ಬೆಂಗಳೂರು: ಗ್ಲೋಬಲ್ ಯೂನಿಟ್ ಕೇಸ್ ವಾಲ್ಯೂಮ್ ಸದರಿ ತ್ರೈಮಾಸಿಕಕ್ಕೆ ಶೇ.2 ರಷ್ಟು ಮತ್ತು ಪೂರ್ಣ ವರ್ಷಕ್ಕೆ ಶೇ.2 ರಷ್ಟು ಹೆಚ್ಚಾಗಿದೆ. ನಿವ್ವಳ ಆದಾಯದಲ್ಲಿ ಏರಿಕೆ: ಸದರಿ ತ್ರೈಮಾಸಿಕದಲ್ಲಿ ಶೇ.7 ಮತ್ತು ಪೂರ್ಣ ವರ್ಷಕ್ಕೆ ಶೇ.6% ರಷ್ಟು; ಆರ್ಗ್ಯಾನಿಕ್ ಆದಾಯಗಳಲ್ಲಿ (GAAP ಅಲ್ಲದ) ಏರಿಕೆ: ಸದರಿ ತ್ರೈಮಾಸಿಕದಲ್ಲಿ ಶೇ.12 ಮತ್ತು ಪೂರ್ಣ ವರ್ಷಕ್ಕೆ ಶೇ.12 ರಷ್ಟು.
ಜಾಗತಿಕ ಪ್ರಕಟನೆಯಲ್ಲಿ ಭಾರತದ ಕುರಿತಾದ ಮುಖ್ಯಾಂಶಗಳು:
• ಸಮಗ್ರೀಕೃತ:
o ಸದರಿ ಪೂರ್ಣ ವರ್ಷದಲ್ಲಿ: ಯೂನಿಟ್ ಕೇಸ್ ವಾಲ್ಯೂಮ್ ಶೇ.2 ರಷ್ಟು ಬೆಳೆದಿದೆ. 2022 ರಲ್ಲಿ ರಷ್ಯಾದಲ್ಲಿ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದರಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದ್ದರೂ. ಭಾರತ ಮತ್ತು ಬ್ರೆಜಿಲ್ನ ಅಭಿವೃದ್ಧಿಯಿಂದ ಅಭಿವೃದ್ಧಿಶೀಲ ಮತ್ತು ಉದಯೋನ್ಮುಖ ಮಾರುಕಟ್ಟೆಗಳು ಶೇ.2 ರಷ್ಟು ಬೆಳೆದಿವೆ.
o ಸದರಿ ತ್ರೈಮಾಸಿಕದಲ್ಲಿ: ಯೂನಿಟ್ ಕೇಸ್ ವಾಲ್ಯೂಮ್ ಶೇ.2 ರಷ್ಟು ಬೆಳೆದಿದೆ. ಬ್ರೆಜಿಲ್ ಮತ್ತು ಭಾರತದಲ್ಲಿನ ಅಭಿವೃದ್ಧಿಯಿಂದಾಗಿ ಅಭಿವೃದ್ಧಿಶೀಲ ಮತ್ತು ಉದಯೋನ್ಮುಖ ಮಾರುಕಟ್ಟೆಗಳು ಶೇ.4 ರಷ್ಟು ಬೆಳೆದಿವೆ.
• ಏಷ್ಯಾ ಪೆಸಿಫಿಕ್:
ಸದರಿ ತ್ರೈಮಾಸಿಕದಲ್ಲಿ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಯೂನಿಟ್ ಕೇಸ್ ವಾಲ್ಯೂಮ್ ಶೇ.2 ರಷ್ಟು ಬೆಳೆದಿದೆ. ಇದಕ್ಕೆ ಮುಖ್ಯ ಕಾರಣ: ಜ್ಯೂಸ್, ಮೌಲ್ಯವರ್ಧಿತ ಡೈರಿ ಮತ್ತು ಸಸ್ಯ-ಆಧಾರಿತ ಪಾನೀಯಗಳು ಮತ್ತು ಭಾರತ ಮತ್ತು ಚೀನಾ ನೇತೃತ್ವದ ಸ್ಪಾರ್ಕ್ಲಿಂಗ್ ಫ್ಲೇವರ್ಗಳ ವ್ಯಾಪಾರಗಳಲ್ಲಿನ ಹೆಚ್ಚಳ.
ಸದರಿ ವರ್ಷದಲ್ಲಿ: ಕಂಪನಿಯು ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿನ ಒಟ್ಟು ಎನ್.ಎ.ಆರ್.ಟಿ.ಡಿ. ಪಾನೀಯಗಳಲ್ಲಿ ಮೌಲ್ಯಯುತ ಪಾಲನ್ನು ಗಳಿಸಿತು. ಇದಕ್ಕೆ ಮುಖ್ಯ ಕಾರಣ: ಭಾರತ, ಫಿಲಿಪೈನ್ಸ್, ದಕ್ಷಿಣ ಕೊರಿಯಾ ಮತ್ತು ಜಪಾನ್ನಲ್ಲಿನ ಷೇರುಗಳು ಮೇಲ್ಮುಖವಾದದ್ದು.
• ಕಂಪನಿಯ ತಾಜಾ ಸುದ್ಧಿಗಳು:
o ಸುಸ್ಥಿರ ದೀರ್ಘಕಾಲೀನ ಬೆಳವಣಿಗೆಗಾಗಿ ಅತ್ಯುತ್ತಮವಾದ ಸಿಸ್ಟಂ ನಿರ್ಮಿಸುವುದು: ನಮ್ಮ ಫ್ರ್ಯಾಂಚೈಸ್ ವ್ಯವಹಾರ ಮಾದರಿ ಮಾರುಕಟ್ಟೆಗಳಲ್ಲಿ ಸ್ಥಳೀಯ ಸ್ಪರ್ಶವನ್ನಿಟ್ಟುಕೊಂಡು ಜಾಗತಿಕವಾಗಿ ಬಲವಾದ ಹೆಜ್ಜೆಗುರುತನ್ನು ಮೂಡಿಸಲು ಸಾಧ್ಯವಾಗುವಂತೆ ಕಂಪನಿಯನ್ನು ಸಜ್ಜುಗೊಳಿಸಿದೆ. ಸಿಸ್ಟಂ ಅನ್ನು ಅತ್ಯುತ್ತಮವಾಗಿಸಲು: ವಿಶ್ವಸನೀಯ, ಸಮರ್ಥ ಮತ್ತು ಸ್ಫೂರ್ತಿಯುತ ಬಾಟ್ಲಿಂಗ್ ಪಾಲುದಾರರೊಂದಿಗೆ ಕಂಪನಿಯು ನಿರಂತರವಾಗಿ ಶ್ರಮಿಸುತ್ತಿದೆ. ಇದು ಗ್ರಾಹಕರಿಗೆ ಇಷ್ಟವಾಗುವ ಬ್ರ್ಯಾಂಡ್ಗಳನ್ನು ನಿರ್ಮಿಸಲು ಮತ್ತು ಬೆಳೆಯಲು ಅಗತ್ಯವಾದ ಗಮನ ಹರಿಯಿಸಲು ಅನುವು ಮಾಡಿಕೊಡುತ್ತದೆ. ಇತ್ತೀಚೆಗೆ ಕಂಪನಿ, ಭಾರತದಲ್ಲಿ ತನ್ನ ಮಾಲೀಕತ್ವದಲ್ಲಿರುವ ಬಾಟ್ಲಿಂಗ್ ಕಾರ್ಯಾಚರಣೆಗಳ ಒಂದು ಭಾಗವನ್ನು ಈಗಾಗಲೇ ಇರುವ ಫ್ರಾಂಚೈಸ್ ಬಾಟಲರುಗಳಿಗೆ ರೀಫ್ರಾಂಚೈಸಿಂಗ್ ಮಾಡುವುದನ್ನು ಪೂರ್ಣಗೊಳಿಸಿದೆ.