ಬೆಂಗಳೂರು: ಭಾರತದ ಪ್ರಪ್ರಥಮ ಎಐ-ಆಧಾರಿತ, ರೋಗಿಯ ಸಮೀಪಕ್ಕೆ ಬಾರದೆ ನಿಯಂತ್ರಿಸುವ ಪದ್ಧತಿ (RPM) ಮತ್ತು ಆರಂಭಿಕ ಎಚ್ಚರಿಕೆ ಸಿಸ್ಟಮ್ (EWS) ಆದ ಡೋಝೀ(Dozee), ಆಸ್ಪತ್ರೆಗಳಲ್ಲಿ ರೋಗಿಯ ಸುರಕ್ಷತೆಯನ್ನು ಕ್ರಾಂತಿಕಾರಕಗೊಳಿಸುವ ಗುರಿ ಹೊಂದಿರುವ ತನ್ನ ವಿನೂತನ ರೋಗಿಯ ಸುರಕ್ಷತೆಗಾಗಿ ಬೀಳುವುದನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮ (Fall Prevention Alert (FPA)) ಅಂಶದ ಪ್ರಾರಂಭವನ್ನು ಘೋಷಿಸಿತು. ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ 11ನೆ ಅಂತರರಾಷ್ಟ್ರೀಯ ಆರೋಗ್ಯ ಸಂವಾದ (International Health Dialogue)ದಲ್ಲಿ ಈ ಅನಾವರಣ ನೆರವೇರಿತು. ಈ ಸಂವಾದದಲ್ಲಿ, ಆರೋಗ್ಯಶುಶ್ರೂಷೆಯಲ್ಲಿನ ಆಧುನೀಕರಣ ಮತ್ತು ಬೆಳವಣಿಗೆಗಳನ್ನು ಚರ್ಚಿಸಲು ಆರೋಗ್ಯಶುಶ್ರೂಷಾ ವೃತ್ತಿಪರರು ಹಾಗೂ ತಜ್ಞರು ಒಟ್ಟಿಗೆ ಸೇರಿದ್ದರು.
ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ, ಬೀಳುವಿಕೆಯು, ರೋಗಿಗಳು ಆಸ್ಪತ್ರೆಗಳಲ್ಲಿ ಇದ್ದಾಗ ಪದೇ ಪದೇ ಸಂಭವಿಸುವ ವ್ಯತಿರಿಕ್ತ ಘಟನೆಯಾಗಿದೆ. ಅನುದ್ದೇಶಪೂರಿತ ಹಾನಿಗಳು ಮರಣಗಳು ಸಂಭವಿಸುವ ಎರಡನೇ ಮುಖ್ಯ ಕಾರಣವಾಗಿದೆ ಎಂದು ತಿಳಿಸುವ (state ) ಅವರು, ವಿಶ್ವದಾದ್ಯಂತ ಬೀಳುವಿಕೆಯು, ಆರೋಗ್ಯಶುಶ್ರೂಷಾ ಘಟಕಗಳಲ್ಲಿ ಸಮರ್ಪಕವಾಗಿ ಕಂಡುಬರುವ ರೋಗಿಯ ಸುರಕ್ಷತಾ ಘಟನೆಗಳ ಪೈಕಿ ಒಂದು ಎಂದು ಹೇಳುತ್ತಾರೆ. ತತ್ಪರಿಣಾಮವಾಗಿ, ರೋಗಿಯ ಸುರಕ್ಷತೆಯನ್ನು ಸುಧಾರಿಸುವುದಕ್ಕೆ ಬೀಳುತಡೆಗಟ್ಟುವಿಕೆಯು ಅತಿಮುಖ್ಯವಾದ ಆದ್ಯತೆಯನ್ನು ಪಡೆಯಬೇಕು. ಇತ್ತೀಚಿನ ಒಂದು ಅಧ್ಯಯನದ(study) ಪ್ರಕಾರ, ಯುನೈಟೆಡ್ ಸ್ಟೇಟ್ಸ್ ಒಂದರಲ್ಲೇ, ಪ್ರತಿ 1000 ಉಪಯೋಗದಲ್ಲಿರುವ ಹಾಸಿಗೆಗಳಿಗೆೆ(ಆಕ್ಯುಪೈಡ್ ಬೆಡ್ ಡೇಸ್) (OBDs) 6.6 ಅನುಪಾತದಲ್ಲಿ ಬೀಳುವಿಕೆ ಸಂಭವಿಸುತ್ತಿದ್ದು, ಮೂಳೆಮುರಿತಗಳೂ ಒಳಗೊಂಡಂತೆ, 30%ವರೆಗೆ ದೈಹಿಕ ಹಾನಿ ಉಂಟುಮಾಡುತ್ತದೆ.
ಇತ್ತೀಚಿನ ಸಂಶೋಧನೆ(research)ಯ ಪ್ರಕಾರ, ಭಾರತದಲ್ಲಿ ಬೀಳುವಿಕೆ ಪ್ರಭಾವಗಳು ನಿರ್ದಿಷ್ಟವಾಗಿ ಗಮನಾರ್ಹವಾಗಿದ್ದು, ವಾರ್ಷಿಕವಾಗಿ ಅಂದಾಜು 1.5-2 ದಶಲಕ್ಷ ವೃದ್ಧ ವಯಸ್ಕರು ಬೀಳುವಿಕೆ-ಸಂಬಂಧಿತ ಹಾನಿಗಳನ್ನು ಅನುಭವಿಸುತ್ತಿದ್ದಾರೆ ಮತ್ತು 1 ದಶಲಕ್ಷ ಮಂದಿ ಬೀಳುವಿಕೆ ಸಂಬಂಧಿತ ಅಪಘಾತಗಳಲ್ಲಿ ಮರಣಹೊಂದುತ್ತಿದ್ದಾರೆ. ಈ ಮಾನವ ಘಟನೆಗಳನ್ನು ಮೀರಿ, ಬೀಳುವಿಕೆಗಳು, ರೋಗಿಯ ಆರೈಕೆ ವೆಚ್ಚಗಳು ಹಾಗೂ ಬಾಧ್ಯತಾ ವೆಚ್ಚಗಳೂ ಒಳಗೊಂಡಂತೆ, ಹಣಕಾಸು ಹೊರೆಯನ್ನು ಹೆಚ್ಚಿಸುತ್ತದೆ.
ಡೋಝೀ ಅವರ ಬೀಳುವುದನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮ ((Fall Prevention Alert (FPA)) ಅಂಶವು, ತನ್ನ ವಾಸ್ತವ ಸಮಯ ಮೇಲುಸ್ತುವಾರಿ ಸಾಮರ್ಥ್ಯಗಳು ಹಾಗೂ ಸಕ್ರಿಯ ಎಚ್ಚರಿಕೆಗಳೊಂದಿಗೆ ರೋಗಿಯ ಸುರಕ್ಷತೆಯನ್ನು ವರ್ಧಿಸುತ್ತಿದೆ. ಡೋಝೀ ಅವರ ಡೋಝೀ ಸೆನ್ಸಾರ್ ಶೀಟ್ನ ಹಾಸಿಗೆ ತೆರವು ಲಾಗಿಂಗ್ ಒಳಗೊಂಡಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ವರ್ಧಿಸುತ್ತಾ, FPA ಅಧಿಕ-ಅಪಾಯದ ರೋಗಿಗಳಿಗಾಗಿ ವೈಯಕ್ತಿಕಗೊಳಿಸಲಾದ ಎಚ್ಚರಿಕೆಗಳನ್ನು ಒದಗಿಸಿ, ತಕ್ಷಣದ ಶಮನವನ್ನು ಖಾತರಿಪಡಿಸುತ್ತದೆ. ಆಡಿಯೋ ಮತ್ತು ವಿಶುವಲ್ ಸೂಚನೆಗಳೊಂದಿಗೆ, ರೋಗಿಗಳು ತಮ್ಮ ಹಾಸಿಗೆಗಳಿಂದ ಮೇಲೇಳಲು ಪ್ರಯತ್ನಿಸುತ್ತಿರುವಾಗಲೇ ನರ್ಸ್ಗಳಿಗೆ ಕೂಡಲೇ ಸೂಚನೆ ಹೋಗುವುದರಿಂದ, ಸಮಯಕ್ಕೆ ಸರಿಯಾಗಿ ನೆರವು ಒದಗಿಸಿ ಬೀಳುವಿಕೆಯ ಅಪಾಯಗಳನ್ನು ಕಡಿಮೆ ಮಾಡುವುದಕ್ಕೆ ನೆರವಾಗುತ್ತದೆ. ಸಾಂಸ್ಥಿಕ-ಮಟ್ಟದ ಕಾನ್ಫಿಗರೇಶನ್ಗಳು, ಕಾರ್ಯಹರಿವನ್ನು ಇನ್ನಷ್ಟು ಸ್ಟ್ರೀಮ್ಲೈನ್ ಮಾಡುವ ಮೂಲಕ, ಆರೋಗ್ಯಶುಶ್ರೂಷಾ ಸೆಟ್ಟಿಂಗ್ಗಳಲ್ಲಿ ರೋಗಿಯ ಸುರಕ್ಷತೆಯನ್ನು ವರ್ಧಿಸಲು FPAಅನ್ನು ಒಂದು ಸಮಗ್ರ ಪರಿಹಾರವನ್ನಾಗಿ ಬಳಸಿಕೊಳ್ಳಬಹುದಾಗಿದೆ.
ಆರೋಗ್ಯಶುಶ್ರೂಷಾ ಕಾರ್ಯಕರ್ತರು, ಹೃದಯದ ಬಡಿತ, ಉಸಿರಾಟದ ಪ್ರಮಾಣ, ರಕ್ತದೊತ್ತಡ, SPO2 ಮಟ್ಟಗಳು, ತಾಪಮಾನ ಹಾಗೂ ಇಸಿಜಿ ಮುಂತಾದ ರೋಗಿಗಳ ಪ್ರಮುಖ ಪ್ಯಾರಾಮೀಟರ್ಗಳನ್ನು ಪರೋಕ್ಷವಾಗಿಯೇ ಮೇಲುಸ್ತುವಾರಿ ಮಾಡುವುದಕ್ಕೆ ಡೋಝೀ ನೆರವಾಗುತ್ತದೆ. ಡೋಝೀ ಅವರ ಮುಂಜಾಗ್ರತಾ ಕ್ರಮದ ಆರೋಗ್ಯ ಪದ್ಧತಿ (EWS), ಪ್ರಮುಖ ಮಾರ್ಗದರ್ಶಿ ಸೂತ್ರಗಳ ಪ್ರವೃತ್ತಿಯನ್ನು ಟ್ರ್ಯಾಕ್ ಮಾಡಿ ರೋಗಿಗಳ ಚಿಕಿತ್ಸೆಯಲ್ಲಿನ ಕೊರತೆಗಳನ್ನು ಆರಂಭದಲ್ಲೇ ಪತ್ತೆಹಚ್ಚುವುದಕ್ಕೆ ಆರೋಗ್ಯಶುಶ್ರೂಷಕರಿಗೆ ಎಚ್ಚರಿಕೆ ಒದಗಿಸುವ ಮೂಲಕ ಸಮಯಕ್ಕೆ ಸರಿಯಾದ ವೈದ್ಯಕೀಯ ಪರಿಹಾರ ನೀಡುವುದಕ್ಕೆ ನೆರವಾಗುತ್ತದೆ. ಸಂಪರ್ಕರಹಿತ ಪ್ರಮುಖ ಲಕ್ಷಣಗಳ ಮೇಲುಸ್ತುವಾರಿಗಾಗಿ ಡೋಝೀ ಎಐ-ಆಧಾರಿತ ಬಾಲಿಸ್ಟೋಕಾರ್ಡಿಯೋಗ್ರಫಿ(AI-based Ballistocardiography (BCG)) ಬಳಸುತ್ತದೆ. ಡೋಝೀ ಅವರ ತಂತ್ರಜ್ಞಾನವು ಪೇಟೆಂಟ್ ಮಾಡಲಾಗಿದ್ದು, ಭಾರತದಲ್ಲಿ ತಯಾರಾಗಿದೆ. ಡೋಝೀ ಅವರ ವಿನೂತನ ತಂತ್ರಜ್ಞಾನವು ರೋಗಿಯ ಸುರಕ್ಷತೆ, ಚಿಕಿತ್ಸಾ ಫಲಿತಾಂಶ ಹಾಗೂ ಕಾರ್ಯಾಚರಣೆಯ ಸಾಮರ್ಥ್ಯದ ಮೇಲೆ ಅರ್ಥವತ್ತಾದ ಪ್ರಭಾವ ಬೀರುತ್ತದೆ. ಸತ್ವ ಎಂಬ ಸಮಾಲೋಚನ ಸಂಸ್ಥೆಯು ನಡೆಸಿದ ಒಂದು ಸ್ವತಂತ್ರ ಸಂಶೋಧನೆಯ ಪ್ರಕಾರ, ಪ್ರತಿ~100 ಡೋಝೀ ಸಂಪರ್ಕಗೊಂಡ ಹಾಸಿಗೆಗಳಿಗೆ, ಅದು, ~144 ಜೀವಗಳನ್ನು ಉಳಿಸಬಹುದು ಮತ್ತು ನರ್ಸ್ಗಳು ಪ್ರಮುಖ ಲಕ್ಷಣಗಳನ್ನು ಪರೀಕ್ಷಿಸುವುದಕ್ಕೆ ತೆಗೆದುಕೊಂಡ ಸಮಯದಲ್ಲಿ ~80% ಉಳಿತಾಯ ಮಾಡಿ, ICU ALOS ವಾಸವನ್ನು ~1.3 ದಿನಗಳಷ್ಟು ಕಡಿಮೆ ಮಾಡಬಹುದು.
ಎಮ್ಎಸ್ ರಾಮಯ್ಯ ಹಾಸ್ಪಿಟಲ್ನ ಸಮಾಲೋಚಕರಾದ ಡಾ. ಸಂದೀಪ್ ರೆಡ್ಡಿ ಈ ಘೋಷಣೆಯ ಬಗ್ಗೆ ಮಾತನಾಡುತ್ತಾ, ‘ಚಿಕಿತ್ಸಕರಾಗಿ ನಾವು ಒಂದು ಆಸ್ಪತ್ರೆ ಸೆಟ್ಟಿಂಗ್ನಲ್ಲಿಯೇ ರೋಗಿಗಳ ಆರೋಗ್ಯ ಹಾಗೂ ಸ್ವಾಸ್ಥ್ಯದ ಮೇಲೆ ಬೀಳುವಿಕೆಯ ಅಪಾಯಕಾರಿ ಪ್ರಭಾವವನ್ನು ಪ್ರತ್ಯಕ್ಷವಾಗಿ ನೋಡಿದ್ದೇವೆ. ಡೋಝೀ ಅವರ ಬೀಳುತಡೆಗಟ್ಟುವಿಕೆ ಎಚ್ಚರಿಕೆ ಅಂಶವು, ರಕ್ಷಣೆಯ ಕ್ರಿಟಿಕಲ್ ಲೇಯರ್ ಒದಗಿಸಿ, ಆರೋಗ್ಯಶುಶ್ರೂಷಾ ತಂಡಗಳು, ರೋಗಿಗಳು ಬೀಳುವಿಕೆಯ ಅಪಾಯದಲ್ಲಿರುವಾಗ ಸಕ್ರಿಯವಾಗಿ ಮೇಲುಸ್ತುವಾರಿ ಮಾಡಿ ಪರಿಹಾರ ಒದಗಿಸುವುದಕ್ಕೆ ನೆರವಾಗುತ್ತದೆ. ಈ ತಂತ್ರಜ್ಞಾನವು ರೋಗಿಯ ಸುರಕ್ಷತೆಯನ್ನು ವರ್ಧಿಸುವುದು ಮಾತ್ರವಲ್ಲದೆ, ನಮ್ಮ ಚಿಕಿತ್ಸಾ ಕಾರ್ಯಗಳನ್ನುೂ ಸ್ಟ್ರೀಮ್ಲೈನ್ ಮಾಡಿ, ನಾವು ಇನ್ನೂ ಹೆಚ್ಚು ಪರಿಣಾಮಕಾರಿಯಾದ ಹಾಗೂ ಪ್ರತಿಕ್ರಿಯಾತ್ಮಕವಾದ ಆರೈಕೆ ಒದಗಿಸುವುದಕ್ಕೆ ನಮಗೆ ಅವಕಾಶ ನೀಡುತ್ತದೆ.” ಎಂದು ಹೇಳಿದರು.
ಡೋಝೀದ ಸಿಇಒ ಹಾಗೂ ಸಹಸ್ಥಾಪಕ ಶ್ರೀ ಮುದಿತ್ ದಂಡವತೆ, “ಬೀಳುತಡೆಗಟ್ಟುವಿಕೆ ಎಚ್ಚರಿಕೆ ಅಂಶವು, ರೋಗಿಯ ಸುರಕ್ಷತೆಯನ್ನು ಹೆಚ್ಚಿಸುವುದಕ್ಕೆ ನಾವು ಕೈಗೊಳ್ಳುತ್ತಿರುವ ಪ್ರಯತ್ನಗಳಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ವಾಸ್ತವ-ಸಮಯ ಮೇಲುಸ್ತುವಾರಿ ಹಾಗೂ ಸಕ್ರಿಯವಾದ ಎಚ್ಚರಿಕೆಗಳೊಂದಿಗೆ ಬೀಳುವಿಕೆಯ ಅಪಾಯವನ್ನು ತಡೆಗಟ್ಟಿ, ರೋಗಿಯ ಫಲಿತಾಂಶಗಳನ್ನು ಸುಧಾರಿಸಬಹುದು. ಆರೋಗ್ಯಶುಶ್ರೂಷೆಯಲ್ಲಿರುವ ಸವಾಲುಗಳನ್ನು ನಿವಾರಿಸಿ ರೋಗಿಯ ಫಲಿತಾಂಶಗಳನ್ನು ಸುಧಾರಿಸಲು ತಂತ್ರಜ್ಞಾನವನ್ನು ವರ್ಧಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಬೀಳುತಡೆಗಟ್ಟುವಿಕೆ ಎಚ್ಚರಿಕೆ ಅಂಶವು, ವಿಶ್ವವ್ಯಾಪಿಯಾಗಿ ಇರುವ ಆಸ್ಪತ್ರೆಗಳು ಹಾಗೂ ಆರೋಗ್ಯಶುಶ್ರೂಷಾ ಘಟಕಗಳಲ್ಲಿರೋ ರೋಗಿಯ ಸುರಕ್ಷತೆಯಂಶವನ್ನು ಪರಿವರ್ತಿಸಲು ಸಿದ್ಧವಾಗಿದೆ.”ಎಂದು ಸೇರಿಸಿದರು.
ಡೋಝೀ ಅವರ ಬೀಳುತಡೆಗಟ್ಟುವಿಕೆ ಎಚ್ಚರಿಕೆ (FPA) ಅಂಶದ ಪರಿಚಯವು, ಆರೋಗ್ಯಶುಶ್ರೂಷಾ ಸೆಟಿಂಗ್ಗಳಲ್ಲಿ ರೋಗಿಯ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಮಹತ್ತರವಾದ ಹೆಜ್ಜೆಯಾಗಿದೆ. ತನ್ನ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸಕ್ರಿಯ ದೃಷ್ಟಿಕೋನದಿಂದ ಡೋಝೀ, ಭಾರತ ಹಾಗೂ ಅದರಾಚೆಗೂ ಆರೋಗ್ಯಶುಶ್ರೂಷಾ ಪದ್ಧತಿಗಳನ್ನು ಕ್ರಾಂತಿಕಾರಕಗೊಳಿಸುವ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಲೇ ಬಂದಿದೆ.