ಮಂಗಳೂರು: ದೇಶದಲ್ಲಿ ಎನ್.ಡಿ.ಎ ಪರವಾದ ಅಲೆ ಎದ್ದು ಕಾಣುತ್ತಿದೆ.ದೇಶದ ಜನ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂಬ ಕನಸು ಕಾಣ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪತ್ರಿಕಾಗೋಷ್ಠಿಯಲ್ಲಿ10 ವರ್ಷದ ಆಡಳಿತ,ಅಭಿವೃದ್ಧಿ ಪರವಾದ ಯೋಜನೆ ಯೋಚನೆ,ಕೋವಿಡ್ ಸಂಕಷ್ಟದ ಸಂದರ್ಭ ಜಗತ್ತನ್ನು ಮುನ್ನಡೆಸಿದ ರೀತಿ,ಭ್ರಷ್ಟಾಚಾರದ ಆರೋಪವಿಲ್ಲದೆ ಆಡಳಿತ ನಡೆಸಿರುವುದು,ವೈರಿ ರಾಷ್ಟ್ರಗಳಿಗೆ ಕೊಟ್ಟಿರುವ ಎಚ್ಚರಿಕೆ,ಕಾಶ್ಮೀರ ಅಯೋಧ್ಯೆ ಸಮಸ್ಯೆಯನ್ನು ಚಾಣಾಕ್ಷತನದಿಂದ ಬಗೆ ಹರಿಸಿರುವ ರೀತಿ ಇದೆಲ್ಲದರಿಂದ ಜನ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗೋದನ್ನು ಬಯಸಿದ್ದಾರೆ.
ಹತ್ತು ವರ್ಷದ ಆಡಳಿತ ನಂತರವೂ ಜಗತ್ತಿನ ಅತೀ ಹೆಚ್ಚಿನ ಮನ್ನಣೆ ಪಡೆದಿರುವ ವಿಶ್ವನಾಯಕ.ಕರ್ನಾಟಕದಲ್ಲಿಯೂ 28 ಕ್ಕೆ 28 ಸ್ಥಾನ ಗೆಲ್ಲುತ್ತೇವೆ.ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ನ ಹೀನ ಆಡಳಿತ.ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ.
ಕಾಂಗ್ರೆಸ್ 80% ಸರ್ಕಾರವೆಂದು ಗುತ್ತಿಗೆದಾರರು ಹೇಳ್ತಿದ್ದಾರೆ.ಅವರೊಳಗೆ ಇರುವ ಗುಂಪುಗಾರಿಕೆಯಿಂದ ಜನ ತಿರಸ್ಕರಿಸುತ್ತಾರೆ.
1991ರಿಂದ ಬಿಜೆಪಿ ದಕ್ಷಿಣಕನ್ನಡವನ್ನು ಗೆಲುವಿನ ಕ್ಷೇತ್ರವಾಗಿ ಆರಿಸಿಕೊಂಡಿದೆ ಮತ್ತೆ ಬಿಜೆಪಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ
ಮನೆ ಮನೆಗೆ ಹೋಗುವಾಗ ಜನ ಅಭೂತಪೂರ್ವ ಸ್ವಾಗತ ಮಾಡ್ತಿದ್ದಾರೆ.ಸ್ವಯಂ ಪ್ರೇರಿತರಾಗಿ ಜನ ಕ್ಯಾಂಪೇನ್ ಮಾಡ್ತಿದ್ದಾರೆ.
ತಂಡ ತಂಡಗಳಾಗಿ ವೈದ್ಯರು, ಪ್ರೊಫೆಸರ್, ಎನ್.ಆರ್.ಐ ಗಳು ಪ್ರಚಾರ ಮಾಡ್ತಿದ್ದಾರೆ.ಥರ್ಡ್ ಪಾರ್ಟಿ ಕ್ಯಾಂಪೇನ್ ಆಗ್ತಿದೆ.
ಈ ಬಾರಿ 3.50 ಲಕ್ಷ ಗೆಲುವಿನ ಅಂತರ ದಾಟುತ್ತೆ. ಈ ಹಿಂದೆ ನರೇಂದ್ರ ಮೋದಿ ಬಂದು ಹೋದ ಬಳಿಕ ಅಭೂತಪೂರ್ವ ಗೆಲುವು ಪಡೆದಿದ್ದೇವೆ.
ಎ.14ರಂದು ಸಂಜೆ 6ಗಂಟೆಗೆ ನಾರಾಯಣ ಗುರು ವೃತ್ತದಿಂದ ರೋಡ್ ಶೋ ಆರಂಭವಾಗುತ್ತೆ. ನವಭಾರತ್ ಸರ್ಕಲ್ ನಲ್ಲಿ ರೋಡ್ ಶೋ ಅಂತ್ಯವಾಗುತ್ತೆ.
ಮೊದಲು ರೋಡ್ ಶೋ ಚಿಂತನೆ ಮಂಗಳೂರಿನಲ್ಲಿ ಆರಂಭವಾಗಿದ್ದು.ಜನರ ಬಳಿ ಆಶೀರ್ವಾದ ಕೇಳಲು ನರೇಂದ್ರ ಮೋದಿ ಬರ್ತಿದ್ದಾರೆ.
ಮಂಗಳೂರು ಅಂದ್ರೆ ನರೇಂದ್ರ ಮೋದಿಯವರಿಗೆ ಹೆಚ್ಚು ಪ್ರೀತಿ.ನರೇಂದ್ರ ಮೋದಿಯನ್ನು ನೋಡಲು ಜನ ಕಾತುರದಿಂದ ಕಾಯ್ತಿದ್ದಾರೆ. ಮಂಗಳೂರಿನಲ್ಲಿ ರೋಡ್ ಶೋ ಆಗಬೇಕೆಂದು ಅವರೇ ಹೇಳಿದ್ದಾರೆ.
ಕೇರಳದಲ್ಲಿಯೂ ಪರಿವರ್ತನೆ ಗಾಳಿ ಬೀಸುತ್ತಿದೆ.2016ರಿಂದ 2019ರವರೆಗೆ ಕೇರಳದಲ್ಲಿ ಕೆಲಸ ಮಾಡಿದ್ದೆ. ಅವತ್ತಿಗೂ ಇವತ್ತಿಗೂ ಇರುವ ಅಂತರ ಹೆಚ್ಚಾಗಿದೆ.ಕ್ರೈಸ್ತ ಸಮುದಾಯ ಬಿಜೆಪಿಯ ಹತ್ತಿರ ಬರ್ತಿದೆ.
ಈಶ್ವರಪ್ಪ ಪಕ್ಷದ ಕಟ್ಟಾಳುವಾಗಿ ಇದ್ದವರು.ಈಶ್ವರಪ್ಪನವರಿಗೆ ಪಾರ್ಟಿ ಬಗ್ಗೆ ಹೆಚ್ಚಿನ ಗೌರವವಿದೆ.ಕೇಂದ್ರದ ನಾಯಕರು ಮಾತುಕತೆ ನಡೆಸುತ್ತಿದ್ದಾರೆ.ಎಲ್ಲವೂ ಸರಿಯಾಗುವ ವಿಶ್ವಾಸವಿದೆ ಎಂದು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ.