ಬೆಂಗಳೂರು: ಇಂದು ಸ್ನ್ಯಾಪ್ ಇಂಕ್. ಬೆಂಗಳೂರಿನಲ್ಲಿ ತನ್ನ ಚೊಚ್ಚಲ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸ್ನ್ಯಾಪ್ ನ ಬೆಳವಣಿಗೆಯ ಕ್ಷೇತ್ರವಾಗಿರುವ ಈ ನಗರದ ಮಹತ್ವವನ್ನು ಸಾರಲಾಯಿತು ಮತ್ತು ಸ್ಥಳೀಯ ಯುವಕರಿಗೆ ವೇದಿಕೆಯ ಅನನ್ಯ ವೈಶಿಷ್ಟ್ಯವನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದಲ್ಲಿ, ಸ್ನ್ಯಾಪ್ ನಾಯಕತ್ವವು ಪ್ಲಾಟ್ಫಾರ್ಮ್ನ ಬೆಳವಣಿಗೆಯ ಹಾದಿ, ವಿಶಿಷ್ಟ ವೈಶಿಷ್ಟ್ಯಗಳು, ಆಗ್ಮೆಂಟೆಡ್ ರಿಯಾಲಿಟಿ (ಎಆರ್)ಯಲ್ಲಿನ ನಾಯಕತ್ವ ಮತ್ತು ಬ್ರಾಂಡ್ ಗಳು ವಿಶೇಷ ಮತ್ತು ವೈವಿಧ್ಯಮಯ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಹೆಚ್ಚಾಗಿ ಸ್ನ್ಯಾಪ್ಚಾಟ್ ಅನ್ನು ಆಯ್ಕೆಮಾಡಲು ಇರುವ ಬಲವಾದ ಕಾರಣಗಳನ್ನು ಚರ್ಚಿಸಲಾಯಿತು.
ಭಾಗವಹಿಸಿದವರು ಆಗ್ಮೆಂಟೆಡ್ ರಿಯಾಲಿಟಿ ಟ್ರೈ-ಆನ್ ಬೂತ್ಗಳ ಬಳಕೆಯನ್ನು ಅನುಭವ ಪಡೆದರು. ಈ ಮೂಲಕ ಭಾಗವಹಿಸಿದವರು ಈ ನವೀನ ತಂತ್ರಜ್ಞಾನವನ್ನು ನೇರವಾಗಿ ಅನುಭವಿಸುವ ಅವಕಾಶವನ್ನು ಪಡೆದರು. ಇದು ಫ್ಯಾಷನ್ ಮತ್ತು ಸೌಂದರ್ಯ ಕ್ಷೇತ್ರಗಳಲ್ಲಿನ ವಿವಿಧ ಪ್ರಯತ್ನಗಳ ಕುರಿತ ಮಾಹಿತಿ, ಅನುಭವ ಒದಗಿಸಿತು.
ಭಾರತದಲ್ಲಿ, ಸ್ನ್ಯಾಪ್ಚಾಟ್ 200 ಮಿಲಿಯನ್ ಬಳಕೆದಾರರ ಬೇಸ್1 ಅನ್ನು ಹೊಂದಿದೆ. ಇತ್ತೀಚಿನ ಯೂಗೌ ಸಮೀಕ್ಷೆಯು ಬೆಂಗಳೂರಿನಲ್ಲಿ, 85% ಸ್ನ್ಯಾಪ್ಚಾಟರ್ಗಳು ಪ್ರತಿದಿನ ಅಪ್ಲಿಕೇಶನ್ ಅನ್ನು ಬಳಸುತ್ತಾರೆ ಎಂದು ತಿಳಿಸಿದೆ. ಬೆಂಗಳೂರಿನಲ್ಲಿರುವ 78% ಭಾರತೀಯರು, ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕವನ್ನು ಸುಲಭಗೊಳಿಸುವ ಸ್ನ್ಯಾಪ್ಚಾಟ್ನ ಸಾಮರ್ಥ್ಯವನ್ನು ಮೆಚ್ಚಿದ್ದಾರೆ ಎಂದು ಅಧ್ಯಯನವು ತಿಳಿಸಿದೆ. ಜೊತೆಗೆ 66% ಜನರು ಲೈಕ್ಸ್ ಮತ್ತು ಶೇರ್ ಗಳಿಗಾಗಿ ವಿಷಯವನ್ನು ಪೋಸ್ಟ್ ಮಾಡುವ ಒತ್ತಡವನ್ನು ನಿವಾರಿಸುವ ಅದರ ಗುಣವನ್ನು ಶ್ಲಾಘಿಸಿದ್ದಾರೆ ಮತ್ತು ರಾಷ್ಟ್ರಾದ್ಯಂತ2 ಇರುವ ಯುವಜನತೆಯ ಮಧ್ಯೆ ನಿಜವಾದ ಸಂವಹನ ಸಾಧ್ಯವಾಗಿಸುವ ಈ ವೇದಿಕೆಯನ್ನು ಮೆಚ್ಚಿಕೊಂಡಿದ್ದಾರೆ.
ಯುವ ಜನತೆಗೆ ಅವಕಾಶ ಮತ್ತು ಭಾರತದಲ್ಲಿ ಬೆಳವಣಿಗೆ ಅವಕಾಶ ಒದಗಿಸುವ ಸ್ನ್ಯಾಪ್ಚಾಟ್ನ ದೃಷ್ಟಿಯ ಕುರಿತು ಪ್ರತಿಕ್ರಿಯಿಸಿದ ಸ್ನ್ಯಾಪ್ ಇಂಕ್.ನ ಭಾರತದ ಮ್ಯಾನೇಜಿಂಗ್ ಡೈರೆಕ್ಟರ್ ಪುಲ್ಕಿತ್ ತ್ರಿವೇದಿ, “ವಿಶ್ವದಾದ್ಯಂತ ಇರುವ ಜೆನ್ ಝಡ್ ನ 20% ಜೆನ್ ಝಡ್ ಭಾರತದಲ್ಲಿ ಇದ್ದಾರೆ. ಬ್ರ್ಯಾಂಡ್ಗಳು ಮತ್ತು ವ್ಯವಹಾರಗಳು ಈ ಪ್ರಭಾವಶಾಲಿ ಸಮೂಹದ ಆದ್ಯತೆ ಮತ್ತು ತಾಂತ್ರಿಕ ಆಗುಹೋಗುಗಳ ಮೂಲಕ ಅವರನ್ನು ತಲುಪಲು ಅಪೂರ್ವ ಅವಕಾಶವನ್ನು ಸ್ನ್ಯಾಪ್ ಒದಗಿಸುತ್ತಿದೆ. ಸ್ನ್ಯಾಪ್ಚಾಟ್ ಈ ಯುವಜನತೆ ಸೃಜನಾತ್ಮಕ ರೀತಿಯಲ್ಲಿ ತೊಡಗಿಸಿಕೊಳ್ಳಲು ಒಂದು ಅನನ್ಯ ವೇದಿಕೆಯನ್ನು ನೀಡುತ್ತದೆ. ಇತರ ಪ್ಲಾಟ್ಫಾರ್ಮ್ಗಳಲ್ಲಿ ಸಿಗದ ಡೈನಾಮಿಕ್ ಬಳಕೆದಾರರ ವೈಬ್ರೆಂಟ್ ಹಬ್ ಆಗಿ ಇದು ಮೂಡಿ ಬಂದಿದೆ. ಯಂಗ್ ಇಂಡಿಯಾ ಜೊತೆಗಿನ ನಮ್ಮ ಸಂಪರ್ಕವನ್ನು ಗಾಢವಾಗಿಸುವುದು ನಮ್ಮ ಬದ್ಧತೆಯಾಗಿದೆ ಮತ್ತು ಅಧಿಕೃತ ಸ್ವ-ಅಭಿವ್ಯಕ್ತಿ, ನೈಜ ಸಂಪರ್ಕಗಳು ಮತ್ತು ನವೀನ ಬ್ರ್ಯಾಂಡ್ ಸಂವಹನಗಳಿಗೆ ಸ್ನ್ಯಾಪ್ಚಾಟ್ ಅನ್ನು ಅವರ ಆಯ್ಕೆಯ ಪ್ಲಾಟ್ಫಾರ್ಮ್ ಆಗಿ ಮಾಡುತ್ತದೆ” ಎಂದು ಹೇಳಿದರು.
ಮೂಲತಃ ಸ್ನ್ಯಾಪ್ಚಾಟ್ ಕ್ಯಾಮೆರಾ-ಫರ್ಸ್ಟ್ ವಿಧಾನದ ಮೂಲಕ ಅಪೂರ್ವ ದೃಶ್ಯ ಅನುಭವವನ್ನು ಒದಗಿಸುತ್ತದೆ ಹಾಗೂ ಸೃಜನಶೀಲತೆ ಮತ್ತು ಸಂಪರ್ಕ ಸಾಧಿಸುವ ಪ್ರೇರೇಪಣೆ ನೀಡುತ್ತದೆ. ಈ ವಿಶುವಲ್ ವೇದಿಕೆಯು ಯುವ ಬಳಕೆದಾರರಲ್ಲಿ ಹೆಚ್ಚಿನ ಬಳಕೆ ಹೊಂದಿದೆ, ಜೊತೆಗೆ ವರ್ಧಿತ ರಿಯಾಲಿಟಿ (ಎಆರ್) ಕ್ಷೇತ್ರದಲ್ಲಿನ ಅದರ ಪ್ರಾಬಲ್ಯವನ್ನು ತೋರಿಸಿದೆ. ಸಮೀಕ್ಷೆಯು ಬೆಂಗಳೂರಿನಲ್ಲಿ 82% ಮಂದಿ ಅತ್ಯುತ್ತಮ ಲೆನ್ಸ್ ಗಳನ್ನು ಒದಗಿಸುವ ಸ್ನ್ಯಾಪ್ಚಾಟ್ ನ ಶ್ರೇಷ್ಠತೆಯನ್ನು ಗುರುತಿಸಿದ್ದಾರೆ ಎಂದು ತಿಳಿಸಿದೆ. 80% ಜನರು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳಲು ಅಥವಾ ಹಬ್ಬಗಳನ್ನು ಆಚರಿಸಲು ಸ್ನ್ಯಾಪ್ಚಾಟ್ ಲೆನ್ಸ್ ಗಳನ್ನು ಬಳಸುತ್ತಾರೆ. ಇದು ಭಾರತದ ಸಿಲಿಕಾನ್ ವ್ಯಾಲಿ2ಯಲ್ಲಿನ ಟೆಕ್ ಸ್ಯಾವಿ ಬಳಕೆದಾರರಲ್ಲಿರುವ ಈ ಅಪ್ಲಿಕೇಶನ್ನ ಜನಪ್ರಿಯತೆಯನ್ನು ಸೂಚಿಸುತ್ತದೆ. ಸ್ನ್ಯಾಪ್ಚಾಟ್ ವಿಶುವಲ್ ಕಾಮರ್ಸ್ ನಲ್ಲಿ ಕ್ರಾಂತಿಯನ್ನುಂಟು ಮಾಡಲು ಸಿದ್ಧವಾಗಿದೆ. ಬ್ರ್ಯಾಂಡ್ಗಳಿಗೆ ತಮ್ಮ ಉತ್ಪನ್ನಕ್ಕಾಗಿ ಬ್ರ್ಯಾಂಡ್ ಆದ್ಯತೆ ಒದಗಿಸಲು ಅಥವಾ ಖರೀದಿಯನ್ನು ಹೆಚ್ಚಿಸಲು ಪ್ರಚಾರ ಮಾಡುವ ಕ್ರಿಯಾತ್ಮಕ ವೇದಿಕೆಯನ್ನು ನೀಡುತ್ತದೆ.
ಸ್ನ್ಯಾಪ್ಚಾಟ್ ಹೊಸ ಗ್ರಾಹಕರನ್ನು ಪಡೆದುಕೊಳ್ಳುವುದರಿಂದ ಹಿಡಿದು ಪುನರಾವರ್ತಿತ ಖರೀದಿಗಳನ್ನು ಸಾಧ್ಯವಾಗಿಸುವವರೆಗೆ ಪ್ರತಿ ಜಾಹೀರಾತುದಾರರ ಗುರಿಯನ್ನು ಪೂರೈಸುವ ಸಮಗ್ರ ಜಾಹೀರಾತು ವೇದಿಕೆಯಾಗಿ ರೂಪುಗೊಂಡಿದೆ. ಅತ್ಯುತ್ತಮವಾದ ಆರ್ಓಎಎಸ್ ಗಾಗಿ ವಿನ್ಯಾಸಗೊಳಿಸಲಾದ ನೇರ-ಪ್ರತಿಕ್ರಿಯೆ ಕೊಡುಗೆಗಳ ಹೊರತಾಗಿ, ಪ್ಲಾಟ್ಫಾರ್ಮ್ನ ಎಆರ್ ಸಾಮರ್ಥ್ಯಗಳು ಅಪೂರ್ವವಾಗಿವೆ, ವಿಶೇಷವಾಗಿ ಆನ್ಲೈನ್ ಶಾಪಿಂಗ್ ಅನುಭವಗಳನ್ನು ಬದಲಾಯಿಸುವ ಅದರ ಸಾಮರ್ಥ್ಯಗಳನ್ನು ಗಮನಿಸುವ ಬೆಂಗಳೂರಿನ ಸ್ನ್ಯಾಪ್ಚಾಟರ್ಗಳಿಗೆ ಇಷ್ಟವಾಗುತ್ತದೆ. ಯೂಗೌ ಸಮೀಕ್ಷೆಯ ಪ್ರಕಾರ, ಬೆಂಗಳೂರಿನ 81% ಸ್ನ್ಯಾಪ್ಚಾಟರ್ಗಳು ಆನ್ಲೈನ್ ಖರೀದಿ ಮಾಡುವ ಮೊದಲು ಸ್ನ್ಯಾಪ್ಚಾಟ್ನಲ್ಲಿ ಬಟ್ಟೆಗಳನ್ನು ಡಿಜಿಟಲ್ ಆಗಿ ಪ್ರಯತ್ನಿಸುವುದರಿಂದ ರಿಟರ್ನ್ ಗಳನ್ನು2 ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ನಂಬುತ್ತಾರೆ ಎಂದು ತಿಳಿಸಿದೆ. ಆದರೂ, ಎಆರ್ ಎಂಬುದು ನಮ್ಮ ವಿಶಿಷ್ಟ ಟೂಲ್ಕಿಟ್ನ ಒಂದು ಅಂಶವಾಗಿದ್ದು, ಅದು ವೀಡಿಯೊ ಜಾಹೀರಾತುಗಳು ಮತ್ತು ಸುಧಾರಿತ ಮಾಪನ ಪರಿಕರಗಳನ್ನು ಒಳಗೊಂಡಿರುತ್ತದೆ. ಸ್ನ್ಯಾಪ್ಚಾಟ್ ಕೇವಲ ಎಆರ್ ವೇದಿಕೆಯಾಗಿ ಮಾತ್ರವಲ್ಲದೆ ಆಧುನಿಕ ಜಾಹೀರಾತು ಸವಾಲುಗಳಿಗೆ ಸಮಗ್ರ ಪರಿಹಾರವಾಗಿ ರೂಪುಗೊಂಡಿದೆ.
ಬಳಕೆದಾರರ ಸುರಕ್ಷತೆ ಕಡೆಗೆನಿ ಬದ್ಧತೆಯನ್ನು ಸ್ನ್ಯಾಪ್ಚಾಟ್, ಅದರ ಸುರಕ್ಷತೆ-ಪ್ರಧಾನ-ವಿನ್ಯಾಸದ ಮೂಲಕ ಪ್ರದರ್ಶಿಸುತ್ತದೆ. ಆ ಮೂಲಕ ಬೆಂಗಳೂರಿನ ಸ್ನ್ಯಾಪ್ಚಾಟರ್ ಗಳ ಭಾವನೆಗಳಿಗೆ ಗೌರವ ಸಲ್ಲಿಸಿದೆ. ಯೂಗೌ ಸಮೀಕ್ಷೆಯ ಪ್ರಕಾರ, ಬೆಂಗಳೂರಿನ ಮೂರನೇ ಎರಡರಷ್ಟು ಸ್ನ್ಯಾಪ್ಚಾಟರ್ಗಳು ಆಪ್2ನಲ್ಲಿ ಸ್ಟೋರಿ ಅಥವಾ ಚಿತ್ರಗಳನ್ನು ಹಂಚಿಕೊಳ್ಳುವಾಗ ಸುರಕ್ಷತಾ ಭಾವವನ್ನು ಅನುಭವಿಸುತ್ತಿದ್ದಾರೆ ಎಂಬುದನ್ನು ದೃಢಪಡಿಸಿದ್ದಾರೆ.
ಮೊದಲಿನಿಂದಲೂ, ಸ್ನ್ಯಾಪ್ಚಾಟ್ ಅನ್ನು ಸಾಮಾಜಿಕ ಮಾಧ್ಯಮಕ್ಕೆ ಪರ್ಯಾಯವಾಗಿ ರೂಪಿಸಲಾಗಿದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಅತ್ಯಂತ ಉತ್ತಮ ರೀತಿಯಲ್ಲಿ ಸಂವಹನ ನಡೆಸಲು ವೇದಿಕೆಯಾಗಿದೆ ಮತ್ತು ಅದರಿಂದಾಗಿಯೇ ಯುವಜನತೆಯ ವೇದಿಕೆಯಾಗಿ ಜನಪ್ರಿಯವಾಗಿದೆ.