನು ಸಿಂಕ್ ಮಾಡುವ ಮೂಲಕ ಆಡಿಯೊ ಅನುಭವವನ್ನು ಉತ್ಕೃಷ್ಟಗೊಳಿಸುತ್ತದೆ. ಜೊತೆಗೆ ಹೆಚ್ಚು ಆಕರ್ಷಕ ಮತ್ತು ಆಹ್ಲಾದಕರ ವೀಕ್ಷಣೆಯ ಅನುಭವವನ್ನು ಉಂಟು ಮಾಡುತ್ತದೆ. ಅಡಾಪ್ಟಿವ್ ಸೌಂಡ್ ಪ್ರೊ ಆಡಿಯೊವನ್ನು ಕಂಟೆಂಟ್ ಮತ್ತು ಕೋಣೆಗೆ ತಕ್ಕಂತೆ ಅತಿ ಬುದ್ಧಿವಂತಿಕೆಯಿಂದ ಹೊಂದಿಸುವ ಮೂಲಕ ಆಡಿಯೊ ಅನುಭವವನ್ನು ಇನ್ನಷ್ಟು ಅದ್ಭುತಗೊಳಿಸುತ್ತದೆ ಮತ್ತು ಶ್ರೀಮಂತಗೊಳಿಸುತ್ತದೆ.
ಎಐ ಆಟೋ ಗೇಮ್ ಮೋಡ್- ಇದು ಆಟ ಮತ್ತು ಆಟದ ಪ್ರಕಾರ ಎರಡನ್ನೂ ಗುರುತಿಸುತ್ತದೆ ಮತ್ತು ಅದಕ್ಕೆ ತಕ್ಕಂತೆ ದೃಶ್ಯದ ಗುಣಮಟ್ಟ ಮತ್ತು ಧ್ವನಿ ಗುಣಮಟ್ಟದ ಸೆಟ್ಟಿಂಗ್ಗಳನ್ನು ಸ್ವಯಂಚಾಲಿತವಾಗಿ ಸರಿಹೊಂದಿಸುತ್ತದೆ.
ಎಐ ಕಸ್ಟಮೈಸೇಷನ್ ಮೋಡ್- ಇದು ಬಳಕೆದಾರರ ಆದ್ಯತೆಯ ಆಧಾರದ ಮೇಲೆ ಕಂಟೆಂಟ್ ಅನ್ನು ಆಧರಿಸಿ ಪ್ರತಿ ದೃಶ್ಯಕ್ಕೆ ಅನುಗುಣವಾಗಿ ಚಿತ್ರವನ್ನು ಸರಿಹೊಂದಿಸುತ್ತದೆ.
ಎಐ ಎನರ್ಜಿ ಮೋಡ್ – ಇದು ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಿದ್ಯುತ್ ಉಳಿಸುತ್ತದೆ.
ನಿಯೋ ಕ್ಯೂಎಲ್ಇಡಿ 8ಕೆ ಟಿವಿಗಳು ಕ್ಯೂಎನ್900ಡಿ ಮತ್ತು ಕ್ಯೂಎನ್800ಡಿ ಎರಡು ಮಾದರಿಗಳಲ್ಲಿ ಲಭ್ಯವಿದೆ. 65, 75 ಮತ್ತು 85 ಇಂಚುಗಳ ಗಾತ್ರಗಳಲ್ಲಿ ದೊರೆಯುತ್ತದೆ.
ಅದ್ಭುತ ಮನರಂಜನೆ ಒದಗಿಸುವ ಹೊಸ ಉತ್ಪನ್ನಗಳು: ನಿಯೋ ಕ್ಯೂಎಲ್ಇಡಿ 4ಕೆ, ವಿಶ್ವದ ಮೊದಲ ಗ್ಲೇರ್-ಫ್ರೀ ಓಎಲ್ಇಡಿ
2024ರ ನಿಯೋ ಕ್ಯೂಎಲ್ಇಡಿ 4ಕೆ ಟಿವಿಯು ಎನ್ಕ್ಯೂ4 ಎಐ ಜೆನ್2 ಪ್ರೊಸೆಸರ್ನಿಂದ ಕಾರ್ಯನಿರ್ವಹಿಸುತ್ತದೆ. ಯಾವುದೇ ಕಂಟೆಂಟ್ ಅನ್ನೂ ಜೀವ ತುಂಬಿ ನಿಮಗೆ ದಾಟಿಸುತ್ತದೆ. 4ಕೆ ರೆಸೆಲ್ಯೂಷನ್ ನಲ್ಲಿ ನಿಮಗೆ ಒದಗಿಸುತ್ತದೆ. ರಿಯಲ್ ಡೆಪ್ತ್ ಎನ್ಹಾನ್ಸರ್ ಪ್ರೊ ಮತ್ತು ಕ್ವಾಂಟಮ್ ಮ್ಯಾಟ್ರಿಕ್ಸ್ ಟೆಕ್ನಾಲಜಿಯಿಂದ ಅಭಿವೃದ್ಧಿಗೊಳಿಸಿದ ಈ ಟಿವಿಯ ಸ್ಕ್ರೀನ್ ಸಂಕೀರ್ಣ ದೃಶ್ಯಗಳಲ್ಲಿಯೂ ಸಹ ಉತ್ತಮ ಕಾಂಟ್ರಾಸ್ಟ್ ಅನ್ನು ನೀಡುತ್ತದೆ. ವಿಶ್ವದ ಮೊದಲ ಪ್ಯಾನ್ ಟೋನ್ ಫೀಚರ್ ಹೊಂದಿದ ಡಿಸ್ ಪ್ಲೇ ನಿಖರವಾದ ಬಣ್ಣವನ್ನು ತೋರಿಸುತ್ತದೆ ಮತ್ತು ಡಾಲ್ಬಿ ಅಟ್ಮೋಸ್ ಅತ್ಯಪೂರ್ವ ಆಡಿಯೋ ಗುಣಮಟ್ಟ ನೀಡುತ್ತದೆ. ನಿಯೋ ಕ್ಯೂಎಲ್ಇಡಿ 4ಕೆ ಅತ್ಯುನ್ನತ 4ಕೆ ಅಲ್ಟ್ರಾ ಎಚ್ ಡಿ ಅನುಭವ ನೀಡುತ್ತದೆ.
ನಿಯೋ ಕ್ಯೂಎಲ್ಇಡಿ 4ಕೆ ಟಿವಿ ಕ್ಯೂಎನ್85ಡಿ ಮತ್ತು ಕ್ಯೂಎನ್90ಡಿ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ. 55, 65, 75, 85 ಮತ್ತು 98 ಇಂಚುಗಳ ಗಾತ್ರಗಳಲ್ಲಿ ದೊರೆಯುತ್ತದೆ.
ಸ್ಯಾಮ್ಸಂಗ್ ವಿಶ್ವದಲ್ಲಿಯೇ ಮೊತ್ತ ಮೊದಲ ಗ್ಲೇರ್ ಫ್ರೀ ಓಎಲ್ಇಡಿ ಟಿವಿಯನ್ನು ಸಹ ಪರಿಚಯಿಸುತ್ತಿದೆ. ಇದು ಯಾವುದೇ ಬೆಳಕಿನ ಸ್ಥಿತಿಯಲ್ಲಿ ಸ್ಪಷ್ಟವಾದ ಚಿತ್ರಣವನ್ನು ತೋರಿಸುತ್ತದೆ. ಅನಗತ್ಯ ಪ್ರತಿಫಲನವನ್ನು ತೆಗೆದುಹಾಕುತ್ತದೆ. ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯ ಟಿವಿಯಂತೆಯೇ ಅದೇ ಅಸಾಧಾರಣ ಎನ್ಕ್ಯೂ4 ಎಐ ಜೆನ್2 ಪ್ರೊಸೆಸರ್ನಿಂದ ನಡೆಸಲ್ಪಡುತ್ತದೆ. ಸ್ಯಾಮ್ಸಂಗ್ನ ಓಎಲ್ಇಡಿ ಟಿವಿಗಳು ರಿಯಲ್ ಡೆಪ್ತ್ ಎನ್ಹಾನ್ಸರ್ ಮತ್ತು ಓಎಲ್ಇಡಿ ಎಚ್ ಡಿ ಆರ್ ಪ್ರೊನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ದೃಶ್ಯಗಳ ಗುಣಮಟ್ಟವನ್ನು ಹೊಸ ಎತ್ತರಕ್ಕೆ ಕೊಂಡೊಯುತ್ತವೆ.
ಹೆಚ್ಚುವರಿಯಾಗಿ, ಮೋಷನ್ ಆಕ್ಸಲೇಟರ್ 144 ಹರ್ಟ್ಜ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದ್ದು, ಸುಗಮ ಚಲನೆ ಮತ್ತು ತ್ವರಿತ ರೆಸ್ಪೋನ್ಸ್ ರೇಟ್ ಒದಗಿಸುತ್ತದೆ. ಅದರಿಂದಾಗಿಯೇ ಸ್ಯಾಮ್ಸಂಗ್ ಓಎಲ್ಇಡಿ ಗೇಮಿಂಗ್ಗೆ ಅತ್ಯುತ್ತಮ ಆಯ್ಕೆಯಾಗಿದೆ. ನಯವಾದ ಸುಂದರ ವಿನ್ಯಾಸ ಹೊಂದಿರುವ ಈ ಓಎಲ್ಇಡಿ ಟಿವಿಗಳು ವೀಕ್ಷಣೆಯ ಸ್ಥಳವನ್ನು ಹೆಚ್ಚು ನೀಡುತ್ತವೆ. ಸ್ಯಾಮ್ಸಂಗ್ ಓಎಲ್ಇಡಿ ಟಿವಿ ಎಸ್95ಡಿ ಮತ್ತು ಎಸ್90ಡಿ ಎರಡು ಮಾದರಿಗಳಲ್ಲಿ ಲಭ್ಯವಿರುತ್ತದೆ. 55, 65, 77 ಮತ್ತು 83 ಇಂಚುಗಳ ಗಾತ್ರದಲ್ಲಿ ದೊರೆಯುತ್ತದೆ.
ಸ್ಯಾಮ್ಸಂಗ್ ಭಾರತೀಯ ಗ್ರಾಹಕರಿಗೆ ಗೇಮಿಂಗ್, ಮನರಂಜನೆ, ಶಿಕ್ಷಣ ಮತ್ತು ಫಿಟ್ನೆಸ್ನಂತಹ ಹಲವಾರು ಸೇವೆಗಳನ್ನು ಒದಗಿಸಲು ಪ್ರಾದೇಶಿಕಗೊಳಿಸಿದ ಸ್ಮಾರ್ಟ್ ಸೌಲಭ್ಯಗಳನ್ನು ನೀಡುತ್ತದೆ. ಅವುಗಳನ್ನು ಈ ಕೆಳಗೆ ನೋಡಬಹುದು.
ಕ್ಲೌಡ್ ಗೇಮಿಂಗ್ ಸರ್ವೀಸ್ ಬಳಕೆದಾರರಿಗೆ ಎಎಎ ಆಟಗಳನ್ನು ಪ್ಲಗ್ ಆಂಡ್ ಪ್ಲೇ ಮೂಲಕ ಅನುಭವಿಸಲು ಅನುವು ಮಾಡಿಕೊಡುತ್ತದೆ. ಈ ಸಂದರ್ಭದಲ್ಲಿ ಯಾವುದೇ ಕನ್ಸೋಲ್ ಅಥವಾ ಪಿಸಿಯ ಅಗತ್ಯ ಇರುವುದಿಲ್ಲ.
ಸ್ಯಾಮ್ಸಂಗ್ ಎಜುಕೇಶನ್ ಹಬ್ ಬಳಕೆದಾರರಿಗೆ ಲೈವ್ ತರಗತಿಗಳಿಗೆ ಬಿಗ್ ಸ್ಕ್ರೀನ್ ಮೂಲಕ ಹಾಜರಾಗಲು ಸಹಾಯ ಮಾಡುತ್ತದೆ. ಈ ಮೂಲಕ ನಿಮ್ಮ ಮಕ್ಕಳಿಗೆ ಕಲಿಕೆಯನ್ನು ಹೆಚ್ಚು ಸಂವಾದಾತ್ಮಕವಾಗಿಸುತ್ತದೆ ಮತ್ತು ತೀವ್ರಗೊಳಿಸುತ್ತದೆ.
ಸ್ಮಾರ್ಟ್ ಯೋಗ ಪ್ರಕ್ರಿಯೆಯನ್ನು ಎಐ- ಎನೇಬಲ್ಡ್ ಮ್ಯಾಟ್ ಮೂಲಕ ಆನಂದಿಸಬಹುದಾಗಿದೆ. ಈ ಮೂಲಕ ನೀವು ನೈಜ-ಸಮಯದಲ್ಲಿ ಆಸನಗಳ ಬಗ್ಗೆ ಸಲಹೆಗಳನ್ನು ಪಡೆಯುತ್ತೀರಿ. ಜೊತೆಗೆ ಭಂಗಿ ತಿದ್ದುಪಡಿ ಸಲಹೆಯನ್ನು ಕೂಡ ಪಡೆಯುತ್ತೀರಿ.
ಹೆಚ್ಚುವರಿಯಾಗಿ, ಟಿವಿ ಕೀ ಕ್ಲೌಡ್ ಸೇವೆಯಯಿಂದ ಕ್ಲೌಡ್ ಮೂಲಕವೇ ಕಂಟೆಂಟ್ ನೇರ ಪ್ರಸಾರವನ್ನು ಪಡೆಯಬಹುದಾಗಿದೆ. ಹಾಗಾಗಿ ಗ್ರಾಹಕರಿಗೆ ಇನ್ನು ಮುಂದೆ ಸೆಟ್-ಟಾಪ್ ಬಾಕ್ಸ್ ಅಗತ್ಯ ಇರುವುದಿಲ್ಲ.
ಸ್ಯಾಮ್ಸಂಗ್ ಟಿವಿ ಪ್ಲಸ್ ಮೂಲಕ ಸುದ್ದಿ, ಚಲನಚಿತ್ರಗಳು, ಮನರಂಜನೆ ಮತ್ತು ಇತ್ಯಾದಿಗಳನ್ನು ತ್ವರಿತವಾಗಿ ಒದಗಿಸುವ 100+ ಚಾನಲ್ಗಳನ್ನು ಸಂಪೂರ್ಣ ಉಚಿತವಾಗಿ ಪಡೆಯಬಹುದು.
2024ರ ನಿಯೋ ಕ್ಯೂಎಲ್ಇಡಿ 8ಕೆ, ಹೊಸ ಕ್ಯೂಎಲ್ಇಡಿ 4ಕೆ ಮತ್ತು ಓಎಲ್ಇಡಿ ಟಿವಿಗಳನ್ನು ಸೆಟಪ್ ಮಾಡಿದ ತಕ್ಷಣ ಸ್ಮಾರ್ಟ್ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಬಳಕೆದಾರರು ತಮ್ಮ ಹೊಸ ಸ್ಯಾಮ್ಸಂಗ್ ಟಿವಿಯನ್ನು ಆನ್ ಮಾಡಿದ ತಕ್ಷಣ ಟಿವಿ ಗ್ರಹಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ನೆಟ್ವರ್ಕ್ಗಳು ಮತ್ತು ಸಾಧನಗಳಿಗೆ ಸಂಪರ್ಕ ನೀಡುತ್ತದೆ. ಜೊತೆಗೆ ಈ ಎಲ್ಲವನ್ನೂ ಬಳಕೆದಾರರ ಸ್ಮಾರ್ಟ್ಫೋನ್ಗಳಿಗೆ ನೋಟಿಫಿಕೇಷನ್ ಕಳುಹಿಸುವ ಮೂಲಕ ತಿಳಿಸುತ್ತದೆ. ಈ ಪ್ರಯಾಸವಿಲ್ಲದ ಸೆಟಪ್ ವ್ಯವಸ್ಥೆಯು ಮನೆಯಲ್ಲಿರುವ ಎಲ್ಲಾ ಸ್ಯಾಮ್ಸಂಗ್ ಸಾಧನಗಳಿಗೆ ಹಾಗೂ ಥರ್ಡ್-ಪಾರ್ಟಿ ಉಪಕರಣಗಳು ಮತ್ತು ಐಓಟಿ ಸಾಧನಗಳಿಗೂ ಸಂಪರ್ಕ ಸಾಧಿಸುತ್ತದೆ.
ಸ್ಯಾಮ್ಸಂಗ್ನ 2024ರ ಟಿವಿ ಶ್ರೇಣಿಯು ಬಳಕೆದಾರರ ಸ್ಮಾರ್ಟ್ಫೋನ್ಗಳೊಂದಿಗೆ ಅತ್ಯುತ್ತಮ ಏಕೀಕರಣ ಸಾಧಿಸಲಿದ್ದು, ಈ ವಿಚಾರದಲ್ಲಿ ಮತ್ತೊಂದು ಎತ್ತರವನ್ನು ಸಾಧಿಸಿದೆ. ಸ್ಮಾರ್ಟ್ ಮೊಬೈಲ್ ಕನೆಕ್ಟ್ ಫೀಚರ್ ಅನ್ನು ಸಕ್ರಿಯಗೊಳಿಸಲು ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ ಅನ್ನು ಟಿವಿಯ ಬಳಿ ತಂದರೆ ಸಾಕು, ಅದು ಫೋನ್ ಅನ್ನು ಟಿವಿ ಮತ್ತು ಸಂಪರ್ಕಿತ ಗೃಹೋಪಯೋಗಿ ಉಪಕರಣಗಳಿಗೆ ಸಾರ್ವತ್ರಿಕ ರಿಮೋಟ್ ಆಗಿ ಪರಿವರ್ತನೆ ಹೊಂದುತ್ತದೆ.
ಹೊಸ ಎಐ ಟಿವಿಗಳು, ಅಪ್ಲಿಕೇಶನ್ಗಳು ಮತ್ತು ಪ್ಲಾಟ್ಫಾರ್ಮ್ಗಳ ಮೂಲಕ ಹೆಚ್ಚು ವೈಯಕ್ತೀಕರಿಸಿದ ಅನುಭವವನ್ನು ಒದಗಿಸುತ್ತವೆ. ವಿಜೆಟ್ಗಳ ಸೇರ್ಪಡೆಯೊಂದಿಗೆ, ಟಿವಿ ಪರದೆಗಳು ಈಗ ವೈಯಕ್ತೀಕರಿಸಿದ ಡ್ಯಾಶ್ಬೋರ್ಡ್ಗಳಾಗಿವೆ, ಅದು ಬಳಕೆದಾರರಿಗೆ ಮನೆಯ ಸ್ಥಿತಿ, ಕ್ಯಾಮೆರಾ ಫೀಡ್ಗಳು, ವಿದ್ಯುತ್ ಬಳಕೆ, ಹವಾಮಾನ ನವೀಕರಣಗಳು ಮತ್ತು ಇತ್ಯಾದಿಗಳನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ. ಸ್ಯಾಮ್ಸಂಗ್ ನಾಕ್ಸ್ ಫೀಚರ್ ಮೂಲಕ ಪ್ರತಿ ಫೀಚರ್, ಅಪ್ಲಿಕೇಶನ್ ಮತ್ತು ಪ್ಲಾಟ್ಫಾರ್ಮ್ ಭದ್ರವಾದ ರಕ್ಷಣೆ ಪಡೆಯುತ್ತದೆ. ಎಲ್ಲಾ ಸೌಕರ್ಯಗಳು ಖಾಸಗಿಯಾಗಿರುತ್ತವೆ ಮತ್ತು ಸುರಕ್ಷಿತವಾಗಿರುತ್ತವೆ ಎಂಬ ಭರವಸೆ ಒದಗಿಸುತ್ತದೆ.
ಸ್ಯಾಮ್ಸಂಗ್ ಹೊಸ ಮ್ಯೂಸಿಕ್ ಫ್ರೇಮ್ ಅನ್ನು ಕೂಡ ಪರಿಚಯಿಸಿದೆ. ಇದು ದಿ ಫ್ರೇಮ್ ಮೂಲಕ ಪ್ರೇರಿತವಾದ ಕಲಾತ್ಮಕ ವಿನ್ಯಾಸದೊಂದಿಗೆ ಪ್ರೀಮಿಯಂ ಆಡಿಯೊವನ್ನು ಒದಗಿಸುತ್ತದೆ. ಈ ಬಹುಮುಖ ಸಾಧನವು ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ವೈರ್ಲೆಸ್ ಆಡಿಯೊವನ್ನು ಆನಂದಿಸುತ್ತಿರುವ ಸಂದರ್ಭದಲ್ಲಿಯೇ ವೈಯಕ್ತಿಕ ಚಿತ್ರಗಳು ಅಥವಾ ಕಲಾಕೃತಿಗಳನ್ನು ಪ್ರದರ್ಶಿಸಲು ಬಳಕೆದಾರರಿಗೆ ಅನುಮತಿಸುತ್ತದೆ. ಸ್ವತಂತ್ರ ಸಾಧನವಾಗಿ ಬಳಸಬಹುದಾಗಿದ್ದರೂ ಅಥವಾ ಟಿವಿ ಮತ್ತು ಸೌಂಡ್ಬಾರ್ನೊಂದಿಗೆ ಜೋಡಿಸಿದ್ದರೂ, ಮ್ಯೂಸಿಕ್ ಫ್ರೇಮ್ ಯಾವುದೇ ಜಾಗಕ್ಕೆ ಹೊಂದಿಕೊಳ್ಳುವ ಅತ್ಯಪೂರ್ವ ಸಂಗೀತ ಕೇಳುವ ಅನುಭವವನ್ನು ನೀಡುತ್ತದೆ.
ಬೆಲೆ ಮತ್ತು ಪ್ರೀ ಆರ್ಡರ್ ಆಫರ್
ಪ್ರೀ-ಆರ್ಡರ್ ಕೊಡುಗೆಯ ಭಾಗವಾಗಿ, ನಿಯೋ ಕ್ಯೂಎಲ್ಇಡಿ 8ಕೆ, ನಿಯೋ ಕ್ಯೂಎಲ್ಇಡಿ 4ಕೆ ಮತ್ತು ಗ್ಲೇರ್ ಫ್ರೀ ಓಎಲ್ಇಡಿ ಶ್ರೇಣಿಯನ್ನು ಖರೀದಿಸುವ ಗ್ರಾಹಕರು ರೂ. 79990 ಮೌಲ್ಯದ ಉಚಿತ ಸೌಂಡ್ಬಾರ್, ರೂ. 59990 ಮೌಲ್ಯದ ಫ್ರೀಸ್ಟೈಲ್, ರೂ.29990 ಮೌಲ್ಯದ ಮ್ಯೂಸಿಕ್ ಫ್ರೇಮ್ ಪಡೆಯಲಿದ್ದಾರೆ. ಈ ಆಫರ್ ಖರೀದಿಸುವ ಮಾಡೆಲ್ ಅನ್ನು ಅವಲಂಬಿಸಿರುತ್ತದೆ ಮತ್ತು ಏಪ್ರಿಲ್ 30, 2024ರವರೆಗೆ ಲಭ್ಯವಿರುತ್ತದೆ. ಗ್ರಾಹಕರು ಮಾಡೆಲ್ ಅನ್ನು ಅವಲಂಬಿಸಿ 20% ವರೆಗೆ ಕ್ಯಾಶ್ಬ್ಯಾಕ್ ಪಡೆಯಬಹುದು.
• ಸ್ಯಾಮ್ಸಂಗ್ ನ ನಿಯೋ ಕ್ಯೂಎಲ್ಇಡಿ 8ಕೆ ಶ್ರೇಣಿಯು ಬೆಲೆ ರೂ.319990ರಿಂದ ಪ್ರಾರಂಭವಾಗುತ್ತದೆ
• ಸ್ಯಾಮ್ಸಂಗ್ ನ ನಿಯೋ ಕ್ಯೂಎಲ್ಇಡಿ 4ಕೆ ಶ್ರೇಣಿಯು ಬೆಲೆ ರೂ.139990 ರಿಂದ ಪ್ರಾರಂಭವಾಗುತ್ತದೆ
• ಸ್ಯಾಮ್ಸಂಗ್ ನ ಓಎಲ್ಇಡಿ ಶ್ರೇಣಿಯು ಬೆಲೆ ರೂ.164990 ರಿಂದ ಪ್ರಾರಂಭವಾಗುತ್ತದೆ