ರಾಷ್ಟ್ರೀಯ: ಬೇಸಿಗೆಯ ಹತ್ತಿರ ಬಂದಂತೆ, ಫ್ಲಿಪ್ಕಾರ್ಟ್ ಕಂಪನಿಯಾದ ಕ್ಲಿಯರ್ಟ್ರಿಪ್ ತನ್ನ ಬಹು ನಿರೀಕ್ಷಿತ ಟ್ರಾವೆಲ್ ಸೇಲ್ ಕಾರ್ಯಕ್ರಮ #ನೇಷನ್ಆನ್ವೆಕೇಷನ್ (#NationOnVacation) ಎರಡನೇ ಆವೃತ್ತಿಯನ್ನು ಘೋಷಿಸಿದೆ. 9-ದಿನಗಳ ಕಾಲ ನಡೆಯಲಿರುವ ಈ ಟ್ರಾವೆಲ್ ಕಾರ್ಯಕ್ರಮವು 14ನೇ ಮಾರ್ಚ್ 2024ರಂದು ಪ್ರಾರಂಭವಾಗುತ್ತದೆ. ಹೋಟೆಲ್ಗಳು, ವಿಮಾನಗಳು, ಬಸ್ಗಳು ಮತ್ತು ಪ್ಯಾಕೇಜ್ಗಳ ಮೇಲೆ ಆಕರ್ಷಕ ಆಫರ್ ಗಳನ್ನು ಪ್ರಸ್ತುತಪಡಿಸುವ ಮೂಲಕ ಗ್ರಾಹಕರ ಪ್ರಯಾಣದ ಅನುಭವವನ್ನು ವೃದ್ಧಿಸಲು ಸಿದ್ಧವಾಗಿದೆ. ಹೆಚ್ಚಿನ ಬೇಡಿಕೆಯಿಂದಾಗಿ ಬೇಸಿಗೆ ಕಾಲದಲ್ಲಿ ವಿಮಾನ ದರಗಳು ಹೆಚ್ಚಾಗುವ ಸಾಧ್ಯತೆಯಿದೆ. #ನೇಷನ್ಆನ್ವೆಕೇಷನ್ ಮೂಲಕ, ಕ್ಲಿಯರ್ಟ್ರಿಪ್ ಮತ್ತು ಫ್ಲಿಪ್ಕಾರ್ಟ್ ಟ್ರಾವೆಲ್ ತಮ್ಮ ಗ್ರಾಹಕರಿಗೆ ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಉತ್ತಮ ಆಫರ್ ಗಳ ಲಾಭವನ್ನು ಪಡೆಯುವ ಮತ್ತು ಅವರ ಕನಸಿನ ರಜಾದಿನಗಳನ್ನು ಕಳೆಯುವ ಅವಕಾಶವನ್ನು ಒದಗಿಸುತ್ತಿದೆ.
ಅದರ ಗ್ರಾಹಕ-ಕೇಂದ್ರಿತ ಮೌಲ್ಯಗಳಿಗೆ ಅನುಗುಣವಾಗಿ, ಕ್ಲಿಯರ್ಟ್ರಿಪ್, ‘ ಕ್ಲಿಯರ್ಚಾಯ್ಸ್’ನ ಅಡಿಯಲ್ಲಿ, ಅದರ ಬಳಕೆದಾರರಿಗೆ ಹೆಚ್ಚಿನ ಹೊಂದಾಣಿಕೆಯ ಸೌಲಭ್ಯವನ್ನು ನೀಡುತ್ತಿದೆ. ಕ್ಲಿಯರ್ಚಾಯ್ಸ್ ಪ್ಲಸ್ ಮತ್ತು ಕ್ಲಿಯರ್ಚಾಯ್ಸ್ ಮ್ಯಾಕ್ಸ್ ಮೂಲಕ ಪ್ರಯಾಣಿಕರು ತಮ್ಮ ಬುಕಿಂಗ್ಗಳನ್ನು ರದ್ದುಗೊಳಿಸಬಹುದು ಅಥವಾ ಬದಲಾಯಿಸಬಹುದಾಗಿದೆ ಮತ್ತು ರೂ.2500ರಿಂದ ಮೇಲಿನ ದರಗಳ ಏರ್ಲೈನ್ ಟಿಕೆಟ್ ಬದಲಾವಣೆಗಳ ಸಂದರ್ಭದಲ್ಲಿ ಪೂರ್ಣ ಮರುಪಾವತಿಯನ್ನು ಪಡೆಯಬಹುದು. ಮಿಂತ್ರಾ ಮತ್ತು ಫ್ಲಿಪ್ ಕಾರ್ಟ್ ಲಾಯಲ್ಟಿ ಗ್ರಾಹಕರು ಕ್ಲಿಯರ್ಟ್ರಿಪ್ ಮತ್ತು ಫ್ಲಿಪ್ಕಾರ್ಟ್ ಟ್ರಾವೆಲ್ ಪ್ಲಾಟ್ಫಾರ್ಮ್ಗಳಲ್ಲಿ ವಿಶೇಷ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆಯಬಬಹುದು.
ಈ ಕುರಿತು ಮಾತನಾಡಿದ ಕ್ಲಿಯರ್ಟ್ರಿಪ್ನ ಸಿಇಓ ಅಯ್ಯಪ್ಪನ್ ರಾಜಗೋಪಾಲ್, “ಪ್ರವಾಸಿಗರು ಮುಂಚಿತವಾಗಿ ಪ್ರಯಾಣದ ಮಾರ್ಗವನ್ನು ಪ್ಲಾನ್ ಮಾಡುವ ಐಡಿಯಾ ತುಂಬುವ ಕಲ್ಪನೆಯೊಂದಿಗೆ ##ನೇಷನ್ಆನ್ವೆಕೇಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಕಳೆದ ವರ್ಷ #ನೇಷನ್ಆನ್ವೆಕೇಷನ್ ಗೆ ಪ್ರತಿಕ್ರಿಯೆಯಿಂದ ನಾವು ರೋಮಾಂಚನಗೊಂಡಿದ್ದೇವೆ ಮತ್ತು ಬೇಸಿಗೆ ರಜೆಯನ್ನು ಎಲ್ಲರಿಗೂ ಸ್ಮರಣೀಯಗೊಳಿಸುವ ಆಫರ್ ಗಳನ್ನು ಒದಗಿಸಲು ಉತ್ಸುಕರಾಗಿದ್ದೇವೆ. ಈಗ ಬುಕಿಂಗ್ ಮಾಡುವುದಕ್ಕೆ ಹೋಲಿಸಿದರೆ ಏಪ್ರಿಲ್ ಮತ್ತು ಮೇ ತಿಂಗಳ ನಂತರ ಮಾಡಲಾಗುವ ಬುಕಿಂಗ್ಗಳಿಗೆ 20-25%ರಷ್ಟು ದರ ಹೆಚ್ಚಾಗುವ ನಿರೀಕ್ಷೆಯಿದೆ. ಪ್ಲಾನ್ ಮಾಡಿದ ಆಫರ್ ಗಳ ಮೂಲಕ ಬೇಸಿಗೆಯ ಪ್ರಯಾಣವನ್ನು ಹಿಂದೆಂದಿಗಿಂತಲೂ ಹೆಚ್ಚು ಕೈಗೆಟುಕುವ ದರದ ಮೂಲಕ ಒದಗಿಸಿ ಭಾರತದ ಪ್ರವಾಸ ಪ್ರೇಮವನ್ನು ಹೆಚ್ಚುಗೊಳಿಸಲು ನಾವು ಬಯಸುತ್ತೇವೆ. ಕ್ಲಿಯರ್ ಚಾಯ್ಸ್ ಮೂಲಕ, ಪ್ರಯಾಣಿಕರು ಕೊನೆಯ ಕ್ಷಣದ ಯೋಜನೆಗೆ ಸಂಬಂಧಿಸಿದ ಆತಂಕಗಳನ್ನು ತೊಡೆದುಹಾಕಬಹುದು ಮತ್ತು ಹಣ ವಾಪಸ್ ಬರುವುದನ್ನು ಖಚಿತಪಡಿಸಿಕೊಳ್ಳಬಹುದು. ಉತ್ತಮ ಆಫರ್ ಗಳನ್ನು ಪಡೆಯಲು ಈಗಲೇ ಬುಕ್ ಮಾಡಿ ಮತ್ತು ಉತ್ತಮ ಪ್ರವಾಸದ ಅನುಭವವನ್ನು ಆನಂದಿಸಿ” ಎಂದು ಹೇಳಿದರು.
ವಿಶೇಷ ಆಫರ್ ಗಳು:
● ದೇಶೀಯ ವಿಮಾನ ದರಗಳು ರೂ.999ರಿಂದ ಪ್ರಾರಂಭ
● ಅಂತಾರಾಷ್ಟ್ರೀಯ ವಿಮಾನಗಳು ರೂ.4999 ರಿಂದ ಪ್ರಾರಂಭ
● 5-ಸ್ಟಾರ್ ಹೋಟೆಲ್ಗಳು ದ ರೂ. 2499ರಿಂದ ಪ್ರಾರಂಭ
● ಬಸ್ ಬುಕ್ಕಿಂಗ್ಗಳಲ್ಲಿ ರೂ.500 ವರೆಗೆ ರಿಯಾಯಿತಿ
● ಕ್ಲಿಯರ್ ಚಾಯ್ಸ್ ಮ್ಯಾಕ್ಸ್ ನಲ್ಲಿ ಫ್ಲಾಟ್ 599ನಲ್ಲಿ ದೇಶೀಯ ವಿಮಾನಗಳು
● ಹೋಟೆಲ್ ಬುಕಿಂಗ್ಗಳ ಮೇಲೆ 30-80% ರಿಯಾಯಿತಿ
● ರೂ.49ರ ಕ್ಲಿಯರ್ಚಾಯ್ಸ್ ಪ್ಲಸ್ + ಹೋಟೆಲ್ಗಳಲ್ಲಿ 10% ವರೆಗೆ ಹೆಚ್ಚುವರಿ ರಿಯಾಯಿತಿ
● ರೂ.1 ನಲ್ಲಿ ಕ್ಲಿಯರ್ ಚಾಯ್ಸ್ ಮ್ಯಾಕ್ಸ್ + ಹೋಟೆಲ್ಗಳಲ್ಲಿ 15% ವರೆಗೆ ಹೆಚ್ಚುವರಿ ರಿಯಾಯಿತಿ
ಮೇಲಿನವುಗಳು ಲಭ್ಯತೆ ಮತ್ತು ಸೀಮಿತ ಅವಧಿಗೆ ಮಾತ್ರ ಒಳಪಟ್ಟಿರುತ್ತವೆ.
ಕಳೆದ ವರ್ಷದ #NationOnVacation ನಂಬಲಾಗದ ಯಶಸ್ಸನ್ನು ಕಂಡಿತ್ತು. 2022ರಲ್ಲಿ ಇದೇ ಅವಧಿಗೆ ಹೋಲಿಸಿದರೆ ವರ್ಗಗಳಾದ್ಯಂತ ಬುಕ್ಕಿಂಗ್ಗಳಲ್ಲಿ 60% ಹೆಚ್ಚಳವಾಗಿದೆ. ಕ್ಲಿಯರ್ ಟ್ರಿಪ್ ವರ್ಷವಿಡೀ ಉದ್ಯಮ-ಪ್ರಥಮ ಮತ್ತು ಗ್ರಾಹಕ-ಕೇಂದ್ರಿತ ಉತ್ಪನ್ನಗಳನ್ನು ರಚಿಸುವಲ್ಲಿ ನಿರತವಾಗಿದೆ ಮತ್ತು ಆ ಮೂಲಕ ಹೆಚ್ಚು ಜನರಿಗೆ ಪ್ರವಾಸಾವಕಾಶ ಒದಗಿಸಲು ಬದ್ಧವಾಗಿದೆ.