ಬೆಂಗಳೂರು: ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಇಂದು ಹೆಚ್ಚಿನ ಗ್ಯಾಲಕ್ಸಿ ಸಾಧನಗಳಿಗೆ ಗ್ಯಾಲಕ್ಸಿ ಎಐ ಫೀಚರ್ ಗಳನ್ನು ಒದಗಿಸುವ ಉದ್ದೇಶದಿಂದ ಹೊಸ ಒನ್ ಯುಐ 6.1 ಅಪ್ಡೇಟ್ ನೀಡುವುದಾಗಿ ಘೋಷಿಸಿದೆ. ಈ ಹೊಸ ಅಪ್ಡೇಟ್ ಗ್ಯಾಲಕ್ಸಿ ಎಸ್23 ಸರಣಿ, ಎಸ್23 ಎಫ್ಇ, ಝಡ್ ಫೋಲ್ಡ್5, ಝಡ್ ಫ್ಲಿಪ್5 ಮತ್ತು ಟ್ಯಾಬ್ ಎ9 ಸರಣಿಯ ಸಾಧನಗಳಿಗೆ ಮಾರ್ಚ್ ಅಂತ್ಯದಿಂದ ಲಭ್ಯವಾಗಲಿದೆ. ಇತ್ತೀಚಿಗೆ ಬಿಡುಗಡೆಯಾದ ಗ್ಯಾಲಕ್ಸಿ ಎಸ್24 ಸರಣಿಯ ಜೊತೆ ಹೊಂದಾಣಿಕೆ ಮಾಡುವುದಕ್ಕೆ ಬಿಡಲಾಗುತ್ತಿರುವ ಈ ಅಪ್ಡೇಟ್ ಆನ್-ಡಿವೈಸ್ ಮತ್ತು ಕ್ಲೌಡ್-ಆಧಾರಿತ ಎಐ ಅನ್ನು ಸಂಯೋಜಿಸುವ ಹೈಬ್ರಿಡ್ ವಿಧಾನದ ಮೂಲಕ ಬಳಕೆದಾರರ ಮೊಬೈಲ್ ಎಐ ಅನುಭವದ ಗುಣಮಟ್ಟವನ್ನು ಹೆಚ್ಚಿಸಲಿದೆ.
“ಗ್ಯಾಲಕ್ಸಿ ಎಐ ಮೂಲಕ ಮೊಬೈಲ್ ಎಐಯ ಹೊಸ ಯುಗವನ್ನು ಪ್ರಾರಂಭಿಸುವುದು ಮಾತ್ರವಲ್ಲದೆ ಎಐ ಅನ್ನು ಹೆಚ್ಚು ಜನರಿಗೆ ದೊರಕಿಸಿ ಬಳಕೆದಾರರನ್ನು ಸಬಲೀಕರಣಗೊಳಿಸುವುದು ನಮ್ಮ ಗುರಿಯಾಗಿದೆ” ಎಂದು ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ನ ಮೊಬೈಲ್ ಎಕ್ಸ್ಪೀರಿಯೆನ್ಸ್ ಬ್ಯುಸಿನೆಸ್ನ ಅಧ್ಯಕ್ಷ ಮತ್ತು ಮುಖ್ಯಸ್ಥ ಟಿಎಂ ರೋಹ್ ಹೇಳಿದ್ದಾರೆ. ಮಾತು ಮುಂದುವರಿಸುತ್ತಾ ಅವರು, “ಇದು ಗ್ಯಾಲಕ್ಸಿ ಎಐಯ ಪ್ರಾರಂಭ ಮಾತ್ರ, ಏಕೆಂದರೆ ನಾವು 2024ರೊಳಗೆ 100 ಮಿಲಿಯನ್ ಗ್ಯಾಲಕ್ಸಿ ಬಳಕೆದಾರರಿಗೆ ಎಐ ಅನುಭವವನ್ನು ಒದಗಿಸುವ ಆಲೋಚನೆ ನಮಗಿದೆ ಮತ್ತು ಮೊಬೈಲ್ ಎಐಯ ಅನಿಯಮಿತ ಸಾಧ್ಯತೆಗಳನ್ನು ಬಳಸಿಕೊಳ್ಳುವ ಮಾರ್ಗಗಳನ್ನು ನವೀಕರಿಸುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
ನಿರರ್ಗಳ ಸುಲಭ ಸಂವಹನ
ಈಗ ಇನ್ನೂ ಹೆಚ್ಚಿನ ಗ್ಯಾಲಕ್ಸಿ ಬಳಕೆದಾರರು ಎಐ ಬೆಂಬಲಿತ ಮಾಡೆಲ್ ಗಳಲ್ಲಿ ಲಭ್ಯವಿರುವ ಗ್ಯಾಲಕ್ಸಿ ಎಐ ವೈಶಿಷ್ಟ್ಯಗಳನ್ನು ಬಳಸಿಕೊಂಡು ಸುಲಭವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತದೆ. ಚಾಟ್ ಅಸಿಸ್ಟ್ ಫೀಚರ್ ಅನ್ನು ಬಳಸಿಕೊಂಡು 13 ವಿಭಿನ್ನ ಭಾಷೆಗಳಲ್ಲಿ ಸಂದೇಶ ಮಾಡಬಹುದಾದ ಮತ್ತು ಸಂದೇಶಗಳನ್ನು ಅನುವಾದಿಸುವ ಅವಕಾಶ ಲಭ್ಯವಿದೆ. ಲೈವ್ ಟ್ರಾನ್ಸ್ಲೇಟ್ ಫೀಚರ್ ಮೂಲಕ ಸುಲಭ ಸಂವಹನ ಸಾಧಿಸಬಹುದು. ಈ ಫೀಚರ್ ಫೋನ್ ಕರೆಗಳಿಗೆ ಧ್ವನಿ ಮತ್ತು ಪಠ್ಯ ಅನುವಾದ ಮಾಡುತ್ತದೆ. ಇಂಟರ್ಪ್ರಿಟರ್ ಫೀಚರ್ ಮೂಲಕ, ಬಳಕೆದಾರರು ಪ್ರಯಾಣದಲ್ಲಿ ಸ್ಥಳೀಯರೊಂದಿಗೆ ಸಂಭಾಷಣೆ ಮಾಡಬಹುದಾಗಿದೆ. ಸ್ಪ್ಲಿಟ್-ಸ್ಕ್ರೀನ್ ವೈಶಿಷ್ಟ್ಯವು ಸಂಭಾಷಣೆಗಳಿಗೆ ಪಠ್ಯ ಅನುವಾದ ಮಾಡುತ್ತದೆ.
ಉತ್ಪಾದಕತೆಯ ಹೆಚ್ಚಳ
ಗ್ಯಾಲಕ್ಸಿ ಸಾಧನಗಳಲ್ಲಿ ಗ್ಯಾಲಕ್ಸಿ ಎಐ ಒದಗಿಸಿರುವುದರಿಂದ ಹೆಚ್ಚಿನ ಫೀಚರ್ ಗಳು ಲಭ್ಯವಾಗಿದ್ದು, ಆ ಮೂಲಕ ಬಳಕೆದಾರರು ದಕ್ಷವಾಗಿ ಹೆಚ್ಚು ಕಾರ್ಯನಿರ್ವಹಣೆ ಮಾಡುವುದು ಸಾಧ್ಯವಾಗುತ್ತದೆ. ಸರ್ಕಲ್ ಟು ಸರ್ಚ್ ವಿತ್ ಗೂಗಲ್ ಫೀಚರ್ ಮೂಲಕ ಸುಲಭವಾಗಿ ಗೂಗಲ್ ಹುಡುಕಾಟ ಮಾಡಬಹುದಾಗಿದೆ. ಇದು ಸ್ವಿಫ್ಟ್ ಸರ್ಕಲ್-ಮೋಷನ್ಡ್ ಗೆಸ್ಚರ್ ಮೂಲಕ ಅರ್ಥಗರ್ಭಿತ ಹುಡುಕಾಟ ಫಲಿತಾಂಶಗಳನ್ನು ನೀಡುತ್ತದೆ. ನೋಟ್ ಅಸಿಸ್ಟ್ ಫೀಚರ್ ಬಳಕೆದಾರರಿಗೆ ಫಾರ್ಮ್ಯಾಟ್ಗಳನ್ನು ರಚಿಸಲು, ಸಾರಾಂಶ ರಚಿಸಲು ಮತ್ತು ಟಿಪ್ಪಣಿಗಳನ್ನು ಭಾಷಾಂತರಿಸಲು ಅನುವು ಮಾಡಿಕೊಡುತ್ತದೆ. ಬ್ರೌಸಿಂಗ್ ಅಸಿಸ್ಟ್ ಸುದ್ದಿ ಲೇಖನಗಳ ಸಾರಾಂಶಗಳನ್ನು ನೀಡುವುದರ ಮೂಲಕ ವೇಗವಾಗಿ ಎಲ್ಲವನ್ನೂ ತಿಳಿದುಕೊಳ್ಳುವ ಅವಕಾಶ ಮಾಡುತ್ತದೆ. ಟ್ರಾನ್ಸ್ಕ್ರಿಪ್ಟ್ ಅಸಿಸ್ಟ್ ಸಭೆಯ ರೆಕಾರ್ಡಿಂಗ್ಗಳನ್ನು ಸುಲಭವಾಗಿ ಲಿಪ್ಯಂತರ ಮಾಡುತ್ತದೆ ಮತ್ತು ಸಾರಾಂಶಗಳನ್ನು, ಅನುವಾದಗಳನ್ನು ಒದಗಿಸುತ್ತದೆ.
ನಿಮ್ಮೊಳಗಿನ ಕಲಾವಿದನ ಸೃಜನಶೀಲತೆ ಹೆಚ್ಚಳ
ನಿಮ್ಮೊಳಗಿನ ಸೃಜನಶೀಲ ಸಾಮರ್ಥ್ಯವನ್ನು ಬಡಿದೆಬ್ಬಿಸಿ ಜಾಸ್ತಿ ಮಾಡಲು ಗ್ಯಾಲಕ್ಸಿ ಎಐ ಸಹಾಯ ಮಾಡುತ್ತದೆ. ಗ್ಯಾಲಕ್ಸಿಯ ಹೊಸ ಅಪ್ಡೇಟ್ ಮತ್ತಷ್ಟು ಸಾಧ್ಯತೆಗಳನ್ನು ನೀಡುತ್ತದೆ. ಫೋಟೋ ತೆಗೆದ ಬಳಿಕವೂ ಅದನ್ನು ಕಲಾಕೃತಿಯನ್ನಾಗಿಸುವ ಅವಕಾಶ ಕೊಡುತ್ತದೆ. ಜನರೇಟಿವ್ ಎಡಿಟ್ ಫೀಚರ್ ಎಐ ಮೂಲಕ ಫೋಟೋದಲ್ಲಿನ ವಸ್ತುಗಳನ್ನು ಸುಲಭವಾಗಿ ರೀಸೈಜ್ ಮಾಡುವ, ರೀಪೊಸಿಷನ್ ಮತ್ತು ರೀಅಲೈನ್ ಮಾಡುವ ಅವಕಾಶ ನೀಡುತ್ತದೆ. ಎಡಿಟ್ ಸಜೆಷನ್ ಫೀಚರ್, ಬಳಕೆದಾರರು ಯಾವುದೇ ಫೋಟೋವನ್ನು ವೇಗವಾಗಿ ಮತ್ತು ಸುಲಭವಾಗಿ ಆಕರ್ಷಕ ಮಾಡುತ್ತದೆ. ಇನ್ಸ್ಟಾಂಟ್ ಸ್ಲೋ-ಮೋ10 ಫೀಚರ್ ವೇಗದ ಕ್ಷಣಗಳನ್ನು ಸೆರೆಹಿಡಿಯಲು ನಿಧಾನ-ಚಲನೆಯ ಹೆಚ್ಚುವರಿ ಫ್ರೇಮ್ಗಳನ್ನು ರಚಿಸುತ್ತದೆ. ಅದಷ್ಟೇ ಅಲ್ಲ, ಗ್ಯಾಲಕ್ಸಿ ಎಐ ವಾಲ್ ಪೇಪರ್ ಗಳ ಮೂಲಕ ಗ್ಯಾಲಕ್ಸಿ ಸಾಧನವನ್ನು ಕಸ್ಟಮೈಸ್ ಮಾಡುವುದು ಈಗ ಹಿಂದೆಂದಿಗಿಂತಲೂ ಸುಲಭವಾಗಿದೆ. ಈ ಹೊಸ ಗ್ಯಾಲಕ್ಸಿ ಎಐ ಬಳಕದಾರರ ಕ್ರಿಯಾಶೀಲತೆ ಹೆಚ್ಚಿಸಿ ಬದುಕನ್ನು ಹೆಚ್ಚು ಸೃಜನಶೀಲಗೊಳಿಸುತ್ತದೆ.