ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್, ಇಂದು ಎಐ ಚಾಲಿತ ಬೀಸ್ಪೋಕ್ ಗೃಹೋಪಯೋಗಿ ಉಪಕರಣಗಳನ್ನು ಬಿಡುಗಡೆ ಮಾಡಿದೆ. ಈ ಉಪಕರಣಗಳು ಭವಿಷ್ಯದ ಸುಸ್ಥಿರ ಮನೆಗಳಿಗೆ ಪೂರಕವಾಗಿ ವಿನ್ಯಾಸಗೊಂಡಿವೆ. ಎಐ-ಚಾಲಿತ ಗೃಹೋಪಯೋಗಿ ಉಪಕರಣಗಳ ಮೂಲಕ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಉಪಕರಣಗಳ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಅಪೂರ್ವ ಅನುಭವ ಒದಗಿಸುವ ಗುರಿಯನ್ನು ಸ್ಯಾಮ್ ಸಂಗ್ ಹೊಂದಿದೆ.
ಸ್ಯಾಮ್ಸಂಗ್ನ ಈ ಹೊಸ ಬೀಸ್ಪೋಕ್ ಉಪಕರಣಗಳಲ್ಲಿ ಇನ್ ಬಿಲ್ಟ್ ವೈಫೈ, ಇಂಟರ್ನಲ್ ಕ್ಯಾಮೆರಾ ಮತ್ತು ಎಐ ಚಿಪ್ಗಳನ್ನು ಒಳಗೊಂಡಿದ್ದು, ನೀವು ಸದಾ ಅವುಗಳ ಜೊತೆ ಕನೆಕ್ಟೆಡ್ ಆಗಿರುವಂತೆ ನೋಡಿಕೊಳ್ಳುತ್ತದೆ. ವಿಶೇಷವೆಂದರೆ ಸ್ಮಾರ್ಟ್ ಥಿಂಗ್ಸ್ ಅಪ್ಲಿಕೇಶನ್ ಮೂಲಕ ನೀವು ಎಲ್ಲಿರುತ್ತೀರೋ ಅಲ್ಲಿಯೇ ಇವುಗಳ ನಿಯಂತ್ರಣ ಮಾಡಬಹುದಾಗಿದ್ದು, ಸುಲಭವಾಗಿ ಮನೆ ನಿರ್ವಹಣೆ ಮಾಡಬಹುದಾಗಿದೆ.
“ನಾವು ಬೀಸ್ಪೋಕ್ ಎಐ ಅನ್ನು ಪರಿಚಯಿಸುತ್ತಿದ್ದೇವೆ. ಇದು ಗೃಹೋಪಯೋಗಿ ಉಪಕರಣಗಳಲ್ಲಿ ನಮ್ಮ ದೊಡ್ಡ ಆವಿಷ್ಕಾರವಾಗಿದ್ದು, ಭಾರತೀಯ ಮನೆಗಳ ಸ್ವರೂಪವನ್ನು ಬದಲಿಸಲಿದೆ. ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ, ಹಸಿರು ಬದುಕಿಗೆ ಕೊಡುಗೆ ನೀಡುತ್ತದೆ. ನಮ್ಮ ಬೀಸ್ಪೋಕ್ ಎಐ ಚಾಲಿತ ಗೃಹೋಪಯೋಗಿ ಉಪಕರಣಗಳ ಮೂಲಕ ಗ್ರಾಹಕರು ಅವರ ಆಯ್ಕೆಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಬಹುದಾಗಿದೆ. ಹಿರಿಯರು ಮತ್ತು ಮಕ್ಕಳು ಸುಲಭವಾಗಿ ನಿಯಂತ್ರಣ ಮಾಡಬಹುದಾದ್ದರಿಂದ ಈ ಗೃಹೋಪಯೋಗಿ ಉಪಕರಣಗಳು ಅತ್ಯುತ್ತಮ ಅನುಭವ ಒದಗಿಸಲಿದೆ. ಎಐಯ ಅಸಾಧಾರಣ ಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ಭಾರತದಲ್ಲಿನ ಡಿಜಿಟಲ್ ಉಪಕರಣಗಳ ಮಾರುಕಟ್ಟೆಯಲ್ಲಿ ಬೀಸ್ಪೋಕ್ ಎಐ ನಮ್ಮ ನಾಯಕತ್ವವನ್ನು ದೃಢಗೊಳಿಸುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ಸ್ಯಾಮ್ಸಂಗ್ ನೈಋತ್ಯ ಏಷ್ಯಾದ ಅಧ್ಯಕ್ಷ ಮತ್ತು ಸಿಇಓ ಜೆಬಿ ಪಾರ್ಕ್ ಹೇಳಿದರು.
ಎಐ ಈ ಉಪಕರಣಗಳು ದೀರ್ಘಕಾಲ ಬಾಳಿಕೆ ಬರಲು ಮತ್ತು ಸುಸ್ಥಿರತೆ ಸಾಧಿಸಲು ಸಹಾಯ ಮಾಡುತ್ತದೆ. ಸ್ಮಾರ್ಟ್ಥಿಂಗ್ಸ್ ಆಪ್ ಮೂಲಕ ಬಳಕೆದಾರರು ತಮ್ಮ ರೆಫ್ರಿಜರೇಟರ್ ವಾಟರ್ ಫಿಲ್ಟರ್ ರಿಪ್ಲೇಸ್ಮೆಂಟ್ ಮಾಡಬೇಕಾದಾಗ ನೋಟಿಫಿಕೇಷನ್ ಪಡೆಯುತ್ತಾರೆ ಅಥವಾ ಏರ್ ಕಂಡಿಷನರ್ಗೆ ಫಿಲ್ಟರ್ ಬದಲಾವಣೆಯ ಅಗತ್ಯವಿರುವಾಗ ಸೂಚನೆ ಪಡೆಯುತ್ತಾರೆ. ಎಐ ಪರಿಚಯಿಸುವುದರ ಮೂಲಕ ಸ್ಯಾಮ್ಸಂಗ್ ಈ ಉಪಕರಣಗಳನ್ನು ನಿರ್ವಹಿಸಲು ಅಗತ್ಯವಿರುವ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ‘ಬೀಸ್ಪೋಕ್ ಎಐ’ ಕಾರ್ಯಕ್ರಮವು ಸ್ಯಾಮ್ಸಂಗ್ ಬಿಕೆಸಿಯಲ್ಲಿನ ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ನಡೆಸಲಾಯಿತು.
“ಎಐ ಮೂಲಕ ಉಪಕರಣಗಳು ಈಗ ಮತ್ತಷ್ಟು ಚುರುಕಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ಮನೆಕೆಲಸಗಳಲ್ಲಿ ಬಳಕೆದಾರರ ಸಮಯ ಮತ್ತು ಶಕ್ತಿಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಎಐ ಸಾಮರ್ಥ್ಯಗಳ ಮೂಲಕ, ಹೆಚ್ಚು ಕನೆಕ್ಟೆಡ್ ಆಗಿಸುವ ಮೂಲಕ ಈ ಉಪಕರಣಗಳು ಗ್ರಾಹಕರಿಗೆ ಸ್ಮಾರ್ಟ್ ಹೋಮ್ ಅನುಭವವನ್ನು ಒದಗಿಸುತ್ತದೆ. ಎಐ ಉಪಕರಣಗಳ ಮೂಲಕ, ನಮ್ಮ ಪ್ರೀಮಿಯಂ ಉತ್ಪನ್ನಗಳ ಪೋರ್ಟ್ಫೋಲಿಯೊವನ್ನು ಮತ್ತಷ್ಟು ಬಲಪಡಿಸುವುದು ಮತ್ತು ಪ್ರೀಮಿಯಂ ಉಪಕರಣಗಳ ವಿಭಾಗದಲ್ಲಿ ನಮ್ಮ ಪಾಲನ್ನು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ,” ಎಂದು ಸ್ಯಾಮ್ಸಂಗ್ ಇಂಡಿಯಾದ ಡಿಜಿಟಲ್ ಉಪಕರಣಗಳ ಹಿರಿಯ ನಿರ್ದೇಶಕ ಸೌರಭ್ ಬೈಶಾಖಿಯಾ ಹೇಳಿದರು.
ಭಾರತದಲ್ಲಿ ಸ್ಯಾಮ್ಸಂಗ್ನ ರೆಫ್ರಿಜಿರೇಟರ್, ಏರ್ ಕಂಡೀಷನರ್, ಮೈಕ್ರೋವೇವ್ ಮತ್ತು ವಾಷಿಂಗ್ ಮೆಷಿನ್ ಒಳಗೊಂಡ ಬೀಸ್ಪೋಕ್ ಉಪಕರಣಗಳು ಈಗ ಎಐ ಮೂಲಕ ಕಾರ್ಯನಿರ್ವಹಿಸುತ್ತವೆ.
ರೆಫ್ರಿಜರೇಟರ್: ಇದು ಎಐ ವಿಷನ್ ಕ್ಯಾಮೆರಾ ಹೊಂದಿದೆ. ಇದು ಆರಂಭಿಕವಾಗಿ 33 ಆಹಾರ ಪದಾರ್ಥಗಳನ್ನು ಅಟೋಮ್ಯಾಟಿಕ್ ಆಗಿ ಗುರುತಿಸುತ್ತದೆ. ಕಾಲಾನಂತರದಲ್ಲಿ ಬಳಕೆದಾರರ ಸಂಗ್ರಹಣೆಯ ಆಧಾರದಲ್ಲಿ ಗುರುತಿಸಬಹುದಾದ ಆಹಾರ ಪದಾರ್ಥಗಳ ಸಂಖ್ಯೆಯು ಹೆಚ್ಚಬಹುದಾಗಿದೆ. ರೆಫ್ರಿಜರೇಟರ್, ಅದರ ಸ್ಕ್ರೀನ್ ಮೂಲಕ, ಈಗಾಗಲೇ ಫ್ರಿಜ್ ನಲ್ಲಿ ಇರುವ ಆಹಾರ ಪದಾರ್ಥಗಳ ಆಧಾರದಲ್ಲಿ ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟಕ್ಕೆ ಏನು ತಯಾರಿಸಬಹುದು ಎಂಬುದನ್ನು ಸೂಚಿಸುತ್ತದೆ.
ಸ್ಮಾರ್ಟ್ ಫುಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ರೆಫ್ರಿಜರೇಟರ್ನಲ್ಲಿರುವ ಯಾವುದಾದರೂ ಆಹಾರ ವಸ್ತು ಎಕ್ಸೈರ್ ಆಗುವುದಿದ್ದರೆ ಅದನ್ನು ತಿಳಿದುಕೊಳ್ಳಬಹುದಾಗಿದೆ. ಇದಲ್ಲದೆ, ಇದರ ಸಿಂಗಲ್ ಕ್ಯಾಮೆರಾ ಮೂಲಕ ಬೇರೆ ಬೇರೆ ಬೆಳಕಿನ ಸ್ಥಿತಿಗಳಲ್ಲಿ ಕೂಡ ಫ್ರಿಜ್ ಅನ್ನು ನೋಡಬಹುದಾಗಿದೆ. ಇದು ವಿಶಾಲವಾದ ಕವರೇಜ್ ಒದಗಿಸುವುದರಿಂದ ನೀವು ಎಲ್ಲಿಯೇ ಇದ್ದರೂ ಯಾವುದೇ ಸಮಯದಲ್ಲಾದರೂ ರೆಫ್ರಿಜರೇಟರ್ ಕಪಾಟುಗಳು ಮಾತ್ರವಲ್ಲದೇ ಡೋರ್ ಬಿನ್ಗಳನ್ನು ಸಹ
“ವ್ಯೂ ಇನ್ ಸೈಡ್” ಮೂಲಕ ನೋಡಬಹುದಾಗಿದೆ.
ಏರ್ ಕಂಡಿಷನರ್: ಏರ್ ಕಂಡಿಷನರ್ ಗಳು ವೆಲ್ಕಮ್ ಕೂಲಿಂಗ್ ಫೀಚರ್ ಹೊಂದಿದ್ದು, ಬಳಕೆದಾರರು ದೂರದಿಂದಲೇ ತಮ್ಮ ಮನೆಯನ್ನು ತಂಪಾಗಿ ಇರುವಂತೆ ನೋಡಿಕೊಳ್ಳಬಹುದು. ಎಐ ಜಿಯೋ ಫೆನ್ಸಿಂಗ್ ಫೀಚರ್ ಬಳಕೆದಾರರಿಗೆ ಸೂಚನೆಗಳನ್ನು ಸೆಟ್ ಮಾಡುವ ಅವಕಾಶ ನೀಡುತ್ತದೆ. ನೀವು ನಿರ್ದಿಷ್ಟ ರೇಂಜ್ ನಲ್ಲಿ ಇದ್ದಾಗ ಅಥವಾ ಆ ರೇಂಜ್ ನಿಂದ ದೂರ ಹೋದಾಗ ಸ್ಮಾರ್ಟ್ ಥಿಂಗ್ಸ್ ಆಪ್ ಮೂಲಕ ಆನ್ ಮಾಡಲು ಅಥವಾ ಆಫ್ ಮೂಡಲು ನೋಟಿಫಿಕೇಷನ್ ಪಡೆಯುತ್ತೀರಿ. ಈ ನಿರ್ದಿಷ್ಟ ರೇಂಜ್ 150 ಮೀಟರ್ ಗಳಿಂದ 30 ಕಿಮೀಗಳ ವರೆಗೆ ಇರುತ್ತದೆ.
ಮೈಕ್ರೋವೇವ್: ಡಯಟ್ ರೆಸಿಪಿಗಳನ್ನು ವೈಯಕ್ತಿಕಗೊಳಿಸುವ ಆಯ್ಕೆ ಇದೆ. ಬೀಸ್ಪೋಕ್ ಎಐ ಉಪಕರಣಗಳು ಆಹಾರವನ್ನು ಸ್ವಯಂಚಾಲಿತವಾಗಿ ‘ಲೋ ಫ್ಯಾಟ್’ ಮಾಡುವ ಹಾಗೆ ಕಸ್ಟಮೈಸ್ ಮಾಡಲು ಸಹಾಯ ಮಾಡುತ್ತದೆ.
ವಾಷಿಂಗ್ ಮೆಷಿನ್: ಎಐ ನಿಯಂತ್ರಣದ ಸ್ಯಾಮ್ ಸಂಗ್ ನ ಹೊಸ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ ಕಾಲಕ್ರಮೇಣ ನಿಮ್ಮ ಬಟ್ಟೆ ಒಗೆಯುವ ಪದ್ಧತಿಗಳನ್ನು ಕಲಿಯುತ್ತದೆ ಮತ್ತು ಬಳಕೆದಾರರ ಅಭ್ಯಾಸಗಳಿಗೆ ಸರಿಹೊಂದುವಂತೆ ಅದರ ವಾಶ್ ಸೈಕಲ್ಗಳನ್ನು ತಿಳಿದುಕೊಳ್ಳುತ್ತದೆ. ನೀವಾಗಿಯೇ ಬೇರೆ ವಾಶಿಂಗ್ ಸೆಟ್ಟಿಂಗ್ ಮಾಡದೇ ಹೋದರೆ ಇದು ಅಟೋಮ್ಯಾಟಿಕ್ ಆಗಿ ವಾಶ್ ಸೆಟ್ಟಿಂಗ್ಗಳನ್ನು ಮಾಡಿಕೊಳ್ಳುತ್ತದೆ. ಇದಲ್ಲದೆ, ಎಐ ವಾಶ್ ಫೀಚರ್ ಬಟ್ಟೆಯ ಲೋಡ್ನ ತೂಕ, ಬಟ್ಟೆಗಳ ಸೂಕ್ಷ್ಮತೆ ಮತ್ತು ಅವುಗಳ ಮೃದುತ್ವ, ನೀರಿನ ಮಟ್ಟ, ಮಣ್ಣಿನ ಮಟ್ಟ ಮತ್ತು ಸೋಪ್ ಮಟ್ಟವನ್ನು ಗ್ರಹಿಸಿಕೊಂಡು ಬಟ್ಟೆ ಒಗೆಯುವ ಸೆಟ್ಟಿಂಗ್ ಅನ್ನು ಸಿದ್ಧಪಡಿಸುತ್ತದೆ.
ಸ್ಯಾಮ್ಸಂಗ್ ಅತ್ಯುತ್ತಮವಾದ ಮನೆ ಅನುಭವವನ್ನು ಒದಗಿಸುವುದು ಮಾತ್ರವಲ್ಲದೆ ಪರಿಸರ ಮತ್ತು ಸಮಾಜಕ್ಕೆ ಉತ್ತಮ ಭವಿಷ್ಯವನ್ನು ಒದಗಿಸಲು ಸಹಾಯ ಮಾಡುವ ಉತ್ಪನ್ನಗಳನ್ನು ರಚಿಸಲು ಬದ್ಧವಾಗಿದೆ. ಸ್ಮಾರ್ಟ್ ಥಿಂಗ್ಸ್ ಎನರ್ಜಿ ಮೂಲಕ ಕನೆಕ್ಟೆಡ್ ಸ್ಯಾಮ್ಸಂಗ್ ಉಪಕರಣಗಳು ಬಳಸಿಕೊಳ್ಳುವ ವಿದ್ಯುತ್ ಪ್ರಮಾಣವನ್ನು ಬಳಕೆದಾರರು ಸುಲಭವಾಗಿ ತಿಳಿಯಬಹುದು ಮತ್ತು ನಿಯಂತ್ರಿಸಬಹುದಾಗಿದೆ.
ಬಳಕೆಯ ಶೈಲಿಗಳ ಆಧಾರದ ಮೇಲೆ ಎಐ ಅಲ್ಗಾರಿದಮ್ ಅನ್ನು ಬಳಸಿಕೊಂಡು ಆಪ್ಟಿಮೈಸ್ಡ್ ಎನರ್ಜಿ ಸೇವಿಂಗ್ ವಿಧಾನದ ಮೂಲಕ ಎಐ ಎನರ್ಜಿ ಮೋಡ್ ನಲ್ಲಿ ರೆಫ್ರಿಜರೇಟರ್ಗಳಲ್ಲಿ 10%ವರೆಗೆ, ಏರ್ ಕಂಡಿಷನರ್ಗಳಲ್ಲಿ 20% ಮತ್ತು ವಾಷಿಂಗ್ ಮೆಷಿನ್ಗಳಲ್ಲಿ 70% ವರೆಗೆ ವಿದ್ಯುತ್ ಉಳಿತಾಯವನ್ನು ಮಾಡಬಹುದಾಗಿದೆ. ಬೀಸ್ಪೋಕ್ ಉಪಕರಣಗಳಲ್ಲಿ ಸ್ಯಾಮ್ ಸಂಗ್ ಇಂಗಾಲವನ್ನು ಅನ್ನು ಕಡಿಮೆ ಮಾಡುತ್ತಿದೆ. ಉದಾಹರಣೆಗೆ, 5-ಸ್ಟಾರ್ ರೇಟೆಡ್ ಸ್ಯಾಮ್ಸಂಗ್ ರೆಫ್ರಿಜರೇಟರ್ ಇಂಗಾಲದ ಹೊರಸೂಸುವಿಕೆಯನ್ನು ವರ್ಷಕ್ಕೆ 359 ಕೆಜಿಯಷ್ಟು ಕಡಿಮೆ ಮಾಡುತ್ತದೆ ಮತ್ತು ಎಐ ಎನರ್ಜಿ ಮೋಡ್ ಮೂಲಕ ವಿದ್ಯುತ್ ಉಳಿತಾಯವು 10% ರಷ್ಟು ಹೆಚ್ಚಾಗುತ್ತದೆ – ಇದರಿಂದಾಗಿ ಒಟ್ಟಾರೆ ಇಂಗಾಲ ಹೊರಸೂಸುವಿಕೆ ವರ್ಷಕ್ಕೆ 395 ಕೆಜಿ ಕಡಿಮೆ ಆಗುತ್ತದೆ.
ಸ್ಯಾಮ್ ಸಂಗ್ ನ ಬೀಸ್ಪೋಕ್ ಎಐ ಉಪಕರಣಗಳು ಬಿಕ್ಸ್ ಬಿ ವಾಯ್ಸ್ ಅಸಿಸ್ಟೆಂಟ್ ಅನ್ನೂ ಹೊಂದಿವೆ. ಬಳಕೆದಾರರು ತಮ್ಮ ಫ್ಯಾಮಿಲಿ ಹಬ್ ರೆಫ್ರಿಜರೇಟರ್ ಅನ್ನು ಸುಲಭವಾಗಿ “ಹಾಯ್ ಬಿಕ್ಸ್ ಬಿ! ರೆಫ್ರಿಜರೇಟರ್ ಒಳಗೆ ಏನಿದೆ ಎಂದು ನನಗೆ ತೋರಿಸು” ಅಥವಾ ಏರ್ ಕಂಡಿಷನರ್ ಗೆ “ಹಾಯ್ ಬಿಕ್ಸ್ ಬಿ! ಏರ್ ಕಂಡಿಷನರ್ ನಲ್ಲಿ ವಿಂಡ್ಫ್ರೀ ಮೋಡ್ ಅನ್ನು ಆನ್ ಮಾಡು” ಎಂದು ಹೇಳುವ ಮೂಲಕ ನಿಯಂತ್ರಣ ಮಾಡಬಹುದು.
ಉಪಕರಣಗಳು ಸ್ಮಾರ್ಟ್ ಫಾರ್ವರ್ಡ್ ಫೀಚರ್ ಅನ್ನು ಸಹ ಒಳಗೊಂಡಿದ್ದು, ಇದು ಸಾಫ್ಟ್ ವೇರ್ ಅಪ್ಡೇಟ್ ಗಳ ಮೂಲಕ ಹೊಸ ವೈಶಿಷ್ಟ್ಯಗಳು ಮತ್ತು ಅಪ್ ಡೇಟ್ ಗಳನ್ನು ಒದಗಿಸುತ್ತದೆ. ಈ ಮೂಲಕ ನಿಮ್ಮ ಸಾಧನಗಳಲ್ಲಿ ಹೋಮ್ ಕೇರ್ ಸ್ಮಾರ್ಟ್ ಥಿಂಗ್ಸ್ ಹೋಮ್ ಕೇರ್ ಮಾನಿಟರ್ಸ್ ನಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಮತ್ತು ಸೆಕ್ಯಿರಿಟಿಯನ್ನು ಪಡೆಯಬಹುದು. ಹೋಮ್ ಕೇರ್ ಸ್ಮಾರ್ಟ್ ಥಿಂಗ್ಸ್ ಹೋಮ್ ಕೇರ್ ಮಾನಿಟರ್ಸ್ ನಿಮ್ಮ ಸಾಧನಗಳನ್ನು ಚೆಕ್ ಮಾಡುತ್ತದೆ ಮತ್ತು ಅಸಹಜತೆ ಪತ್ತೆಯಾದರೆ ತಕ್ಷಣ ನಿಮಗೆ ತಿಳಿಸುತ್ತದೆ ಮತ್ತು ಅದಕ್ಕೆ ಪರಿಹಾರವನ್ನು ಸೂಚಿಸುತ್ತದೆ. ನಿಮ್ಮ ಸಾಧನಗಳ ಪರಿಕರವನ್ನು ಬದಲಾಯಿಸಬೇಕಾಗಿ ಬಂದಾಗ ಬಳಕೆದಾರರು ನೋಟಿಫಿಕೇಷನ್ ಅನ್ನು ಪಡೆಯುತ್ತಾರೆ.