ಬೆಂಗಳೂರು: ಭಾರತದ ಮುಂಚೂಣಿ ಆಟೋಮೋಬೈಲ್ ಉತ್ಪಾದಕ ಸಂಸ್ಥೆಯಾದ ಟಾಟಾ ಮೋಟರ್ಸ್, ದೆಹಲಿಯ ಬಳಿ ತನ್ನ ಐದನೇ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಘಟಕವನ್ನು(Registered Vehicle Scrapping Facility (RVSF)) ಇಂದು ಉದ್ಘಾಟಿಸಿದೆ; ದೀರ್ಘಕಾಲ ಉಳಿಯುವಂತಹ ಸಂಚಾರವನ್ನು ಆಧುನೀಕರಣಗೊಳಿಸುವ ತನ್ನ ಬದ್ಧತೆಯಲ್ಲಿ ಅದು ಮಹತ್ತರವಾದ ಹೆಜ್ಜೆ ಇರಿಸಿದೆ. ‘Re.Wi.Re – Recycle with Respect,’ (ಗೌರವದೊಡನೆ ಮರುಬಳಕೆ) ಎಂಬ ಹೆಸರಿನ ಘಟಕವನ್ನು, ಟಾಟಾ ಮೋಟರ್ಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರೀಶ್ ವಾಘಾ ಉದ್ಘಾಟಿಸಿದರು.
ಈ ಅತ್ಯಾಧುನಿಕ ಘಟಕವು, ಪರಿಸರ-ಸ್ನೇಹಿಯಾದ ಪ್ರಕ್ರಿಯೆಗಳನ್ನು ಉಪಯೋಗಿಸುತ್ತದೆ ಮತ್ತು ವಾರ್ಷಿಕವಾಗಿ ಜೀವಿತಾವಧಿಯ-ಕೊನೆಯಲ್ಲಿರುವ 18,000 ವಾಹನಗಳನ್ನು ಸುರಕ್ಷಿತವಾಗಿ ಕಳಚುವ ಸಾಮರ್ಥ್ಯ ಹೊಂದಿದೆ. ಜೋಹರ್ ಮೋಟರ್ಸ್ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಪಡಿಸಲಾಗಿರುವ RVSF, ಎಲ್ಲಾ ಬ್ರ್ಯಾಂಡ್ಗಳ ಪ್ಯಾಸೆಂಜರ್ ಮತ್ತು ವಾಣಿಜ್ಯ ವಾಹನಗಳನ್ನು ಜವಾಬ್ದಾರಿಯುತವಾಗಿ ಸ್ಕ್ರ್ಯಾಪ್ ಮಾಡುವುದರಲ್ಲಿ ನೈಪುಣ್ಯತೆ ಹೊಂದಿದೆ. ಈ ಮಹತ್ತರವಾದ ಮೈಲಿಗಲ್ಲು, ಜೈಪುರ, ಭುವನೇಶ್ವರ, ಸೂರತ್ ಹಾಗೂ ಚಂಡೀಗಢದಲ್ಲಿ ಪ್ರಾರಂಭಿಸಲಾಗಿದ್ದ ಟಾಟಾ ಮೋಟರ್ಸ್ನ ನಾಲ್ಕು ಹಿಂದಿನ RVSFಗಳ ಅನುಸರಣೆಯಲ್ಲಿದ್ದು, ದೀರ್ಘಕಾಲ ಉಳಿಯುವಂತಹ ಉಪಕ್ರಮಗಳನ್ನು ಮುಂದುವರಿಸಲು ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಈ ಸ್ಮರಣೀಯ ಕ್ಷಣದ ಬಗ್ಗೆ ಮಾತನಾಡುತ್ತಾ, ಟಾಟಾ ಮೋಟರ್ಸ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಗಿರೀಶ್ ವಾಘಾ, ” ಸಂಚಾರದ ಭವಿಷ್ಯತ್ತನ್ನು ರೂಪಿಸಲು ಆವಿಷ್ಕಾರ ಹಾಗೂ ದೀರ್ಘಸ್ಥಾಯಿತ್ವವನ್ನು ಮುನ್ನಡೆಸುವಲ್ಲಿ ಟಾಟಾ ಮೋಟರ್ಸ್ ಮುನ್ನೆಲೆಯಲ್ಲಿದೆ. ನಮ್ಮ ಐದನೇ ಸ್ಕ್ರ್ಯಾಪಿಂಗ್ ಘಟಕದ ಪ್ರಾರಂಭವು, ಹೆಚ್ಚು ದೀರ್ಘಕಾಲ ಉಳಿಯುವಂತಹ ಪದ್ಧತಿಗಳು ಹಾಗೂ ಜವಾಬ್ದಾರಿಯುತ ವಾಹನ ಮಿಲೇವಾರಿಗೆ ಸುಲಭ ಪ್ರವೇಶಾವಕಾಶ ಒದಗಿಸುವ ನಿಟ್ಟಿನಲ್ಲಿ ಒಂದು ಮಹತ್ತರವಾದ ಹೆಜ್ಜೆಯಾಗಿದೆ. ಸ್ಕ್ರ್ಯಾಪ್ನಿಂದ ಮೌಲ್ಯ ಸೃಷ್ಟಿಯು, ಒಂದು ವರ್ತುಲ ಆರ್ಥಿಕತೆಯ ನಿರ್ಮಾಣ ಮಾಡಬೇಕೆನ್ನುವ ನಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಇದು, ದೀರ್ಘಕಾಲ ಉಳಿಯುವಂತಹ ಆಟೋಮೋಟಿವ್ ಪದ್ಧತಿಗಳನ್ನು ಪ್ರೋತ್ಸಾಹಿಸುವ ಸರ್ಕಾರದ ಪ್ರಯತ್ನಗಳಿಗೂ ಕೊಡುಗೆ ಸಲ್ಲಿಸುತ್ತದೆ. ಈ ಅತ್ಯಾಧುನಿಕ ಘಟಕವು, ವಾಹನಗಳನ್ನು ಜವಾಬ್ದಾರಿಯುತವಾಗಿ ಮಿಲೇವಾರಿ ಮಾಡುವಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿ, ಎಲ್ಲರಿಗೂ ಹೆಚ್ಚು ದೀರ್ಘಕಾಲ ಉಳಿಯುವಂತಹ, ಪರಿಶುದ್ಧವಾದ ಭವಿಷ್ಯತ್ತಿಗೆ ಮಾರ್ಗ ಕಲ್ಪಿಸುತ್ತದೆ.” ಎಂದು ಹೇಳಿದರು.
Re.Wi.Re. ಅತ್ಯಾಧುನಿಕ ಘಟಕವಾಗಿದ್ದು, ಎಲ್ಲಾ ಬ್ರ್ಯಾಂಡ್ಗಳ, ಜೀವಿತಾವಧಿಯ-ಕೊನೆಯಲ್ಲಿರುವ ಪ್ಯಾಸೆಂಜರ್ ಮತ್ತು ವಾಣಿಜ್ಯ ವಾಹನಗಳನ್ನು ಮಿಲೇವಾರಿ ಮಾಡುವುದಕ್ಕಾಗಿ ಇರುವ ಉದ್ದೇಶ-ನಿರ್ಮಿತ ಘಟಕವಾಗಿದೆ. ಇದು, ಪರಿಸರ-ಸ್ನೇಹಿಯಾದ ಪದ್ಧತಿಗಳನ್ನು ಬಳಸಿಕೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಸಂಪೂರ್ಣವಾಗಿ ಡಿಜಿಟೀಕರಣಗೊಂಡಿರುವ ಈ ಘಟಕವು, ಕ್ರಮವಾಗಿ, ವಾಣಿಜ್ಯ ವಾಹನಗಳು ಹಾಗೂ ಪ್ಯಾಸೆಂಜರ್ ವಾಹನಗಳಿಗಾಗಿಯೇ ನಿಬದ್ಧವಾದ ಸೆಲ್-ಟೈಪ್ ಮತ್ತು ಲೈನ್-ಟೈಪ್ ಭಾಗಕಳಚುವಿಕೆ(ಡಿಸ್ಮ್ಯಾಂಟ್ಲಿಂಗ್)ಯೊಂದಿಗೆ ಸಜ್ಜುಗೊಂಡಿದೆ ಹಾಗೂ ಇದರ ಎಲ್ಲಾ ಕಾರ್ಯಾಚರಣೆಗಳೂ ಅಡಚಣೆರಹಿತ ಮತ್ತು ಕಾಗದರಹಿತ. ಹೆಚ್ಚುವರಿಯಾಗಿ, ಟೈರ್ ಗಳು, ಬ್ಯಾಟರಿಗಳು, ಇಂಧನ, ಆಯಿಲ್ಗಳು, ದ್ರವಗಳು ಹಾಗೂ ಅನಿಲಗಳು ಒಳಗೊಂಡಂತೆ, ವಿವಿಧ ಭಾಗಗಳ ಸುರಕ್ಷಿತ ಮಿಲೇವಾರಿಗಾಗಿ ನಿಬದ್ಧವಾದ ಸ್ಟೇಶನ್ಗಳಿವೆ. ಪ್ರತಿಯೊಂದು ವಾಹನವೂ, ಪ್ಯಾಸೆಂಜರ್ ಹಾಗೂ ವಾಣಿಜ್ಯ ವಾಹನಗಳ ಅಗತ್ಯಗಳನ್ನು ಪೂರೈಸುವುದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಂಡ ಅತಿಶಿಸ್ತಿನ ದಾಖಲೀಕರಣ ಹಾಗೂ ಮಿಲೇವಾರಿ ಪ್ರಕ್ರಿಯೆಗೆ ಒಳಪಡುತ್ತದೆ. ಈ ರೀತಿ ಮಾಡುವ ಮೂಲಕ, ಈ ಮಿಲೇವಾರಿ ಪ್ರಕ್ರಿಯೆಯು, ವಾಹನ ಸ್ಕ್ರ್ಯಾಪೇಜ್ ನೀತಿಯ ಅನುಸಾರ, ವಿವರಕ್ಕೆ ಗರಿಷ್ಟ ಗಮನವನ್ನು ಖಾತರಿಪಡಿಸಿ, ಎಲ್ಲಾ ಬಿಡಿಭಾಗಗಳ ಸುರಕ್ಷಿತ ಮಿಲೇವಾರಿಯನ್ನು ಖಾತರಿಪಡಿಸುತ್ತದೆ. ಅಂತಿಮವಾಗಿ, Re.Wi.Re. ಘಟಕವು, ಆಟೋಮೋಟಿವ್ ಉದ್ಯಮದೊಳಗೇ, ದೀರ್ಘಕಾಲ ಉಳಿಯುವಂತಹ ಪದ್ಧತಿಗಳನ್ನು ಮುನ್ನಡೆಸುವ ನಿಟ್ಟಿನಲ್ಲಿ ಒಂದು ಆಧುನಿಕ ದೃಷ್ಟಿಕೋನವನ್ನು ಪ್ರದರ್ಶಿಸುತ್ತದೆ.