ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಮಂಗಳೂರು ನಗರದಲ್ಲಿ ನಡೆಯುವ ರೋಡ್ ಶೋ ಸಮಯ ಬದಲಾವಣೆಯಾಗಿದೆ. ರವಿವಾರ ರಾತ್ರಿ 7.45ಕ್ಕೆ ಲೇಡಿಹಿಲ್ ನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ನಿಂದ ರೋಡ್ ಶೋ ಆರಂಭವಾಗಲಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಸುನಿಲ್ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ನಾಳೆ ಸಂಜೆ 7.45 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಆರಂಭವಾಗಿ ನವಭಾರತ್ ಸರ್ಕಲ್ ವರೆಗೆ ರೋಡ್ ಶೋವರೆಗೆ ನಡೆಯಲಿದೆ. ವಿಜಯ ಸಂಕಲ್ಪ ರೋಡ್ ಶೋನಲ್ಲಿ ಭಾಗವಹಿಸಲು ಬರುವವರು 6.45 ರಿಂದ 7ರೊಳಗೆ ಬರಬೇಕು ಎಂದು ಹೇಳಿದರು.