ಬೆಂಗಳೂರು: ಭಾರತದ ಅತಿ ದೊಡ್ಡ ಆಟೋಮೋಬೈಲ್ ತಯಾರಿಕಾ ಸಂಸ್ಥೆಯಾಗಿರುವ ಟಾಟಾ ಮೋಟರ್ಸ್ ತನ್ನ ಗ್ರಾಹಕರಿಗೆ ಸದಾ ಹೊಚ್ಚ ಹೊಸ ಉತ್ಪನ್ನಗಳನ್ನು ನೀಡುವ ತನ್ನ ಬದ್ಧತೆಯನ್ನು ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಸಂಸ್ಥೆಯು ಭಾರತದ ನಂಬರ್ ಒನ್ ಮಾರಾಟ ಆಗುತ್ತಿರುವ SUV ಬ್ರ್ಯಾಂಡ್ ನೆಕ್ಸಾನ್ ನ ICE & EV ಯ #DARK ಅವತಾರ್ ವಾಹನಗಳನ್ನು ಬಿಡುಗಡೆ ಮಾಡಿದೆ. ಇದಲ್ಲದೇ ತನ್ನ ಪ್ರೀಮಿಯಂ EUV ಗಳಾದ ಹೊಸ ಸಫಾರಿ ಮತ್ತು ಹ್ಯಾರಿಯರ್ ನ ಡಾರ್ಕ್ ಆವೃತ್ತಿಯನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ನೆಕ್ಸಾನ್ ಬೆಲೆ 11.45 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. #ಡಾರ್ಕ್ ಶ್ರೇಣಿಯು ಉದ್ಯಮದಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದು, ಇದರ ಬಿಡುಗಡೆಯಾದಾಗಿನಿಂದ ಶ್ರೀಮಂತಿಕೆ ಮತ್ತು ಐಷಾರಾಮಿ ಅನುಭವವನ್ನು ನೀಡುತ್ತಿದೆ.
ಈ ಹೊಸ ವಾಹನ ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ನ ಚೀಫ್ ಕಮರ್ಷಿಯಲ್ ಆಫೀಸರ್ ವಿವೇಕ್ ಶ್ರೀವತ್ಸ ಅವರು, “#ಡಾರ್ಕ್ ಆವೃತ್ತಿಯು ಹೊಸ ಪೀಳಿಗೆಯ ಕಲ್ಪನೆಗೆ ಪೂರಕವಾಗಿದೆ. ಈ ಪೀಳಿಗೆಯ ಅಭಿರುಚಿ ಮತ್ತು ಆದ್ಯತೆಗಳನ್ನು ಪ್ರತಿಬಿಂಬಿಸುತ್ತದೆ. ಈ ವಾಹನದ ಆಕರ್ಷಕವಾದ ಹೊರಗಿನ ವಿನ್ಯಾಸ ಮತ್ತು ವೈಶಿಷ್ಟ್ಯಪೂರ್ಣವಾದ ಒಳಗಿನ ವಿನ್ಯಾಸವನ್ನು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. Nexon.ev, Nexon, Harrier ಮತ್ತು Safari ಯನ್ನು ಒಳಗೊಂಡಿರುವ ಈ ಹೊಸ #ಡಾರ್ಕ್ ಆವೃತ್ತಿಯು ಮತ್ತಷ್ಟು ವಿಶಿಷ್ಟವಾಗಿ ಬಂದಿದೆ. ನಮ್ಮ ಈ ಹೊಸ ಅಭಿಯಾನವನ್ನು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದೇವೆ. ವಿಶೇಷವಾಗಿ ಗ್ರಾಹಕರಿಗೆ ಉಲ್ಲಾಸ ಮತ್ತು ಸಬಲೀಕರಣದ ಭಾವವನ್ನು ಉಂಟು ಮಾಡುವ ರೀತಿಯಲ್ಲಿ ಈ ಶ್ರೇಣಿಯನ್ನು ಪರಿಕಲ್ಪಿಸಲಾಗಿದೆ. ಈ ಮೂಲಕ ಐಷಾರಾಮಿ ಮತ್ತು ಉನ್ನತ ಕರಕುಶಲತೆಗೆ ಸಮಾನಾರ್ಥಕವಾದ ಹೊಸ #ಡಾರ್ಕ್ ಶ್ರೇಣಿಯ ಸರಿಸಾಟಿಯಿಲ್ಲದ ಸಾಮರ್ಥ್ಯಗಳನ್ನು ಅನ್ವೇಷಣೆ ಮಾಡಲು ವಾಹನ ಪ್ರಿಯರನ್ನು ಆಹ್ವಾನಿಸುತ್ತದೆ’’ ಎಂದರು.
ಇದನ್ನು 2019 ರಲ್ಲಿ ಹ್ಯಾರಿಯರ್ ನೊಂದಿಗೆ ಪರಿಚಯಿಸಲಾಗಿದ್ದು, 2021 ರಲ್ಲಿ ಪೋರ್ಟ್ ಫೋಲಿಯೋದಾದ್ಯಂತ ವಿಸ್ತರಣೆ ಮಾಡಲಾಗಿದೆ. ಟಾಟಾ ಮೋಟರ್ಸ್ #ಡಾರ್ಕ್ ನೊಂದಿಗೆ ಉದ್ಯಮದಲ್ಲಿ ಹೊಸ ಟ್ರೆಂಡ್ ಅನ್ನು ಸೃಷ್ಟಿಸಿದೆ. #ಡಾರ್ಕ್ ಅಂದಿನಿಂದ ಟಾಟಾ ಪ್ಯಾಸೆಂಜರ್ ಮತ್ತು ಎಲೆಕ್ಟ್ರಿಕ್ ವೆಹಿಕಲ್ ಸ್ಪೋರ್ಟ್ ಫೊಲಿಯೋದ ಶೈಲಿ ಮತ್ತು ಪ್ರೀಮಿಯಂ ಆಕರ್ಷಣೆಯನ್ನು ಹೆಚ್ಚಿಸಿದೆ. ಇದು ಗ್ರಾಹಕರಿಗೆ ಆಯ್ಕೆ ಮಾಡಿಕೊಳ್ಳಲು ಬಲವಾದ ಮತ್ತು ವಿಶಿಷ್ಟವಾದ ಪ್ರತಿಪಾದನೆಯಾಗಿದೆ. #ಡಾರ್ಕ್ ಶ್ರೇಣಿಯು ತನ್ನ ಸಿಗ್ನೇಚರ್ #ಡಾರ್ಕ್ ಮಸ್ಕಾಟ್ ಮತ್ತು ಡಾರ್ಕ್ ಎಕ್ಸ್ ಟೀರಿಯರ್ ಟ್ರೀಟ್ ಮೆಂಟ್ ನೊಂದಿಗೆ ಭಾರತದ ಅತ್ಯಂತ ಪ್ರೀತಿಯ SUV ಗಳಿಗೆ ಆಕರ್ಷಣೆಯನ್ನು ತರುತ್ತದೆ.
ಹೊಸ #ಡಾರ್ಕ್ ಶ್ರೇಣಿಯನ್ನು ಪರಿಚಯಿಸಲಾಗುತ್ತಿದೆ:
ನೆಕ್ಸಾನ್.ಇವಿ: ಭಾರತದ ನಂಬರ್ 1 ಇವಿ, ಇದರ ಬೋಲ್ಡ್ #ಡಾರ್ಕ್ ಅವತಾರದಲ್ಲಿ ನೆಕ್ಸಾನ್.ಇವಿ ಆಟೋಮೋಟಿವ್ ಅನುಭವವನ್ನು ಮರುವ್ಯಾಖ್ಯಾನಿಸುವ ಹಲವಾರು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಇದರ ಆಕರ್ಷಕ ನೋಟವು ಬೋಲ್ಡ್ ಡಿಜಿಟಲ್ ಭಾಷೆಯ ವಿನ್ಯಾಸದೊಂದಿಗೆ ನಿರೂಪಿಸಲ್ಪಟ್ಟಿದೆ. ಈ ಮೂಲಕ SUVಯ ಆಕರ್ಷಣೆಯನ್ನು ದೃಢಪಡಿಸುತ್ತದೆ. ಇದರ ಹೊರಾಂಗಣ ವಿನ್ಯಾಸವು ಗಟ್ಟಿಮುಟ್ಟಾದ ಬಾಡಿಯೊಂದಿಗೆ ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಸಿಗ್ನೇಚರ್ #ಡಾರ್ಕ್ ಎಕ್ಸ್ ಟೀರಿಯರ್ ಟ್ರೀಟ್ಮೆಂಟ್ ಅನ್ನು ನೀಡುತ್ತದೆ.
SUV ಯ ಒಳಭಾಗವು ಅತ್ಯಾಧುನಿಕತೆಯನ್ನು ಹೊಂದಿದ್ದು, ಸಂಪೂರ್ಣ ಕಪ್ಪು ಬಣ್ಣದ ಲೆದರ್ ನ ಅತ್ಯುತ್ಕೃಷ್ಟವಾದ ಸೀಟುಗಳನ್ನು ಒಳಗೊಂಡಿದೆ. ಇದನ್ನು ಅಲ್ಟ್ರಾ ಆರಾಮವನ್ನು ನೀಡುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಎಸ್ಒಎಸ್ ಕಾಲಿಂಗ್ ಫಂಕ್ಷನ್, ಡಿಜಿಟಲ್ ಕಾಕ್ ಪಿಟ್ ನಲ್ಲಿ ಎಂಬೆಡೆಡ್ ಮ್ಯಾಪ್ಸ್ ವೀಕ್ಷಣೆ, ಪ್ರತಿ ಪ್ರಯಾಣವನ್ನು ಶಾಂತಿಯಿಂದ ಅನುಭವಿಸಲು ಪೂರಕವಾದ ಬ್ಲೈಂಡ್ ಸ್ಪಾಟ್ ವ್ಯೂವ್ ಮಾನಿಟರ್ ಗಳಂತಹ ವಿನೂತನವಾದ ಸುರಕ್ಷತೆಯ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ನೆಕ್ಸಾನ್.ಇವಿ #ಡಾರ್ಕ್ ತನ್ನ ಗೇಮಿಂಗ್ ಚೇಂಜಿಂಗ್ ವೈಶಿಷ್ಟ್ಯತೆಗಳೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದುವ ಮೂಲಕ ಒಂದು ಅನನ್ಯವಾದ ವಾಹನ ಎನಿಸಿದೆ. ವಾಹನದಿಂದ ವಾಹನಕ್ಕೆ ಚಾರ್ಜನಿಖ್ ಮಾಡುವುದು ಮತ್ತು ತಂತ್ರಜ್ಞಾನವನ್ನು ಲೋಡ್ ಮಾಡುವ ಸಾಮರ್ಥ್ಯವನ್ನು ಪುನರ್ ವ್ಯಾಖ್ಯಾನಿಸಲಾಗಿದೆ. Aracade.ev, 15+ ಅಪ್ಲಿಕೇಶನ್ ಗಳೊಂದಿಗೆ ಅಂತರ್ಗತವಾದ ಅಪ್ಲಿಕೇಶನ್ ಸೂಟ್ ಮತ್ತು ಹರ್ಮಾನ್ ನ 31.24 ಸೆಂಟಿಮೀಟರ್ ಸಿನಿಮ್ಯಾಟಿಕ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಹೊಂದಿರುವುದರಿಂದ ನಿಮ್ಮ ಮನರಂಜನಾ ಅಗತ್ಯತೆಗಳನ್ನು ಪೂರೈಸುತ್ತದೆ.
ಒಂಬತ್ತು ಸ್ಪೀಕರ್ ಗಳನ್ನು ಒಳಗೊಂಡಿರುವ ಜೆಬಿಎಲ್ ಸಿನಿಮ್ಯಾಟಿಕ್ ಧ್ವನಿ ವ್ಯವಸ್ಥೆಯು ಸರಿಸಾಟಿಯಿಲ್ಲದ ಆಡಿಯೋ ಅನುಭವವನ್ನು ನೀಡುತ್ತದೆ. ಇದರ ಕಾರ್ಯಕ್ಷಮತೆಯು ನೆಕ್ಸಾನ್.ಇವಿ #ಡಾರ್ಕ್ ತನ್ನ ವಿಭಾಗದಲ್ಲಿ ಅತ್ಯುನ್ನತವಾದ ಶ್ರೇಣಿಯೊಂದಿಗೆ ಹೊಸ ಮಾನದಂಡಗಳನ್ನು ಹೊಂದಿಸುತ್ತದೆ. ಪ್ರಭಾವಶಾಲಿಯಾದ ಎಆರ್ ಎಐ ಪ್ರಮಾಣೀಕರಿಸಿದ 465 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಪ್ಯಾಡಲ್ ಶಿಫ್ಟರ್ ಗಳು ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ವರ್ಧಿತ ನಿಯಂತ್ರಣವನ್ನು ನೀಡುತ್ತವೆ. ಡೈನಾಮಿಕ್ ಡ್ರೈವಿಂಗ್ ಅನುಭವವನ್ನು ಖಚಿತಪಡಿಸುತ್ತದೆ. ಇದರಲ್ಲಿನ ಸಾಟಿಯಿಲ್ಲದ ಸ್ಪಷ್ಟತೆಯೊಂದಿಗೆ ಮುಂದಿನ ದಾರಿ/ರಸ್ತೆಯನ್ನು ಸ್ಪಷ್ಟವಾಗಿ ಕಾಣುವಂತೆ ಎಂಡ್ –ಟು-ಎಂಡ್ ಡಿಆರ್ ಎಲ್ & ಟೈಲ್ ಲ್ಯಾಂಪ್ ಗಳೊಂದಿಗೆ ಸ್ಮಾರ್ಟ್ ಡಿಜಿಟಲ್ ಲೈಟ್ ಗಳು ಇರಲಿವೆ. ಬೋಲ್ಡ್ ಡಿಸೈನ್, ಫ್ಯೂಚರಿಸ್ಟಿಕ್ ಟೆಕ್ನಾಲಾಜಿ, ರಾಜಿ ಇಲ್ಲದ ಕಾರ್ಯಕ್ಷಮತೆಯೊಂದಿಗೆ ನೆಕ್ಸಾನ್.ಇವಿ #ಡಾರ್ಕ್ ಆಟೋಮೋಟಿವ್ ಲ್ಯಾಂಡ್ ಸ್ಕೇಪ್ ನಲ್ಲಿ ನಿಜವಾದ ಗೇಮ್ ಚೇಂಜರ್ ಆಗಿ ಹೊರಹೊಮ್ಮಿದೆ.
ನೆಕ್ಸಾನ್: ನೆಕ್ಸಾನ್ #ಡಾರ್ಕ್ ನ ಹೊರಾಂಗಣ ವಿನ್ಯಾಸವು ಬೋಲ್ಡ್ ಮತ್ತು ಆಕರ್ಷಕ SUV ಸ್ಟೈಲ್ ಅನ್ನು ಪ್ರದರ್ಶಿಸುತ್ತದೆ. ಇದು ಚಿಸ್ ಲೆಡ್ ಹುಡ್, ಸ್ಲೀಕ್ ಎಲ್ಇಡಿ ಲ್ಯಾಂಪ್ ಗಳು, ಡೈನಾಮಿಕ್ ನಿಲುವುಗಳಿಂದ ನಿರೂಪಿಸಲ್ಪಟ್ಟಿದೆ. ವಿಶೇಷವಾದ #ಡಾರ್ಕ್ ಮ್ಯಾಸ್ಕಾಟ್ ಮತ್ತು ಡಾರ್ಕ್ ಎಕ್ಸ್ ಟೀರಿಯರ್ ಟ್ರೀಟ್ಮೆಂಟ್ ಮೂಲಕ ಈ ವಿಶಿಷ್ಟವಾದ ನೋಟವನ್ನು ಮತ್ತಷ್ಟು ವೃದ್ಧಿಗೊಳಿಸುತ್ತದೆ. ಹೀಗಾಗಿ ಇದು ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಕ್ಯಾಬಿನ್ ಒಳಗೆ ನೆಕ್ಸಾನ್ #ಡಾರ್ಕ್ ಆಧುನಿಕ ಮತ್ತು ಅರ್ಥಗರ್ಭಿತವಾದ ವಾತಾವರಣವನ್ನು ನೀಡುವಾಗ ಅದರ SUV ಪ್ರಾಯೋಗಿಕತೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತದೆ. ಹೆಡ್ ರೆಸ್ಟ್ ಗಳ ಮೇಲೆ ಕಸೂತಿ ಮಾಡಲಾದ #ಡಾರ್ಕ್ ಬ್ಯಾಡ್ಜಿಂಗ್ ನಿಂದ ಹೆಣೆದ ಕಪ್ಪು ಲೆದರೆಟ್ ಸೀಟುಗಳನ್ನು ಒಳಗೊಂಡಿರುವ ಐಷಾರಾಮಿ ಮತ್ತು ವಿಶೇಷವಾದ ಸಂಪೂರ್ಣ ಕಪ್ಪು ಸೌಂದರ್ಯದೊಂದಿಗೆ ಇಂಟೀರಿಯರ್ ಅನ್ನು ಸಿದ್ಧಪಡಿಸಲಾಗಿದೆ. ಕ್ಯಾಬಿನ್ ನ ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದು, `ಹಿಡನ್ ಟು ಲೈಟ್’ ಕೆಪ್ಯಾಸಿಟಿವ್ ಟಚ್ ಫ್ಯಾಕ್ಟ್ ಪ್ಯಾನೆಲ್, ತಡೆರಹಿತವಾದ ಮತ್ತು ಅರ್ಥಗರ್ಭಿತವಾದ ಬಳಕೆದಾರರ ಅನುಭವವನ್ನು ಖಾತ್ರಿಪಡಿಸುತ್ತದೆ. ಅಮೆಜಾನ್ ಅಲೆಕ್ಸಾ ಮತ್ತು ಟಾಟಾ ವಾಯ್ಸ್ ಅಸಿಸ್ಟೆಂಟ್ ಹೊಂದಿದ್ದು, ಆರು ಭಾಷೆಗಳಲ್ಲಿ 200 ಕ್ಕೂ ಹೆಚ್ಚು ವಾಯ್ಸ್ ಕಮಾಂಡ ಗಳನ್ನು ನೀಡುತ್ತದೆ. ಈ ಮೂಲಕ ಸರಿಸಾಟಿಯಿಲ್ಲದ ಅನುಕೂಲತೆ ಮತ್ತು ಸಂಪರ್ಕವನ್ನು ಒದಗಿಸುತ್ತದೆ. ಇದಲ್ಲದೇ ನೆಕ್ಸಾನ್ #ಡಾರ್ಕ್ ವೈರ್ ಲೆಸ್ ಚಾರ್ಜರ್ ವ್ಯವಸ್ಥೆಯನ್ನೂ ಹೊಂದಿದೆ. ಈ ಮೂಲಕ ಚಾರ್ಜಿಂಗ್ ಗಾಗಿ ಕೇಬಲ್ ಗಳನ್ನು ಹುಡುಕಾಡುವ ತೊಂದರೆಗಳನ್ನು ತಪ್ಪಿಸಲಿದೆ. ಪ್ರಯಾಣದ ವೇಳೆಯಲ್ಲಿ ನಿಮ್ಮ ಸಾಧನಗಳು ಚಾರ್ಜ್ ಆಗಿರುವುದನ್ನು ಖಚಿತಪಡಿಸುತ್ತದೆ. ಇದರ ಗಮನಾರ್ಹ ವಿನ್ಯಾಸ, ಐಷಾರಾಮಿ ಇಂಟೀರಿಯರ್ ಗಳು ಮತ್ತು ಸುಧಾರಿತ ವೈಶಿಷ್ಟ್ಯತೆಗಳೊಂದಿಗೆ ನೆಕ್ಸಾನ್ #ಡಾರ್ಕ್ ತನ್ನ ವಿಭಾಗದಲ್ಲಿ SUV ಗಳಿಗೆ ಹೊಸ ಮಾನದಂಡವನ್ನು ಸೆಟ್ ಮಾಡುತ್ತದೆ.
ಹ್ಯಾರಿಯರ್ ಮತ್ತು ಸಫಾರಿ: ಈ OMEGARC ಅವಳಿ ವಾಹನಗಳು ಡೈನಾಮಿಕ್ ಮತ್ತು ಯೂತ್ ಫುಲ್ ವಾಹನಗಳಾಗಿವೆ. 5 ಸೀಟುಗಳ ಟಾಟಾ ಹ್ಯಾರಿಯರ್ ಮತ್ತು ಪ್ರೀಮಿಯಂ ಹಾಗೂ ಲಕ್ಷುರಿ ಫ್ಲ್ಯಾಗ್ ಶಿಪ್ ನ 7 ಸೀಟುಗಳ ಟಾಟಾ ಸಫಾರಿಯು ಹೊಸ #ಡಾರ್ಕ್ ಅವತಾರದಲ್ಲಿ ಬಂದಿವೆ. ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಇವುಗಳಲ್ಲಿ ವೃದ್ಧಿಸಲಾಗಿದ್ದು, ಹಿಂದೆಂದಿಗಿಂತಲೂ ಆಕರ್ಷಕವಾಗಿರಲಿವೆ. ಹ್ಯಾರಿಯರ್ #ಡಾರ್ಕ್ ಮತ್ತು ಸಫಾರಿ #ಡಾರ್ಕ್ ಟಾಪ್-ಆಫ್-ದಿ-ಲೈನ್ ಸುಧಾರಿತ ವೈಶಿಷ್ಟ್ಯತೆಗಳನ್ನು ಹೊಂದಿದೆ. ಇದರಲ್ಲಿ ಇದೇ ಮೊದಲ ಬಾರಿಗೆ ಫ್ರಂಟ್ ಮತ್ತು ರಿಯರ್ ಎಲ್ಇಡಿ ಡಿಆರ್ ಎಲ್ ಗಳಲ್ಲಿ ವೆಲ್ ಕಂ ಮತ್ತು ಗುಡ್ ಬೈ ಸಿಗ್ನೇಚರ್ ಅನಿಮೇಷನ್, ಮುಂಭಾಗದಲ್ಲಿ ಸೆಂಟರ್ ಪೊಸಿಷನ್ ಲ್ಯಾಂಪ್ ನೊಂದಿಗೆ ಎಲ್ಇಡಿ ಡಿಆರ್ ಎಲ್ ಗಳು, ಹೆಚ್ಚಿನ ಸುರಕ್ಷತೆಗಾಗಿ ಡ್ರೈವರ್ ನೀ ಏರ್ ಬ್ಯಾಗ್, ಸುಧಾರಿತ ಹರ್ಮನ್ ಆಡಿಯೋವೊರೆಕ್ಸ್ ಅನ್ನು ಒಳಗೊಂಡಿರುವ 10 ಜೆಬಿಎಲ್ ಸ್ಪೀಕರ್ ಗಳೊಂದಿಗೆ ಹೊಸ ಆಡಿಯೋ ಅನುಭವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ.
ಈ ಎರಡೂ ಮಾದರಿಗಳು ಡ್ಯುಯೆಲ್ ಝೋನ್ ಸಂಪೂರ್ಣ ಆಟೋಮ್ಯಾಟಿಕ್ ಟೆಂಪರೇಚರ್ ಕಂಟ್ರೋಲ್ ನೊಂದಿಗೆ ಐಷಾರಾಮಿ ಮತ್ತು ಆರಾಮದಾಯಕವಾದ ಚಾಲನಾ ಅನುಭವವನ್ನು ನೀಡುತ್ತವೆ. ಇದರಲ್ಲಿ ಮಲ್ಟಿ ಫಂಕ್ಷನ್ ನೊಂದಿಗೆ ಟಚ್-ಆಧಾರಿತ ಸೆಂಟ್ರಲ್ ಕಂಟ್ರೋಲ್ ಪ್ಯಾನೆಲ್ ಮತ್ತು ಹೆಡ್ ರೆಸ್ಟ್ ಗಳಲ್ಲಿ #ಡಾರ್ಕ್ ಲೋಗೋ ಆಕರ್ಷಕವಾಗಿದೆ. ಅದೇರೀತಿ ಲೆದರ್ ಸೀಟುಗಳು ಅತ್ಯುತ್ತಮವಾಗಿ ಕಾಣುತ್ತವೆ. ಇದಲ್ಲದೇ, ಸಫಾರಿ #ಡಾರ್ಕ್ ದೀರ್ಘ ಪ್ರಯಾಣದ ಸಮಯದಲ್ಲಿ ಹೆಚ್ಚಿನ ವಿಶ್ರಾಂತಿಗಾಗಿ 2 ನೇ ಸಾಲಿನಲ್ಲಿ ಕಂಫರ್ಟ್ ಹೆಡ್ ರೆಸ್ಟ್ ಗಳನ್ನು ಹೊಂದಿದೆ. ಇದರ ಜೊತೆಗೆ 2 ನೇ ಸಾಲಿನ ಸೀಟುಗಳಲ್ಲಿ ಕುಳಿತುಕೊಳ್ಳುವವರ ಅನುಕೂಲಕ್ಕಾಗಿ ವೆಂಟಿಲೇಟೆಡ್ ಸೀಟುಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ಪ್ರಯಾಣಿಕರು ಆಹ್ಲಾದಕರವಾಗಿ ಮತ್ತು ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಈ ಪ್ರೀಮಿಯಂ ವೈಶಿಷ್ಟ್ಯತೆಗಳು ಮತ್ತು ವಿಶೇಷವಾದ #ಡಾರ್ಕ್ ಸ್ಟೈಲಿಂಗ್ ಅಂಶಗಳಾದ ಬೋಲ್ಡ್ ಒಬೆರಾನ್ ಬ್ಲ್ಯಾಕ್ ಹೊರಭಾಗಗಳು, ಬ್ಲ್ಯಾಕ್ ಸ್ಟೋನ್ ಇಂಟೀರಿಯರ್ ಥೀಮ್ ಮತ್ತು ಪಿಯಾನೋ ಬ್ಲ್ಯಾಕ್ ಅಸೆಂಟ್ ಗಳೊಂದಿಗೆ ಹ್ಯಾರಿಯರ್ #ಡಾರ್ಕ್ ಮತ್ತು ಸಫಾರಿ #ಡಾರ್ಕ್ ಆಯಾ ವಿಭಾಗಗಳಲ್ಲಿ ಐಷಾರಾಮಿ ಮತ್ತು ಅತ್ಯಾಧುನಿಕತೆಯನ್ನು ಬಿಂಬಿಸುತ್ತವೆ.