ಬೆಂಗಳೂರು: ಕೋಟಕ್ ಮಹಿಂದ್ರ ಬ್ಯಾಂಕ್ (“KMBL” / “Kotak”) ರಾಷ್ಟ್ರವ್ಯಾಪಿಯಾಗಿ, ಟ್ರಕ್ ಚಾಲಕರ ದೈಹಿಕ ಸ್ವಾಸ್ಥ್ಯಕ್ಕೆ ಆದ್ಯತೆ ನೀಡಲು ಬದ್ಧವಾದ ಕೋಟಕ್ ಕರ್ಮ ಉಪಕ್ರಮವಾದ “ಸೆಹತ್ ಕಾ ಸಫರ್”ನ ಎರಡನೇ ಆವೃತ್ತಿಯನ್ನು ಅನಾವರಣಗೊಳಿಸಿದೆ.
ಈ ಉಪಕ್ರಮದಡಿ ಕೋಟಕ್, ಈ ಮುಖ್ಯವಾದ ಕಾರ್ಯಪಡೆಗಾಗಿಯೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿಕೊಡುತ್ತಿದೆ. ಈ ಶಿಬಿರಗಳು, ಉಚಿತವಾದ ವೈದ್ಯಕೀಯ ಸಮಾಲೋಚನೆ ಮತ್ತು ವಿವಿಧ ಶ್ರೇಣಿಯ ಪರೀಕ್ಷೆಗಳನ್ನು ಒದಗಿಸುತ್ತಿದ್ದು, “ಸೆಹತ್ ಕಾ ಸಫರ್” ಮೂಲಕ ರಾಷ್ಟ್ರದಾದ್ಯಂತ ಸುಮಾರು 3,000 ಟ್ರಕ್ ಚಾಲಕರ ಆರೋಗ್ಯ ಹಾಗೂ ಸ್ವಾಸ್ಥ್ಯ ಅಗತ್ಯಗಳನ್ನು ಪೂರೈಸಲಿದೆ. ಕಣ್ಣಿನ ಪರೀಕ್ಷೆಗಳು, ಭಂಗಿ ಮೌಲ್ಯಮಾಪನಕ್ಕಾಗಿ ಫಿಸಿಯೋಥೆರಪಿ/ಆರ್ತೋಪೀಡಿಕ್ ತಜ್ಞರ ಮಾಪನ, ಬಾಯಿಯ ಕ್ಯಾನ್ಸರ್ನ ಆರಂಭಿಕ ಸ್ಕ್ರೀನಿಂಗ್ಗಾಗಿ ದಂತ ಪರೀಕ್ಷೆಗಳು ಮತ್ತು ರಕ್ತದೊತ್ತಡ, ರಕ್ತದ ಸಕ್ಕರೆ ಮಟ್ಟ ಒಳಗೊಂಡ ಸಂಪೂರ್ಣ ಆರೋಗ್ಯ ತಪಾಸಣೆ ಮುಂತಾದ ಸೇವೆಗಳನ್ನು ಒದಗಿಸಲಾಗುತ್ತದೆ. ಯಾವುದೇ ವೆಚ್ಚವಿಲ್ಲದೆ ಔಷಧಗಳನ್ನು ಒದಗಿಸುವುದರ ಜೊತೆಗೆ ಕೋಟಕ್, ಚಾಲಕರ ಸ್ವಾಸ್ಥ್ಯವನ್ನು ವರ್ಧಿಸುವ ಗುರಿ ಹೊಂದಿರುವ ಸರ್ಕಾರೀ ಕ್ಷೇಮಾಭಿವೃದ್ಧಿ ಯೋಜನೆಗಳ ಕುರಿತು ಜಾಗೃತಿ ಅಧಿವೇಶನಗಳನ್ನೂ ನಡೆಸಲಿದೆ.
ಕೋಟಕ್ ಮಹಿಮ್ದ್ರ ಬ್ಯಾಂಕ್ನ ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯ ವಿಭಾಗದ ಅಧ್ಯಕ್ಷ ಅಮಿತ್ ಮೋಹನ್, “ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ, ಅನೇಕ ವೇಳೆ ಗುರುತಿಸಲ್ಪಡದ ಟ್ರಕ್ ಚಾಲಕರು, ದೇಶಾದ್ಯಂತ ಸಾಮಾನುಗಳನ್ನು ಅವಿಶ್ರಾಂತವಾಗಿ ಸಾಗಿಸುತ್ತಿರುತ್ತಾರೆ. ದುರಾದೃಷ್ಟವಶಾತ್, ಅವರ ಕಠಿಣ ಶೆಡ್ಯೂಲ್ಗಳು, ಅನೇಕ ವೇಳೆ ಅವರು ತಮ್ಮ ಸ್ವಂತ ಆರೋಗ್ಯಕ್ಕೆ ಆದ್ಯತೆ ನೀಡುವುದಕ್ಕೆ ಅತಿಕಡಿಮೆ ಸಮಯ ನೀಡುತ್ತವೆ. ನಮ್ಮ ಆರೋಗ್ಯ ತಪಾಸಣಾ ಶಿಬಿರಗಳು, ಈ ಚಾಲಕರಿಗೆ ಆರೋಗ್ಯಕರ ಜೀವನಶೈಲಿಯನ್ನು ಪ್ರೋತ್ಸಾಹಿಸಿ, ಅವರಿಗೆ ಅತ್ಯಗತ್ಯವಾದ ಮಾರ್ಗದರ್ಶನವನ್ನು ಒದಗಿಸುವ ಗುರಿ ಹೊಂದಿವೆ. ಹಿಂದಿನ ಶಿಬಿರಗಳ ಯಶಸ್ಸಿನ ಅನುಸರಣೆಯಲ್ಲಿ, ಈ “ಸೆಹತ್ ಕಾ ಸಫರ್’ ಇನ್ನೂ ಹೆಚ್ಚಿನ ಜೀವಗಳನ್ನು ತಲುಪಲಿದೆ ಎಂಬ ವಿಶ್ವಾಸ ನಮಗಿದೆ.”ಎಂದು ಹೇಳಿದರು.
ಟ್ರಕ್ ಚಾಲಕರು ಪದೇ ಪದೇ ಹೋಗುವಂತಹ ಸಾರಿಗೆ ಕೇಂದ್ರಗಳಲ್ಲಿ ಸುಮಾರು 30 ಆರೋಗ್ಯತಪಾಸಣಾ ಶಿಬಿರಗಲನ್ನು ಆಯೋಜಿಸಲಾಗುತ್ತದೆ. ಪ್ರತಿಯೊಂದು ಶಿಬಿರದಲ್ಲೂ Doctors4You ದಿಂದ ವೈದ್ಯರು, ಮತ್ತು ದಾದಿಯರ ಸಿಬ್ಬಂದಿಯನ್ನು ಒಳಗೊಂಡ ಆರು ಸದಸ್ಯರು ಇರುತ್ತಾರೆ. ಈ ಉಪಕ್ರಮವು, ನಾಶಿಕ್, ಮೊರಾದಾಬಾದ್, ಕಾನ್ಪುರ, ರೋಹ್ತಕ್, ಫರೀದಾಬಾದ್, ಬಿಕನೇರ್, ಜೈಪುರ, ಜೋಧ್ಪುರ, ಭಠಿಂಡ, ಜಲಂಧರ್, ಲೂಧಿಯಾನ, ಚಂಡೀಗಢ, ವೆಲ್ಲೂರು, ಸಂಕರಿ, ಕ್ಯಾಲಿಕಟ್, ಹೈದರಾಬಾದ್-ಆಟೋನಗರ್, ಹುಬ್ಬಳ್ಳಿ, ಜೋರ್ಹಟ್, ಧನ್ಬಾದ್, ಭುವನೇಶ್ವರ, ಪಾಟ್ನ, ಅಔರಂಗಾಬಾದ್, ನಾಶಿಕ್, ರಾಯ್ಪುರ, ಇಂದೋರ್, ಗ್ವಾಲಿಯರ್ ಹಾಗೂ ಸುರೇಂದ್ರನಗರ್-ಹಲವಾಡ್ ಒಳಗೊಂಡಂತೆ, 30 ನಗರಗಳಿಗೆ ತನ್ನ ತಲುಪುವಿಕೆಯನ್ನು ವಿಸ್ತರಿಸಿಕೊಳ್ಳಲು ಸಜ್ಜಾಗಿದೆ.
‘ಸೆಹತ್ ಕಾ ಸಫರ್’ 2023ರಲ್ಲಿ ಪ್ರಾರಂಭವಾಯಿತು, ತನ್ನ 1ನೆ ಆವೃತ್ತಿಯಲ್ಲಿ ಕೋಟಕ್, 30 ’ಸೆಹತ್ ಕಾ ಸಫರ್’ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದು, ರಾಷ್ಟ್ರವ್ಯಾಪಿಯಾಗಿ, ಸರಿಸುಮಾರು 3,000 ಟ್ರಕ್ ಚಾಲಕರು ಇದರ ಪ್ರಯೋಜನ ಪಡೆದುಕೊಂಡಿದ್ದರು.
ಕೋಟಕ್ ಕರ್ಮ, ಕೋಟಕ್ ಮಹಿಂದ್ರ ಗ್ರೂಪ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ (CSR) ಗುರುತಾಗಿದೆ.