ಬೆಂಗಳೂರು: 23ನೇ ಫೆಬ್ರವರಿ 2024 ರ ಸುತ್ತೋಲೆಯಲ್ಲಿಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಡ್ಡಾಯ ಕೆವೈಸಿಪರಿಶೀಲನೆಯಿಲ್ಲದೆಯೇ ವಿವಿಧ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಬಳಸಬಹುದಾದ ಪ್ರಿಪೇಯ್ಡ್ ಕಾರ್ಡ್ಗಳನ್ನು ಒದಗಿಸಲು ಪರವಾನಗಿ ಪಡೆದ ಬ್ಯಾಂಕ್ ಮತ್ತು ಬ್ಯಾಂಕೇತರ ನಿರ್ವಹಣೆಯ ಪ್ರಿಪೇಯ್ಡ್ ಪೇಮೆಂಟ್ ಇನ್ ಸ್ಟ್ರುಮೆಂಟ್(ಪಿಪಿಐಗಳು)ಗಳಿಗೆಅನುಮತಿ ನೀಡಿದೆ. ಪ್ರಮುಖ ಪಿಪಿಐ ಕೊಡುಗೆದಾರರಲ್ಲಿ ಒಬ್ಬರಾಗಿರುವ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್(NCMC) ಮುಕ್ತ-ಲೂಪ್ ಕಾರ್ಡ್ ಆಗಿದ್ದು, ಇದನ್ನು ಮೆಟ್ರೋದಂತಹ ಭಾರತದ ವಿವಿಧ ಸಾರಿಗೆ ನೆಟ್ ವರ್ಕ್ ಗಳಲ್ಲಿ ಬಳಸಬಹುದಾಗಿದೆ.
AGS ಟ್ರಾನ್ಸಾಕ್ಟ್ ಟೆಕ್ನಾಲಜೀಸ್, ಭಾರತದಲ್ಲಿನ ಅತಿದೊಡ್ಡ ಓಮ್ನಿಚಾನಲ್ ಇಂಟಿಗ್ರೇಟೆಡ್ ಪೇಮೆಂಟ್ಸ್ ಸೊಲ್ಯೂಷನ್ಸ್ ಪೂರೈಕೆದಾರರಲ್ಲಿ ಒಂದಾಗಿದೆ. ಜೊತೆಗೆಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಮೆಟ್ರೋಗಾಗಿ NCMC ನೀಡಲು ಆರ್ಬಿಎಲ್ಬ್ಯಾಂಕ್ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.
ಆರ್ಬಿಐಯ ಇತ್ತೀಚಿನ ಘೋಷಣೆಯ ಬಳಿಕ, ಕಂಪನಿಯು ಜೂನ್ 2024ರ ವೇಳೆಗೆ ಸುಮಾರು 2 ಲಕ್ಷ NCMCಯ ಒಗಿಸುವ ನಿರೀಕ್ಷೆ ಇದೆ. NCMCಯ ವಿತರಣೆಯ ಹೊಸ ಪ್ರಕ್ರಿಯೆಯು ಮಾರ್ಚ್ ಮಧ್ಯದ ವೇಳೆಗೆ ಜಾರಿಗೆ ಬರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ, AGS ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 25 ಲಕ್ಷ NCMCಗಳನ್ನು ವಿತರಿಸಲು ಪ್ಲಾನ್ ಮಾಡಿಕೊಂಡಿದೆ.
ಆರ್ಬಿಎಲ್ ಬ್ಯಾಂಕ್ ಬಿಎಂಆರ್ಸಿಎಲ್ NCMCಗಳು ರುಪೇ ಪ್ಲಾಟ್ಫಾರ್ಮ್ನಲ್ಲಿ ಕಾರ್ಯನಿರ್ವಹಿಸುವ ಸುರಕ್ಷಿತ ಮತ್ತು ಸಂಪರ್ಕ ರಹಿತ ಮುಕ್ತ ಲೂಪ್ ಪ್ರಿಪೇಯ್ಡ್ ಕಾರ್ಡ್ಗಳಾಗಿವೆ. ಇವುಗಳನ್ನು ಬಿಎಂಆರ್ಸಿಎಲ್ ಆರ್ಬಿಎಲ್ ಬ್ಯಾಂಕ್ NCMC ಆಪ್ ಅಥವಾ ವೆಬ್ ಪೋರ್ಟಲ್ ಮೂಲಕ ಮತ್ತು ಬಿಎಂಆರ್ಸಿಎಲ್ ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಆರ್ಬಿಎಲ್ ಬ್ಯಾಂಕ್ ಶಾಖೆಗಳಲ್ಲಿ ಸುಲಭವಾಗಿ ರೀಚಾರ್ಜ್ ಮಾಡಬಹುದು. ಕೆಳಮಹಡಿ ಪಾರ್ಕಿಂಗ್ ಮತ್ತು ಮೆಟ್ರೋ ನಿಲ್ದಾಣಗಳಂತಹ ಕಡಿಮೆ ನೆಟ್ವರ್ಕ್ ಇರುವ ಪ್ರದೇಶಗಳಲ್ಲಿಯೂ ಸಹ ಕಾರ್ಯನಿರ್ವಹಿಸುವಂತೆ NCMCಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕ ಸಾರಿಗೆ ಪಾವತಿಗಳ ಜೊತೆ, ಕಾರ್ಡ್ಗಳನ್ನು ಇಂಧನ, ಬಿಲ್ ಪಾವತಿಗಳು, ರೆಸ್ಟೋರೆಂಟ್ ಜೊತೆಗೆ ರುಪೇ ಪಾವತಿಗಳನ್ನು ಸ್ವೀಕರಿಸುವ ರಿಟೇಲ್ ಮತ್ತು ಇಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ಬಳಸಬಹುದು.
AGS ಟ್ರಾನ್ಸಾಕ್ಟ್ ಟೆಕ್ನಾಲಜೀಸ್ ನಿಂದ ನಡೆಸಲ್ಪಡುವ RBL BMRCL NCMCಗೆ ಅರ್ಜಿ ಸಲ್ಲಿಸಲು ಪ್ರಸ್ತುತ ಕ್ರಮಗಳು:
• ಮೊಬೈಲ್ ಆಪ್: Google Play Storeನಲ್ಲಿ “BMRCL RBLBankNCMC” ಆಪ್ ಅನ್ನು ಡೌನ್ಲೋಡ್ ಮಾಡಿ ಅಥವಾವೆಬ್ ಪೋರ್ಟಲ್: https://nammametro.agsindia.com/ವೆಬ್ ಪೋರ್ಟಲ್ಗೆ ಭೇಟಿ ನೀಡಿ
• ಆಪ್/ ವೆಬ್ ಪೋರ್ಟಲ್ನಲ್ಲಿ ರಿಜಿಸ್ಟರ್ ಮಾಡಿ. ಓಟಿಪಿ ಪರಿಶೀಲನೆಯ ಬಳಿಕ ರಿಜಿಸ್ಟ್ರೇಷನ್ ನಂಬರ್ ರಚಿಸಲಾಗುತ್ತದೆ.
• ಈಗ ಹತ್ತಿರದ ಬೆಂಗಳೂರು ಮೆಟ್ರೋ ನಿಲ್ದಾಣ ಅಥವಾ RBL ಬ್ಯಾಂಕ್ ಶಾಖೆಯಲ್ಲಿರುವ ಟಿಕೆಟ್ ಕೌಂಟರ್ಗೆ ಭೇಟಿ ನೀಡಿ ಮತ್ತು ರಿಜಿಸ್ಟ್ರೇಷನ್ ನಂಬರ್ ಅನ್ನು ಒದಗಿಸಿ. ನಿಮ್ಮ NCMC ಅನ್ನು ಅಲ್ಲಿ ಆಕ್ಟಿವೇಟ್ ಮಾಡಲಾಗುತ್ತದೆ ಮತ್ತು ಓಟಿಪಿದೃಢೀಕರಣದ ನಂತರ ಭೌತಿಕ ಕಾರ್ಡ್ ಅನ್ನು ನೀಡಲಾಗುತ್ತದೆ. ಶಾಪಿಂಗ್, ಇ-ಕಾಮರ್ಸ್ ಮತ್ತು ಭೋಜನದಂತಹ ವಹಿವಾಟುಗಳಿಗೆ ಕಾರ್ಡ್ ಕಾರ್ಯನಿರ್ವಹಿಸಲಿದೆ.
• ನೀವು ಯುಪಿಐ, ವ್ಯಾಲೆಟ್ಗಳು, ಕ್ರೆಡಿಟ್/ಡೆಬಿಟ್ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ NCMC ಅನ್ನು ರಿಚಾರ್ಜ್ ಮಾಡಬಹುದು ಅಥವಾ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಬಹುದು.
• ಮೆಟ್ರೋದಂತಹ ಸಾರಿಗೆ ಸೇವೆಗಳಲ್ಲಿ ಪ್ರಯಾಣಿಸಲು, ನಿಮ್ಮ ಆಪ್ ಅಥವಾ ವೆಬ್ ಪೋರ್ಟಲ್ನಲ್ಲಿ ನಿಮ್ಮ ಆನ್ಲೈನ್ ವ್ಯಾಲೆಟ್ನಿಂದ ಆಫ್ಲೈನ್ ವ್ಯಾಲೆಟ್ಗೆ ಹಣವನ್ನು ವರ್ಗಾಯಿಸಿ.
• BMRCL ಮೆಟ್ರೋ ನಿಲ್ದಾಣದಲ್ಲಿ ಸ್ವಯಂ ಸೇವಾ ಕಿಯೋಸ್ಕ್ನಲ್ಲಿ ನಿಮ್ಮ NCMC ಅನ್ನು ಟ್ಯಾಪ್ ಮಾಡಿ ಮತ್ತು ಪ್ರಯಾಣದ ಅನುಭವವನ್ನು ಆನಂದಿಸಿ.