ಮಂಗಳೂರು: ಪುತ್ತಿಲ ಪರಿವಾರ ಒಂದು ಸ್ವತಂತ್ರ ಸಂಸ್ಥೆ.ಆ ಸಂಸ್ಥೆಗೆ ತೀರ್ಮಾನ ತೆಗೆದುಕೊಳ್ಳುವ ಸ್ವಾತಂತ್ರ್ಯ ಇದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಪುತ್ತಿಲ ಪರಿವಾರ ದಿಂದ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಸ್ಪರ್ಧೆ ವಿಚಾರ ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.
ಅವರ ಮನವೊಲಿಕೆಗೆ ಪಾರ್ಟಿ ಪ್ರಯತ್ನ ಮಾಡಿದೆ.ಭಾಜಪಾ ಬಹಳ ವರ್ಷಗಳ ಹೋರಾಟದಿಂದ ಅತೀ ದೊಡ್ಡ ಪಾರ್ಟಿಯಾಗಿ ಬೆಳೆದಿದೆ.
ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ನ್ನು ಎದುರಿಸಿ ಲೋಕಸಭೆಯಲ್ಲಿ ಅತೀ ಹೆಚ್ಚು ಸೀಟು ಗೆದ್ದಿದೆ.ಪಕ್ಷಕ್ಕೆ ಎದಯರಾಳಿಯ ಪ್ರಶ್ನೆ ಇಲ್ಲ.
ಇದು ಪ್ರಜಾಪ್ರಭುತ್ವ,ಚುನಾವಣಾ ನಿಲ್ಲುವ ಹಕ್ಕು ಎಲ್ಲರಿಗೂ ಇದೆ.ಪ್ರತೀ ಚುನಾವಣೆಗೆ ಬಂದಾಗ ಹತ್ತಾರು ಸಮಸ್ಯೆಗಳು ಉದ್ಭವವಾಗುತ್ತದೆ.
ಆ ಎಲ್ಲಾ ಸವಾಲುಗಳನ್ನು ಬಿಜೆಪಿ ಗೆದ್ದು ಗೆಲುವು ಸಾಧಿಸಿದೆ.ರಾಮಮಂದಿರ ನಿರ್ಮಾಣದ ವಾದ ಬಳಿಕ ಬಿಜೆಪಿ ಪರವಾದ ವಾತವರಣ ಅದ್ಭುತ ವಾಗಿದೆ.ಹಿಂದುತ್ವ,ರಾಷ್ಟ್ರವಾದ,ಅಭಿವೃದ್ಧಿ ವಿಚಾರವಾಗಿ ಜನ ಒಗ್ಗಟಾಗುತ್ತಾರೆ.
ವಿಧಾನಸಭಾ ಚುನಾವಣೆಗೂ ಲೋಕಸಭಾ ಚುನಾವಣೆಗೂ ವ್ಯತ್ಯಾಸ ಇದೆ.ಆಗಿನ ಸಮಸ್ಯೆ ಬೇರೆ ಈಗಿನ ವಿಚಾರ ವಿಚಾರ.
ಈ ಬಾರಿಯ ಚುನಾವಣೆಯಲ್ಲೂ ಭಾರೀ ಗೆಲುವು ಸಾಧಿಸುತ್ತೇನೆ.ಸೀಟು ಕೊಡೋದು ಬಿಡೋದು ರಾಷ್ಟ್ರೀಯ ನಾಯಕರ ತೀರ್ಮಾನ. ಆ ತೀರ್ಮಾನಕ್ಕೆ ಕಾರ್ಯಕರ್ತನಾಗಿ ಬದ್ಧನಾಗಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.