ಬೆಂಗಳೂರು: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ನ ವೆಸ್ ಚೇರ್ಮನ್, ಸಿಇಓ ಮತ್ತು ಡಿವೈಸ್ ಎಕ್ಸ್ಪೀರಿಯನ್ಸ್ (ಡಿಎಕ್ಸ್) ವಿಭಾಗದ ಮುಖ್ಯಸ್ಥ ಜೊಂಗ್-ಹೀ (ಜೆಹೆಚ್) ಹ್ಯಾನ್, ಮುಂಬೈನ ಜಿಯೋ ವರ್ಲ್ಡ್ ಪ್ಲಾಜಾದಲ್ಲಿರುವ ಸ್ಯಾಮ್ಸಂಗ್ ಬಿಕೆಸಿಗೆ ಮಳಿಗೆ ಭೇಟಿ ನೀಡಿದರು. ಮಳಿಗೆ ಪ್ರಾರಂಭ ಆದಾಗಿನಿಂದ ಮಳಿಗೆಗೆ ಇದು ಅವರ ಮೊದಲ ಭೇಟಿ ಆಗಿದೆ. ಈ ಸಂದರ್ಭದಲ್ಲಿ ಅವರು ಸ್ಯಾಮ್ಸಂಗ್ ಟೆಕ್-ಸ್ಯಾವಿ ಗ್ರಾಹಕರಿಗೆ ಎಐಮತ್ತು ಅತ್ಯುನ್ನತ ಕನೆಕ್ಟಿವಿಟಿ(ಸಂಪರ್ಕ)ಯನ್ನು ಭಾರತೀಯ ಮಾರುಕಟ್ಟೆಗೆ ಒದಗಿಸುವ ಮೂಲಕ ಕಂಪನಿ ಬದ್ಧತೆ ಪ್ರದರ್ಶಿಸಿದೆ ಎಂದು ಹೇಳಿದರು. ಜೊತೆಗೆ ಸ್ಯಾಮ್ಸಂಗ್ ಟೆಲಿವಿಷನ್ಗಳು ಮತ್ತು ಡಿಜಿಟಲ್ ಉಪಕರಣಗಳಿಂದ ಹಿಡಿದು ಸ್ಮಾರ್ಟ್ಫೋನ್ಗಳವರೆಗಿನ ಉತ್ಪನ್ನಗಳಲ್ಲಿ ಬಳಸಲಾದ ಇತ್ತೀಚಿನ ಎಐಆವಿಷ್ಕಾರಗಳನ್ನು ಪರಿಶೀಲಿಸಲು ಅವರು ಗ್ರಾಹಕರನ್ನು ಆಹ್ವಾನಿಸಿದರು.
“ಎಐಸಂಪರ್ಕಿತ ತಂತ್ರಜ್ಞಾನಗಳು ಹಿನ್ನೆಲೆಯಲ್ಲಿದೇ ಇದ್ದು, ಗಮನಕ್ಕೆ ಬಾರದೆಯೇ ಜನರ ದೈನಂದಿನ ಜೀವನವನ್ನು ಸುಧಾರಿಸುತ್ತದೆ. ನಮ್ಮ ಮುಕ್ತ ಸಹಯೋಗದ ಮಾದರಿಯ ಮೂಲಕ ನಾವು ನಮ್ಮ ಎಲ್ಲಾ ಗ್ರಾಹಕರಿಗೆ ಎಐ ಮತ್ತು ಹೈಪರ್-ಕನೆಕ್ಟಿವಿಟಿಯನ್ನು ಒದಗಿಸುತ್ತಿದ್ದೇವೆ. ಭಾರತದಲ್ಲಿ ಮುಂದಿನ ದಿನಗಳಳ್ಲಿ ಎಐ ಜಗತ್ತು ಬಹುದೊಡ್ಡದಾಗಿ ತೆರೆದುಕೊಳ್ಳಲಿದೆ. ನಮ್ಮ ಪ್ರಮುಖ ಸ್ಯಾಮ್ಸಂಗ್ ಬಿಕೆಸಿ ಸ್ಟೋರ್ ನಮ್ಮ ‘ಎಲ್ಲರಿಗೂ ಎಐ’ ಎಂಬ ಥೀಮ್ ಅನ್ನು ಸಾಕಾರಗೊಳಿಸಲು ದುಡಿಯಲಿದೆ ಮತ್ತು ‘ಒನ್ಸ್ಯಾಮ್ಸಂಗ್’ ದೃಷ್ಟಿಯನ್ನು ಪ್ರದರ್ಶಿಸುತ್ತದೆ. ಸ್ಟೋರ್ನ ವಿವಿಧ ಝೋನ್ ಗಳಲ್ಲಿ, ಗ್ರಾಹಕರು ವಾಸ್ತವ ರೂಪದಲ್ಲಿರುವ ನಮ್ಮ ಎಐಜಗತ್ತನ್ನು ನೋಡಬಹುದು ಮತ್ತು ಬುದ್ಧಿವಂತಿಕೆ, ಉನ್ನತ ಅನುಭವಗಳು ನಮ್ಮಬದುಕನ್ನು ಹೇಗೆ ಬದಲಿಸಬಹುದು ಎಂಬುದನ್ನು ಅನುಭವಿಸಬಹುದು ”ಎಂದುಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ವಿಭಾಗದ ಡಿವೈಸ್ ಎಕ್ಸ್ಪೀರಿಯೆನ್ಸ್ ಮುಖ್ಯಸ್ಥ(ಡಿಎಕ್ಸ್) ವೈಸ್ ಚೇರ್ಮನ್, ಸಿಇಓ ಜೊಂಗ್-ಹೀ (ಜೆಎಚ್) ಹ್ಯಾನ್ ಹೇಳಿದರು.
ಈ ವರ್ಷದ ಆರಂಭದಲ್ಲಿ, ಹ್ಯಾನ್ ಸ್ಯಾಮ್ಸಂಗ್ನ ‘ಎಲ್ಲರಿಗೂ ಎಐ'(ಎಐ ಫಾರ್ ಆಲ್) ಎಂಬ ದೂರದೃಷ್ಟಿಯನ್ನು ಸಿಇಎಸ್ ನಲ್ಲಿ ಅನಾವರಣಗೊಳಿಸಿದ್ದರು. ಆ ಸಂದರ್ಭದಲ್ಲಿ ಎಐ ಮೂಲಕಜನರು ತಮ್ಮ ಸಾಧನಗಳನ್ನು ಹಿಂದೆಂದಿಗಿಂತಲೂ ಹೆಚ್ಚು ಅರ್ಥಗರ್ಭಿತವಾಗಿ ಮತ್ತು ಅನುಕೂಲಕರವಾಗಿ ಬಳಸಬಹುದು ಎಂಬುದನ್ನುಪ್ರದರ್ಶಿಸಿದ್ದರು. ಸ್ಯಾಮ್ಸಂಗ್ ನ’ಎಐ ಫಾರ್ ಆಲ್’ ದೃಷ್ಟಿಯ ಭಾಗವಾಗಿ, ಸ್ಯಾಮ್ ಸಂಗ್ಜನವರಿಯಲ್ಲಿ ತನ್ನ ಹೊಸ ಗ್ಯಾಲಕ್ಸಿ ಎಸ್24 ಸ್ಮಾರ್ಟ್ಫೋನ್ ಸರಣಿಯಲ್ಲಿ ಗ್ಯಾಲಕ್ಸಿ ಎಐಅನ್ನು ಅನಾವರಣಗೊಳಿಸಿತ್ತು.
“ಭಾರತವು ಜಾಗತಿಕವಾಗಿ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಸ್ಯಾಮ್ಸಂಗ್ಗೆ ದೊಡ್ಡ ಅವಕಾಶಗಳನ್ನುಒದಗಿಸುತ್ತಿದೆ” ಎಂದು ಹ್ಯಾನ್ ಈ ಸಂದರ್ಭದಲ್ಲಿ ಹೇಳಿದರು.
ಮಾತು ಮುಂದುವರಿಸುತ್ತಾ. “ಭಾರತವು ಟೆಕ್-ಸ್ಯಾವಿ ಯುವ ಗ್ರಾಹಕರ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ. ಅದರಿಂದಾಗಿಹೊಸತನವನ್ನು ನೀಡಲು ನಮಗೆ ಉತ್ತೇಜನ ಸಿಗುತ್ತದೆ. ಎಐಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಜಗತ್ತಿಗೆ ನೀಡಲು ನಮ್ಮ ಆರ್&ಡಿಕೇಂದ್ರಗಳಲ್ಲಿ ಸಾವಿರಾರು ಯುವ, ಉದ್ಯಮಶೀಲ ಯುವಕರು ಕೆಲಸ ಮಾಡುತ್ತಾರೆ. ನಮಗೆ ಈ ತಂಡದ ಕುರಿತು ಹೆಮ್ಮೆ ಇದೆ,” ಎಂದು ಹ್ಯಾನ್ ಹೇಳಿದರು.
ಸ್ಯಾಮ್ಸಂಗ್ ಇತ್ತೀಚೆಗೆ ಕನೆಕ್ಟೆಡ್ ಲೈಫ್ಸ್ಟೈಲ್ ಎಕ್ಸ್ಪೀರಿಯೆನ್ಸ್ ಸ್ಟೋರ್ ಆದ ಸ್ಯಾಮ್ಸಂಗ್ ಬಿಕೆಸಿ ಅನ್ನು ಉದ್ಘಾಟಿಸಿದೆ.ಅಲ್ಲಿ ಗ್ರಾಹಕರು ‘ಒನ್ ಸ್ಯಾಮ್ಸಂಗ್’ ಎಂಬ ಐಡಿಯಾವನ್ನು ತಿಳಿಯಬಹುದಾಗಿದೆ. ಇದು ಸ್ಯಾಮ್ಸಂಗ್ನ ಇತ್ತೀಚಿನ ಎಐಆವಿಷ್ಕಾರಗಳನ್ನು ಪರಿಚಯಿಸುತ್ತದೆ ಮತ್ತು ಕಂಪನಿಯ ಸಂಪರ್ಕಿತ ಸಾಧನಗಳ ಪರಿಸರ ವ್ಯವಸ್ಥೆಯ ಶಕ್ತಿಯನ್ನು ಅನಾವರಣಗೊಳಿಸುತ್ತದೆ.
ಕಂಪನಿಯು ಕಳೆದ 28 ವರ್ಷಗಳಿಂದ ಭಾರತದಲ್ಲಿದೆ. ಅದು1995ರಲ್ಲಿ ಇಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸ್ಯಾಮ್ ಸಂಗ್ ಎರಡು ಅತ್ಯಾಧುನಿಕ ತಯಾರಿಕಾ ಘಟಕಗಳು, ಮೂರು ಆರ್&ಡಿಕೇಂದ್ರಗಳು ಮತ್ತು ಸಾವಿರಾರು ಜನರಿಗೆ ಉದ್ಯೋಗ ನೀಡುವ ಒಂದು ವಿನ್ಯಾಸ ಕೇಂದ್ರವನ್ನು ಭಾರತದಲ್ಲಿ ಹೊಂದಿದ್ದು, ದೇಶಕ್ಕೆ ಬದ್ಧವಾಗಿಕಾರ್ಯನಿರ್ವಹಿಸುವುದನ್ನು ಮುಂದುವರಿಸಿದೆ.