ಬೆಂಗಳೂರು: ಪ್ರಪಂಚದಾದ್ಯಂತ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ ಮತ್ತು ಸಾಂಕ್ರಾಮಿಕ ರೋಗದ ನಂತರ, ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ಮೊದಲಿಗಿಂತ ಹೆಚ್ಚು ಸಿದ್ಧರಾಗಿದ್ದಾರೆ . ಜನರ ವಿಕಸನಗೊಳ್ಳುತ್ತಿರುವ ಆರೋಗ್ಯದ ಅಗತ್ಯತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಜಾಗತಿಕ ಆರೋಗ್ಯ ಕಂಪನಿಯಾದ ಅಬಾಟ್, ಐಪಿಎಸ್ಒಎಸ್ ಸಹಭಾಗಿತ್ವದಲ್ಲಿ, ತನ್ನ , ‘ಆರೋಗ್ಯಕರ ಜೀವನ: ವಿಟಮಿನ್ ಸಿ ಪಾತ್ರ’ ಎನ್ನುವ ಅಖಿಲ ಭಾರತ ಸಮೀಕ್ಷೆಯ ಸಂಶೋಧನೆಗಳನ್ನು ಪ್ರಕಟಿಸಿತು
10 ರಲ್ಲಿ ಸುಮಾರು 7 ಗ್ರಾಹಕರು ಉತ್ತಮ ಆರೋಗ್ಯ ಎಂದರೆ: ಉತ್ತಮ ರೋಗನಿರೋಧಕ ಶಕ್ತಿ ಮತ್ತು ಹೆಚ್ಚಿನ ಶಕ್ತಿಯ ಮಟ್ಟಗಳು ಮತ್ತು ದೈನಂದಿನ ಚಟುವಟಿಕೆಗಳನ್ನು ತೊಂದರೆಯಿಲ್ಲದೆ ನಿರ್ವಹಿಸುವ ಸಾಮರ್ಥ್ಯ ಎಂದು ತಿಳಿದಿದ್ದಾರೆ ಎಂದು ಸಮೀಕ್ಷೆಯು ಎತ್ತಿ ತೋರಿದೆ. ಹೆಚ್ಚಿನ ಜನರು ಉತ್ತಮ ಆರೋಗ್ಯ ಫಲಿತಾಂಶಗಳಿಗಾಗಿ ವಿಟಮಿನ್ ಸಿ ಮಟ್ಟವನ್ನು ಕಾಪಾಡಿಕೊಳ್ಳಲು ಬಯಸುತ್ತಾರೆ . ವಿಟಮಿನ್ ಸಿ, ದೇಹದ ಹಲವಾರು ಕಾರ್ಯಗಳನ್ನು ನಿರ್ವಹಿಸುವಲ್ಲಿ ನೆರವಾಗುವ ಒಂದು ಅತ್ಯಗತ್ಯ ಸೂಕ್ಷ್ಮ ಪೋಷಕಾಂಶವಾಗಿದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ಜನರು ವಿಟಮಿನ್ ಸಿ ಎಂದರೇನು ಎಂಬುದನ್ನು ಹೇಗೆ ಗ್ರಹಿಸಿದ್ದಾರೆ ಮತ್ತು ದಿನನಿತ್ಯ ಹೇಗೆ ಅದನ್ನು ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಈ ಸಮೀಕ್ಷೆ ಒಳನೋಟಗಳನ್ನು ಒದಗಿಸಿದೆ.
ಅಬಾಟ್ ಇಂಡಿಯಾದ ವೈದ್ಯಕೀಯ ವ್ಯವಹಾರಗಳ ಸಹಾಯಕ ನಿರ್ದೇಶಕ ಡಾ ಕಾರ್ತಿಕ್ ಪೀತಾಂಬರನ್: “ವಿಟಮಿನ್ ಸಿ, ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಕೊಡುಗೆ ನೀಡಿ ಆ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಪೂರಕ, ಉಸಿರಾಟದ ಸೋಂಕುಗಳನ್ನು ತಡೆಗಟ್ಟಲು ಮತ್ತು ಅವಗಳ ಚಿಕಿತ್ಸೆಗೆ ಹೆಸರಾಗಿದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನಮ್ಮ ಸಮೀಕ್ಷೆ, ಒಟ್ಟಾರೆ ಉತ್ತಮ ಆರೋಗ್ಯಕ್ಕೆ ವಿಟಮಿನ್ ಸಿ ನೀಡುವ ಕೊಡುಗೆಯ ಬಗ್ಗೆ ಜನರಿಗಿರುವ ಗ್ರಹಿಕೆಯನ್ನು ಎತ್ತಿ ತೋರಿಸುತ್ತದೆ. “
“ವಿಟಮಿನ್ ಸಿ, ದೇಹದ ರಕ್ಷಣೆ, ಮತ್ತು ಮೂಳೆಯ ಆರೋಗ್ಯಗಳನ್ನು ಬಲಪಡಿಸುವುದು. ಕಬ್ಬಿಣಾಂಶದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವುದು, ಗಾಯವನ್ನು ಗುಣಪಡಿಸಲು ಸಹಾಯ ಮಾಡುವುದು, ಆರೋಗ್ಯಕರ ವಸಡುಗಳ ನಿರ್ವಹಣೆ ಮತ್ತು ನ್ನೂ ಅನೇಕ ಅಂತಹ ಗಮನಾರ್ಹವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಸಿ ಕೊರತೆ ಪೌಷ್ಠಿಕಾಂಶದ ಅಂತರಕ್ಕೆ ಕಾರಣವಾಗಬಹುದು ಎಂದು ಬೆಂಗಳೂರಿನ ಲೈಫ್ಕೇರ್ ಆಸ್ಪತ್ರೆಯ ಕನ್ಸಲ್ಟಿಂಗ್ ಫಿಸಿಶಿಯನ್ ಮತ್ತು ಡಯಾಬಿಟಾಲಜಿಸ್ಟ್ ಡಾ.ಎಲ್. ಶ್ರೀನಿವಾಸಮೂರ್ತಿ ಹೇಳಿದರು. “ನಿತ್ಯ ವಿಟಮಿನ್ ಸಿ ಸೇವಿಸಿದರೆ ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಜೊತೆಗೆ ಮಧುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿರುವ ಜನರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿ ಅವರಿಗೆ ಹೆಚ್ಚಿನ ವಿಟಮಿನ್ ಸಿ ಹೆಚ್ಚು ಅಗತ್ಯವಿರುತ್ತದೆ.”
‘ಆರೋಗ್ಯಕರ ಜೀವನದಲ್ಲಿ ವಿಟಮಿನ್ ಸಿ ಪಾತ್ರ’ ಸಮೀಕ್ಷೆಯ ಪ್ರಮುಖ ಸಂಶೋಧನೆಗಳು:
ಮುಂಬೈ, ದೆಹಲಿ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಚ್ಚಿನ್, ಅಹಮದಾಬಾದ್ ಮತ್ತು ಪುಣೆ – ಹೀಗೆ, ಐಪಿಎಸ್ಒಎಸ್ ಒಂಬತ್ತು ನಗರಗಳಲ್ಲಿ 2,000+ ಜನರ ಸಮೀಕ್ಷೆ ಮಾಡಿದೆ.
ಅದರ ಕೆಲವು ಪ್ರಮುಖ ಶೋಧನೆಗಳು ಹೀಗಿವೆ:
• ಗಮನಿಸಿದ ಪ್ರಯೋಜನಗಳು:
o ಉತ್ತರಿಸಿದವರಲ್ಲಿ ಶೇ.52 ರಷ್ಟು ಜನರು ಮಳೆಗಾಲ ಮತ್ತು ಚಳಿಗಾಲದಲ್ಲಿ ವಿಟಮಿನ್ ಸಿ ಪೂರಕಗಳನ್ನು ಸೇವಿಸುವುದರಿಂದ ಅನಾರೋಗ್ಯ ಉಂಟಾಗುವ ಸಂಭವ ಕಡಿಮೆ ಎಂದು ಹೇಳಿದರು.
o ಉತ್ತರಿಸಿದವರಲ್ಲಿ ಶೇ. 61 ರಷ್ಟು ಮಹಿಳೆಯರು, ಅನಾರೋಗ್ಯದಿಂದ ವೇಗವಾಗಿ ಚೇತರಿಸಿಕೊಳ್ಳಲು ವಿಟಮಿನ್ ಸಿ ಪ್ರಯೋಜನಕಾರಿ ಎಂದು ಕಂಡುಕೊಂಡಿದ್ದಾರೆ
• ಗ್ರಹಿಸಿದ ಪ್ರಯೋಜನಗಳು:
ಉತ್ತರಿಸಿದವರಲ್ಲಿ ಸುಮಾರು ಶೇ.60 ರಷ್ಟು ಜನರು (ಇವರಲ್ಲಿ ಪೂರಕಗಳನ್ನು ಬಳಸದವರಲ್ಲಿನ ಶೇ.50 ರಷ್ಟು ಜನರೂ ಇದ್ದಾರೆ) ಅನಾರೋಗ್ಯದಿಂದ ಚೇತರಿಸಿಕೊಳ್ಳುವುದಕ್ಕೆ ವಿಟಮಿನ್ ಸಿ ಪೂರಕಗಳು ನೆರವಾಗುತ್ತವೆ ಎಂದು ತಿಳಿದಿದ್ದಾರೆ.
ವಿಟಮಿನ್ ಪೂರಕಗಳು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಉತ್ತರಿಸಿದವರಲ್ಲಿ ಶೇ.65 ಜನರು ಗ್ರಹಿಸಿದ್ದಾರೆ ಮತ್ತು ಶೇ.52 ರಷ್ಟು ಜನರು ಮೂಳೆ ಮತ್ತು ಕೀಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಪೂರಕಗಳು ಸಹಾಯ ಮಾಡುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
o ಉತ್ತರಿಸಿದವರಲ್ಲಿ ಶೇ.73 ರಷ್ಟು ಜನರು ಅನಾರೋಗ್ಯದಿಂದ ವೇಗವಾಗಿ ಚೇತರಿಸಿಕೊಳ್ಳಲು ಸಾಕಷ್ಟು ನೀರು ಮತ್ತು ಸಮತೋಲಿತ ಆಹಾರವನ್ನು ಸೇವಿಸುತ್ತೇವೆ ಎಂದು ಹೇಳಿದ್ದಾರೆ.
• ಕಡಿಮೆ ವಿಟಮಿನ್ ಸಿ ಸೇವನೆಯ ಪರಿಣಾಮಗಳು:
o ಶೇ.60 ರಷ್ಟು ಜನರು ವಿಟಮಿನ್ ಸಿ ಕೊರತೆ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ನಂಬುತ್ತಾರೆ.
o ಶೇ.36 ರಷ್ಟು ಜನರು ವಿಟಮಿನ್ ಸಿ ಸೇವನೆ ಕಡಿಮೆಯಾದರೆ ಅನಾರೋಗ್ಯದಿಂದ ಚೇತರಿಸಿಕೊಳ್ಳುವುದು ತಡವಾಗುತ್ತದೆ ಎಂದು ನಂಬುತ್ತಾರೆ.
ಡಾ.ಎಲ್. ಶ್ರೀನಿವಾಸಮೂರ್ತಿ ಮತ್ತೂ ಹೇಳುತ್ತಾರೆ: “ಈ ಶೋಧನೆಗಳು ವಿಟಮಿನ್ ಸಿ ಮತ್ತು ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುವಲ್ಲಿ ಮತ್ತು ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಅದರ ಪಾತ್ರ ಎಂಬ ಸಂಶೋಧನೆಯ ಅಧ್ಯಯನಗಳೊಂದಿಗೆ ಮತ್ತಷ್ಟು ಹೊಂದಿಕೊಳ್ಳುತ್ತವೆ. ವಿಟಮಿನ್ ಸಿ ನಮ್ಮ ದೈನಂದಿನ ಆಹಾರದ ಭಾಗವಾದರೆ ಬಲವಾದ ಪ್ರತಿರಕ್ಷಣಾ ವ್ಯವಸ್ಥೆ ನಿರ್ಮಾಣವಾಗುತ್ತದೆ ಮತ್ತು ಅದರಿಂದ ನಾವು ಆರೋಗ್ಯವಾಗಿರಲು ಸಹಾಯವಾಗುತ್ತದೆ.”