ಬೆಂಗಳೂರು: ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್ಸಂಗ್, ಗ್ಯಾಲಕ್ಸಿ ಎಫ್15 5ಜಿ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ. ಈ ಫೋನು ಬಳಕೆದಾರರಿಗೆ ಈ ವಿಭಾಗದಲ್ಲೇ ಮೊದಲು ಎಂಬಂತಹ ಅನೇಕ ಫೀಚರ್ ಗಳನ್ನು ಒದಗಿಸುತ್ತಿದ್ದು, ಈ ಸರಣಿಯ ಹಳೆಯ ಮಾಡೆಲ್ ಗಳಿಗಿಂತ ಭಿನ್ನವಾಗಿದೆ. ವಿಭಾದಲ್ಲೇ ಅತ್ಯುತ್ತಮವಾದ 6000ಎಂಎಎಚ್ ಬ್ಯಾಟರಿ, ಎಸ್ಅಮೋಲ್ಡ್ ಡಿಸ್ಪ್ಲೇ, 4 ಜನರೇಷನ್ ಗಳ ಆಂಡ್ರಾಯ್ಡ್ ಅಪ್ಡೇಟ್ ಗಳು ಮತ್ತು ಐದು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಗಳನ್ನು ಒದಗಿಸುತ್ತದೆ. ಬಳಕೆದಾರರು ಮುಂಬರುವ ವರ್ಷಗಳಲ್ಲಿ ಹೊಸ ಫೀಚರ್ ಗಳು ಮತ್ತು ಹೆಚ್ಚಿನ ಭದ್ರತೆಯನ್ನು ಪಡೆಯಬಹುದಾಗಿದೆ.
ಈ ಸಂದರ್ಭದಲ್ಲಿ ಸ್ಯಾಮ್ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್ ವೈಸ್ ಪ್ರೆಸಿಡೆಂಟ್ ಆದಿತ್ಯ ಬಬ್ಬರ್ “ಗ್ಯಾಲಕ್ಸಿ ಎಫ್15 5ಜಿ, 2024ರ ನಮ್ಮ ಮೊದಲ ಗ್ಯಾಲಕ್ಸಿ ಎಫ್ ಸರಣಿಯ ಸ್ಮಾರ್ಟ್ಫೋನ್ ಆಗಿದೆ ಮತ್ತು ಈ ಮೂಲಕ ಶಕ್ತಿಯುತ ಸಾಧನಗಳ ಮೂಲಕ ನಮ್ಮ ಗ್ರಾಹಕರ ಜೀವನವನ್ನು ಸಶಕ್ತಗೊಳಿಸುವ ನಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದೇವೆ. ಗ್ಯಾಲಕ್ಸಿ ಎಫ್15 5ಜಿ ಬಿಡುಗಡೆ ಮಾಡುವುದರ ಮೂಲಕ ಬಳಕೆದಾರರು ಫೋನ್ ಬಳಕೆಯ ಮೂಲಕ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಲು ಅನುವು ಮಾಡಿಕೊಡುತ್ತೇವೆ” ಎಂದು ಹೇಳಿದರು.
“ಎಸ್ಅಮೋಲ್ಡ್ ಡಿಸ್ಪ್ಲೇ ಸೇರಿದಂತೆ ಅನೇಕ ವಿಭಾಗದಲ್ಲೇ ಅತ್ಯುತ್ತಮವಾದ ಫೀಚರ್ ಗಳ ಜೊತೆಗೆ 4 ಜನರೇಷನ್ ಗಳ ಆಂಡ್ರಾಯ್ಡ್ ಅಪ್ಡೇಟ್ ಗಳು, 6000ಎಂಎಎಚ್ ಬ್ಯಾಟರಿ, ಐದು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುತ್ತಿದ್ದೇವ. ವಿಶೇಷವಾಗಿ ವೇಗದ ಜೀವನ ಇಷ್ಟ ಪಡುವ ಜೆನ್ ಝಡ್ ಮಂದಿಗೆ ಈ ಉತ್ಪನ್ನದ ಮೂಲಕ ಸಂತೋಷದ ಅನುಭವ ಒದಗಿಸುತ್ತಿದ್ದೇವೆ” ಎಂದು ಅವರು ಹೇಳಿದರು.
ವಿನ್ಯಾಸ ಮತ್ತು ಡಿಸ್ಪ್ಲೇ
ಗ್ಯಾಲಕ್ಸಿ ಎಫ್15 5ಜಿ ಪ್ರೀಮಿಯಂ ಸಿಗ್ನೇಚರ್ ಗ್ಯಾಲಕ್ಸಿ ಲುಕ್ ಅನ್ನು ಹೊಂದಿದೆ. ಸೊಬಗಿನ ಮತ್ತು ಉತ್ಕೃಷ್ಟತೆಯ ಉತ್ಪನ್ನವಾಗಿದೆ. ಗ್ಯಾಲಕ್ಸಿ ಎಫ್15 5ಜಿ ಅದ್ಭುತವಾದ ವೀಕ್ಷಣೆಯ ಅನುಭವ ಒದಗಿಸುವ 6.5 ಇಂಚಿನ ಎಸ್ಅಮೋಲ್ಡ್ ಡಿಸ್ಪ್ಲೇ ಒಳಗೊಂಡಿದೆ. ಎಸ್ಅಮೋಲ್ಡ್ ಡಿಸ್ಪ್ಲೇ ಮೂಲಕ ಟೆಕ್ ಸ್ಯಾವಿ ಜೆನ್ ಝಡ್ ಮತ್ತು ಮಿಲೇನಿಯಲ್ ಪೀಳಿಗೆಯುವವರು ಪ್ರಖರ ಸೂರ್ಯನ ಬೆಳಕಲ್ಲಿಯೂ ಸುಲಭವಾಗಿ ಸಾಮಾಜಿಕ ಜಾಲತಾಗಣಲ ಫೀಡ್ಗಳನ್ನು ಸ್ಕ್ರೋಲ್ ಮಾಡಿ ನೋಡಬಹುದಾಗಿದೆ. ಗ್ಯಾಲಕ್ಸಿ ಎಫ್15ಜಿ ಆಶ್ ಬ್ಲ್ಯಾಕ್, ಗ್ರೂವಿ ವೈಲೆಟ್ ಮತ್ತು ಜಾಝಿ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.
ಬ್ಯಾಟರಿ
ಗ್ಯಾಲಕ್ಸಿ ಎಫ್15ಜಿ ಸೆಗ್ಮೆಂಟ್ ನಲ್ಲೇ ಅತ್ಯುತ್ತಮವಾದ 6000ಎಂಎಎಚ್ ಬ್ಯಾಟರಿಯೊಂದಿಗೆ ಬರುತ್ತದೆ. ಅದು ನಿಮ್ಮ ಸ್ಮಾರ್ಟ್ಫೋನ್ಗೆ ಎರಡು ದಿನಗಳವರೆಗೆ ಆರಾಮಾಗಿ ಬಳಸುವ ಸೌಲಭ್ಯ ನೀಡಬಲ್ಲದು. ಹೆಚ್ಚುವರಿಯಾಗಿ, 25ಡಬ್ಲ್ಯೂ ಸೂಪರ್-ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯವು ಸಾಧನವು ಅತಿ ವೇಗಾಗಿ ಚಾರ್ಜ್ ಆಗುವಂತೆ ನೋಡಿಕೊಳ್ಳುತ್ತದೆ. ದಿನವಿಡೀ ನೀವು ಕನೆಕ್ಟ್ ಆಗಿರುವಂತೆ, ಕೆಲಸದಲ್ಲಿ ನಿರತರಾಗಿರುವಂತೆ ಮಾಡುತ್ತದೆ.
ಪ್ರೊಸೆಸರ್
ಪ್ರಭಾವಶಾಲಿ ವಿಭಾಗ-ಮಾತ್ರ ವೈಶಿಷ್ಟ್ಯಗಳ ಜೊತೆಗೆ, ಗ್ಯಾಲಕ್ಸಿ ಎಫ್15ಜಿ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಚಿಪ್ಸೆಟ್ ಹೊಂದಿದ್ದು, ಗ್ರಾಹಕರ ಕೆಲಸ ಕಾರ್ಯಗಳನ್ನು ಸುಲಭವಾಗಿ ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಇದು ರಾಮ್ ಪ್ಲಸ್ ಫೀಚರ್ ಹೊಂದಿದೆ. ಇದು 12 GB ವರೆಗಿನ ಹೆಚ್ಚುವರಿ ವರ್ಚುವಲ್ ರಾಮ್ ಅನ್ನು ಒದಗಿಸುತ್ತದೆ. ಈ ಸೌಲಭ್ಯವು ಗ್ರಾಹಕರು ಸುಲಭವಾಗಿ ಅಪ್ಲಿಕೇಶನ್ ಬಳಸುವ ಶಕ್ತಿ ಒದಗಿಸುತ್ತದೆ ಮತ್ತು ಬಳಕೆದಾರರು ಈ ಸಾಧನದಲ್ಲಿ ಮಲ್ಟಿಟಾಸ್ಕಿಂಗ್ ಮಾಡಬಹುದಾಗಿದೆ.
ಕ್ಯಾಮೆರಾ
ಗ್ಯಾಲಕ್ಸಿ ಎಫ್15ಜಿ ಅಸ್ಥಿರವಾದ ಅಥವಾ ಅಲುಗಾಡುವಿಕೆಯಿಂದ ವೀಡಿಯೊಗಳಲ್ಲಿ ಉಂಟಾಗುವ ಮಸುಕುತನ ಅಥವಾ ಅಸ್ಪಷ್ಟತೆಯನ್ನು ಕಡಿಮೆ ಮಾಡಲು ವೀಡಿಯೊ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್ (ವಿಡಿಐಎಸ್) ತಂತ್ರಜ್ಞಾನ ಹೊಂದಿರುವ 50ಎಂಪಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಗ್ಯಾಲಕ್ಸಿ ಎಫ್15ಜಿ ಸ್ಪಷ್ಟವಾದ ಚೆಂದದ ಸೆಲ್ಫಿಗಳಿಗಾಗಿ 13ಎಂಪಿ ಫ್ರಂಟ್ ಕ್ಯಾಮೆರಾವನ್ನು ಸಹ ಹೊಂದಿದೆ.
ಗ್ಯಾಲಕ್ಸಿ ಎಕ್ಸ್ ಪೀರಿಯನ್ಸ್
ಗ್ಯಾಲಕ್ಸಿ ಎಫ್15ಜಿ ನಿಜವಾಗಿಯೂ ಅದ್ಭುತ ಕರೆ ಅನುಭವ ಒದಗಿಸುತ್ತದೆ. ವಾತಾವರಣದ ಶಬ್ದವನ್ನು ಕಡಿತಗೊಳಿಸುವ ವಾಯ್ಸ್ ಫೋಕಸ್ನಂತಹ ಫೀಚರ್ ಗ್ರಾಹಕರಿಗೆ ವಿಶಿಷ್ಟ ಅನುಭ ನೀಡುತ್ತದೆ. ಗ್ಯಾಲಕ್ಸಿ ಎಫ್15ಜಿ ಗ್ಯಾಲಕ್ಸಿ ಅನುಭವವನ್ನು ಹೆಚ್ಚಿಸುವ ಹಲವಾರು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ದೊರೆಯುತ್ತದೆ. ಕ್ವಿಕ್ ಶೇರ್ ಫೀಚರ್ ನಿಮ್ಮ ಇತರ ಲ್ಯಾಪ್ಟಾಪ್ ಮತ್ತು ಟ್ಯಾಬ್ ಇತ್ಯಾದಿಗಳು ದೂರದಲ್ಲಿದ್ದರೂ ಸಹ ಫೈಲ್ಗಳು, ಫೋಟೋಗಳು ಮತ್ತು ಡಾಕ್ಯುಮೆಂಟ್ಗಳನ್ನು ತ್ವರಿತವಾಗಿ ಹಂಚಿಕೊಳ್ಳಲು ಸಾಧ್ಯವಾಗಿಸುತ್ತದೆ. ಹೆಚ್ಚುವರಿಯಾಗಿ, ಗ್ಯಾಲಕ್ಸಿ ಎಫ್15ಜಿ ಸ್ಮಾರ್ಟ್ ಹಾಟ್ಸ್ಪಾಟ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ಇದು ಶೇರ್ ಡ್ ಕನೆಕ್ಟಿವಿಟಿಯನ್ನು ಸುಲಭವಾಗಿಸುತ್ತದೆ. ಸಾಧನವು ನಾಕ್ಸ್ ವಾಲ್ಟ್ ಚಿಪ್ಸೆಟ್ ಹೊಂದಿದೆ. ಅದು ಚಿಪ್ ಮಟ್ಟದಲ್ಲಿ ನಿರ್ಮಿತವಾಗಿದ್ದು, ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಅಪಾಯಗಳ ವಿರುದ್ಧ ರಕ್ಷಣೆ ಮಾಡಲು ಪಿನ್ಗಳು, ಪಾಸ್ವರ್ಡ್ಗಳು ಮತ್ತು ಪ್ಯಾಟರ್ನ್ಗಳಂತಹ ನಿಮ್ಮ ಸೂಕ್ಷ್ಮ ಡೇಟಾವನ್ನು ರಕ್ಷಿಸುತ್ತದೆ.
ಭವಿಷ್ಯಕ್ಕೆ ಸಿದ್ಧ
ವಿಭಾಗದ ಮತ್ತೊಂದು ಶ್ರೇಷ್ಠತೆ ಎಂದರೆ ಗ್ಯಾಲಕ್ಸಿ ಎಫ್15ಜಿ 4 ಜನರೇಷನ್ ಗಳ ಆಂಡ್ರಾಯ್ಡ್ ಅಪ್ಡೇಟ್ ಗಳು ಮತ್ತು ಐದು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಗಳನ್ನು ಹೊಂದಿದೆ. ಬಳಕೆದಾರರು ಮುಂಬರುವ ವರ್ಷಗಳಲ್ಲಿ ಹೊಸ ಫೀಚರ್ ಗಳು ಮತ್ತು ಹೆಚ್ಚಿನ ಭದ್ರತೆಯನ್ನು ಪಡೆಯಬಹುದು.
ಮೆಮೊರಿ ವೇರಿಯಂಟ್ ಗಳು, ಬೆಲೆ, ಲಭ್ಯತೆ ಮತ್ತು ಆಫರ್ ಗಳು
ಗ್ಯಾಲಕ್ಸಿ ಎಫ್15ಜಿ ಆಶ್ ಬ್ಲ್ಯಾಕ್, ಗ್ರೂವಿ ವೈಲೆಟ್ ಮತ್ತು ಜಾಝಿ ಗ್ರೀನ್ ಎಂಬ ಮೂರು ಬೆರಗುಗೊಳಿಸುವ ಬಣ್ಣಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎಫ್15ಜಿ 4ಜಿಬಿ+128ಜಿಬಿ ಮತ್ತು 6ಜಿಬಿ+128ಜಿಬಿ ಸ್ಟೋರೇಜ್ ವೇರಿಯಂಟ್ ಗಳಲ್ಲಿ ಸಿಗುತ್ತದೆ. ಇದು ಫ್ಲಿಪ್ ಕಾರ್ಟ್, Samsung.com ಮತ್ತು ಆಯ್ದ ರಿಟೇಲ್ ಅಂಗಡಿಗಳಲ್ಲಿ ಮಾರ್ಚ್ 11ರಿಂದ ಲಭ್ಯವಿರುತ್ತದೆ.
ಇಂದು ಮಾರ್ಚ್ 4 ರಂದು ಸಂಜೆ 7 ಗಂಟೆಗೆ ಫ್ಲಿಪ್ಕಾರ್ಟ್ನಲ್ಲಿ ಗ್ಯಾಲಕ್ಸಿ ಎಫ್15ಜಿಯ ಆರಂಭಿಕ ಮಾರಾಟ ನಡೆಯಲಿದೆ. ಆರಂಭಿಕ ಮಾರಾಟದಲ್ಲಿ ಗ್ಯಾಲಕ್ಸಿ ಎಫ್15ಜಿ ಅನ್ನು ಖರೀದಿಸುವ ಗ್ರಾಹಕರು ಕೇವಲ ರೂ.299ಕ್ಕೆ ರೂ.1299 ಮೌಲ್ಯದ ಸ್ಯಾಮ್ಸಂಗ್ ಟ್ರಾವೆಲ್ ಅಡಾಪ್ಟರ್ ಅನ್ನು ಪಡೆಯುತ್ತಾರೆ.