ಮಂಗಳೂರು: ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿ, ಮಂಗಳೂರು ಮತ್ತು ಬೆಸಂಟ್ ಮಹಿಳಾ ಕಾಲೇಜ್, ಕೊಡಿಯಾಲ್ ಬೈಲ್, ಮಂಗಳೂರು ವತಿಯಿಂದ ಜಂಟಿಯಾಗಿ ಅಂತರ್ ಕಾಲೇಜ್ ಹಿಂದಿ ಸಂಗೋಷ್ಠಿಯನ್ನು ಆಚರಿಸಲಾಗಿದ್ದು, ಮಂಗಳೂರಿನ ಸ್ಥಳೀಯ ಕಾಲೇಜ್, ಉಡುಪಿ ಮತ್ತು ಸೂಳ್ಯ ಕಾಲೇಜ್ ನಿಂದ ವಿದ್ಯಾರ್ಥಿ / ವಿದ್ಯಾರ್ಥಿನಿಯರು, ವಿದ್ಯಾರ್ಥಿ ಸಂಗೋಷ್ಠಿ ಮತ್ತು ಪೇಪರ್ ಪ್ರಸ್ತುತಿ ಸ್ಪರ್ಧೆಯಲ್ಲಿ ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತೃಭಾಷೆಯ ಮಹತ್ವದ ಬಗ್ಗೆ ವಿಮರ್ಶಿಸಿ ಸಂಶೋಧನಾ ಲೇಖನಗಳನ್ನು ಪ್ರಸ್ತುತ ಪಡಿಸಿದರು.
ಈ ಕಾರ್ಯಕ್ರಮವು ಡಾ. ಪ್ರವೀಣ ಕುಮಾರ್ ಕೆ ಸಿ, ಪ್ರಾಂಶುಪಾಲರು, ಬೆಸೆಂಟ್ ಮಹಿಳಾ ಕಾಲೇಜ್ ರವರ ಅಧ್ಯಕ್ಷತೆಯಲ್ಲಿ ಆರಂಭಗೊಂಡಿತು. ಹಾಗೂ ಸಂಗೋಷ್ಠಿಯ ಮುಖ್ಯ ಅತಿಥಿಯಾಗಿ ಅಶ್ವಿನಿ ಕುಮಾರ್, ಉಪ ಮಹಾಪ್ರಬಂಧಕ – ನೆಟ್ ವರ್ಕ್, ಬ್ಯಾಂಕ್ ಆಫ್ ಬರೋಡಾ, ವಲಯ ಕಛೇರಿ, ಮಂಗಳೂರು ಉಪಸ್ಥಿತರಿದ್ದರು ಮತ್ತು ಬೆಸೆಂಟ್ ಮಹಿಳಾ ಕಾಲೇಜ್ ನ ಆಡಳಿತ ಅಧಿಕಾರಿಯಾದ ಪ್ರೋ. ರಾಜಶೇಖರ ಹೆಬ್ಬಾರ್, ಕಾರ್ಯಕ್ರಮದ ಉಪಾಧ್ಯಕ್ಷರಾದ ಡಾ. ಮಂಜುಳ ಕೆ ಟಿ ಉಪಸ್ಥಿತರಿದ್ದರು. ಕಾಲೇಜ್ ನ ಹಿಂದೀ ವಿಭಾಗಧ್ಯಕ್ಷರಾದ ಡಾ. ಪರಶುರಾಮ್ ಮಾಲಗೆ ಮತ್ತು ಬ್ಯಾಂಕ್ ಆಫ್ ಬರೋಡಾದ ರಾಜಭಾಷಾ ಅಧಿಕಾರಿಯಾದ ಪುಷ್ಪಲತಾ ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದರು.