ಮಂಗಳೂರು: ಏನ್ ಶಿಯೆಂಟ್ ಟೈಮ್ಸ್ (ಮಲಯಾಳಸಮಿ ಪಿ) ಇವರು ಆಯೋಜಿಸಿರುವ ಕಾಯಿನ್ ಇಂಟಿಯಾ 2024 ನಾಣ್ಯಗಳು, ಅಂಚೆಚೀಟಿಗಳು, ಬ್ಯಾಂಕ್ ನೋಟುಗಳ ಮೆಡಲ್ಸ್ ಹಾಗೂ ಸಂಗ್ರಹಕ ವಸ್ತುಗಳ ಪ್ರದರ್ಶನ ಮಾರ್ಚ್ 2 ಮತ್ತು 3ರಂದು ಸಿಟಿ ಸೆಂಟರ್ ಹತ್ತಿರ ಇರುವ ಹೊಟೇಲ್ ಶ್ರೀನಿವಾಸ ಮಂಗಳಾ (ಎಸಿ) ಹಾಲ್ನಲ್ಲಿ ನಡೆಯುತ್ತಿದೆ.
ಈ ಪ್ರದರ್ಶನವನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಪತಿ ಸಿಎ ರಾಘವೇಂದ್ರ ರಾವ್ ಉದ್ಘಾಟನಯೆನ್ನು ನೆರವೇರಿಸಿದರು.
ಪ್ರದರ್ಶನವು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ ಹಾಗೂ ನಾಣ್ಯ ಅಂಚೆಚೀಟಿಗಳು, ಬ್ಯಾಂಕ್ ನೋಟುಗಳನ್ನು ವೀಕ್ಷಿಸಲು, ಖರೀದಿಸಲು ಮತ್ತು ಮಾರಾಟದ ಅವಕಾಶವಿದೆಯೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಮಾಹಿತಿಗಾಗಿ ಸಂಪರ್ಕಿಸಿರಿ: 98434 48548.