ರಾಷ್ಟ್ರ: ಕೋಕಾ-ಕೋಲಾ ಕಂಪನಿ ಅಧೀನದ ಸ್ವದೇಶಿ ಪಾನೀಯವಾಗಿರುವ ಥಮ್ಸ್ ಅಪ್ ಇದೀಗ ಕನ್ನಡದ ಪ್ರತಿಭಾವಂತ ನಟ ಮತ್ತು ಕನ್ನಡ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಅವರನ್ನು ಒಳಗೊಂಡ “ಸಾಫ್ಟ್ ಕ್ಯಾ ಜಾನೆ ತೂಫಾನ್ ಕಾ ಸ್ವಾದ್”(ಸಾಫ್ಟ್ ಗೆ ಏನು ಗೊತ್ತು ತೂಫಾನ್ ನ ರುಚಿ) ಎಂಬ ತನ್ನ ಆಕ್ಷನ್ ಪ್ಯಾಕ್ಡ್ ತೂಫಾನಿ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನವು ಥಮ್ಸ್ ಅಪ್ನ ಸಾಹಸಮಯ ಮನೋಭಾವ ಮತ್ತು ಅತ್ಯುತ್ತಮ ರುಚಿಯನ್ನು ಪ್ರೇಕ್ಷಕರಿಗೆ ದಾಟಿಸಲಿದ್ದು, ಗ್ರಾಹಕರಲ್ಲಿ ತೂಫಾನ್ ಆಸಕ್ತಿಯನ್ನು ಬೆಳೆಸುತ್ತದೆ ಮತ್ತು ಅದಮ್ಯ ಚೈತನ್ಯದೊಂದಿಗೆ ತಮ್ಮ ಅಂತಃ ಶಕ್ತಿಯನ್ನು ಬಳಸಿಕೊಳ್ಳಲು ಪ್ರೇರೇಪಿಸುತ್ತದೆ.
ಥಮ್ಸ್ ಅಪ್ ನಿಜವಾಗಿಯೂ ಭಾರತದ ಪ್ರಬಲ ಮತ್ತು ಅತ್ಯಂತ ಪ್ರೀತಿಪಾತ್ರ ಪಾನೀಯಗಳಲ್ಲಿ ಒಂದಾಗಿ ಕಾಣಿಸಿಕೊಳ್ಳಲು ಕಾಲದ ಪರೀಕ್ಷೆ ಎದುರಿಸಿ ದಾಟಿ ಬಂದಿದೆ. ಈ ಹೊಸ ಅಭಿಯಾನವು ಥಮ್ಸ್ ಅಪ್ ನ ಥೀಮ್ ಆದ “ಸಾಫ್ಟ್ ನಹಿನ್, ತೂಫಾನ್”(ಸಾಫ್ಟ್ ಅಲ್ಲ, ತೂಫಾನ್) ಎಂಬುದಕ್ಕೆ ಅನ್ವರ್ಥವಾಗಿದೆ. ಜೊತೆಗೆ “ಸಾಫ್ಟ್ ಕ್ಯಾ ಜಾನೆ ತೂಫಾನ್ ಕಾ ಸ್ವಾದ್,”(ಸಾಫ್ಟ್ ಗೆ ಏನು ಗೊತ್ತು ತೂಫಾನ್ ನ ರುಚಿ) ಎಂಬ ಹೊಸ ಅಡಿಬರಹವನ್ನು ಪರಿಚಯಿಸಿದೆ. ಈ ಟ್ಯಾಗ್ ಲೈನ್ ಸವಾಲುಗಳ ಥ್ರಿಲ್ ಅನ್ನು ಧೈರ್ಯದಿಂದ ಎದುರಿಸುವ ಬ್ರಾಂಡ್ ನ ಪ್ರಮುಖ ಮೌಲ್ಯದ ಜೊತೆಗೆ ಅತ್ಯುತ್ತಮ ರುಚಿಯನ್ನು ಪ್ರತಿಪಾದಿಸಲಿದೆ.
ಡಬ್ಲ್ಯೂಪಿಪಿಯ ಓಪನ್ಎಕ್ಸ್ ನ ಒಂದು ಭಾಗವಾದ ಒಗಿಲ್ವಿ ಇಂಡಿಯಾದಿಂದ ಪರಿಕಲ್ಪಿಸಲ್ಪಟ್ಟಿರುವ ಈ ಟಿವಿಸಿಯನ್ನು ವೀಕ್ಷಕರು ಕ್ರಿಯಾಶೀಲತೆಯಲ್ಲಿ ತಲ್ಲೀನರಾಗಲು ಪ್ರೇರೇಪಿಸುವಂತೆ ರಚಿಸಲಾಗಿದೆ. ಬಾಟಲ್ ಅನ್ನು ಮೊದಲು ಹಿಡಿಯುವುದರಿಂದ ಆರಂಭಿಸಿ ಥಮ್ಸ್ ಅಪ್ನ ಕೊನೆಯ ಹನಿಯವರೆಗೆ ವೀಕ್ಷಕರನ್ನು ಬ್ರ್ಯಾಂಡ್ನ ಯುವ ಉತ್ಸಾಹ ಮತ್ತು ವೇಗದ, ಸಾಹಸಮಯ ಸಾರವನ್ನು ತಿಳಿಸುವಂತೆ ರೂಪಿಸಲಾಗಿದೆ.
ಈ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಕೋಕಾ-ಕೋಲಾ ಇಂಡಿಯಾ ಮತ್ತು ಸೌತ್-ವೆಸ್ಟ್ ಏಷ್ಯಾದ ಸ್ಪಾರ್ಕ್ಲಿಂಗ್ ಫ್ಲೇವರ್ಸ್ನ ಹಿರಿಯ ವಿಭಾಗದ ನಿರ್ದೇಶಕ ಟಿಶ್ ಕಾಂಡೆನೊ, “ಥಮ್ಸ್ ಅಪ್ ಅಭಿಯಾನದಲ್ಲಿ ಕಿಚ್ಚ ಸುದೀಪ್ ಅವರನ್ನು ಹೊಂದಲು ನಾವು ಸಂಪೂರ್ಣವಾಗಿ ಸಂತೋಷ ಪಡುತ್ತೇವೆ. ಈ ಅಭಿಯಾನವು ನಮ್ಮ ಉತ್ಪನ್ನದ ತೂಫಾನಿ ಶಕ್ತಿಯನ್ನು ಸೂಚಿಸುತ್ತದೆ. ಉತ್ಪನ್ನದ ಅಪ್ರತಿಮ ತೂಫಾನಿ ಸ್ಪಿರಿಟ್, ಕಿಚ್ಚನ ಅಪೂರ್ವ ಶಕ್ತಿಯಿಂದ ಹೆಚ್ಚಳವಾಗಿದೆ. ಈ ರೋಮಾಂಚಕ ಅಭಿಯಾನವು ಥಮ್ಸ್ ಅಪ್ನ ಸಾಹಸಮಯ ಮನೋಭಾವವನ್ನು ದಾಟಿಸುತ್ತದೆ ಮತ್ತು ದೃಢವಾದ ರುಚಿಯ ಸಂಕೇತವಾಗಿದೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ಥಮ್ಸ್ ಅಪ್ ಕೇವಲ ಪಾನೀಯವಲ್ಲ; ಇದು ಲಕ್ಷಾಂತರ ಜನರ ಜೀವನದಲ್ಲಿ ಅನುರಣಿಸುವ ಅದಮ್ಯ ಚೇತನದ ಸಂಕೇತ” ಎಂದು ಕಿಚ್ಚ ಸುದೀಪ್ ಹೇಳಿದರು. “ಬ್ರ್ಯಾಂಡ್ನ ಶಕ್ತಿ ಮತ್ತು ಪರಂಪರೆಯನ್ನು ಸಂಭ್ರಮಿಸುವ ಈ ‘ತೂಫಾನಿ’ ಪ್ರಯಾಣದ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ. ‘ಸಾಫ್ಟ್ ನಹಿನ್, ತೂಫಾನ್’ ಅಭಿಯಾನವು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಸಾಹಸಿ ವ್ಯಕ್ತಿಗಳಿಗೆ ಸಲ್ಲಿಸುವ ಗೌರವವಾಗಿದೆ” ಎಂದು ಹೇಳಿದರು.
ತಮ್ಮ ಆಕರ್ಷಕ ಸ್ರ್ಕೀನ್ ಪ್ರೆಸೆನ್ಸ್ ಮತ್ತು ಅತ್ಯಪೂರ್ವ ನಟನೆಯಿಂದಾಗಿ ಜನಪ್ರಿಯತೆಗಳಿಸಿರುವ ಕಿಚ್ಚ ಸುದೀಪ್ ಅವರು ಥಮ್ಸ್ ಅಪ್ನ ಇತ್ತೀಚಿನ ‘ಸಾಫ್ಟ್ ನಹಿನ್, ತೂಫಾನ್’ ಅಭಿಯಾನದ ಸಾರವನ್ನು ಪ್ರಸ್ತುತ ಪಡಿಸಿದ್ದಾರೆ. “ಥಮ್ಸ್ ಅಪ್ ಜೊತೆಗೆ ಕೈಜೋಡಿಸುವುದು ಎಂದರೆ ಕೇವಲ ಅಭಿಯಾನ ಮಾತ್ರವಲ್ಲ; ಇದು ಗಡಿಗಳನ್ನು ವಿಸ್ತರಿಸುವ ಮತ್ತು ಪೂರ್ಣವಾಗಿ ಬದುಕುವ ನನ್ನ ವೈಯಕ್ತಿಕ ನಿಲುವನ್ನು ಪ್ರತಿಬಿಂಬಿಸುವ ಪಾಲುದಾರಿಕೆಯಾಗಿದೆ” ಎಂದೂ ಸುದೀಪ್ ಹೇಳಿದರು. “ಜೊತೆಯಾಗಿ, ನಾವು ಒಂದು ಪೀಳಿಗೆಯನ್ನು ಸಾಮಾನ್ಯಕ್ಕಿಂತ ಮೇಲೇರುವ ಸಲುವಾಗಿ ಅವರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಥಂಡರ್ ಅನ್ನು ಸವಿಯಲು ಪ್ರೇರೇಪಿಸುತಿದ್ದೇವೆ” ಎಂದು ಅವರು ಹೇಳಿದರು.
ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಒಗಿಲ್ವಿ ಇಂಡಿಯಾದ ಚೀಫ್ ಕ್ರಿಯೇಟಿವ್ ಆಫೀಸರ್ ಸುಕೇಶ್ ನಾಯಕ್, “ಬ್ರ್ಯಾಂಡ್ನ ಮೂಲ ಶಕ್ತಿಯನ್ನು ಉಳಿಸಿಕೊಂಡು ಥಮ್ಸ್ ಅಪ್ನ ದೃಢವಾದ ಮತ್ತು ಅತ್ಯಪೂರ್ವ ರುಚಿಯನ್ನು ದಾಟಿಸುವುದು ಈ ವರ್ಷದ ಕಾರ್ಯವಾಗಿದೆ. ಆದ್ದರಿಂದ, ಸಾಫ್ಟ್ ಕ್ಯಾ ಜಾನೆ ತೂಫಾನ್ ಕಾ ಸ್ವಾದ್ಗೆ ಜೀವ ತುಂಬಲಿರುವ ಕಿಚ್ಚಸುದೀಪ್ ಅವರನ್ನು ನೀವು ಹೊಸ ತೂಫಾನಿ ಅವತಾರದಲ್ಲಿ ನೋಡುತ್ತೀರಿ. ನಾವು ಅವರ ಡೈನಾಮಿಕ್ ಆದಂತಹ ಮತ್ತು ಸಾಹಸಮಯ ವ್ಯಕ್ತಿತ್ವದ ನೆರಳಲ್ಲಿಯೇ ಈ ಅಭಿಯಾನವನ್ನು ನಿರೂಪಿಸಿದ್ದೇವೆ. ಕಿಚ್ಚ ಸುದೀಪ್ ಅವರು ಅಪೂರ್ವವಾದ ಐಡಿಯಾಗಳನ್ನು ಇಷ್ಟಪಡುವವರಾಗಿದ್ದರಿಂದ, ಥಮ್ಸ್ ಅಪ್ ರುಚಿಯಲ್ಲಿ ಸಾಫ್ಟ್ ಅಲ್ಲ ಎಂಬ ಸಂದೇಶವನ್ನು ಅವರ ಮೂಲಕ ತಲುಪಿಸಿದ್ದೇವೆ” ಎಂದು ಹೇಳಿದರು.
ಥಮ್ಸ್ ಅಪ್ ಗ್ರಾಹಕರಿಗೆ ರಿಫ್ರೆಶ್ ಆಗುವಂತಹ ಮತ್ತು ಅನನ್ಯ ಅನುಭವಗಳನ್ನು ನೀಡುವ ತನ್ನ ಬದ್ಧತೆಯಲ್ಲಿ ಅಚಲವಾಗಿದೆ. ವ್ಯಕ್ತಿಗಳು ತಮ್ಮ ಒಳಗಿನ ಅಂತಃಶಕ್ತಿಯನ್ನು ಅಳವಡಿಸಿಕೊಂಡು ದಾರಿಯಲ್ಲಿ ಎದುರಾಗುವ ಪ್ರತಿಯೊಂದು ಅಡೆತಡೆಗಳನ್ನು ಎದುರಿಸಿ ಪ್ರಯಾಣವನ್ನು ಮುಂದುವರಿಸಿ ಯಶಸ್ಸು ಮತ್ತು ವಿಜಯ ಪಡೆಯಲು ಪ್ರೇರೇಪಿಸುವ ತನ್ನ ಧ್ಯೇಯ ಪಾಲನೆಯಲ್ಲಿ ಬ್ರಾಂಡ್ ಬದ್ಧವಾಗಿದೆ.