ಬೆಂಗಳೂರು: ಐಬಿಎಂ ಕನ್ಸಲ್ಟಿಂಗ್ ಮತ್ತು ಮೈಕ್ರೋಸಾಫ್ಟ್ ಸಹಯೋಗದ ಮುಖಾಂತರ ಭಾರತದ ಬೆಂಗಳೂರಿನಲ್ಲಿ ಮೊತ್ತ ಮೊದಲ ಐಬಿಎಂ-ಮೈಕ್ರೋಸಾಫ್ಟ್ ಎಕ್ಸ್ಪೀರಿಯನ್ಸ್ ಜೋನ್ (ಅನುಭವ ವಲಯ) ಅನ್ನು ತೆರೆಯುವುದಾಗಿ ಇಂದು ಘೋಷಿಸಿದೆ. ಗ್ರಾಹಕರು ಜನರೇಟಿವ್ ಎಐ, ಹೈಬ್ರಿಡ್ ಕ್ಲೌಡ್ ಮತ್ತು ಇತರ ಮೈಕ್ರೋಸಾಫ್ಟ್ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಬಳಸಿಕೊಂಡು ತಮ್ಮ ಉದ್ಯಮದ ಅಭಿವೃದ್ಧಿಯನ್ನು ಹೇಗೆ ವೇಗವಾಗಿ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಲು ಈ ಎಕ್ಸ್ಪೀರಿಯನ್ಸ್ ಜೋನ್ ನೆರವಾಗಲಿದೆ.
ಎಕ್ಸ್ಪೀರಿಯನ್ಸ್ ಜೋನ್ ನಲ್ಲಿ, ಜಗತ್ತಿನಾದ್ಯಂತ ಇರುವ ಮತ್ತು ವಿವಿಧ ಕೈಗಾರಿಕೆಗಳ ಗ್ರಾಹಕರು ವಿವಿಧ ತಂತ್ರಜ್ಞಾನ ವಲಯಗಳಲ್ಲಿ ಐಬಿಎಂ ಕನ್ಸಲ್ಟಿಂಗ್ ಜೊತೆ ಕೆಲಸ ಮಾಡಬಹುದು. ಅಜುರೆ ಓಪನ್ ಎಐ ಸರ್ವೀಸ್, ಕೋ-ಪೈಲೆಟ್ ಮತ್ತು ಇತರ ಮೈಕ್ರೋಸಾಫ್ಟ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರೇಟಿವ್ ಎಐ ಚಾಲಿತ ಉತ್ಪನ್ನಗಳನ್ನು ಸಹಯೋಗದ ಮೂಲಕ ಪರಿಕಲ್ಪಿಸಬಹುದು ಮತ್ತು ಸಹಯೋಗದ ಮೂಲಕ ರಚನೆ ಕೂಡ ಮಾಡಬಹುದು. ತಂತ್ರಜ್ಞಾನ ಕೇಂದ್ರಗಳಲ್ಲಿ, ಗ್ರಾಹಕರು ಕ್ಲೌಡ್ ಆಧುನೀಕರಣ, ಡೇಟಾ, ಅನಾಲಿಟಿಕ್ಸ್ ಮತ್ತು ಅಡ್ವಾನ್ಸ್ ಡ್ ಎಐ, ಗ್ರಾಹಕ ಸಂಬಂಧ ನಿರ್ವಹಣೆ, ಉದ್ಯೋಗಿ ಅನುಭವ, ಹಣಕಾಸು ಮತ್ತು ಕಾರ್ಯಾಚರಣೆಗಳು, ಐಓಟಿ ಮತ್ತು ಎಡ್ಜ್, ಹಾಗೂ ಆಗುಮೆಂಟೆಡ್ ರಿಯಾಲಿಟಿ ಮತ್ತು ವರ್ಚುವಲ್ ರಿಯಾಲಿಟಿ ಒಳಗೊಂಡಂತಹ ಹೊಸ ಕಾಲದ ತಂತ್ರಜ್ಞಾನಗಳಲ್ಲಿ ಉದ್ಯಮ ಉತ್ಪನ್ನಗಳನ್ನು ಸಿದ್ಧಗೊಳಿಸಬಹುದು. ಎಕ್ಸ್ ಪೀರಿಯನ್ಸ್ ಜೋನ್ ಸರ್ಕಾರಿ, ರಿಟೇಲ್ ಮತ್ತು ಇಂಧನ ಕ್ಷೇತ್ರಗಳಿಗೆ ಬೇಕಾದ ಉದ್ಯಮ ಉತ್ಪನ್ನಗಳ ಕುರಿತೂ ಜ್ಞಾನ ಒದಗಿಸಬಹುದು.
ಐಬಿಎಂ-ಮೈಕ್ರೋಸಾಫ್ಟ್ ಎಕ್ಸ್ ಪೀರಿಯನ್ಸ್ ಜೋನ್ ಗ್ರಾಹಕರಿಗೆ ನೆಕ್ಷ್ಟ್ ಜನರೇಷನ್ ಕೌಶಲಗಳನ್ನು ಒದಗಿಸುವುದರ ಮೂಲಕ ಮತ್ತು ಅತ್ಯುತ್ತಮ ಕೇಸ್ ಸ್ಟಡೀಸ್ ಗಳನ್ನು ಒದಗಿಸುವುದರ ಮೂಲಕ ಉದ್ಯೋಗಿಗಳ ಪ್ರತಿಭೆಯನ್ನು ಬೆಳೆಸುವುದು ಹೇಗೆ ಎಂಬುದನ್ನೂ ತಿಳಿಯುವ ಅವಕಾಶವನ್ನು ಒದಗಿಸುತ್ತದೆ. ಈ ಕಾಲದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಜನರೇಟಿವ್ ಎಐ ಯ ಶಕ್ತಿಯನ್ನು ಬಳಸಿಕೊಂಡಿರುವ ವ್ಯಕ್ತಿಗಳ ಜೊತೆ ಸಂಪರ್ಕ ಮತ್ತು ಸಂಹನ ಸಾಧಿಸುವ ಅವಕಾಶಗಳನ್ನೂ ಗ್ರಾಹಕರು ಇಲ್ಲಿ ಪಡೆಯುತ್ತಾರೆ.
“ಇದು ನಮ್ಮ ಗ್ರಾಹಕರಿಗೆ ಸಹ-ಹೂಡಿಕೆ, ಸಹ-ಕಾರ್ಯಾಚರಣೆ ಮತ್ತು ಜಂಟಿ ಉತ್ಪನ್ನಗಳ ಸಹ-ವಿತರಣೆಗೆ ಅವಕಾಶ ಒದಗಿಸುವ ಐಬಿಎಂ ಕನ್ಸಲ್ಟಿಂಗ್ ಮತ್ತು ಮೈಕ್ರೋಸಾಫ್ಟ್ ನ ಬದ್ಧತೆಗೆ ಈ ಎಕ್ಸ್ ಪೀರಿಯನ್ಸ್ ಜೋನ್ ಸಾಕ್ಷಿಯಾಗಿದೆ” ಎಂದು ಐಬಿಎಂ ಕನ್ಸಲ್ಟಿಂಗ್ ನ ಗ್ಲೋಬಲ್ ಡೆಲಿವರಿ ವ್ಯವಸ್ಥಾಪಕ ಪಾಲುದಾರ ಅಮಿತ್ ಶರ್ಮಾ ಹೇಳಿದರು. “ಇದು ನಮ್ಮ ‘ಬೆಟರ್ ಟುಗೆದರ್(ಒಗ್ಗಟ್ಟಿನ ಬಲ)’ ಎಂಬ ತತ್ವದ ಪಾಲನೆಯಾಗಿದೆ. ಸಹಯೋಗ ಮತ್ತು ಸೃಜನಶೀಲತೆ ಬೆಳೆಸುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಐಬಿಎಂ ಕನ್ಸಲ್ಟಿಂಗ್ ಮತ್ತು ಮೈಕ್ರೋಸಾಫ್ಟ್ ಎರಡರ ಸಾಮರ್ಥ್ಯಗಳನ್ನು ಒಂದೇ ಛಾವಣಿಯ ಅಡಿಯಲ್ಲಿ ಬಳಸಿಕೊಳ್ಳುವ ಅವಕಾಶವನ್ನು ನಮ್ಮ ಗ್ರಾಹಕರಿಗೆ ಒದಗಿಸಲು ನಾವು ಉತ್ಸುಕರಾಗಿದ್ದೇವೆ ಮತ್ತು ಉದ್ಯಮಗಳಲ್ಲಿ ಎಐ ಮತ್ತು ಹೈಬ್ರಿಡ್ ಕ್ಲೌಡ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅವರಿಗೆ ಸಹಾಯ ಮಾಡುತ್ತೇವೆ” ಎಂದೂ ಅವರು ಹೇಳಿದ್ದಾರೆ.
“ಐಬಿಎಂ ಸಹಯೋಗದ ಮೂಲಕ ಹೊಸ ಎಕ್ಸ್ ಪೀರಿಯನ್ಸ್ ಜೋನ್ ಅನ್ನು ಕಾರ್ಯಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಗ್ರಾಹಕರ ಬೆಳವಣಿಗೆ ಸಾಧಿಸಲು ಐಬಿಎಂ ಕನ್ಸಲ್ಟಿಂಗ್ನ ಪರಿಣತಿ ಮತ್ತು ಮೈಕ್ರೋಸಾಫ್ಟ್ ಕ್ಲೌಡ್ ತಂತ್ರಜ್ಞಾನಗಳು ಮತ್ತು ಸರ್ವೀಸ್ ಗಳನ್ನು ಬಳಸುವ ಅವಕಾಶ ನೀಡಲಿದ್ದೇವೆ” ಎಂದು ಮೈಕ್ರೋಸಾಫ್ಟ್ ನ ಗ್ಲೋಬಲ್ ಪಾರ್ಟ್ ನರ್ ಸೊಲ್ಯೂಷನ್ಸ್ ಜನರಲ್ ಮ್ಯಾನೇಜರ್ ಡಿನಿಸ್ ಕೌಟೊ ಹೇಳಿದರು. ಮಾತು ಮುಂದುವರಿಸುತ್ತಾ ಅವರು “ಐಬಿಎಂನಂತಹ ಪಾಲುದಾರರು ಎಐ ಮತ್ತು ಹೈಬ್ರಿಡ್ ಕ್ಲೌಡ್ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುವ ಮೂಲಕ ಉದ್ಯಮಗಳಿಗೆ ಸಹಾಯ ಮಾಡುವಲ್ಲಿ ಪ್ರಮುಖರಾಗಿದ್ದಾರೆ. ಈ ಜೋನ್ ನಮ್ಮ ಗ್ರಾಹಕರನ್ನು ಹತ್ತಿರವಾಗಿಸಲಿದೆ ಮತ್ತು ಪಾಲುದಾರರಾಗಿ ನಮ್ಮ ಪ್ರಗತಿ ಸಾಧನೆಗೆ ಸಾಕ್ಷಿಯಾಗಲಿದೆ” ಎಂದು ಹೇಳಿದರು.
ಹೆಚ್ಚಿನ ಮಾಹಿತಿಗೆ IBM.com/consulting.