ಬೆಂಗಳೂರು: ಕೋಟಕ್ ಮಹಿಂದ್ರ ಬ್ಯಾಂಕ್ ಲಿಮಿಟೆಡ್(“KMBL” / “Kotak”), ಮಹತ್ವಾಕಾಂಖೆಯುಳ್ಳ ಗ್ರಾಹಕರಿಗಾಗಿ ಇನ್ನೂ ಸ್ಮಾರ್ಟ್ ಆದ ಪರಿಹಾರವಾದ ಸ್ಮಾರ್ಟ್ ಚಾಯ್ಸ್ ಗೋಲ್ಡ್ ಲೋನ್ನ ಪರಿಚಯವನ್ನು ಇಂದು ಘೋಷಿಸಿತು. 5 ಪ್ರಮುಖ ಅಂಶಗಳಿರುವ ಕೋಟಕ್ ಸ್ಮಾರ್ಟ್ ಚಾಯ್ಸ್ ಗೋಲ್ಡ್ ಲೋನ್ಸ್, ಸಾಂಪ್ರದಾಯಿಕ ಸಾಲ ಆಯ್ಕೆಗಳಿಗೆ ಮನಸೆಳೆಯುವ ಪರ್ಯಾಯ ಒದಗಿಸುತ್ತದೆ. ಇದರ ಪ್ರಮುಖಾಂಶಗಳು, 0.88%ನಷ್ಟು ಕಡಿಮೆ ಇರುವ ನಿಶ್ಚಿತ ಮಾಸಿಕ ಬಡ್ಡಿ, ಶೂನ್ಯ ಪ್ರಾಸೆಸಿಂಗ್ ಶುಲ್ಕ *, ಅದೇ ದಿನ ವಿತರಣೆ**, ಪರಿವರ್ತನೀಯ ಮರುಪಾವತಿ ಆಯ್ಕೆಗಳು ಹಾಗೂ ಕನಿಷ್ಟ ದಾಖಲೆಗಳನ್ನು ಒಳಗೊಂಡಿವೆ.
ವಿಶ್ವ ಸ್ವರ್ಣ ಕೌನ್ಸಿಲ್ ವರದಿಯ ಪ್ರಕಾರ, ಭಾರತೀಯ ಮನೆಗಳಲ್ಲಿ 27,000 ಟನ್ ಚಿನ್ನ ಇದೆ. ಮೇಲಾಗಿ, ಡಿಸಂಬರ್’23ರಿಂದ ಬಂದಿರುವ CIBIL ಡೇಟಾ, ಬಂಗಾರ ಸಾಲ ಉದ್ದಿಮೆಯ ಸಾಲಗಳು ರೂ.7.15 ಲಕ್ಷ ಕೋಟಿ ಇದೆ ಎಂದು ತೋರಿಸುತ್ತದೆ ಮತ್ತು ಕಳೆದ 3 ವರ್ಷಗಳಲ್ಲಿ ಇದು 19%, CAGRನಲ್ಲಿ ಬೆಳವಣಿಗೆ ಹೊಂದಿದೆ. ಏರುತ್ತಿರುವ ಬಂಗಾರದ ದರಗಳು ಮತ್ತು ಬ್ಯಾಂಕುಗಳು ನ್ಹಾಗೂ ಎನ್ಬಿಎಫ್ಸಿಗಳಿಂದ ಸುಲಭವಾದ ಬಂಗಾರ ಸಾಲದ ಲಭ್ಯತೆಯು, ಅಸಂಖ್ಯ ಗ್ರಾಹಕರು, ತಮ್ಮ ಸಾಲ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ತಮ್ಮ ಬಂಗಾರ ಆಭರಣಗಳ ಮೌಲ್ಯವನ್ನು ಅನಾವರಣಗೊಳಿಸಿಕೊಳ್ಳಲು ಕಾರಣವಾಗಿದೆ.
ಕೋಟಕ್ “ಸ್ಮಾರ್ಟ್ ಚಾಯ್ಸ್” ಬಂಗಾರ ಸಾಲವನ್ನು, ಬ್ಯಾಂಕ್ ಸಂಗ್ರಹಿಸಿದ ಗ್ರಾಹಕ ಸಂಶೋಧನೆಯ ಆಧಾರದ ಮೇಲೆ ಅಭಿವೃದ್ಧಿ ಪಡಿಸಲಾಯಿತು. ಗ್ರಾಹಕರು ತಮ್ಮ ಸಾಲ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಗರಿಷ್ಟ ಮೌಲ್ಯ ಹಾಗೂ ಪರಿವರ್ತನೀಯತೆ ಒದಗಿಸುವ ಒಂದು ಉತ್ಪನ್ನದ ಅಗತ್ಯವನ್ನು ಅದು ಎತ್ತಿ ಹೇಳಿತ್ತು.
ಕಠಿಣ ಅರ್ಹತೆಗಳ ಅಗತ್ಯವಿರುವ ಇತರ ಸಾಲ ಉತ್ಪನ್ನಗಳಲ್ಲಂತಲ್ಲದೆ, ಬಂಗಾರ ಸಾಲವು, ಅತಿಸುಲಭವಾದ ಅರ್ಜಿ ಮತ್ತು ವಿತರಣಾ ಪ್ರಕ್ರಿಯೆ ಹೊಂದಿದೆ. ಬಂಗಾರವನ್ನು ಭದ್ರತೆಯನ್ನಾಗಿ ಇಡುವ ಮೂಲಕ ಸಾಲಗಾರರು, ಸಾಂಪ್ರದಾಯಿಕ ಸಾಲಕ್ಕೆ ಹೋಲಿಸಿದರೆ ಕಡಿಮೆ ಬಡ್ಡಿದರಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗುವುದರಿಂದ, ಸಾಲದ ಅವಧಿಯ ಸಮಯದಲ್ಲಿ ಉಳಿತಾಯ ಏರ್ಪಡುತ್ತದೆ.
ಕೋಟಕ್ ಮಹಿಂದ್ರ ಬ್ಯಾಂಕ್ನ ರೀಟೇಲ್ ಕೃಷಿ ಮತ್ತು ಬಂಗಾರ ಸಾಲ ವಿಭಾಗದ ಅಧ್ಯಕ್ಷ ಶ್ರೀಪಾದ್ ಜಾಧವ್, “ಬಂಗಾರ ಸಾಲಗಳು ವೈವಿಧ್ಯಮಯವಾದ ಹಣಕಾಸು ಉತ್ಪನ್ನವಾಗಿದ್ದು, ಗ್ರಾಹಕ ವಿವಿಧ ಶ್ರೇಣಿಯ ಅಗತ್ಯಗಳನ್ನು ಪೂರೈಸುತ್ತದೆ. ಸುಲಭ ಪ್ರವೇಶಾವಕಾಶ, ಅದೇ ದಿನ ಪ್ರಕ್ರಿಯೆ, ಆಕರ್ಷಕ ಬೆಲೆಗಳು ಹಾಗೂ ಬಂಗಾರ ಆಭರಣಗಳ ಭದ್ರತೆ ಮುಂತಾದವು, ಮಹತ್ವಾಕಾಂಕ್ಷೆಯುಳ್ಳ ಗ್ರಾಹಕರನ್ನು ಸೆಳೆಯುತ್ತದೆ. ಇದರ ಪರಿಣಾಮವಾಗಿ, ಇತರ ಸಾಲ ಉತ್ಪನ್ನಗಳಿಗೆ ಹೋಲಿಸಿದರೆ, ಅಸಂಖ್ಯ ವ್ಯಕ್ತಿಗಳು, ಬಂಗಾರ ಸಾಲವನ್ನು ಒಂದು ಬೆಲೆ ದುಬಾರಿಯಲ್ಲದ ಆಯ್ಕೆಯನ್ನಾಗಿ ಪರಿಗಣಿಸುತ್ತಿದ್ದಾರೆ. ಇದು, ಗ್ರಾಹಕರ ಹಣಕಾಸು ನಡವಳಿಕೆಯಲ್ಲಿ ಬದಲಾವಣೆಯ ಪ್ರವೃತ್ತಿಯನ್ನು ಸೂಚಿಸುತ್ತದೆ. ಕೋಟಕ್ “ಸ್ಮಾರ್ಟ್ ಚಾಯ್ಸ್” ಬಂಗಾರ ಸಾಲಗಳು ಮಹತ್ವಾಕಾಂಕ್ಷೆಗಳು ಹಾಗೂ ವಾಸ್ತವತೆಯ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಒಂದು ಸುಲಭವಾದ ಹಾಗೂ ವಿಶ್ವಸನೀಯ ಹಣಕಾಸು ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ.”ಎಂದು ಹೇಳಿದರು.
ಉತ್ಪನ್ನದ ಪರಿಚಯವು, ಮಾರ್ಚ್ 1, 2024ರಿಂದ ಆರಂಭಗೊಂಡು, ಹೊಸ ಬಹುಮಾಧ್ಯಮ ಜಾಹೀರಾತು ಪ್ರಚಾರದ ಮೂಲಕ ನಡೆಯಲಿದೆ. ಮೊದಲ ಹಂತರದಲ್ಲಿ ಪ್ರಚಾರವು, ಟಿವಿ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಡಿಜಿಟಲ್ ಹಾಗೂ ಸಮೂಹ ಮಾಧ್ಯಮ ವೇದಿಕೆಗಳಾದ್ಯಂತ ನೇರಪ್ರಸಾರಗೊಳ್ಳಲಿದೆ.
ಕೋಟಕ್ ಮಹಿಂದ್ರ ಬ್ಯಾಂಕ್ನ ರೀಟೇಲ್ ಲಯಾಬಿಲಿಟೀಸ್ ಪ್ರಾಡಕ್ಟ್ ಮುಖ್ಯಸ್ಥ ಹಾಗೂ ಚೀಫ್ ಮಾರ್ಕೆಟಿಂಗ್ ಆಫಿಸರ್ ರೋಹಿತ್ ಭಾಸಿನ್, “ಇಂದಿನ ಗ್ರಾಹಕರು, ಸಾಲದೆಡೆಗಿನ ತಮ್ಮ ದೃಷ್ಟಿಕೋನದಲ್ಲಿ ಮಹತ್ವಾಕಾಂಕ್ಷೆಯುಳ್ಳವರಾಗಿದ್ದು, ಮೌಲ್ಯ-ಪ್ರೆಜ್ಞೆಯುಳ್ಳವರಾಗಿದ್ದಾರೆ. ಒಂದು ಸ್ಮಾರ್ಟ್ ಆದ ಹಾಗೂ ಸುರಕ್ಷಿತವಾದ ಆಯ್ಕೆಯಾಗಿ ಬಂಗಾರ ಸಾಲಗಳು, ಗ್ರಾಹಕರು ತಮ್ಮ ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಳ್ಳಲು, ಅವರ ಅಗತ್ಯಕ್ಕೆ ಸರಿಹೊಂದುವಂತ ಹಣಕಾಸು ಆಯ್ಕೆಯಾಗಿದೆ. ನಮ್ಮ ಜಾಹೀರಾತು ಪ್ರಚಾರವ್ಚು, ತಂತ್ರಜ್ಞಾನ ಪ್ರಜ್ಞೆಯುಳ್ಳ ಗ್ರಾಹಕರಿಗೆ ಬಂಗಾರ ಸಾಲಗಳ ಮೌಲ್ಯ ಮತ್ತು ಉಪಯುಕ್ತತೆಯ ಜೊತೆಜೊತೆಗೇ ಇದೇ ಪ್ರಯೋಜನಗಳನ್ನು ಒದಗಿಸುವ ಗುರಿ ಹೊಂದಿರುವುದರಿಂದ, ವಿವಿಧ ಬಳಕೆ ಸಂದರ್ಭಗಳಾದ್ಯಂತ, ಕೋಟಕ್ “ಸ್ಮಾರ್ಟ್ ಚಾಯ್ಸ್” ಬಂಗಾರ ಸಾಲದ ದರ, ಅನುಕೂಲತೆ ಮತ್ತು ಸುರಕ್ಷತೆಯನ್ನು ಎತ್ತಿತೋರಿಸುತ್ತದೆ.” ಎಂದು ಹೇಳಿದರು.
ಟಿವಿಸಿ, ಸಾಲವನ್ನು ತೆಗೆದುಕೊಳ್ಳಲು ತಮ್ಮಲ್ಲಿಯೇ ಬಂಗಾರ ಆಭರಣ ಎಂಬ ಸ್ಮಾರ್ಟ್ ಆದ ವಿಧಾನ ಇದ್ದರೂ, ಅದನ್ನು ಪಡೆದುಕೊಳ್ಳಲು ಹತಾಶೆಯಿಂದ ಪ್ರಯತ್ನಿಸುತ್ತಿರುವ ವ್ಯಕ್ತಿಗಳನ್ನು ತೋರಿಸುತ್ತದೆ.ಮನಸೆಳಯುವ ಕಥಾನಕದ ಮೂಲಕ ವಿವಿಧ ಭೌಗೋಳಿಕ ಪ್ರದೇಶಗಳಾದ್ಯಂತ ಇರುವ ಪ್ರೇಕ್ಷಕರೊಡನೆ ಸ್ಪಂದಿಸುವ ಕೋಟಕ್, ಬಂಗಾರ ಸಾಲವನ್ನು ಪಡೆದುಕೊಳ್ಳುವ ಸರಳತೆ ಮತ್ತು ಅನುಕೂಲತೆಯನ್ನು ಎತ್ತಿ ತೋರಿಸಿ, ಶೀಘ್ರವಾದ ಹಾಗೂ ಅಡಚಣೆರಹಿತ ಹಣಕಾಸು ನೆರವು ನಿರೀಕ್ಷಿಸುತ್ತಿರುವ ಗ್ರಾಹಕರಿಗೆ ಅದನ್ನು ಒಂದು ಸಾಧ್ಯಂತ ಆಯ್ಕೆಯನ್ನಾಗಿ ತೋರಿಸುತ್ತದೆ.
ಟಿವಿಸಿ ಹಿಂದಿ ಲಿಂಕ್ಗಳು:
ಪೆನ್: https://youtu.be/5CBIG0BMH8A
ಸ್ಪೆಕ್ಟಕಲ್: https://youtu.be/772C9UWbmWk
ಅಂಬ್ರೆಲ: https://youtu.be/4xqXKIXZQOo
ಟಿವಿಸಿ ಮರಾಠಿ ಲಿಂಕ್ಗಳು:
ಸ್ಪೆಕ್ಟಕಲ್: https://youtu.be/d6kZ3Jn2WUc
ಪೆನ್: https://youtu.be/AgikA87DSo8
ಅಂಬ್ರೆಲ: https://youtu.be/kZxzB_7GShs