ನ್ಯೂಯಾರ್ಕ್ : ಜಿಇ ವರ್ನೋವಾ ಪ್ರತ್ಯೇಕ ಕಂಪನಿಯಾದ ಬಳಿಕ ವಾಯುಯಾನ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಲು ಜಿಇ ಏರೋಸ್ಪೇಸ್ (ಎನ್ವೈಎಸ್ಇ: ಜಿಇ) ಇಂದು ಸ್ವತಂತ್ರ ಸಾರ್ವಜನಿಕ ಕಂಪನಿಯಾಗಿ ಕಾರ್ಯಾರಂಭ ಮಾಡಿದೆ. ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್(ಎನ್ವೈಎಸ್ಇ)ನಲ್ಲಿ ಕಂಪನಿಯು “ಜಿಇ” ಟಿಕ್ಕರ್ ಅಡಿಯಲ್ಲಿ ಟ್ರೇಡ್(ವಹಿವಾಟು) ಮಾಡಲಿದೆ. ಇಂದು ಏಪ್ರಿಲ್ 2, 2024ರಂದು ಬೆಳಿಗ್ಗೆ 9.30ಕ್ಕೆ ಎನ್ವೈಎಸ್ಇಯಲ್ಲಿ ಇಟಿ, ಜಿಇ ಏರೋಸ್ಪೇಸ್ ಮತ್ತು ಜಿಇ ವರ್ನೋವಾ ಜೊತೆ ಸೇರಿ ಆರಂಭಿಕ ಬೆಲ್ ಅನ್ನು ಬಾರಿಸಲಿದ್ದಾರೆ.
ಈ ಕುರಿತು ಜಿಇ ಏರೋಸ್ಪೇಸ್ ಅಧ್ಯಕ್ಷ ಮತ್ತು ಸಿಇಓ ಲಾರೆನ್ಸ್ ಕಲ್ಪ್ ಜೂನಿಯರ್, “ಮೂರು ಕಂಪನಿಗಳನ್ನು ಸ್ವತಂತ್ರ ಸಾರ್ವಜನಿಕ ಕಂಪನಿಯಾಗಿಸುವ ಪ್ರಕ್ರಿಯೆಯು ಇಲ್ಲಿಗೆ ಪೂರ್ಣಗೊಂಡಿದೆ. ಜಿಇಯ ಬಹು ವರ್ಷದ ರೂಪಾಂತರ ಪ್ರಕ್ರಿಯೆ ಇಂದು ಮುಗಿದಿದೆ ಮತ್ತು ಈ ಕ್ಷಣ ಐತಿಹಾಸಿಕ ಕ್ಷಣವೆಂದು ಗುರುತಿಸಲ್ಪಡುತ್ತದೆ. ನಮ್ಮ ತಂಡದ ಬಗ್ಗೆ, ಈ ಮಹತ್ವದ ಸಾಧನೆಯನ್ನು ಮಾಡುವಲ್ಲಿನ ಅವರ ದೃಢತೆ, ಶ್ರದ್ಧೆಯ ಕುರಿತು ನನಗೆ ಅಪಾರ ಹೆಮ್ಮೆ ಇದೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಕಲ್ಪ್, “ಶತಮಾನದ ಕಲಿಕೆಯ ಆಧಾರದಲ್ಲಿ ಬೆಳವಣಿಗೆ ಹೊಂದಿರುವ ಜಿಇ ಏರೋಸ್ಪೇಸ್ ತನ್ನ ನಾವೀನ್ಯತೆಯ ಪರಂಪರೆಯನ್ನು ಮುಂದುವರಿಸುತ್ತಾ ಉತ್ತಮ ಆಯವ್ಯಯ ಪಟ್ಟಿಯನ್ನು ನಿರ್ವಹಣೆ ಮಾಡಿದೆ ಮತ್ತು ವಾಯುಯಾನ ಕ್ಷೇತ್ರದ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ಉದ್ದೇಶದೊಂದಿಗೆ ಜನರನ್ನು ಎತ್ತರಕ್ಕೆ ಕೊಂಡೊಯ್ಯುವ ಮತ್ತು ಅವರನ್ನು ಜೋಪಾನವಾಗಿ ಮನೆಗೆ ಕರೆದೊಯ್ಯುವ ಕಡೆಗೆ ಗಮನ ಕೊಡಲಿದೆ. ನಮ್ಮ ಅಧೀನದಲ್ಲಿರುವ ಆಪರೇಟಿಂಗ್ ಮಾಡೆಲ್ ಆದ ಫ್ಲೈಟ್ ಡೆಕ್ ಅನ್ನು ಅಡಿಪಾಯವಾಗಿ ಇರಿಸಿಕೊಳ್ಳುವ ಮೂಲಕ ಗ್ರಾಹಕರು, ಉದ್ಯೋಗಿಗಳು ಮತ್ತು ಷೇರುದಾರರ ಸೇವೆಯಲ್ಲಿ ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲಿದ್ದೇವೆ ಎಂಬುದರ ಬಗ್ಗೆ ನನಗೆ ಪೂರ್ತಿ ವಿಶ್ವಾಸವಿದೆ” ಎಂದು ಹೇಳಿದರು.
ಪ್ರಪಂಚದಾದ್ಯಂತ ಸುಮಾರು 44,000 ವಾಣಿಜ್ಯ ಎಂಜಿನ್ಗಳು ಮತ್ತು ಮಿಲಿಟರಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸುಮಾರು 26,000 ಎಂಜಿನ್ಗಳನ್ನು ಸ್ಥಾಪಿಸುವ ಮೂಲಕ ಜಿಇ ಏರೋಸ್ಪೇಸ್ ಕಂಪನಿಯು ಪ್ರೊಪಲ್ಷನ್, ಸೇವೆಗಳು ಮತ್ತು ವ್ಯವಸ್ಥೆ ವಿಭಾಗದಲ್ಲಿ ಜಾಗತಿಕ ನಾಯಕನಾಗಿ ಗುರುತಿಸಿಕೊಂಡಿದೆ. ಕಂಪನಿಯು 2023ರಲ್ಲಿ ಸುಮಾರು $32 ಶತಕೋಟಿ ಆದಾಯವನ್ನು* ಗಳಿಸಿತ್ತು. ಅದರಲ್ಲಿ 70% ಆದಾಯವು ಸೇವೆಗಳು ಮತ್ತು ಎಂಜಿನ್ ಆಫ್ಟರ್ಮಾರ್ಕೆಟ್ (ಉತ್ಪನ್ನದ ರಿಪೇರಿ ಅಥವಾ ವರ್ಧನೆಗಾಗಿ ಬಳಸುವ ಉಪಕರಣ ಅಥವಾ ಭಾಗಗಳ ಮಾರುಕಟ್ಟೆ) ವಿಭಾಗದಿಂದ ಗಳಿಸಲಾಗಿತ್ತು.
ಮಾರ್ಚ್ನಲ್ಲಿ ಕಂಪನಿಯ ಹೂಡಿಕೆದಾರರ ದಿನದಂದು, ಜಿಇ ಏರೋಸ್ಪೇಸ್ ತನ್ನ 2024ರ ಮಾರ್ಗಸೂಚಿಯನ್ನು ತಿಳಿಸಿತು ಮತ್ತು 2028ರಲ್ಲಿ ~$10 ಶತಕೋಟಿ ನಿರ್ವಹಣಾ ಲಾಭ* ಗಳಿಸುವ ಉದ್ದಶವನ್ನು ಒಳಗೊಂಡು ದೀರ್ಘಾವಧಿಯ ಆರ್ಥಿಕ ಬೆಳವಣಿಗೆಯ ಹಾದಿಯನ್ನು ಪ್ರಸ್ತುತಪಡಿಸಿತು. ಜೊತೆಗೆ, ಜಿಇ ಏರೋಸ್ಪೇಸ್ ಬೆಳವಣಿಗೆ ಮತ್ತು ನಾವೀನ್ಯತೆಯಲ್ಲಿ ಹೂಡಿಕೆ ಮಾಡಲು ಬಂಡವಾಳ ಹಂಚಿಕೆ ಚೌಕಟ್ಟನ್ನು(ಕ್ಯಾಪಿಟಲ್ ಅಲೋಕೇಷನ್ ಫ್ರೇಮ್ ವರ್ಕ್) ಹಂಚಿಕೊಂಡಿದೆ ಮತ್ತು ಷೇರುದಾರರಿಗೆ ಲಭ್ಯವಿರುವ ನಿಧಿಯ ಸುಮಾರು 70-75% ಅನ್ನು ಹಿಂದಿರುಗಿಸಲಿದೆ.
ಜಿಇ ಏರೋಸ್ಪೇಸ್ನ ಉದ್ಘಾಟನೆಯು ಜಿಇಯ ಬಹು-ವರ್ಷದ ಆರ್ಥಿಕ ಮತ್ತು ಕಾರ್ಯಾಚರಣೆಯ ರೂಪಾಂತರ ಪ್ರಕ್ರಿಯೆಯು ಪೂರ್ಣಗೊಂಡಿರುವುದನ್ನು ಸೂಚಿಸುತ್ತದೆ. ಜಿಇ ಕಳೆದ ಹಲವು ವರ್ಷಗಳಲ್ಲಿ ಅದರಲ್ಲೂ 2018ರಿಂದ $100 ಶತಕೋಟಿಗಿಂತಲೂ ಹೆಚ್ಚಿನ ಸಾಲ ಕಡಿಮೆ ಮಾಡುವುದನ್ನು ಒಳಗೊಂಡು ಕಂಪನಿಯ ವ್ಯವಹಾರವನ್ನು ಬಲಪಡಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಕಂಪನಿಯಾದ್ಯಂತ ಗ್ರಾಹಕರ ಸೇವೆಗಾಗಿ ಅತ್ಯುತ್ತಮ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಾ ಸುಧಾರಣೆಯ ಪಥದಲ್ಲಿ ಸಾಗುತ್ತಾ ಕಂಪನಿಯ ಸಂಸ್ಕೃತಿಯಲ್ಲಿ ಆಮೂಲಾಗ್ರ ಬದಲಾವಣೆ ಉಂಟು ಮಾಡಲಾಗಿದೆ.
ಈ ದೃಢವಾದ ಅಡಿಪಾಯದಿಂದಾಗಿ ಜಿಇ ಹೆಲ್ತ್ಕೇರ್, ಜಿಇ ವರ್ನೋವಾ ಮತ್ತು ಜಿಇ ಏರೋಸ್ಪೇಸ್ ಮೂರು ಸ್ವತಂತ್ರ ಕಂಪನಿಗಳಾಗಿ ಕಾರ್ಯಾರಂಭ ಮಾಡುವುದು ಸಾಧ್ಯವಾಗಿದೆ ಮತ್ತು ಈ ಪ್ರತಿಯೊಂದು ಕಂಪನಿಯು ಜಿಇಯ ನಾವೀನ್ಯತೆಯ ಇತಿಹಾಸವನ್ನು ಭವ್ಯಗೊಳಿಸಲು ಸಿದ್ಧವಾಗಿದೆ.
ಜಿಇ ಕಾಮನ್ ಸ್ಟಾಕ್ ಹೊಂದಿರುವವರು ಪ್ರತೀ ನಾಲ್ಕು ಜಿಇ ಕಾಮನ್ ಸ್ಟಾಕ್ ಷೇರ್ ಗೆ ಒಂದು ಜಿಇ ವರ್ನೋವಾ ಕಾಮನ್ ಸ್ಟಾಕ್ ಷೇರ್ ಅನ್ನು ಪಡೆಯುವ ಅರ್ಹತೆ ಹೊಂದಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಫೆಡರಲ್ ಆದಾಯ ತೆರಿಗೆ ಉದ್ದೇಶಗಳಿಗೆ ಪೂರಕವಾಗಿ ಜಿಇ ಷೇರುದಾರರಿಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿಯೇ ತೆರಿಗೆ-ಸಮರ್ಥ ರೀತಿಯಲ್ಲಿ ಷೇರುಗಳನ್ನು ವಿತರಣೆ ಮಾಡಲಾಗಿದೆ.
ಪಾಲ್, ವೀಸ್, ರಿಫ್ಕಿಂಡ್, ವಾರ್ಟನ್ & ಗ್ಯಾರಿಸನ್ ಎಲ್ಎಲ್ಪಿ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದರು. ಎವರ್ಕೋರ್, ಮೋರ್ಗಾನ್ ಸ್ಟಾನ್ಲಿ ಮತ್ತು ಪಿಜೆಟಿ ಪಾಲುದಾರರು ವಹಿವಾಟಿನಲ್ಲಿ ಜಿಇಗೆ ಪ್ರಮುಖ ಹಣಕಾಸು ಸಲಹೆಗಾರರಾಗಿದ್ದರು. ಕಂಪನಿಯು ಡಿಎಲ್ಎ ಪೈಪರ್ ಆಂಡ್ ಗಿಬ್ಸನ್, ಡನ್ & ಕ್ರಚರ್ ಎಲ್ಎಲ್ಪಿಯಿಂದ ಕಾನೂನು ಸಲಹೆಯನ್ನು ಮತ್ತು ಸಿಟಿಬ್ಯಾಂಕ್, ದಿ ಕಾನ್ಸೆಲ್ಲೋ ಗ್ರೂಪ್, ಬಿಎನ್ಪಿ ಪರಿಬಾಸ್ ಮತ್ತು ಯುಬಿಎಸ್ ನಿಂದ ಹಣಕಾಸಿನ ಸಲಹೆಯನ್ನು ಸಹ ಪಡೆದುಕೊಂಡಿತು.