ಮಂಗಳೂರು : ಮಂಗಳವಾರ ನಾಪತ್ತೆಯಾಗಿದ್ದ ಸುರತ್ಕಲ್ ವಿದ್ಯಾದಾಯಿನಿ ಶಾಲೆಯ ನಾಲ್ವರು ಮಕ್ಕಳ ಮೃತ ದೇಹಗಳು ಹಳೆಯಂಗಡಿ ಪಾವಂಜೆ ನದಿಯಲ್ಲಿ ಪತ್ತೆಯಾಗಿದೆ.
10ನೇ ತರಗತಿ ಕಲಿಯುತ್ತಿದ್ದ ನಾಲ್ವರು ವಿದ್ಯಾರ್ಥಿಗಳ ಮೃತ ದೇಹಗಳುಇ ಹಳೆಯಂಗಡಿ ಕರಿತೋಟ ಎಂಬಲ್ಲಿ ಪೊಲೀಸರಿಗೆ ಮಂಗಳವಾರ ತಡ ರಾತ್ರಿ ಸಿಕ್ಕಿದ್ದು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಸುರತ್ಕಲ್ ನ ವಿದ್ಯಾದಾಯಿನೀ ಶಾಲೆಯ ವಿಧ್ಯಾರ್ಥಿಗಳಾದ ಯಶ್ವಿತ್, ನಿರೂಪ್, ಅನ್ವಿತ್, ರಾಘವೇಂದ್ರ ಮೃತ ವಿದ್ಯಾರ್ಥಿಗಳಾಗಿದ್ದು ಸುರತ್ಕಲ್ ನ ವಿದ್ಯಾದಾಯಿನೀ ಶಾಲೆಯಲ್ಲಿ ಹತ್ತನೇ ತರಗತಿ ಕಲಿಯುತ್ತಿದ್ದ ನಾಲ್ವರು ವಿಧ್ಯಾರ್ಥಿಗಳು ಮಂಗಳವಾರ ಮಧ್ಯಾಹ್ನ ಇಂಗ್ಲಿಷ್ ಪ್ರಿಪರೇಟರಿ ಪರೀಕ್ಷೆ ಬರೆದ ಬಳಿಕ ಸುಮಾರು 10 ವಿದ್ಯಾರ್ಥಿಗಳು ಪಾವಣಜೆ ನದಿ ಬದಿ ತೆರಳಿದ್ದು ಅದಲ್ಲಿ ಕೆಲ ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದರು ಅದಲ್ಲಿ ಈ ನಾಲ್ವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.