ಬೆಂಗಳೂರು: ಇಂದಿನ 21 ನೇ ಶತಮಾನದಲ್ಲಿ ಭಾರತ ತನ್ನ ಅಭಿವೃದ್ಧಿಯ ಪಯಣವನ್ನು ಮುನ್ನಡೆಸಲು ಭಾರತಕ್ಕೆ ನುರಿತ ಮತ್ತು ಸಮರ್ಥ ಕಾರ್ಯಪಡೆಯ ಅಗತ್ಯವಿದೆ ಎಂದು ಧರ್ಮೇಂದ್ರ ಪ್ರಧಾನ್, ಕೇಂದ್ರ ಶೀಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ, ಸಚಿವರು ಹೇಳಿದರು. ವೈಶ್ವಿಕ ಮಾರುಕಟ್ಟೆಗಳಲ್ಲಿ ಆಧುನಿಕ ಮತ್ತು ಭವಿಷ್ಯದಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯಗಳ ಬೆಲೆ ತುಂಬಾ ಅಧಿಕವಾಗಿದೆ ಹಾಗೂ ಇದನ್ನು ತಿಳಿದುಕೊಂಡು ನಾವು ಗುಣಮಟ್ಟದ ಶಿಕ್ಷಣವನ್ನು ಎಲ್ಲರಿಗೂ ಸಿಗುವಂತೆ ಜನತಂತ್ರಗೊಳಿಸಿ ಮಹತ್ವಾಕಾಂಕ್ಷೆಯುಳ್ಳ ಯುವ್ಕಾರಿಗೆ ಸಮಾನವಾದ ವೇದಿಕೆಯನ್ನು ಒದಗಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಈ ಕೇಂದ್ರದಲ್ಲಿ ಕಡಿಮೆ ವೆಚ್ಚದ ಕೋರ್ಸ್ಗಳು ಹೆಚ್ಚು ಯುವಕರನ್ನು ಸಶಕ್ತಗೊಳಿಸುತ್ತವೆ ಮತ್ತು ಅವರನ್ನು ಬೆಳೆಯುತ್ತಿರುವ ಉದ್ಯೋಗದ ಮಾರುಕಟ್ಟೆಯಲ್ಲಿ ಸಹಭಾಗಿಯಾಗಲು ಅನುವು ಮಾಡಿಕೊಡುತ್ತವೆ.
ಸಂಬಲ್ಪುರ್, ಓರಿಸ್ಸಾದಲ್ಲಿ ಭಾರತದ ಮೊದಲ ಕೌಶಲ್ಯ ಕೇಂದ್ರ (ಎಸ್ಐಸಿ)ದ ಉದ್ಘಾಟನೆಯ ಸಂದರ್ಭದಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ ಆಧುನಿಕ ಯುಗದ ಉದ್ಯೋಗಗಳ ದೃಷ್ಟಿಯಿಂದ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಮುಂಚೂಣಿಯಲ್ಲಿ ನಡೆಸುತ್ತಾ ನಾವು ಅಮೃತ ಪೀಳಿಗೆಯ ಕೌಶಲ್ಯಗಳನ್ನು ಬೇಡಿಕೆ ಆಧಾರಿತ ಉದ್ಯಮಗಳಲ್ಲಿ ಉನ್ನತ ಮಟ್ಟಕ್ಕೆ ಏರಿಸುತ್ತೇವೆ ಮತ್ತು ನಾವು ಈ ಕೇಂದ್ರದ ಮೂಲಕ ನಾವು 1200 ವಿದ್ಯಾರ್ಥಿಗಳನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದ್ದೇವೆ.
ಉದ್ಘಾಟನೆಯಲ್ಲಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಶೀಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ, ಸಚಿವರು ಮಾತನಾಡುತ್ತಾ ಯುವಕರನ್ನು ಆಧುನಿಕ ಯುಗದ ಕೌಶಲ್ಯಗಳಿಂದ ಸಶಕ್ತಗೊಳಿಸುವ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗುರಿಗೆ ಅನುಸಾರವಾಗಿ ಓರಿಸ್ಸಾದ ಮೊದಲ ಭಾರತದ ಕೌಶಲ್ಯ ಕೇಂದ್ರವನ್ನು ಸಂಬಲ್ಪುರ್ದಲ್ಲಿ ಉದ್ಘಾಟಿಸಿದರು. ಭಾರತದ ಕೌಶಲ್ಯ ಕೇಂದ್ರವು ಬೇಡಿಕೆಯಿರುವ ಉದ್ಯಮಗಳಲ್ಲಿ ಉದ್ಯೋಗ ಪಡೆಯಬಲ್ಲ ಕೌಶಲ್ಯಗಳೊಂದಿಗೆ ವ್ಯಾಪಕ ಮಟ್ಟದಲ್ಲಿ ಯುವಕರಿರುತ್ತಾರೆ, ಇದು ಉದ್ಯಮಕ್ಕೆ ಬೇಕಾಗಿರುವ ಕಾರ್ಯಪಡೆಯನ್ನು ತಯಾರಿಸುತ್ತದೆ, ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುತ್ತದೆ ಮತ್ತು ಕೌಶಲ್ಯಗಳ ಪರಿಸರವನ್ನು ಸಶಕ್ತಗೊಳಿಸುತ್ತದೆ. ಇದೊಂದು “ಸಮೃದ್ಧಿ ಮೈಲುಗಲ್ಲಾಗಲಿದೆ”.
ಮಾಧ್ಯಮ & ಮನೋರಂಜನೆ, ಚರ್ಮ, ಪ್ರವಾಸೋದ್ಯಮ & ಆತಿಥ್ಯ ಮತ್ತು ಐಟಿ ಕ್ಷೇತ್ರಗಳಂತಹ ಹೆಚ್ಚು ಬೇಡಿಕೆಯಿರುವ ಉದ್ಯಮಗಳಲ್ಲಿ ಯುವಶಕ್ತಿಯ ಸಾಮರ್ಥ್ಯ ಮತ್ತು ಜ್ಞಾನವನ್ನು ಸೃಷ್ಟಿಸಲು ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಜೊತೆಗೆ ಅತುಲ್ ಕುಮಾರ್ ತಿವಾರಿ, ಕಾರ್ಯದರ್ಶಿಗಳು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ (ಎಂಎಸ್ಡಿಈ) ಸಚಿವಾಲಯ ಮತ್ತು ವೇದ್ ಮಣಿ ತಿವಾರಿ, ಸಿಈಓ, ಎನ್ಎಸ್ಡಿಸಿ ಮತ್ತು ಎಂಡಿ, ಅಂತಾರಾಷ್ಟ್ರೀಯ ಎನ್ಎಸ್ಡಿಸಿಯವರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಕರನ್ನು ಉದ್ಯಮಗಳಿಗೆ ಬೇಕಾಗಿರುವ ಕೌಶಲ್ಯಗಳ ಮೂಲಕ ಸಶಕ್ತಗೊಳಿಸುವ ನಿಟ್ಟಿನಲ್ಲಿ ತರಗತಿ ಮತ್ತು ಕೆಲಸ ಆಧಾರಿತ ಸಂಯುಕ್ತ ಕಲಿಕೆಯ ಮೂಲಕ ಕಲಿಕೆಯ ಒಂದು ಅನುಕೂಲಕರವಾದ ಪರಿಸರವನ್ನು ಸೃಷ್ಟಿಸಲು ಈ ಉಪಕ್ರಮವು ಒಂದು ಅಭಿವೃದ್ಧಿಯ ಹೆಜ್ಜೆಯಾಗುತ್ತದೆ. ಈ ಕೇಂದ್ರದಲ್ಲಿ ಅತ್ಯುತ್ತಮ ಮೂಲ ಸೌಕರ್ಯಗಳು, ಅತ್ಯಾಧುನಿಕ ತಂತ್ರಜ್ಞಾನಗಳು ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು ಇದು
ಔಪಚಾರಿಕ ಕೌಶಲ್ಯಗಳ ಬೇಡಿಕೆಯನ್ನು ಪೂರೈಸುತ್ತದೆ ಮತ್ತು ಯುವಕರು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಕೌಶಲ್ಯಗಳನ್ನು ಪಡೆದುಕೊಂಡು ಯಶಸ್ವಿಯಾಗಲು ಅನುವು ಮಾಡಿಕೊಡುತ್ತದೆ. ಬೆಳವಣಿಗೆಯನ್ನು ಮತ್ತಷ್ಟು ವೇಗವಾಗಿ ಮುಂದುವರೆಸಲು ಜನಸಂಖ್ಯೆಯ ಲಾಭವನ್ನು ಪಡೆಯಲು ತ್ವರಿತವಾಗಿ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲು, ಪ್ರಾದೇಶಿಕ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲು ಮತ್ತು ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಉತ್ತೇಜನೆ ನೀಡಲು ಸಂಯುಕ್ತವಾಗಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ.
ಉದ್ಯಮದ ತಜ್ಞರ ಜೊತೆಗೂಡಿ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವಲ್ಲಿ ಎಸ್ಐಸಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಇದು ಬದಲಾಗುತ್ತಿರುವ ಉದ್ಯಮದ ಅಗತ್ಯತೆಗಳಿಗೆ ಅನುಗುಣವಾಗಿರುತ್ತದೆ, ಸ್ಟ್ಯಾಂಡರ್ಡೈಜೇಶನ್ ಅನ್ನು ಉತ್ತೇಜಿಸುತ್ತದೆ ಮತ್ತು ಕೈಗಾರಿಕೆಗಳ್ಲಲಿ ನುರಿತ ಪ್ರತಿಭೆಗಳ ಬೇಡಿಕೆಯನ್ನು ಪೂರೈಸುವ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಆಧುನಿಕ ತಂತ್ರಜ್ಞಾನವನ್ನು ಕಲಿಯಲು, ತಂತ್ರಜ್ಞಾನ ಆಧಾರಿತ ಕಲಿಕೆಯ ಅನುಭವಗಳನ್ನು ಪಡೆಯಲು ಮತ್ತು ಹೆಸರಾಂತ ಸಂಸ್ಥೆಗಳೊಂದಿಗೆ ಸಂಭಾವ್ಯ ವೃತ್ತಿ ಮಾರ್ಗಗಳನ್ನು ಅನ್ವೇಷಿಸುವ ಗುರಿಯನ್ನು ಹೊಂದಿರುವ ಯುವಕರಿಗೆ ಅದ್ಭುತವಾದ ಅವಕಾಶವಾಗಿದೆ.
ತರಬೇತಿಯ ಕಾರ್ಯಕ್ರಮವನ್ನು ಸತತವಾಗಿ ನಡೆಸಲು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವು (ಎನ್ಎಸ್ಡಿಸಿ) ಕೇಂದ್ರಕ್ಕೆ ಒಬ್ಬ ಪ್ರಬಂಧಕರನ್ನು ನೇಮಿಸುತ್ತದೆ. ಇವರು ತರಬೇತಿ ಕಾರ್ಯಕ್ರಮಗಳ ಸುಗಮವಾಗಿ ನಡೆಯುವುದನ್ನು, ಗುಣಮಟ್ಟದ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಮತ್ತು ಒಟ್ಟಾರೆಯಾಗಿ ಕೇಂದ್ರವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲಿಸುತ್ತಾರೆ. ಬದಲಾವಣೆಯ ಈ ಹೆಜ್ಜೆಯು ಕಲಿಯಲು, ಕೌಶಲ್ಯಗಳನ್ನು ಪಡೆದುಕೊಳ್ಳಲು ಮತ್ತು ಉದ್ಯೋಗವನ್ನು ಹುಡುಕಲು ಹೊಸ ಕ್ಷೇತ್ರಗಳನ್ನು ತೆರೆಯುತ್ತದೆ.
ಈ ಕಾರ್ಯಕ್ರಮದ ನಂತರ, ಓರಿಸ್ಸಾದಲ್ಲಿ ಮುಂಬರುವ ಭಾರತದ ಕೌಶಲ್ಯ ಕೇಂದ್ರಗಳು ಅಂಗುಲ್, ಭದ್ರಕ್, ಧೇನಕಾನಲ್, ಟಾಲ್ಚರ್ ಮತ್ತು ದೇವ್ಗಡ್ ನಗರಲ್ಲಿ ಉದ್ಘಾಟನೆಗೊಳ್ಳಲಿವೆ. ಹೆಚ್ಚು ಆದಾಯದ ಕ್ಷೇತ್ರಗಳನ್ನು ಮುಖ್ಯವಾಗಿಸುವ ಮೂಲಕ ಓರಿಸ್ಸಾದಲ್ಲಿ ಪ್ರತಿಯೊಂದು ಎಸ್ಐಸಿ ಯು ಉದ್ಯಮಗಳ ನಿರ್ದಿಷ್ಟ ಕೌಶಲ್ಯಗಳ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ. ಇದು ಪ್ರಾದೇಶಿಕ ಬೆಳವಣಿಗೆ ಮತ್ತು ಶಾಶ್ವತ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ.
ವರ್ಷದ ಆರಂಭದಲ್ಲಿ ಕೇಂದ್ರ ಸಚಿವರು ಕೌಶಲ್ ರಥ್ ಉಪಕ್ರಮವನ್ನು ಪ್ರಾರಂಭಿಸಿದರು, ಓರಿಸ್ಸಾದ ಸಂಬಲ್ಪುರ್, ಅಂಗುಲ್ & ದೇವಗಡ್ ಜಿಲ್ಲೆಗಳ್ಲಲಿ ಮಹತ್ವಾಕಾಂಕ್ಷೆಯುಳ್ಳ ಯುವಕರಿಗೆ ಕೌಶಲ್ಯ ತರಬೇತಿ ಮತ್ತು ಪ್ರಮಾಣೀಕರಣವನ್ನು ನೀಡಲು ಬಸ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ಈಗಾಗಲೇ 4000 ಅಭ್ಯರ್ಥಿಗಳಿಗೆ ವಿವಿಧ ಕೋರ್ಸ್ ಮಾಡ್ಯೂಲ್ಗಳಲ್ಲಿ ತರಬೇತಿಯನ್ನು ನೀಡಿದೆ ಆ ಮೂಲಕ ಡಿಜಿಟಲ್ ಸಾಕ್ಷರತೆ, ರೀಟೇಲ್ ಮಟ್ಟೂ ಉದ್ಯಮಶೀಲತೆಯ ಕೌಶಲ್ಯಗಳು ಮತ್ತು ಪ್ರದೇಶದ ಇಡಿಯಾದ ವಿಕಾಸವನ್ನು ಪ್ರೋತ್ಸಾಹಿಸಲಾಗುತ್ತಿದೆ.
ಭರವಸೆ, ಉತ್ಸಾಹ ಮತ್ತು ದೃಢನಿಶ್ಚಯವನ್ನು ಹೊಂದಿರುವ ಸಂಬಲ್ಪುರದ ಯುವಕರಲ್ಲಿ ಅಪಾರವಾದ ಸಾಮರ್ಥ್ಯವಿದೆ. ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಗೆ ಸಂಬಂಧಿಸಿದ ತರಬೇತಿಯ ಉಪಕ್ರಮಗಳ ಮೂಲಕ ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅವರ ಉದ್ಯೋಗ ಮತ್ತು ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಮೂಲಕ ಅವರ ಈ ಸಾಮರ್ಥ್ಯದ ಪ್ರಯೋಜನವನ್ನು ಪಡೆಯಬಹುದಾಗಿದೆ.
ಈ ವೈಶಿಷ್ಟ್ಯತೆಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಇದು ಭಾರತದಲ್ಲಿ ಕೌಶಲ್ಯಗಳ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯನ್ನು ತರುತ್ತದೆ, ಆ ಮೂಲಕ ಹೆಚ್ಚು ಜನರಿಗೆ ತಲುಪುತ್ತದೆ, ವ್ಯಕ್ತಿಗತ ಕಲಿಕೆಯ ಅನುಭವ ಮತ್ತು ಸುಧಾರಿತ ವೃತ್ತಿ ಮಾರ್ಗದರ್ಶನ ದೊರೆಯುವಂತಾಗುತ್ತದೆ. ಈ ಮೂಲಕ ಕಲಿಯುವವರು ಸಂಬಂಧಪಟ್ಟ ಕೌಶಲ್ಯಗಳನ್ನು ಪಡೆಯಲು, ಉದ್ಯಮದ ಟ್ರೆಂಡ್ಗಳ ಬಗ್ಗೆ ಅಪ್ಡೇಟ್ ಆಗಿರಲು ಮತ್ತು ಭಾರತದ ಕಾರ್ಯಪಡೆಅಯ ದಕ್ಷ ಬೆಳವಣಿಗೆಯಲ್ಲಿ ತಮ್ಮ ಕೊಡುಗೆಯನ್ನು ನೀಡುವಂತಾಗುತ್ತದೆ.