ಬೆಂಗಳೂರು: ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಗುಜರಾತ್ನ ಸನಂದ್ನಲ್ಲಿರುವ ತನ್ನ ಅತ್ಯಾಧುನಿಕ ಸೌಲಭ್ಯದಲ್ಲಿ 1 ಮಿಲಿಯನ್ ಕಾರು ಹೊರತರುವ ಮೂಲಕ ತನ್ನ ಕಾರು ಉತ್ಪಾದನಾ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಮಹತ್ವದ ಸಾಧನೆಯು ಗ್ರಾಹಕರ ಸಂತೋಷವನ್ನು ಹೆಚ್ಚಿಸುವಂತಹ ಉನ್ನತ ಉತ್ಪನ್ನಗಳನ್ನು ತಲುಪಿಸಲು ಶ್ರಮಿಸುತ್ತಿರುವ ಟಾಟಾ ಮೋಟಾರ್ಸ್ನ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಸಾಧನೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಸನಂದ್ ಘಟಕದಲ್ಲಿರುವ ತಂಡದ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವವನ್ನು ಇದು ತೋರಿಸಿದೆ.
ಸನಂದ್ ಘಟಕವು 2010ರಲ್ಲಿ 1100 ಎಕರೆ- 741 ಎಕರೆ (ಟಿಎಂಎಲ್) ಮತ್ತು 359 ಎಕರೆಗಳಲ್ಲಿ (ವೆಂಡರ್ ಪಾರ್ಕ್) ಆರಂಭವಾಯಿತು. ಪ್ರಾರಂಭದಲ್ಲಿಯೇ 6000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಿಗಳು ಇದ್ದರು. ಈ ಘಟಕವು ಟಾಟಾ ಮೋಟಾರ್ಸ್ನ ಬೆಳವಣಿಗೆ ಮತ್ತು ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಟಾಟಾ ಮೋಟಾರ್ಸ್ ನ ಸನಂದ್ ಘಟಕವು ಎಲ್ಲಾ ಕೆಲಸಗಳಿಗೆ ಸೂಕ್ತ ತಂತ್ರಜ್ಞಾನವನ್ನು ಹೊಂದಿದೆ. ಈ ಅತ್ಯುನ್ನತ ಯಾಂತ್ರಿಕೃತ ಸ್ಥಾವರವು ನೇರ ಪ್ರಕ್ರಿಯೆ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿದೆ. ಈ ಪ್ಲಾಂಟ್ ಪ್ರೆಸ್ ಲೈನ್, ವೆಲ್ಡ್ ಶಾಪ್, ಪೇಂಟ್ ಶಾಪ್, ಅಸೆಂಬ್ಲಿ ಲೈನ್ ಮತ್ತು ಪವರ್ಟ್ರೇನ್ ಶಾಪ್ ಅನ್ನು ಹೊಂದಿದೆ.
ಈ ಸೌಲಭ್ಯವು ಹೊಂದಿಕೊಳ್ಳುವ ಅಸೆಂಬ್ಲಿ ಲೈನ್ ಅನ್ನು ಹೊಂದಿದೆ ಮತ್ತು ಟಿಯಾಗೋ, ಟಿಯಾಗೋ ಎಎಂಟಿ, ಟಿಯಾಗೋ.ಇವಿ, ಟಿಯಾಗೋ ಐಸಿಎನ್ ಜಿ, ಟಿಗೋರ್, ಟಿಗೋರ್ ಎಎಂಟಿ, ಟಿಗೋರ್ ಇವಿ, ಟಿಗೋರ್ ಐಸಿಎನ್ ಜಿ ಮತ್ತು ಎಕ್ಸ್ ಪ್ರೆಸ್-ಟಿ ಇವಿ ಯಂತಹ ವಿವಿಧ ಮಾದರಿಯ ಪ್ರಯಾಣಿಕ ವಾಹನಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಸಿಂಗಲ್ ಮಾಡೆಲ್ ಸ್ಥಾವರವನ್ನು ಯಶಸ್ವಿಯಾಗಿ ಮಲ್ಟಿ-ಮಾಡೆಲ್ ಸ್ಥಾವರವಾಗಿ ಪರಿವರ್ತಿಸಲಾಗಿದೆ. 100% ಸ್ವತ್ತುಗಳ ನಿರ್ವಹಣೆ ಮತ್ತು ಬಳಕೆಯೊಂದಿಗೆ ಮೂರು ಮಾಡೆಲ್ ಗಳನ್ನು ತಯಾರಿಸುತ್ತದೆ.
ಈ ಮಹತ್ವದ ಸಂದರ್ಭದ ಕುರಿತು ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರಾದ ಶೈಲೇಶ್ ಚಂದ್ರ, “ನಮ್ಮ ಸನಂದ್ ಘಟಕದಿಂದ 1 ಮಿಲಿಯನ್ ಕಾರನ್ನು ಹೊರತಂದ ಕುರಿತು ನಮಗೆ ಹೆಮ್ಮೆಯಿದೆ. ಮಾರುಕಟ್ಟೆಯ ಅಗತ್ಯಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಮೂಲಕ ಭಾರತದಲ್ಲಿನ ನಮ್ಮ ಬೆಳವಣಿಗೆಗೆ ಈ ಘಟಕ ಪ್ರಮುಖ ಕಾರಣವಾಗಿದೆ. ಈ ಸಾಧನೆಯು ಉನ್ನತ ಗುಣಮಟ್ಟ ಮತ್ತು ನಮ್ಮ ಗ್ರಾಹಕ ಸೇವೆಯಲ್ಲಿ ನಾವು ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಪ್ರಯತ್ನಗಳಿಂದ ನಮ್ಮ ಉತ್ಪನ್ನಗಳ ಮೇಲೆ ಹೆಚ್ಚಿನ ಗಮನ ಬೀಳುವಂತೆ ಮಾಡಿದೆ ಮತ್ತು ಈ ಮೈಲಿಗಲ್ಲು ಖಂಡಿತವಾಗಿಯೂ ನಮ್ಮ ಉತ್ಪನ್ನಗಳ ಜನಪ್ರಿಯತೆಯನ್ನು ಹೆಚ್ಚಿಸಲಿದೆ. ಸುರಕ್ಷಿತ, ಚುರುಕಾದ ಮತ್ತು ಹಸಿರು ಮೊಬಿಲಿಟಿ ಪರಿಹಾರಗಳನ್ನು ಒದಗಿಸುವಲ್ಲಿನ ನಮ್ಮ ಉತ್ಸಾಹವನ್ನು ಮುಂದುವರಿಸವು ವಿಶ್ವಾಸವನ್ನು ನಾವು ಹೊಂದಿದ್ದೇವೆ. ಈ ಸಾಧನೆಗೆ ನಾವು ಋಣಿಯಾಗಿದ್ದೇವೆ. ಈ ಮೈಲಿಗಲ್ಲನ್ನು ಸಾಧಿಸಲು ಪ್ರಮುಖ ಕಾರಣರಾಗಿರುವ ನಮ್ಮ ಉದ್ಯೋಗಿಗಳು, ಪೂರೈಕೆದಾರರು, ಪಾಲುದಾರರು ಮತ್ತು ಮುಖ್ಯವಾಗಿ ಗುಜರಾತ್ ಸರ್ಕಾರಕ್ಕೆ ಅವರ ಅಚಲ ಬೆಂಬಲಕ್ಕಾಗಿ ಧನ್ಯವಾದ ಸಲ್ಲಿಸುತ್ತೇವೆ” ಎಂದು ಹೇಳಿದರು.
ಟಾಟಾ ಮೋಟಾರ್ಸ್ ಯಾವಾಗಲೂ ವ್ಯಕ್ತಿಗಳು ಮತ್ತು ಸಮುದಾಯಗಳ ಬೆಳವಣಿಗೆಯಲ್ಲಿ ನಂಬಿಕೆ ಇಟ್ಟಿದೆ. ಸನಂದ್ ಸ್ಥಾವರವು ಸನಂದ್, ಬವ್ಲಾ ಮತ್ತು ವಿರಂಗಾಮ್ ಮತ್ತು ಸುತ್ತಮುತ್ತಲಿನ 68ಕ್ಕೂ ಹೆಚ್ಚು ಹಳ್ಳಿಗಳನ್ನು ದತ್ತು ಪಡೆದುಕೊಂಡಿದೆ. ಶೌಚಾಲಯಗಳ ಸ್ಥಾಪನೆ, ಮಹಿಳೆಯರಿಗೆ ಉದ್ಯೋಗ ಹೆಚ್ಚಿಸಲು ಕೌಶಲ್ಯ ಅಭಿವೃದ್ಧಿ ಮತ್ತು ಹೆಣ್ಣು ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ನೆರವು ನೀಡುವ ಅನೇಕ ಉಪಕ್ರಮಗಳನ್ನು ಸನಂದ್ನಲ್ಲಿ ಸ್ಥಾವರವು ತನ್ನ ಸಿಎಸ್ಆರ್ ಚಟುವಟಿಕೆಗಳ ಮೂಲಕ ಮಾಡುತ್ತಿದೆ. ಕಳೆದ 13 ವರ್ಷಗಳಲ್ಲಿ, ಟಾಟಾ ಮೋಟಾರ್ಸ್ನ ಸಿಎಸ್ಆರ್ ಉಪಕ್ರಮಗಳು ಸನಂದ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿವೆ.
ಆಫರ್ ಗಳು ಮತ್ತು ಕಾರು ಖರೀದಿ ಆಯ್ಕೆಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಿಮ್ಮ ಹತ್ತಿರದ ಡೀಲರ್ಶಿಪ್ಗೆ ಕರೆ ಮಾಡಿ ಅಥವಾ https://cars.tatamotors.com/ ಗೆ ಭೇಟಿ ನೀಡಿ