ಮಂಗಳೂರು: ಇದು ದೇಶದ ಭವಿಷ್ಯದ ಚುನಾವಣೆ.ಅನೇಕ ಚುನಾವಣೆಗಳು ನಮ್ಮ ಮುಂದೆ ಬಂದಿದೆ.ಆದ್ರೆ ಇದು ದೇಶದ ಚುನಾವಣೆಯಾಗಿದೆ ಎಂದು ಮಂಗಳೂರಿನಲ್ಲಿ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಇಲ್ಲಿ ಅಭ್ಯರ್ಥಿಗಿಂತ ಪಕ್ಷ ಮತ್ತು ದೇಶವನ್ನು ನೋಡಬೇಕು.ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಆಳ್ವಿಕೆ ಮಾಡಿದೆ.ಕಳೆದ ನಲವತ್ತು ವರ್ಷಗಳಲ್ಲಿ ಬಿಜೆಪಿಗೆ ಜಿಲ್ಲೆಯಲ್ಲಿ ಮತ ನೀಡಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮರವನ್ನು ನಿಲ್ಲಿಸಿದರು ಗೆಲ್ಲುತ್ತೇವೆ ಎನ್ನುತ್ತಿದ್ದರು.ಆದ್ರೆ ಈಗಾ ಅದು ಬದಲಾಗಿ ಬಿಜೆಪಿಯ ಸಮಾನ್ಯ ಕಾರ್ಯಕರ್ತನು ಗೆಲ್ಲುತ್ತಾನೆ.
ಈ ದೇಶದಲ್ಲಿ ಹುಟ್ಟಿ ಬೆಳೆದು ಬೇರೆ ದೇಶಗಳಿಗೆ ಜೈಕಾರ ಹಾಕುವವರು.ದೇಶದಲ್ಲಿ ಭಯೋತ್ಪಾದನ ಕೃತ್ಯ ಮಾಡುವವರು.
ಇದನ್ನು ತಡೆಯಲು ಮತ್ತೊಮ್ಮೆ ದೇಶಕ್ಕೆ ನರೇಂದ್ರ ಮೋದಿ ಪ್ರಧಾನಿ ಆಗಬೇಕಿದೆ.ಕಳೆದ ಹದಿನೈದು ವರ್ಷದಲ್ಲಿ ಜಿಲ್ಲೆಗೆ ನಳೀನ್ ಕುಮಾರ್ ಕಟೀಲ್ ಅವರು ಮಾಡಿದ ಅಭಿವೃದ್ಧಿ ಕಾರ್ಯಕ್ರಮ.
ಈ ಬಾರಿ ಯುವ ನಾಯಕ ದೇಶದ ಸೈನಿಕನಿಗೆ ಬಿಜೆಪಿ ಅಭ್ಯರ್ಥಿ ಸ್ಥಾನ ನೀಡಿದೆ.ನಾಳೆ ಜಿಲ್ಲೆಯಲ್ಲಿ ಹಬ್ಬದ ವಾತಾವರಣ ಮೋದಿ ಜೀ ಮಂಗಳೂರಿಗೆ ಬರಲಿದ್ದಾರೆ.ನಾರಾಯಣ ಗುರು ವೃತ್ತದಿಂದ ಬೃಹತ್ ರೋಡ್ ಶೋ ನಡೆಯಲಿದೆ ಎಂದು ಉಮಾನಾಥ್ ಕೋಟ್ಯಾನ್ ಹೇಳಿದರು.