ಬೆಂಗಳೂರು: ಗ್ಯಾಲಕ್ಸಿ ಎಸ್24 ಸರಣಿಯನ್ನು ಅಭಿವೃದ್ಧಿಗೊಳಿಸಿರುವುದು ನನ್ನ ವೃತ್ತಿಜೀವನದ ಅತ್ಯಂತ ಮಹತ್ವದ ಅವಧಿಯಾಗಿದೆ. ಒಬ್ಬ ಇಂಜಿನಿಯರ್ ಆಗಿ, ನಾನು ಅನೇಕ ಹೊಸ ಸಂಶೋಧನೆಗಳಿಗೆ ಸಾಕ್ಷಿಯಾಗಿದ್ದೇನೆ. ಆದರೆ ಎಐ ಮಾತ್ರ ಈ ಶತಮಾನದ ಅತ್ಯಂತ ಮಹತ್ವದ ಪರಿವರ್ತಕ ತಂತ್ರಜ್ಞಾನವಾಗಿದೆ. ಬದಲಾವಣೆ ತರುವ ಅಪೂರ್ವ ಕೆಲಸಗಳಲ್ಲಿ ತೊಡಗಿಕೊಳ್ಳುವ ಅವಕಾಶ ಕೆಲವು ಇಂಜಿನಿಯರ್ ಗಳಿಗೆ ಮಾತ್ರ ಸಿಗುತ್ತದೆ. ಇದು ಸ್ಯಾಮ್ಸಂಗ್ ಮತ್ತು ಮೊಬೈಲ್ ಉದ್ಯಮಕ್ಕೆ ಮಾತ್ರವಲ್ಲದೆ ಇಡೀ ಮಾನವಕುಲಕ್ಕೆ ಉತ್ತಮ ಬದಲಾವಣೆಯನ್ನು ಒದಗಿಸುತ್ತದೆ.
ಫೋನ್ಗಳಲ್ಲಿ ಎಐ ಅನ್ನು ಸಂಯೋಜಿಸಿದ್ದನ್ನು ಸರಳವಾಗಿ ಹೇಳುವುದಾದರೆ, ಅದೊಂದು ಕ್ರಾಂತಿಯೇ ಸರಿ. ಇದು ಮೊಬೈಲ್ ಅನುಭವಗಳ ಹೊಸ ಯುಗವಾಗಿದೆ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೊಬೈಲ್ ಸಾಧನಗಳು ಎಐಯ ಪ್ರಾಥಮಿಕ ಪ್ರವೇಶ ಬಿಂದುವಾಗಲಿದೆ ಮತ್ತು ನಮ್ಮ ವಿಸ್ತಾರವಾದ, ಸಮಗ್ರ ಉತ್ಪನ್ನ ಪೋರ್ಟ್ ಫೋಲಿಯೋ ಆದ ಸ್ಯಾಮ್ ಸಂಗ್ ಗ್ಯಾಲಕ್ಸಿಯು ಜಾಗತಿಕ ವಿಸ್ತರಣೆಯನ್ನು ವೇಗಗೊಳಿಸಲು ಕಾರ್ಯ ನಿರ್ವಹಿಸುತ್ತಿದೆ. ನಾವು ಮೊಬೈಲ್ ಎಐ ಲಭ್ಯತೆಯನ್ನು ಸುಲಭವಾಗುವಂತೆ ಮಾಡುತ್ತೇವೆ ಮತ್ತು ಎಲ್ಲರಿಗೂ ಹೊಸ ಸಾಧ್ಯತೆಗಳನ್ನು ಒದಗಿಸುತ್ತೇವೆ.
ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವಿಕೆ
ಮೊಬೈಲ್ ಎಐ ಮೂಲಕ ಅಪೂರ್ವ ಅನುಭವಗಳನ್ನು ಒದಗಿಸಿದ್ದರೂ ಈ ಹೊಸ ರೋಮಾಂಚಕ ತಂತ್ರಜ್ಞಾನವು ಹೇಗೆ ನಮ್ಮ ಬದುಕನ್ನು ಬೆಳಗಿಸಬಲ್ಲದು ಮತ್ತು ಮುಂದಿನ ಹಂತಗಳಲ್ಲಿ ಸಮಾಜವನ್ನು ಹೇಗೆ ಸ್ಫೂರ್ತಿಗೊಳಿಸಬಹುದು ಎಂಬುದರ ಕುರಿತು ಹೆಚ್ಚು ಯೋಚನೆ ಮಾಡಿದ್ದೇವೆ. ಕಾಳಜಿ ಮತ್ತು ಪರಿಗಣನೆಯ ಬಳಿಕ ತಯಾರಾಗಿರುವ ಗ್ಯಾಲಕ್ಸಿ ಎಐ ಜನರು ಎಲ್ಲವನ್ನೂ ಮೀರಿ ಸಂವಹನ ನಡೆಸಲು ಸಹಾಯ ಮಾಡುತ್ತದೆ, ದೈನಂದಿನ ಕಾರ್ಯಗಳನ್ನು ಸುಲಭಗೊಳಿಸುತ್ತದೆ.
ಗ್ಯಾಲಕ್ಸಿ ಎಸ್24 ಸರಣಿಯನ್ನು ಪ್ರಾರಂಭಿಸಿದಾಗಿನಿಂದ, ಜನರು ತಮ್ಮ ದೈನಂದಿನ ಜೀವನದಲ್ಲಿ ಗ್ಯಾಲಕ್ಸಿ ಎಐ ವೈಶಿಷ್ಟ್ಯಗಳ ಬಳಸುವುದರ ಕುರಿತು ನಾವು ಉತ್ತಮ ಪ್ರತಿಕ್ರಿಯೆಯನ್ನು ಹೊಂದಿದ್ದೇವೆ. ಅತ್ಯಂತ ಸ್ವಾಗತಾರ್ಹ ಎಐ ವೈಶಿಷ್ಟ್ಯಗಳಲ್ಲಿ ಒಂದಾದ ಸರ್ಕಲ್ ಟು ಸರ್ಚ್ ವಿತ್ ಗೂಗಲ್ ಫೀಚರ್, ಒಂದು ಅಪೂರ್ವವಾದ ಫೀಚರ್ ಆಗಿದೆ. ಲೈವ್ ಟ್ರಾನ್ಸ್ಲೇಟ್, ಚಾಟ್ ಅಸಿಸ್ಟ್ ಮತ್ತು ಇಂಟರ್ಪ್ರಿಟರ್ನಂತಹ ಫೀಚರ್ ಗಳು ಭಾಷಾ ಅಡೆತಡೆಗಳನ್ನು ತೆಗೆದುಹಾಕಿ ನಮ್ಮ ಸಂವಹನ ಸುಲಭ ಮಾಡಿದೆ ಮತ್ತು ಗ್ರಾಹಕರ ಗಮನ ಸೆಳೆದಿದೆ. ಪ್ರೊವಿಶುವಲ್ ಇಂಜಿನ್ ಆಧರಿತವಾಗಿರುವ ಫೋಟೋ ಅಸಿಸ್ಟ್ ಫೀಚರ್ ಅನ್ನೂ ಜನರು ಇಷ್ಟಪಡುತ್ತಿದ್ದಾರೆ.
ಗ್ಯಾಲಕ್ಸಿ ಎಸ್24 ಸರಣಿಯನ್ನು ಅಭಿವೃದ್ಧಿಪಡಿಸುವಾಗ, ನಾವು ಜೀವ ಕೊಡಬೇಕು ಅಂತ ಬಯಸಿದ ಅನೇಕ ಆಲೋಚನೆಗಳು ಮತ್ತು ಪರಿಕಲ್ಪನೆಗಳನ್ನು ಹೊಂದಿದ್ದೆವು. ಸ್ಯಾಮ್ ಸಂಗ್ ನಿರಂತರವಾಗಿ ಮೊಬೈಲ್ ಎಐ ಅನುಭವಗಳನ್ನು ಹೆಚ್ಚಿಸುವ ಕಾರಣದಿಂದಾಗಿ ಕಾಲಾಂತರದಲ್ಲಿ ಈ ಎಲ್ಲಾ ಕಲ್ಪನೆಗಳು ಮತ್ತು ಪರಿಕಲ್ಪನೆಗಳನ್ನು ಬಳಸಿಕೊಂಡು ರಚಿಸಿದ ಇನ್ನೂ ಹೆಚ್ಚಿನ ಗ್ಯಾಲಕ್ಸಿ ಎಐ ವೈಶಿಷ್ಟ್ಯಗಳನ್ನು ಬಳಕೆದಾರರು ಬಳಸಬಹುದಾಗಿದೆ.
ಇದಲ್ಲದೆ, ನಾವು ಈಗಾಗಲೇ ಸ್ಮಾರ್ಟ್ಫೋನ್ಗಳನ್ನು ಮೀರಿದ ಗ್ಯಾಲಕ್ಸಿ ಎಐಯ ಮುಂದಿನ ಹಂತಗಳನ್ನು ಯೋಜಿಸುತ್ತಿದ್ದೇವೆ. ವಿವಿಧ ವರ್ಗಗಳ ಸಾಧನಗಳಿಗೆ, ವಿವಿಧ ಸೇವೆಗಳಲ್ಲಿ ಎಐ ಬಳಕೆ ಮಾಡುತ್ತಿದ್ದೇವೆ. ಸದ್ಯದಲ್ಲಿಯೇ, ಆಯ್ದ ಗ್ಯಾಲಕ್ಸಿ ವೇರೇಬಲ್ಸ್ ಉತ್ಪನ್ನಗಳಲ್ಲಿ ಡಿಜಿಟಲ್ ಆರೋಗ್ಯವನ್ನು ಹೆಚ್ಚಿಸುವ ಮತ್ತು ಬುದ್ಧಿವಂತ ಅನುಭವಗಳನ್ನು ಒದಗಿಸುವ ವಿಸ್ತೃತವಾದ ಎಐ ವೈಶಿಷ್ಟ್ಯಗಳನ್ನು ಬಳಸಲಿದ್ದೇವೆ. ಸ್ಯಾಮ್ಸಂಗ್ ಹೆಚ್ಚು ಉದ್ಯಮ-ಪ್ರಮುಖ ಎಐ ಪಾಲುದಾರರೊಂದಿಗೆ ಸಹಯೋಗದ ಮೂಲಕ ಕೆಟಗರಿಗಳಾದ್ಯಂತ ಗ್ಯಾಲಕ್ಸಿ ಎಐ ಅನುಭವಗಳನ್ನು ಸಮೃದ್ಧಗೊಳಿಸುತ್ತದೆ ಮತ್ತು ವಿಸ್ತರಿಸುತ್ತದೆ.
ಮುಂದಿನ ಮಹತ್ವದ ವಿಷಯವೆಂದರೆ ಅದು ನೀವೇ: ಕಳೆದ ಕೆಲವು ವರ್ಷಗಳಲ್ಲಿ, ಬಳಕೆದಾರರಿಗೆ ಏನು ಬೇಕು ಅಥವಾ ಏನು ಅಗತ್ಯ ಇದೆ ಮತ್ತು ಸ್ವಲ್ಪ ಸಹಾಯ ಒದಗಿಸಿದರೆ ಅವರು ಏನನ್ನು ಸಾಧಿಸಬಹುದು ಎಂಬುದನ್ನು ನಾವು ಆಗಾಗ್ಗೆ ನಮ್ಮನ್ನು ಕೇಳಿಕೊಂಡು ಬಂದಿದ್ದೇವೆ. ಈ ಪ್ರಶ್ನೆಗಳು ಗ್ಯಾಲಕ್ಸಿ ಎಸ್24 ಸರಣಿಗೆ ಪ್ರೇರೇಪಣೆಯಾಗಿವೆ. ಅದು ಅವರ ಜೀವನವು ಹೇಗೆ ಬದಲಾಗಬಹುದು ಎಂಬುದನ್ನು ಊಹಿಸಲು ಬಳಕೆದಾರರನ್ನು ಆಹ್ವಾನಿಸುವ ನಮ್ಮ ಮೊದಲ ಎಐ ಫೋನ್ ಆಗಿದೆ. ಇದು ಭವಿಷ್ಯದ ಫೋನ್ ಆಗಿದ್ದು, ಮೊಬೈಲ್ ಎಐನ ಗುಣಮಟ್ಟವನ್ನು ರೂಪಿಸುತ್ತದೆ ಮತ್ತು ಎಐ ಫೋನ್ಗಳ ಈ ಹೊಸ ಕೆಟಗರಿಯನ್ನು ಜಗತ್ತಿಗೆ ಅರ್ಪಿಸಿದೆ.
ಸಹಜವಾಗಿ, ಇಲ್ಲಿ ಸವಾಲುಗಳು ಮತ್ತು ಜವಾಬ್ದಾರಿಗಳಿವೆ. ತರಬೇತಿಯಲ್ಲಿನ ಎಐ ಮಾಡೆಲ್ ಗಳು ಇನ್ನೂ ಭ್ರಮೆಗಳಿಗೆ ಕಾರಣವಾಗಿವೆ ಮತ್ತು ಇಂಟಲೆಕ್ಚುವಲ್ ಪ್ರಾಪರ್ಟಿ ಮೇಲಿನ ಚರ್ಚೆಯು ಮುಂದುವರಿಯುತ್ತದೆ. ಎಐ ಅನುಭವಗಳನ್ನು ಎಚ್ಚರಿಕೆಯಿಂದ ರೂಪಿಸಲು ಕಂಪನಿಗಳು ಬಹಿರಂಗವಾಗಿ ಸಹಯೋಗ ಸಾಧಿಸುವುದು ಮಹತ್ವದ್ದಾಗಿದೆ, ಆದ್ದರಿಂದ ಬಳಕೆದಾರರು ತಮ್ಮ ಹೊಸ ಸಾಮರ್ಥ್ಯಗಳನ್ನು ವಿಶ್ವಾಸದಿಂದ ಮತ್ತು ವಿಶ್ವಾಸಾರ್ಹವಾಗಿ ಆನಂದಿಸಬಹುದಾಗಿದೆ.
ಡೇಟಾ-ಇಂಟೆನ್ಸಿವ್ ಮೊಬೈಲ್ ಅನುಭವಗಳ ಈ ಹೊಸ ಯುಗದಲ್ಲಿ ಭದ್ರತೆ ಮತ್ತು ಗೌಪ್ಯತೆಯ ಗುಣಮಟ್ಟವನ್ನು ಹೆಚ್ಚಿಸುವುದು ಸಹ ಮುಖ್ಯವಾಗಿದೆ. ಸಾಧನ ಮತ್ತು ಕ್ಲೌಡ್-ಆಧಾರಿತ ಎಐ ಅನ್ನು ಸಂಯೋಜಿಸುವ ಹೈಬ್ರಿಡ್ ವಿಧಾನವನ್ನು ನಾವು ತೆಗೆದುಕೊಂಡಿರುವುದಕ್ಕೆ ಅದೂ ಒಂದು ಕಾರಣ. ನಿರಂತರ ಉಪಯೋಗವನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಬಳಕೆದಾರರು ಸಾಧನದಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಕೆಲವು ವೈಶಿಷ್ಟ್ಯಗಳನ್ನು ಮಿತಿಗೊಳಿಸಲು ಅನುಮತಿಸುತ್ತದೆ. ಅವರು ಅವರ ಡೇಟಾ ಬಳಕೆಯ ಸಂಪೂರ್ಣ ನಿಯಂತ್ರಣವನ್ನು ಒದಗಿಸುತ್ತದೆ. ಬಳಕೆದಾರರಿಗೆ ಪಾರದರ್ಶಕತೆ ಮತ್ತು ಆಯ್ಕೆಯನ್ನು ಒದಗಿಸುವ ಮೂಲಕ ಗ್ಯಾಲಕ್ಸಿ ಸಾಧನದ ಸುರಕ್ಷತೆ ಮತ್ತು ಗೌಪ್ಯತೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.
ಮೊಬೈಲ್ ಎಐಯ ಈ ಹೊಸ ಯುಗದಲ್ಲಿ, ಫೋನ್ ಏನು ಮಾಡಬಹುದು ಎಂಬ ಪ್ರಶ್ನೆ ಮಹತ್ವದ್ದಲ್ಲ. ಸರಿಯಾದ ಸಾಧನಗಳ ಜೊತೆಗೆ ವ್ಯಕ್ತಿಗಳು ಏನನ್ನು ಸಾಧಿಸಬಹುದು ಎಂಬುದು ಮಹತ್ವದ ಪ್ರಶ್ನೆಯಾಗಿದೆ. ಗ್ಯಾಲಕ್ಸಿ ಎಸ್24 ಸರಣಿಯು ಅಂತಹ ಕೆಲವು ಪರಿಕರಗಳನ್ನು ಒದಗಿಸುತ್ತದೆ ಮತ್ತು ನೀವು ಅದನ್ನು ಬಳಸಿ ಏನು ಮಾಡುತ್ತೀರಿ ಎಂಬುದನ್ನು ನೋಡಲು ನಾನು ಕುತೂಹಲ ಹೊಂದಿದ್ದೇನೆ. ಯಾವುದು ಸಾಧ್ಯ, ಯಾವುದು ಉಪಯುಕ್ತ ಮತ್ತು ಯಾವುದು ಅರ್ಥಪೂರ್ಣ ಎಂಬುದನ್ನು ನೀವೇ ನಿರ್ಧರಿಸಬೇಕು. ಮೊಬೈಲ್ ಅನುಭವಗಳ ಮುಂದಿನ ಅಧ್ಯಾಯವು ನಮಗಷ್ಟೇ ಸೇರಿಲ್ಲ, ಅದು ನಿಮ್ಮದಾಗಿದೆ ಅಥವಾ ಸ್ಯಾಮ್ ಸಂಗ್ ಗ್ಯಾಲಕ್ಸಿ ಬಳಕೆದಾರರಾದ ನಿಮಗೆ ಸೇರಿದೆ.