ಬೆಂಗಳೂರು: ಕೋಕಾ-ಕೋಲಾ ಕಂಪನಿಯ ಹೊಸ ಪಾನೀಯ ಬ್ರ್ಯಾಂಡ್ ಆದ ಚಾರ್ಜ್ಡ್ ಥಮ್ಸ್ ಅಪ್ ಅಮೀರ್ ಖಾನ್ ಮತ್ತು ದರ್ಶೀಲ್ ಸಫಾರಿ ಅವರನ್ನು ಒಳಗೊಂಡಿರುವ “ಮೈಂಡ್ ಚಾರ್ಜ್ಡ್, ಬಾಡಿ ಚಾರ್ಜ್ಡ್” ಎಂಬ ತನ್ನ ಹೊಸ ಅಭಿಯಾನವನ್ನು ಅನಾವರಣಗೊಳಿಸಿದೆ.
ಹೊಸ ಥಮ್ಸ್ ಅಪ್ ಚಾರ್ಜ್ಡ್ ಪಾನೀಯ ಹೊಸ ಪ್ಯಾಕೇಜಿಂಗ್ ಮತ್ತು ಫ್ಲೇವರ್ ಮೂಲಕ ಅಪೂರ್ವ ಪಾನೀಯ ಕುಡಿಯುವ ಅನುಭವವನ್ನು ನೀಡುತ್ತದೆ ಮತ್ತು ಅದು ಗ್ರಾಹಕರ ಮನಸ್ಸು ಮತ್ತು ದೇಹ ಎರಡಕ್ಕೂ ಉತ್ಸಾಹ ತುಂಬಲಿದೆ.
ಒಗಿಲ್ವಿ ಪರಿಕಲ್ಪನೆ ಮಾಡಿರುವ ಈ ಹೊಸ ಜಾಹೀರಾತಿನಲ್ಲಿ ಅಮೀರ್ ಖಾನ್ ಮತ್ತು ದರ್ಶೀಲ್ ಸಫಾರಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಲಾರ್ಜರ್ ದ್ಯಾನ್ ಲೈಫ್ ಸನ್ನಿವೇಶಗಳಲ್ಲಿ ವಿವಿಧ ಅವತಾರಗಳಲ್ಲಿ ಕಾಣಲು ಸಿಗುತ್ತಾರೆ. ದೈಹಿಕ ಚುರುಕುತನ ಮತ್ತು ಮಾನಸಿಕ ಎಚ್ಚರವನ್ನು ಬಯಸುವ ಅಸಾಧ್ಯವಾದ ಸಾಧನೆಗಳನ್ನು ಸಾಧಿಸಲು ಚಾರ್ಜ್ಡ್ ಪಾನೀಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುವ ಉದ್ದೇಶ ಈ ಜಾಹೀರಾತಿಗೆ ಇದೆ. ಈ ಅಭಿಯಾನವು ಉತ್ಪನ್ನದ ಉತ್ತೇಜಕ ಪರಿಣಾಮಗಳನ್ನು ಪ್ರದರ್ಶಿಸುತ್ತದೆ, ಆ ಮೂಲಕ ಜೀವನದ ಸವಾಲುಗಳನ್ನು ಎದುರಿಸಲು ಜೆನ್-ಝಡ್ ಗೆ ಪ್ರೇರೇಪಣೆ ನೀಡುತ್ತದೆ.
ಅಭಿಯಾನದ ಕುರಿತು ಮಾತನಾಡಿದ ಕೋಕಾ-ಕೋಲಾ ಇಂಡಿಯಾ ಮತ್ತು ಸೌತ್-ವೆಸ್ಟ್ ಏಷ್ಯಾದ ಸ್ಪಾರ್ಕ್ಲಿಂಗ್ ಫ್ಲೇವರ್ಸ್ನ ಹಿರಿಯ ವಿಭಾಗದ ನಿರ್ದೇಶಕ ಟಿಶ್ ಕಾಂಡೆನೊ, “ಥಮ್ಸ್ ಅಪ್ ಚಾರ್ಜ್ಡ್ ನ ಹೊಸ ಸ್ಟ್ರಾಬೆರಿ ರೂಪಾಂತರವನ್ನು ಪರಿಚಯಿಸಿರುವುದರ ಹಿಂದೆ ನಿರಂತರವಾಗಿ ಹೊಸತನ್ನು ಆವಿಷ್ಕರಿಸುವ ಮತ್ತು ಚೈತನ್ಯದಾಯಕ ಅನುಭವಗಳನ್ನು ಒದಗಿಸುವ ಉದ್ದೇಶ ಇದೆ. ಈ ಅಭಿಯಾನದ ಮೂಲಕ, 17 ವರ್ಷಗಳ ನಂತರ ಅಮೀರ್ ಖಾನ್ ಅವರನ್ನು ಕೋಕಾ-ಕೋಲಾ ಕುಟುಂಬಕ್ಕೆ ಸ್ವಾಗತಿಸಲು ನಾವು ಸಂತೋಷ ಪಡುತ್ತೇವೆ. ಅಮೀರ್ ಖಾನ್ ಮತ್ತು ದರ್ಶೀಲ್ ಸಫಾರಿ ಜೊತೆಗೆ ಚಾರ್ಜ್ಡ್ ಉತ್ಪನ್ನದ ಸಾರವನ್ನು ತಿಳಿಸಲಿದ್ದೇವೆ” ಎಂದು ಹೇಳಿದರು.
ಅಭಿಯಾನದೊಂದಿಗಿನ ತನ್ನ ಒಡನಾಟದ ಕುರಿತು ಪ್ರತಿಕ್ರಿಯಿಸಿದ ಅಮೀರ್ ಖಾನ್, “ಇದು ನಿಜವಾಗಿಯೂ ಮಜಾ ಸ್ಕ್ರಿಪ್ಟ್ ಆಗಿದೆ, ಮತ್ತು ನಾನು ಈ ಪರಿಕಲ್ಪನೆಯಿಂದ ನಿಜವಾಗಿಯೂ ‘ಚಾರ್ಜ್ಡ್’ ಆಗಿದ್ದೇನೆ. ಥಮ್ಸ್ ಅಪ್/ಕೋಕ್ ಕುಟುಂಬದ ಭಾಗವಾಗಲು ನನಗೆ ಸಂತೋಷವಾಗಿದೆ. ಜಾಹೀರಾತು ಅಭಿಯಾನ ಪ್ರಸಾರವಾಗುವುದನ್ನು ಮತ್ತು ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ದರ್ಶೀಲ್ ಸಫಾರಿ, “ತಾರೆ ಜಮೀನ್ ಪರ್ ನಂತರ 17 ವರ್ಷಗಳ ಬಳಿಕ ಅಮೀರ್ ಖಾನ್ ಅವರೊಂದಿಗೆ ತೆರೆಯ ಮೇಲೆ ಮತ್ತೆ ಒಂದಾಗುತ್ತಿರುವುದು ಸಂತೋಷ ತಂದಿದೆ. ಯುವ ವ್ಯಕ್ತಿ ನಾನು ಚಾರ್ಜ್ಡ್ ಆಗಿ ಇರಲು ಇಷ್ಟಪಡುತ್ತೇನೆ. ಚಾರ್ಜ್ಡ್ ಪಾನೀಯವು ಜೀವವನ್ನು ಚೈತನ್ಯ ಮತ್ತು ಉತ್ಸಾಹದಿಂದ ಎದುರುಗೊಳ್ಳಲು ಪ್ರೇರೇಪಿಸುತ್ತದೆ” ಎಂದು ಹೇಳಿದರು.
ಒಗಿಲ್ವಿ ಇಂಡಿಯಾದ ಚೀಫ್ ಕ್ರಿಯೇಟಿವ್ ಆಫೀಸರ್ ಸುಖೇಶ್ ನಾಯಕ್ ಮಾತನಾಡಿ, “ಮೈಂಡ್ ಚಾರ್ಜ್ಡ್, ಬಾಡಿ ಚಾರ್ಜ್ಡ್ ಎಂಬುದು ಸಾಧ್ಯತೆಗಳ ಆಂಥಮ್ ಆಗಿದೆ. ಅಮೀರ್ ಖಾನ್ ಮತ್ತು ದರ್ಶೀಲ್ 17 ವರ್ಷಗಳ ನಂತರ ಮತ್ತೆ ಒಂದಾಗುವ ಮೂಲಕ ಏನು ಬೇಕಾದರೂ ಮಾಡಬಹುದು ಮತ್ತು ಎಲ್ಲವನ್ನೂ ಮಾಡಬಹುದು ಎಂಬ ಉತ್ಸಾಹವನ್ನು ಹುಟ್ಟುಹಾಕುತ್ತಾರೆ. ಅಮೀರ್ ಇದರ ಭಾಗವಾಗಲು ಸಂತೋಷಪಟ್ಟರು ಮತ್ತು ಅವರು ತಂಡಕ್ಕೆ ಸ್ಫೂರ್ತಿ ನೀಡಿದರು. ಅವರು ವೈಯಕ್ತಿಕವಾಗಿ ಪ್ರತಿಯೊಂದು ಪಾತ್ರದ ಬಗ್ಗೆಯೂ ಕೇಳಿ ತಿಳಿದುಕೊಂಡು ಅವುಗಳ ಪರಿಪೂರ್ಣತೆಗೆ ಕಾರಣರಾಗಿದ್ದಾರೆ. ಕ್ಲಾಸ್ ಮತ್ತು ಪ್ಯಾಶನ್ ಮೂಲಕ ಈ ಜಾಹೀರಾತಿಗೆ ಜೀವ ತುಂಬಿದ ನಿರ್ದೇಶಕ ಅದ್ವೈತ್ ಚಂದನ್ ಅವರಿಗೆ ಧನ್ಯವಾದ. ಮೈಂಡ್ ಚಾರ್ಜ್ಡ್ ಮತ್ತು ಬಾಡಿ ಚಾರ್ಜ್ಡ್ ಮೂಡಿಬರಲು ಕಾರಣರಾದ ಇಡೀ ತಂಡಕ್ಕೆ ದೊಡ್ಡ ಧನ್ಯವಾದಗಳು” ಎಂದು ಹೇಳಿದರು.
ಥಮ್ಸ್ ಅಪ್ ಚಾರ್ಜ್ಡ್ ನ ಹೊಸ ಜಾಹೀರಾತು ಅಭಿಯಾನವು ಟಿವಿ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತದೆ.
Link to the TVC: https://youtu.be/-F9Wc7iHSUs?si=PJ0APF1awAcBGS_X