ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ದೆಹಲಿಯ ಫೌಂಡೇಶನ್ ಫಾರ್ ಇನ್ನೋವೇಶನ್ ಆಂಡ್ ಟೆಕ್ನಾಲಜಿ ಟ್ರಾನ್ಸ್ಫರ್ (ಎಫ್ಐಟಿಟಿ) ಐಐಟಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಯುನೈಟೆಡ್ ನೇಷನ್ಸ್ ಇನ್ ಇಂಡಿಯಾ ಸಹಯೋಗದಲ್ಲಿ ತನ್ನ ಪ್ರಮುಖ ಸಿಎಸ್ಆರ್ ಉಪಕ್ರಮವಾದ ‘ಸಾಲ್ವ್ ಫಾರ್ ಟುಮಾರೋ’ (ನಾಳೆಗಾಗಿ ಪರಿಹಾರ)ದ ಮೂರನೇ ಆವೃತ್ತಿಯನ್ನು ಪ್ರಾರಂಭಿಸಿದೆ. ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮದ ಮೂಲಕ ಸ್ಯಾಮ್ಸಂಗ್ ದೇಶದ ಯುವಜನರಲ್ಲಿ ನವೀನ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಆಲೋಚನೆಗಳನ್ನು ಮೊಳೆಯಿಸುವ ಗುರಿಯನ್ನು ಹೊಂದಿದೆ.
ಸಾಲ್ವ್ ಫಾರ್ ಟುಮಾರೋ 2024 ಕಾರ್ಯಕ್ರಮವನ್ನು ಸ್ಯಾಮ್ಸಂಗ್ ಸೌತ್ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಶ್ರೀ. ಜೆ.ಬಿ. ಪಾರ್ಕ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ವಿಜ್ಞಾನಿ “ಜಿ’’ ಮತ್ತು ಹಿರಿಯ ನಿರ್ದೇಶಕ ಡಾ. ಸಂದೀಪ್ ಚಟರ್ಜಿ ಮತ್ತು ಯುನೈಟೆಡ್ ನೇಷನ್ಸ್ ಇನ್ ಇಂಡಿಯಾದ ರೆಸಿಡೆಂಟ್ ಕೋ-ಆರ್ಡಿನೇಟರ್ ಶೊಂಬಿ ಶಾರ್ಪ್ ಇತರ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ ಮಾಡಿದರು.
ಈ ಸಿಎಸ್ಆರ್ ಕಾರ್ಯಕ್ರಮವು ನವೀನ ಪರಿಹಾರ ಐಡಿಯಾಗಳ ಶಕ್ತಿಯನ್ನು ಮತ್ತು ಜೀವನವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಗುರುತಿಸುವ ಕೆಲಸ ಮಾಡುತ್ತದೆ, ದೃಢವಾದ ಸಾಮಾಜಿಕ ಪ್ರಭಾವವನ್ನು ಬೀರುತ್ತದೆ ಮತ್ತು ಸ್ಯಾಮ್ಸಂಗ್ ನ #TogetherforTomorrow #EnablingPeople ಎಂಬ ತತ್ವಕ್ಕೆ ಬಲ ತುಂಬುತ್ತದೆ.
ಈ ವರ್ಷ, ‘ಸಾಲ್ವ್ ಫಾರ್ ಟುಮಾರೊ’ ಕಾರ್ಯಕ್ರಮವು ಸ್ಕೂಲ್ ಟ್ರ್ಯಾಕ್ ಮತ್ತು ಯೂತ್ ಟ್ರ್ಯಾಕ್ ಎಂಬ ಎರಡು ವಿಭಿನ್ನ ವಿಭಾಗಗಳ ಮೂಲಕ ನಡೆಯಲಿದೆ. ಈ ಟ್ರ್ಯಾಕ್ ಗಳು ನಿರ್ದಿಷ್ಟ ಥೀಮ್ ಹೊಂದಿದೆ ಮತ್ತು ವಿವಿಧ ವಯೋಮಾನದವರನ್ನು ಗುರಿಯಾಗಿರಿಸಿಕೊಂಡಿದೆ. ಎರಡೂ ಟ್ರ್ಯಾಕ್ಗಳು ಏಕಕಾಲದಲ್ಲಿ ಕಾರ್ಯಾರಂಭ ಮಾಡುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಮತ್ತು ಒಂದೇ ರೀತಿಯ ಹಿನ್ನೆಲೆಯನ್ನು ಒದಗಿಸಲಾಗುತ್ತದೆ.
ಸ್ಕೂಲ್ ಟ್ರ್ಯಾಕ್ 14-17 ವಯಸ್ಸಿನ ವಿದ್ಯಾರ್ಥಿಗಳಿಗೆ ಇರುವ ವಿಭಾಗವಾಗಿದ್ದು, “ಸಮುದಾಯ ಮತ್ತು ಒಳಗೊಳ್ಳುವಿಕೆ” ಎಂಬ ಥೀಮ್ ಅನ್ನು ಹೊಂದಿದೆ. ಸಾಮಾಜಿಕ ಆವಿಷ್ಕಾರಗಳ ಮೂಲಕ ಹಿಂದುಳಿದ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಿ ಅವರ ಬದುಕು ಸುಧಾರಿಸುವ ಮತ್ತು ಸಾಮಾಜಿಕವಾಗಿ ಒಳಗೊಳ್ಳುವಿಕೆಯ ಅವಕಾಶ ಒದಗಿಸುವ ಮೂಲಕ ಹೊಸ ಭಾರತಕ್ಕೆ ಪರಿಹಾರ ಒದಗಿಸುವ ಕಡೆಗೆ ಗಮನ ನೀಡಲಿದೆ.
ಯೂತ್ ಟ್ರ್ಯಾಕ್ 18-22 ವಯಸ್ಸಿನ ತರುಣರ ವಿಭಾಗವಾಗಿದ್ದು, “ಪರಿಸರ ಮತ್ತು ಸುಸ್ಥಿರತೆ” ವಿಷಯದ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಟ್ರ್ಯಾಕ್ ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡಲು, ಪರಿಸರವನ್ನು ರಕ್ಷಿಸಲು ಮತ್ತು ಸುಸ್ಥಿರತೆಯನ್ನು ಉತ್ತೇಜಿಸಲು ನವೀನ ಪರಿಹಾರಗಳನ್ನು ಕಂಡು ಹಿಡಿಯಲಿದೆ ಮತ್ತು ಆ ಮೂಲಕ ಹೊಸ ಕಾಲಜ ಜಗತ್ತಿಗೆ ನೆರವು ನೀಡುವ ಕಾರ್ಯ ಮಾಡಲಿದೆ.
ಸ್ಯಾಮ್ಸಂಗ್ ಸೌತ್ವೆಸ್ಟ್ ಏಷ್ಯಾದ ಅಧ್ಯಕ್ಷ ಮತ್ತು ಸಿಇಒ ಶ್ರೀ. ಜೆಬಿ ಪಾರ್ಕ್, ” ಸ್ಯಾಮ್ಸಂಗ್ ನಲ್ಲಿ, ನಾವು ನವೀನ ಆಲೋಚನೆಗಳು ಮತ್ತು ಪರಿವರ್ತಕ ತಂತ್ರಜ್ಞಾನಗಳ ಮೂಲಕ ಭವಿಷ್ಯವನ್ನು ರೂಪಿಸಲು ಮತ್ತು ಉತ್ತಮಗೊಳಿಸಲು ಪ್ರಯತ್ನಿಸುತ್ತೇವೆ. ಮುಂದಿನ ಪೀಳಿಗೆಯ ಹೊಸ ಆಲೋಚನೆ ಉಳ್ಳವರನ್ನು ಪೋಷಿಸುವುದು ಮತ್ತು ಸಾಮಾಜಿಕ ಬದಲಾವಣೆಗೆ ಉತ್ತೇಜಿಸುವುದು ನಮ್ಮ ಧ್ಯೇಯವಾಗಿದೆ. ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮವು ನಿಜವಾಗಿಯೂ ಭಾರತದ ಯುವಕರಿಗೆ ಜನರ ಜೀವನವನ್ನು ಸುಧಾರಿಸುವ ಅರ್ಥಪೂರ್ಣ ಆವಿಷ್ಕಾರಗಳನ್ನು ಕಂಡು ಹಿಡಿಯಲು ಒಂದು ಅಪೂರ್ವ ವೇದಿಕೆಯಾಗಿ ರೂಪುಗೊಳ್ಳುತ್ತಿದೆ.
ಮೊದಲ ಎರಡು ಆವೃತ್ತಿಗಳಲ್ಲಿ, ಈ ಸಿಎಸ್ಆರ್ ಉಪಕ್ರಮವು ನಮ್ಮ ಮುಂದಿನ ಪೀಳಿಗೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ್ದನ್ನು ನಾವು ಗಮನಿಸಿದ್ದೇವೆ. ಅವರು ಆ ಕಾರ್ಯಕ್ರಮದ ನಂತರ ತಮ್ಮ ಸಾಮಾಜಿಕ ಉದ್ಯಮಶೀಲತೆಯ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಅದರ ಮೂರನೇ ಆವೃತ್ತಿಯಲ್ಲಿ, ಎರಡು ಪ್ರತ್ಯೇಕ ಟ್ರ್ಯಾಕ್ಗಳನ್ನು ಪರಿಚಯಿಸಿದ್ದೇವೆ. ಆ ಮೂಲಕ ನಾವು ಭಾರತಕ್ಕೆ ಮತ್ತು ಜಗತ್ತಿಗೆ ಏಕಕಾಲದಲ್ಲಿ ಪರಿಹಾರ ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಮುಖ್ಯವಾಗಿ, ಈ ಮಹತ್ವದ ಸಿಎಸ್ಆರ್ ಕಾರ್ಯಕ್ರಮದ ಮೂಲಕ, ನಾವು ದೇಶದಲ್ಲಿ ನಾವೀನ್ಯತೆಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಬಯಸುತ್ತೇವೆ” ಎಂದು ಹೇಳಿದರು.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಹಿರಿಯ ನಿರ್ದೇಶಕ ಮತ್ತು ವಿಜ್ಞಾನಿ ‘ಜಿ’ ಡಾ.ಸಂದೀಪ್ ಚಟರ್ಜಿ ಮಾತನಾಡುತ್ತಾ, “ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯು ಭಾರತ ಸರ್ಕಾರದ ಆದ್ಯತೆಯ ಕಾರ್ಯಸೂಚಿಗಳಲ್ಲಿ ಒಂದಾಗಿದೆ. ಆರ್ಥಿಕ ಬೆಳವಣಿಗೆಯನ್ನು ತೀವ್ರಗೊಳಿಸಲು ಮಾನವ ಸಾಮರ್ಥ್ಯಗಳ ಜೊತೆಗೆ ತಂತ್ರಜ್ಞಾನವನ್ನು ಸಂಯೋಜಿಸಲು ಇದು ಸೂಕ್ತ ಸಮಯವಾಗಿದೆ. ಆಧುನಿಕ ಮನಸ್ಸು ಮತ್ತು ಕೌಶಲ್ಯಗಳನ್ನು ಹೊಂದಿರುವ ಭಾರತೀಯ ಯುವಕರು ಪರಿಸರದ ಕುರಿತು ಗಾಢವಾದ ಕಾಳಜಿ ವಹಿಸುತ್ತಾರೆ. ಆಧುನಿಕ ಸಮಗ್ರ ಆವಿಷ್ಕಾರಗಳನ್ನು ಬಳಸಿಕೊಂಡು, ವಿವಿಧ ಜಾಗತಿಕವಾದ ತಳಮಟ್ಟದ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಬಹುದು. ಯುವಕರ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಬೆಳವಣಿಗೆ ಸಾಧಿಸುವ ‘ನಾಳೆಗಾಗಿ ಪರಿಹಾರ (ಸಾಲ್ವ್ ಫಾರ್ ಟುಮಾರೋ)’ ನಂತಹ ಕಾರ್ಯಕ್ರಮಗಳು ಭಾರತ ಸರ್ಕಾರದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಸಾಕ್ಷಿಯಂತೆ ಕಾರ್ಯ ನಿರ್ವಹಿಸುತ್ತದೆ” ಎಂದರು.
ಐಐಟಿ ದೆಹಲಿಯ ನಿರ್ದೇಶಕ ಪ್ರೊ. ರಂಗನ್ ಬ್ಯಾನರ್ಜಿ, ” ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮದಲ್ಲಿ ಸ್ಯಾಮ್ಸಂಗ್ನ ಪ್ರಮುಖ ಪಾಲುದಾರರಾಗಿ ಮುಂದುವರಿಯಲು ನಮಗೆ ಹೆಮ್ಮೆ ಇದೆ. ಈ ಸಹಯೋಗವು ಹೊಸತನವನ್ನು ಉತ್ತೇಜಿಸುವ ಮತ್ತು ಯುವ ಮನಸ್ಸುಗಳನ್ನು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಸಶಕ್ತಗೊಳಿಸುವ ಕಾರ್ಯ ಮಾಡಲಿದೆ” ಎಂದು ಹೇಳಿದರು.
ಭಾರತದಲ್ಲಿನ ಯುಎನ್ ರೆಸಿಡೆಂಟ್ ಕೋಆರ್ಡಿನೇಟರ್ ಶೊಂಬಿ ಶಾರ್ಪ್ ಅವರು ಮಾತನಾಡಿ, “ಸ್ಯಾಮ್ಸಂಗ್ನ ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮದ ಮೂರನೇ ಆವೃತ್ತಿಯಲ್ಲಿ ಭಾಗವಹಿಸಿರುವುದು ನನಗೆ ಸಂತೋಷ ತಂದಿದೆ. ಇದು ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸಲು ಯುವಕರಿಗೆ ನಾವೀನ್ಯತೆ ತರಲು ಉತ್ತೇಜಿಸುವ ಉತ್ತೇಜಕ ಉಪಕ್ರಮವಾಗಿದೆ. ಭಾರತದಲ್ಲಿನ ಯುಎನ್ ವ್ಯವಸ್ಥೆಯು ಸಾಲ್ವ್ ಫಾರ್ ಟುಮಾರೊ ಕಾರ್ಯಕ್ರಮದಂತಹ ಯುವ ಜನರ ಮಹತ್ವಾಕಾಂಕ್ಷೆಗಳು ಮತ್ತು ನಾಯಕತ್ವವನ್ನು ಪ್ರೇರೇಪಿಸುವ ಖಾಸಗಿ ವಲಯದ ಉಪಕ್ರಮಗಳನ್ನು ಬೆಂಬಲಿಸುತ್ತದೆ ಮತ್ತು ಅವರೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಇತಿಹಾಸದಲ್ಲಿಯೇ ಶ್ರೇಷ್ಠ ಯುವ ಪೀಳಿಗೆಯ ಜೊತೆಗೆ ಭಾರತವು ಹಿಂದೆಂದಿಗಿಂತಲೂ ಹೆಚ್ಚು ಯುವ ಮನಸ್ಸುಗಳನ್ನು ಮತ್ತು ಅವರ ಹೊಸ ಆಲೋಚನೆಗಳನ್ನು ಜೊತೆಗೂಡಿಸುತ್ತದೆ! ಇದರರ್ಥ ಭಾರತೀಯ ಪರಿಹಾರಗಳು ಜಾಗತಿಕ ಪರಿಹಾರಗಳೂ ಆಗಿವೆ” ಎಂದು ಹೇಳಿದರು.
ಸ್ಯಾಮ್ಸಂಗ್ ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿ
ಯಾರು ಭಾಗವಹಿಸಬಹುದು:
ಸ್ಕೂಲ್ ಟ್ರ್ಯಾಕ್ನಲ್ಲಿ 14-17 ವರ್ಷ ವಯಸ್ಸಿನವರು -ವೈಯಕ್ತಿಕವಾಗಿ ಅಥವಾ 5 ಸದಸ್ಯರ ತಂಡಗಳಲ್ಲಿ ಭಾಗವಹಿಸಬಹುದು. ಅವರು “ಸಮುದಾಯ ಮತ್ತು ಒಳಗೊಳ್ಳುವಿಕೆ (ಕಮ್ಯುನಿಟಿ ಆಂಡ್ ಇನ್ ಕ್ಲೂಷನ್)” ಥೀಮ್ನಲ್ಲಿ ತಮ್ಮ ಆಲೋಚನೆಗಳನ್ನು ಪ್ರಸ್ತುತ ಪಡಿಸಬಹುದು. ಯೂತ್ ಟ್ರ್ಯಾಕ್ನಲ್ಲಿ 18-22 ವರ್ಷ ವಯಸ್ಸಿನವರು -ವೈಯಕ್ತಿಕವಾಗಿ ಅಥವಾ 5 ಸದಸ್ಯರ ತಂಡಗಳಲ್ಲಿ ಭಾಗವಹಿಸಬಹುದಾಗಿದ್ದು, ಅವರು “ಪರಿಸರ ಮತ್ತು ಸುಸ್ಥಿರತೆ”(ಎನ್ವಿರಾನ್ಮೆಂಟ್ ಆಂಡ್ ಸಸ್ಟೇನೇಬಲಿಟಿ) ಥೀಮ್ನಲ್ಲಿ ತಮ್ಮ ಆಲೋಚನೆಗಳನ್ನು ಸಲ್ಲಿಸಬಹುದು
ಸ್ಪರ್ಧೆಯ ವಿಚಾರಗಳು:
1. ಸ್ಕೂಲ್ ಟ್ರ್ಯಾಕ್ ಗೆ “ಸಮುದಾಯ ಮತ್ತು ಒಳಗೊಳ್ಳುವಿಕೆ” ಥೀಮ್ ಇದ್ದು, ಹಿಂದುಳಿದ ವರ್ಗಕ್ಕೆ ಆರೋಗ್ಯ ಸೇವೆ ಲಭ್ಯತೆ ಸುಧಾರಿಸುವುದು, ಕಲಿಕಾ ವಿಧಾನಗಳು ಮತ್ತು ಶಿಕ್ಷಣ ಲಭ್ಯತೆಯನ್ನು ಸುಲಭಗೊಳಿಸುವುದು ಮತ್ತು ಎಲ್ಲರಿಗೂ ಸಾಮಾಜಿಕ ಒಳಗೊಳ್ಳುವಿಕೆಯ ಅವಕಾಶವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.
2. ಯೂತ್ ಟ್ರ್ಯಾಕ್ ಗೆ “ಪರಿಸರ ಮತ್ತು ಸುಸ್ಥಿರತೆ” ಥೀಮ್ ಇದ್ದು, ಈ ತಂಡ ಪರಿಸರ ಸಂರಕ್ಷಣೆ, ಇಂಗಾಲದ ಹೆಜ್ಜೆಗುರುತುಗಳನ್ನು ಕಡಿಮೆ ಮಾಡುವುದು ಮತ್ತು ಸುಸ್ಥಿರತೆಯನ್ನು ಪ್ರೇರೇಪಿಸುವ ಕೆಲಸ ಮಾಡಲಿದೆ.
ಅವರಿಗೆ ಏನು ಸಿಗುತ್ತದೆ:
ಸ್ಯಾಮ್ ಸಂಗ್, MeitY, ಐಐಟಿ ದೆಹಲಿ ಒಳಗೊಂಡು ಹಲವಾರು ವಿವಿಧ ಉದ್ಯಮ ತಜ್ಞರಿಂದ ತರಬೇತಿ ದೊರೆಯಲಿದೆ ಮತ್ತು ಭಾರತದಲ್ಲಿರುವ ವಿಶ್ವಸಂಸ್ಥೆ ತಂಡದಿಂದ ತಾಂತ್ರಿಕ ಬೆಂಬಲ ಲಭ್ಯವಾಗಲಿದೆ. ಹೆಚ್ಚುವರಿಯಾಗಿ, ಭಾಗವಹಿಸುವವರು ಮೂಲಮಾದರಿಗಳ ಕುರಿತ ತಮ್ಮ ಆಲೋಚನೆಗಳನ್ನು ಹೆಚ್ಚು ಸ್ಪಷ್ಟಗೊಳಿಸಲು ವಿಶೇಷ ಮಾರ್ಗದರ್ಶನ ಮತ್ತು ತರಬೇತಿಯನ್ನು ಪಡೆಯುತ್ತಾರೆ. ಸ್ಯಾಮ್ಸಂಗ್ ನಾಯಕರೊಂದಿಗೆ ಸಂವಾದದಲ್ಲಿ ಭಾವಹಿಸುವ ಅವಕಾಶ ಹೊಂದುತ್ತಾರೆ ಮತ್ತು ಮೂಲಮಾದರಿ ಅಭಿವೃದ್ಧಿ ಮತ್ತು ವರ್ಧನೆಗಾಗಿ ಆಕರ್ಷಕ ಅನುದಾನವನ್ನು ಪಡೆಯುತ್ತಾರೆ.
ಸ್ಕೂಲ್ ಟ್ರ್ಯಾಕ್: ಸೆಮಿ-ಫೈನಲ್ ಹಂತಕ್ಕೆ ತಲುಪಿದ 10 ತಂಡಗಳು ಮೂಲಮಾದರಿ ಅಭಿವೃದ್ಧಿಗೆ ರೂ. 20,000 ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಗಳನ್ನು ಪಡೆಯುತ್ತಾರೆ. ಫೈನಲ್ ಹಂತ ತಲುಪಿದ 5 ತಂಡಗಳು ಮೂಲಮಾದರಿ ಬೆಳವಣಿಗೆಗೆ ತಲಾ ರೂ. 1 ಲಕ್ಷ ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಗಳನ್ನು ಪಡೆಯುತ್ತವೆ.
ಯೂತ್ ಟ್ರ್ಯಾಕ್: ಸೆಮಿ-ಫೈನಲ್ ಹಂತಕ್ಕೆ ತಲುಪಿದ 10 ತಂಡಗಳು ಮೂಲಮಾದರಿ ಅಭಿವೃದ್ಧಿಗೆ ರೂ. 20,000 ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಲ್ಯಾಪ್ ಟಾಪ್ ಗಳನ್ನು ಪಡೆಯುತ್ತಾರೆ. ಫೈನಲ್ ಹಂತ ತಲುಪಿದ 5 ತಂಡಗಳು ಮೂಲಮಾದರಿ ಹೆಚ್ಚಳಕ್ಕೆ ತಲಾ ರೂ. 1 ಲಕ್ಷ ಅನುದಾನವನ್ನು ಮತ್ತು ಸ್ಯಾಮ್ ಸಂಗ್ ಝಡ್ ಫ್ಲಿಪ್ ಸ್ಮಾರ್ಟ್ ಫೋನ್ ಗಳನ್ನು ಪಡೆಯುತ್ತವೆ.
ವಿಜೇತರು ಏನು ಪಡೆಯುತ್ತಾರೆ:
ಸ್ಕೂಲ್ ಟ್ರ್ಯಾಕ್: ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024ರ “ಕಮ್ಯುನಿಟಿ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಮೂಲಮಾದರಿ ಅಭಿವೃದ್ಧಿಗಾದಿ ರೂ. 25 ಲಕ್ಷದ ಅನುದಾನವನ್ನು ನೀಡಲಾಗತ್ತದೆ. ವಿಜೇತ ತಂಡಗಳ ಶಾಲೆಗಳಿಗೆ ಶೈಕ್ಷಣಿಕ ಪ್ರಗತಿ ಸಾಧಿಸಲು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಕ್ಕಳ ಮನಸ್ಥಿತಿ ಉತ್ತೇಜಿಸಲು ಸ್ಯಾಮ್ ಸಂಗ್ ಉತ್ಪನ್ನಗಳನ್ನು ನೀಡಲಾಗುತ್ತದೆ.
ಯೂತ್ ಟ್ರ್ಯಾಕ್: ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024ರ “ಪರಿಸರ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಐಐಟಿ-ದೆಹಲಿಯಲ್ಲಿ ಇನ್ ಕ್ಯುಬೇಷನ್ ಗಾಗಿ ರೂ. 50 ಲಕ್ಷದ ಅನುದಾನವನ್ನು ಪಡೆಯುತ್ತದೆ. ವಿಜೇತ ತಂಡಗಳ ಕಾಲೇಜುಗಳಿಗೆ ತಮ್ಮ ಶೈಕ್ಷಣಿಕ ಬೆಳವಣಿಗೆ ಸಾಧಿಸಲು, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಉದ್ಯಮಶೀಲತಾ ಮನೋಭಾವ ಉತ್ತೇಜಿಸಲು ಸ್ಯಾಮ್ಸಂಗ್ ಉತ್ಪನ್ನಗಳನ್ನು ನೀಡಲಾಗುತ್ತದೆ.
ಇಲ್ಲಿ ಅರ್ಜಿ ಸಲ್ಲಿಸಬಹುದು: www.samsung.com/in/solvefortomorrow
ಯಾವಾಗಿನಿಂದ ಅರ್ಜಿ ಸಲ್ಲಿಸಬಹುದು: ಏಪ್ರಿಲ್ 09, 2024 ರಿಂದ
ಕೊನೆಯ ದಿನಾಂಕ: ಮೇ 31, 2024 ರಂದು ಸಂಜೆ 5 ಗಂಟೆ
ಕಾರ್ಯಕ್ರಮದ ವಿವರಗಳು
ಸ್ಕೂಲ್ ಟ್ರ್ಯಾಕ್: ಸಾಲ್ವಿಂಗ್ ಫಾರ್ ಇಂಡಿಯಾ (ಭಾರತಕ್ಕಾಗಿ ಪರಿಹಾರ)
ಸ್ಕೂಲ್ ಟ್ರ್ಯಾಕ್ ವಿಭಾಗದಲ್ಲಿ ಐದು ಸದಸ್ಯರ ತಂಡಗಳನ್ನು ರಚಿಸಲು ಆಹ್ವಾನಿಸಲಾಗುತ್ತದೆ ಮತ್ತು ‘ಸಮುದಾಯ ಮತ್ತು ನಾವೀನ್ಯತೆ’ ಥೀಮ್ ಅಡಿಯಲ್ಲಿ ತಮ್ಮ ನವೀನ ಆಲೋಚನೆಗಳನ್ನು ಸಲ್ಲಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತದೆ. ಕಾರ್ಯಕ್ರಮವು ಅಪ್ಲಿಕೇಶನ್ ವಿಂಡೋ, ಪ್ರಾದೇಶಿಕ ಸುತ್ತುಗಳು, ನಾವೀನ್ಯತೆ ನಡಿಗೆ ಮತ್ತು ಗ್ರ್ಯಾಂಡ್ ಫಿನಾಲೆ ಎಂಬ ನಾಲ್ಕು ಹಂತಗಳ ಮೂಲಕ ನಡೆಯುತ್ತದೆ.
ಅಪ್ಲಿಕೇಶನ್ ವಿಂಡೋದ ಹಂತದಲ್ಲಿ ಭಾಗವಹಿಸುವ ತಂಡಗಳು ಸ್ವೀಕೃತಿಯ ಡಿಜಿಟಲ್ ಪ್ರಮಾಣಪತ್ರಗಳನ್ನು ಸ್ವೀಕರಿಸುತ್ತವೆ. ಮೊದಲ ಶಾರ್ಟ್ಲಿಸ್ಟ್ ಪ್ರಾದೇಶಿಕ ಹಂತದಲ್ಲಿ ನಡೆಯುತ್ತದೆ, ಅಲ್ಲಿ 50 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರ ನಡೆಯುವ ಪ್ರಾದೇಶಿಕ ಹಂತದ ಸುತ್ತುಗಳಲ್ಲಿ, ಈ 50 ತಂಡಗಳು ತಮ್ಮ ಆಲೋಚನೆಗಳನ್ನು ಅಥವಾ ಐಡಿಯಾಗಳನ್ನು ತೀರ್ಪುಗಾರರಿಗೆ ಸಲ್ಲಿಸುತ್ತವೆ. ಇಲ್ಲಿಂದ, 10 ತಂಡಗಳು ಸೆಮಿ ಫೈನಲ್ ಹಂತಕ್ಕೆ ಹೋಗಿ ಅಲ್ಲಿ ನಾವೀನ್ಯತೆ ನಡಿಗೆ ಹಂತದಲ್ಲಿ ಭಾಗವಹಿಸುತ್ತವೆ. ಅಲ್ಲಿ ಅವರು ಸ್ಯಾಮ್ಸಂಗ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಪ್ರಾದೇಶಿಕ ಪ್ರಧಾನ ಕಚೇರಿಗಳಲ್ಲಿ ನಡೆಯುವ ಕಾರ್ಯಾಗಾರಗಳಿಗೆ ಹಾಜರಾಗುತ್ತಾರೆ. ನಂತರ ರಾಷ್ಟ್ರ ಮಟ್ಟದಲ್ಲಿ ಐಐಟಿ ದೆಹಲಿಯಲ್ಲಿ ಈ 10 ಸೆಮಿ-ಫೈನಲಿಸ್ಟ್ಗಳು ತಮ್ಮ ಆಲೋಚನೆಗಳನ್ನು ತೀರ್ಪುಗಾರರಿಗೆ ಸಲ್ಲಿಸುತ್ತಾರೆ. ಬಹುಮಾನವಾಗಿ, ಪ್ರತಿ ತಂಡವು ಮೂಲಮಾದರಿ ಅಭಿವೃದ್ಧಿಗೆ ರೂ. ಅನುದಾನವನ್ನು ಮತ್ತು ಇತ್ತೀಚಿನ ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಗಳನ್ನು ಪಡೆಯುತ್ತದೆ. ರಾಷ್ಟ್ರೀಯ ಪಿಚ್ ಈವೆಂಟ್ನಲ್ಲಿ ಆಯ್ಕೆಯಾಗುವ 5 ತಂಡಗಳು ಫೈನಲ್ ಪ್ರವೇಶಿಸುತ್ತವೆ. ಅಲ್ಲಿ ಪ್ರತೀ ತಂಡಗಳು ತರಬೇತಿಗೆ ಒಳಗಾಗುತ್ತವೆ ಮತ್ತು ಅವರ ಪರಿಹಾರ ಐಡಿಯಾಗಳನ್ನು ಫೈನಲ್ ತೀರ್ಪುಗಾರರಿಗೆ ಸಲ್ಲಿಸುತ್ತವೆ. ಫೈನಲ್ ನಲ್ಲಿ ಭಾಗವಹಿಸುವ ಪ್ರತಿ ತಂಡದ ಎಲ್ಲಾ ಭಾಗವಹಿಸುವವರು ಇತ್ತೀಚಿನ ಗ್ಯಾಲಕ್ಸಿ ವಾಚ್ ಪಡೆಯುತ್ತಾರೆ. ಜೊತೆಗೆ ಮೂಲಮಾದರಿಯ ಪ್ರಗತಿಗಾಗಿ ರೂ. 1 ಲಕ್ಷದ ಅನುದಾನವನ್ನು ತಂಡ ಪಡೆಯುತ್ತದೆ. ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024ರ “ಕಮ್ಯುನಿಟಿ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಅವರ ಮೂಲಮಾದರಿಯ ಪ್ರಗತಿಗೆ ರೂ. 25 ಲಕ್ಷದ ಅನುದಾನವನ್ನು ಮತ್ತು ಅವರ ಶಾಲೆಗೆ ಅತ್ಯಾಕರ್ಷಕ ಸ್ಯಾಮ್ ಸಂಗ್ ಗ್ಯಾಲಕ್ಸಿ ಉತ್ಪನ್ನಗಳನ್ನು ನೀಡಲಾಗುತ್ತದೆ.
ಯೂತ್ ಟ್ರ್ಯಾಕ್: ಸಾಲ್ವಿಂಗ್ ಫಾರ್ ದಿ ವರ್ಲ್ಡ್ (ಜಗತ್ತಿಗಾಗಿ ಪರಿಹಾರ)
ಯೂತ್ ಟ್ರ್ಯಾಕ್ನಲ್ಲಿ, ಆಕಾಂಕ್ಷಿಗಳು ಐದು ಸದಸ್ಯರು ಇರುವ ತಂಡವನ್ನು ರಚಿಸುತ್ತಾರೆ ಮತ್ತು “ಪರಿಸರ ಮತ್ತು ಸುಸ್ಥಿರತೆ” ಎಂಬ ವಿಷಯದ ಅಡಿಯಲ್ಲಿ ತಮ್ಮ ನವೀನ ಆಲೋಚನೆಗಳನ್ನು ಸಲ್ಲಿಸುತ್ತಾರೆ. ಮೊದಲ ಶಾರ್ಟ್ಲಿಸ್ಟ್ ಪ್ರಾದೇಶಿಕ ಹಂತದಲ್ಲಿ ನಡೆಯಲಿದ್ದು, ಅಲ್ಲಿ 50 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ನಂತರದ ಪ್ರಾದೇಶಿಕ ಸುತ್ತುಗಳಲ್ಲಿ , ಈ 50 ತಂಡಗಳು ತಮ್ಮ ಹೊಸ ಆಲೋಚನೆಗಳನ್ನು ತೀರ್ಪುಗಾರರಿಗೆ ಸಲ್ಲಿಸುತ್ತವೆ. ಇಲ್ಲಿಂದ, 10 ಸೆಮಿ-ಫೈನಲ್ ಹಂತಕ್ಕೆ ತಲುಪಿದ ತಂಡಗಳು ನಾವೀನ್ಯತೆ ನಡಿಗೆ ಹಂತಕ್ಕೆ ಸಾಗುತ್ತವೆ. ಅಲ್ಲಿ ಅವರು ಸ್ಯಾಮ್ಸಂಗ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಮತ್ತು ಪ್ರಾದೇಶಿಕ ಪ್ರಧಾನ ಕಚೇರಿಗಳಲ್ಲಿ ಕಾರ್ಯಾಗಾರಗಳಿಗೆ ಹಾಜರಾಗುತ್ತಾರೆ. ನಂತರ ರಾಷ್ಟ್ರೀಯ ಪಿಚ್ ಈವೆಂಟ್ ನಲ್ಲಿ ಈ 10 ಸೆಮಿ-ಫೈನಲಿಸ್ಟ್ಗಳು ತಮ್ಮ ಆಲೋಚನೆಗಳನ್ನು ಐಐಟಿ ದೆಹಲಿಯ ತೀರ್ಪುಗಾರರಿಗೆ ತಿಳಿಸುತ್ತಾರೆ. ಬಹುಮಾನವಾಗಿ, ಪ್ರತಿ ತಂಡವು ಮೂಲಮಾದರಿ ಅಭಿವೃದ್ಧಿಗೆ ರೂ. 20,000 ಅನುದಾನವನ್ನು ಮತ್ತು ಇತ್ತೀಚಿನ ಸ್ಯಾಮ್ ಸಂಗ್ ಗ್ಯಾಲಕ್ಸಿ ಲ್ಯಾಪ್ಟಾಪ್ಗಳನ್ನು ಪಡೆಯುತ್ತಾರೆ. ರಾಷ್ಟ್ರೀಯ ಪಿಚ್ ಈವೆಂಟ್ನಲ್ಲಿ ಆಯ್ಕೆ ಮಾಡಲಾದ 5 ಅಂತಿಮ ತಂಡಗಳು ತರಬೇತಿಗೆ ಒಳಪಡುತ್ತಾರೆ ಮತ್ತು ಅವರ ಪರಿಹಾರ ಐಡಿಯಾಗಳನ್ನು ಫೈನಲ್ ತೀರ್ಪುಗಾರರಿಗೆ ಸಲ್ಲಿಸುತ್ತಾರೆ. ಇಲ್ಲಿ ಭಾಗವಹಿಸಿದ ಎಲ್ಲರಿಗೂ ಗೊಸ ಗ್ಯಾಲಕ್ಸಿ ಝಡ್ ಫ್ಲಿಪ್ ಸ್ಮಾರ್ಟ್ಫೋನ್ ಪಡೆಯುತ್ತಾರೆ. ಜೊತೆಗೆ ತಂಡಕ್ಕೆ ಮೂಲಮಾದರಿಯ ಅಭಿವೃದ್ಧಿಗೆ ರೂ. 1 ಲಕ್ಷದ ಅನುದಾನವನ್ನು ನೀಡಲಾಗುತ್ತದೆ. ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತ ತಂಡವನ್ನು ಸಾಲ್ವ್ ಫಾರ್ ಟುಮಾರೋ 2024 “ಪರಿಸರ ಚಾಂಪಿಯನ್” ಎಂದು ಘೋಷಿಸಲಾಗುತ್ತದೆ ಮತ್ತು ಇನ್ ಕ್ಯುಬೇಷನ್ ಗೆ ರೂ. 50 ಲಕ್ಷದ ಅನುದಾನವನ್ನು ಮತ್ತು ಅವರ ಕಾಲೇಜಿಗೆ ಅತ್ಯಾಕರ್ಷಕ ಸ್ಯಾಮ್ ಸಂಗ್ ಗ್ಯಾಲಕ್ಸಿ ಉತ್ಪನ್ನಗಳನ್ನು ನೀಡಲಾಗುತ್ತದೆ.
ಎರಡು ಟ್ರ್ಯಾಕ್ಗಳು ಅಥವಾ ವಿಭಾಗಗಳು ಪರಸ್ಪರ ಸ್ಪರ್ಧಿಸುವುದಿಲ್ಲ ಮತ್ತು ಪ್ರತಿ ಟ್ರ್ಯಾಕ್ಗಳು ವಿಭಿನ್ನ ಥೀಮ್ಗಳು ಮತ್ತು ವಯಸ್ಸಿನ ಗುಂಪುಗಳ ಪ್ರಕಾರವೇ ಪ್ರತ್ಯೇಕ ತರಬೇತಿ, ಮಾರ್ಗದರ್ಶನ ಮತ್ತು ಕಲಿಕೆಯ ಅವಕಾಶಗಳನ್ನು ಪಡೆಯುತ್ತವೆ.
ಮುಖ್ಯ ಸ್ಪರ್ಧೆಯ ಜೊತೆಗೆ, ಭಾಗವಹಿಸುವವರು ‘ಸೋಷಿಯಲ್ ಮೀಡಿಯಾ ಚಾಂಪಿಯನ್ ಅವಾರ್ಡ್’ ಮತ್ತು ‘ಗುಡ್ವಿಲ್ ಅವಾರ್ಡ್’ ನಂತಹ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಸ್ಪರ್ಧಿಸುವ ಅವಕಾಶವನ್ನು ಹೊಂದಿರುತ್ತಾರೆ. ‘ ಸೋಷಿಯಲ್ ಮೀಡಿಯಾ ಚಾಂಪಿಯನ್ ಅವಾರ್ಡ್’ ನಲ್ಲಿ ಪ್ರತಿ ಟ್ರ್ಯಾಕ್ನ ಸಾಮಾಜಿಕ ಮಾಧ್ಯಮ ಚಾಂಪಿಯನ್ಗಳು ರೂ. 50000 ಬಹುಮಾನವನ್ನು ಪಡೆಯುತ್ತಾರೆ. ನಾವೀನ್ಯತೆ ನಡಿಗೆ ಸುತ್ತಿನಲ್ಲಿ ಘೋಷಿಸಲಾಗುತ್ತದೆ. ‘ಗುಡ್ವಿಲ್ ಅವಾರ್ಡ್’ ಪ್ರಶಸ್ತಿ ಅಡಿಯಲ್ಲಿ ಪ್ರತೀ ಟ್ರ್ಯಾಕ್ ನ ವಿಜೇತರು ವ್ಯೂವರ್ಸ್ ಚಾಯ್ಸ್ ಐಡಿಯಾಗಾಗಿ ರೂ. 1 ಲಕ್ಷದ ಬಹುಮಾನ ಪಡೆಯುತ್ತಾರೆ. ಈ ಪ್ರಶಸ್ತಿಯನ್ನು ಗ್ರ್ಯಾಂಡ್ ಫಿನಾಲೆಯಲ್ಲಿ ಘೋಷಿಸಲಾಗುತ್ತದೆ.
ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಭಾರತದಲ್ಲಿ ಸ್ಪರ್ಧೆಗೆ ಹೆಸರು ನೋಂದಾಯಿಸಲು, www.samsung.com/in/solvefortomorrow ಗೆ ಭೇಟಿ ನೀಡಿ. ಅರ್ಜಿ ಸಲ್ಲಿಕೆಯ ಅವಕಾಶ ಮೇ 31, 202ರಂದು ಸಂಜೆ 5 ಗಂಟೆಗೆ ಮುಗಿಯಲಿದೆ.
ಸಾಲ್ವ್ ಫಾರ್ ಟುಮಾರೋ ಕಾರ್ಯಕ್ರಮವನ್ನು 2010 ರಲ್ಲಿ ಯುಎಸ್ ನಲ್ಲಿ ಮೊದಲು ಪ್ರಾರಂಭಿಸಲಾಯಿತು. ಪ್ರಸ್ತುತ ಈ ಕಾರ್ಯಕ್ರಮವು ಜಾಗತಿಕವಾಗಿ 63 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಮತ್ತು ಈಗಾಗಲೇ ಪ್ರಪಂಚದಾದ್ಯಂತ 2.3 ಮಿಲಿಯನ್ ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ನ ಜಾಗತಿಕ ಸಿಎಸ್ಆರ್ ತತ್ತ್ವವಾದ ‘ಟುಗೆದರ್ ಫಾರ್ ಟುಮಾರೋ! ಎನೇಬಲಿಂಗ್ ಪೀಪಲ್’ ನಾಳಿನ ನಾಯಕರನ್ನು ಸಶಕ್ತಗೊಳಿಸಲು ಪ್ರಪಂಚದಾದ್ಯಂತದ ಯುವಜನರಿಗೆ ಶಿಕ್ಷಣವನ್ನು ಒದಗಿಸುವ ಉದ್ದೇಶ ಹೊಂದಿದೆ. ನಮ್ಮ ಸಿಎಸ್ಆರ್ ವೆಬ್ಪುಟ http://csr.samsung.com ದಲ್ಲಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ನ ಸಿಎಸ್ಆರ್ ಪ್ರಯತ್ನಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಿರಿ.
ಸ್ಯಾಮ್ ಸಂಗ್ ಇಂಡಿಯಾ ಕುರಿತು ಇತ್ತೀಚಿನ ಸುದ್ದಿಗಳಿಗಾಗಿ, ದಯವಿಟ್ಟು http://news.samsung.com/in ನಲ್ಲಿ ಸ್ಯಾಮ್ ಸಂಗ್ ಇಂಡಿಯಾ ನ್ಯೂಸ್ ರೂಮ್ ಗೆ ಭೇಟಿ ನೀಡಿ. ಹಿಂದಿಗಾಗಿ, https://news.samsung.com/bharat ನಲ್ಲಿ ಸ್ಯಾಮ್ ಸಂಗ್ ನ್ಯೂಸ್ರೂಮ್ ಭಾರತ್ಗೆ ಲಾಗ್ ಇನ್ ಮಾಡಿ. ನೀವು ಟ್ವಿಟ್ಟರ್ ನಲ್ಲಿ @SamsungNewsIN ನಲ್ಲಿಯೂ ನಮ್ಮನ್ನು ಫಾಲ್ ಮಾಡಬಹುದು.