ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯ ನಟ, 81 ವರ್ಷದ ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಇನ್ನಿಲ್ಲ. ನಟ ದ್ವಾರಕೀಶ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ 1942 ಆಗಸ್ಟ್ 19ರಂದು ಜನಿಸಿದ ಇವರು ಕನ್ನಡದ ಪ್ರತಿಭಾನ್ವಿತ ನಟರಾಗಿ ಹೆಸರುವಾಸಿಯಾಗಿದ್ದರು. ಮಾವ ಹುಣಸೂರು ಕೃಷ್ಣಮೂರ್ತಿ ನೆರವಿನಿಂದ ಸಿನಿಮಾರಂಗ ಪ್ರವೇಶಿಸಿದರು.
ಪ್ರಚಂಡ ಕುಳ್ಳ, ಗುರು ಶಿಷ್ಯರು,ಸಿಂಗಪುರದಲ್ಲಿ ರಾಜ ಕುಳ್ಳ, ಅವಳ ಹೆಜ್ಜೆ, ಕಿಟ್ಟು ಪುಟ್ಟು, ಆಪ್ತಮಿತ್ರ, ಮಂಕುತಿಮ್ಮ, ಕುಳ್ಳ ಏಜೆಂಟ್ 000 ಚಿತ್ರಗಳಲ್ಲಿ ಪ್ರಮುಖ ವಾಗಿರುತ್ತದೆ.
ಮೇಯರ್ ಮುತ್ತಣ್ಣ ಮೂಲಕ ನಿರ್ಮಾಪಕರಾಗಿ ಮೆರೆದವರಾಗಿದ್ದಾರೆ.