ಮಂಗಳೂರು: ಚರ್ಚ್ ಧರ್ಮಗುರುವಿನಿಂದ ವೃದ್ಧ ದಂಪತಿಗಳ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದ ಎರ್ಮೆತ್ತಡ್ಕ ಎಂಬಲ್ಲಿ ಘಟನೆ ನಡೆದಿದೆ. ಮನೆಲ ಚರ್ಚ್ ನ ಧರ್ಮಗುರು ಫಾ.ನೆಲ್ಸನ್ ಓಲಿವೆರಾ ಹಲ್ಲೆ ನಡೆಸಿದ ಪಾದ್ರಿ.
ಗ್ರೆಗರಿ ಮೊಂತೆರೋ(79) ಪತ್ನಿ ಫಿಲೋಮಿನಾ(72) ಹಲ್ಲೆಗೊಳಗಾದ ವೃದ್ಧ ದಂಪತಿ. ವೃದ್ಧರನ್ನು ಕಾಲಿನಿಂದ ಒದೆಯುತ್ತಿರುವ ಪಾದ್ರಿಯ ದೃಶ್ಯಗಳು ಲಭ್ಯವಾಗಿದೆ.
ಮನೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ಫೆ.29 ರಂದು ಘಟನೆ ನಡೆದಿದೆ.
ಮನೆ ಶುದ್ದಗೊಳಿಸುವ ನಿಮಿತ್ತ ಗ್ರೆಗರಿ ಮೊಂತೆರೋ ಮನೆಗೆ ಭೇಟಿ ನೀಡಿದ್ದ ಫಾದರ್.ಈ ಸಂದರ್ಭ ಚರ್ಚ್ ಗೆ ಯಾವುದೇ ದೇಣಿಗೆ,ವಂತಿಗೆ ನೀಡದಿರುವ ಬಗ್ಗೆ ಚರ್ಚೆ, ಮಾತಿಗೆ ಮಾತು ಬೆಳೆದು ವೃದ್ಧ ದಂಪತಿಗಳಿಗೆ ಫಾದರ್ ಹಲ್ಲೆ ನಡೆಸಿದ ಆರೋಪ ವ್ಯಕ್ತವಾಗಿದೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.