ಮಂಗಳೂರು: ಭಿನ್ನ ಸಾಮಾರ್ಥ್ಯ ದ ಮಕ್ಕಳ ಸೇವೆ ದೇವರ ಸೇವೆ. ಅವರ ಸಾಮಾರ್ಥ್ಯವೇ ವಿಭಿನ್ನವಾಗಿದೆ. ಸಾನಿಧ್ಯ ಸಂಸ್ಥೆ ಈ ಮಕ್ಕಳನ್ನು ಅಪೂರ್ವ ವಾಗಿ ರೂಪಿಸಿದೆ. ಭಿನ್ನ ಸಾಮಾರ್ಥ್ಯದ ಮಕ್ಕಳ ಮುಂದೆ ನಿಂತಾಗ ದೈವ ಸನ್ನಿಧಿಗೆ ಬಂದ ಅನುಭವವಾಗಿದೆ ಎಂದು ಸಮಾಜ ಸೇವಕಿ ರೂಪಕಲಾ ಆಳ್ವ ಹೇಳಿದರು.
ಸಾನಿದ್ಯ ಸಂಸ್ಥೆಯ ವತಿಯಿಂದಶನಿವಾರ ಕದ್ರಿ ಪಾರ್ಕ್ ನಲ್ಲಿ ನಡೆದ ವಿಷನ್ 2024 ಕರಕುಶಲ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾನಿಧ್ಯದಲ್ಲಿ ಪಳಗಿದ ಭಿನ್ನ ಸಾಮಾರ್ಥ್ಯದ ಮಕ್ಕಳ ಕ್ರೀಯಾಶೀಲತೆ ಬೆರಗು ನೀಡಿದೆ. ಅವರ ಚಟುವಟಿಕೆಗಳಿಗೆ ಶರಣಾದೆ. ಶಿಸ್ತುಬದ್ಧ ಆಯೋಜನೆ ಶ್ಲಾಘನೀಯ. ಮಕ್ಕಳ ಬೆಳವಣಿಗೆಗೆ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು, ಸಂಸ್ಥೆ ಮತ್ತಷ್ಟು ಭಿನ್ನ ಚೇತನರಿಗೆ ಆಸರೆಯಾಗಲಿ ಎಂದರು.
ಶ್ರೀ ಗಣೇಶಾ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ ಶುಭಹಾರೈಸಿದರು. ಪಾಲಿಕೆ ಸದಸ್ಯರಾದ ಜಗದೀಶ್ ಶೆಟ್ಟಿ, ಶಕೀಲಾ ಕಾವಾ ಉಪಸ್ಥಿತರಿದ್ದರು.
ಸಾನಿಧ್ಯ ವಿಶೇಷ ಶಾಲೆಯ ಆಡಳಿತಾಧಿಕಾರಿ ಡಾ| ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂಸ್ಥೆಯ ಸಹಾಯಕ ಆಡಳಿತಾಧಿಕಾರಿ ಸುಮಾ ಡಿಸಿಲ್ವಾ ವಂದಿಸಿದರು. ಶಿಕ್ಷಕಿ ಜುಲಿಯಾನ ಸೋಫಿಯಾ ಡಿಸೋಜ ನಿರೂಪಿಸಿದರು.
ವಿಶೇಷ ಮಕ್ಕಳ ಕರಕುಶಲ ವಸ್ತುಗಳ ಪ್ರದರ್ಶನ:
ವಿಶೇಷ ಚೇತನ ಮಕ್ಕಳು ವರ್ಷವಿಡಿ ವಿವಿಧ ಗೃಹಬಳಕೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದು, ಅವುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಕರಾವಳಿಯ ಗಂಡು ಕಲೆ ಯಕ್ಷಗಾನ ಮೆಮೆಂಟೋ, ಹೂವಿನ ಅಲಂಕಾರಿಕೆಗಳು, ಆಭರಣಗಳು, ಕಪ್ ಗಳು, ಕ್ಯಾಂಡಲ್ ಗಳು, ಹಣತೆ, ಬ್ಯಾಗ್ ಗಳು, ಮ್ಯಾಟ್ ಗಳು, ತಲೆ ದಿಂಬುಗಳು, ಪಿನಾಯಿಲ್, ಬುಟ್ಟಿಗಳು ಪ್ರದರ್ಶನ ಹಾಗೂ ಮಾರಟಕ್ಕಿಡಲಾಗಿದೆ.