ಬೆಂಗಳೂರು: ಟಾಟಾ ಮೋಟಾರ್ಸ್ನ ಅಂಗಸಂಸ್ಥೆ ಮತ್ತು ಭಾರತದ ಇವಿ ಕ್ರಾಂತಿಯ ಪ್ರವರ್ತಕ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (ಟಿಪಿಇಎಂ), ಇವಿಗಳನ್ನು ಭಾರತೀಯ ಗ್ರಾಹಕರು ಸುಲಭವಾಗಿ ಪಡೆಯುವ ಉದ್ದೇಶದಿಂದ ಇಂದು ತನ್ನ ಹೆಚ್ಚು ಮಾರಾಟವಾಗುವ ಇವಿಗಳಾದ ನೆಕ್ಸಾನ್.ಇವಿ ಮತ್ತು ಟಿಯಾಗೋ.ಇವಿ ಬೆಲೆಗಳಲ್ಲಿ ಅತ್ಯಾಕರ್ಷಕ ಕಡಿತವನ್ನು ಘೋಷಿಸಿದೆ.
ಬೆಲೆ ಇಳಿಕೆಯ ಪ್ರಮುಖ ಅಂಶಗಳು:
• ಭಾರತದ ಅತ್ಯಂತ ಫೀಚರ್ ಶ್ರೀಮಂತ ಇವಿ, ನೆಕ್ಸಾನ್.ಇವಿಗೆ ರೂ. 1.2 ಲಕ್ಷವರೆಗಿನ ಬೆಲೆ ಕಡಿತವನ್ನು ಹೊಂದಿದೆ.
• ಭಾರತದ ಅತ್ಯಂತ ವೇಗವಾಗಿ ಮಾರಾಟವಾಗುವ ಟಿಯಾಗೋ.ಇವಿ ರೂ. 70,000ವರೆಗೆ ಬೆಲೆ ಕಡಿತವನ್ನು ಹೊಂದಿದೆ. ಇದರ ಬೇಸ್ ಮಾಡೆಲ್ ಆರಂಭಿಕ ಬೆಲೆ ರೂ. 7.99 ಲಕ್ಷ.
• ಇತ್ತೀಚಿಗೆ ಬಿಡುಗಡೆಯಾದ ಪಂಚ್.ಇವಿಯ ಉದ್ಘಾಟನಾ ಬೆಲೆಗಳು ಬದಲಾಗುವುದಿಲ್ಲ, ಏಕೆಂದರೆ ಅವುಗಳ ಬ್ಯಾಟರಿ ಬೆಲೆ ಭವಿಷ್ಯದಲ್ಲಿ ಇಳಿಯುವ ನಿರೀಕ್ಷೆ ಇದೆ.
ಈ ಬೆಲೆ ಕಡಿತದ ಬಗ್ಗೆ ಮಾತನಾಡುತ್ತಾ, ಟಿಪಿಇಎಂನ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ, “ಬ್ಯಾಟರಿ ವೆಚ್ಚಗಳು ಇವಿಯ ಒಟ್ಟಾರೆ ವೆಚ್ಚದ ಗಣನೀಯ ಭಾಗವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಸೆಲ್ ಬೆಲೆಗಳು ಕಡಿಮೆಯಾಗಿರುವುದರಿಂದ ಮತ್ತು ಭವಿಷ್ಯದಲ್ಲಿ ಅವುಗಳ ಸಂಭಾವ್ಯ ಕಡಿತವನ್ನು ಪರಿಗಣಿಸಿ, ಅದರ ಪ್ರಯೋಜನಗಳನ್ನು ನೇರವಾಗಿ ಗ್ರಾಹಕರಿಗೆ ವರ್ಗಾಯಿಸಲು ನಾವು ಬಯಸಿದ್ದೇವೆ.
ಇವಿಗಳು ಕಳೆದ ಕೆಲವು ವರ್ಷಗಳಿಂದ ವೇಗವಾಗಿ ಬೆಳೆದಿದ್ದರೂ, ಇವಿಗಳ ಅಳವಡಿಕೆಯನ್ನು ರಾಷ್ಟ್ರವ್ಯಾಪಿ ಹೆಚ್ಚು ಮಾಡುವುದು ನಮ್ಮ ಉದ್ದೇಶವಾಗಿದೆ. ನಮ್ಮ ಪೋರ್ಟ್ಫೋಲಿಯೋ ಈಗಾಗಲೇ ನಮ್ಮ ಸ್ಮಾರ್ಟ್, ಫೀಚರ್ ರಿಚ್ ಇವಿಗಳ ಬಾಡಿ ಸ್ಟೈಲ್, ಶ್ರೇಣಿ ಮತ್ತು ಬೆಲೆಗಳ ವ್ಯಾಪಕ ಆಯ್ಕೆಯನ್ನು ನೀಡುತ್ತದೆ. ಈ ಕೈಗೆಟುಕಬಹುದಾದ ಬೆಲೆಗಳಲ್ಲಿ, ಹೆಚ್ಚು ಮಾರಾಟವಾಗುವ ನೆಕ್ಸಾನ್.ಇವಿ ಮತ್ತು ಟಿಯಾಗೋ.ಇವಿ ಗ್ರಾಹಕರ ದೊಡ್ಡ ಸಮೂಹವನ್ನು ಆಕರ್ಷಿಸಲು ಇನ್ನೂ ಹೆಚ್ಚು ಆಕರ್ಷಕ ವಾಹನಗಳಾಗಿವೆ ಎಂದು ನಾವು ನಂಬುತ್ತೇವೆ” ಎಂದು ಹೇಳಿದರು.
ಇವಿ ಬಲವಾದ ಬೆಳವಣಿಗೆಯನ್ನು ಪ್ರದರ್ಶಿಸಿದೆ ಮತ್ತು ಒಟ್ಟಾರೆ ಪ್ರಯಾಣಿಕ ವಾಹನ ಉದ್ಯಮದ ಬೆಳವಣಿಗೆಯನ್ನು ಗಣನೀಯವಾಗಿ ಮೀರಿಸುತ್ತದೆ. ಪ್ರಸ್ತುತ ವರ್ಷ 2023 ರಲ್ಲಿ, ಪಿವಿ ಉದ್ಯಮವು ದಾಖಲಿಸಿದ 8% ಬೆಳವಣಿಗೆಯ ವಿರುದ್ಧ ಇವಿ ವಿಭಾಗವು 90% ಬೆಳವಣಿಗೆ ಸಾಧಿಸಿತು. ಜನವರಿ 2024 ರಲ್ಲಿ ಇವಿ ಮಾರಾಟವು ವರ್ಷದಿಂದ ವರ್ಷಕ್ಕೆ 100% ಬೆಳವಣಿಗೆಯನ್ನು ದಾಖಲಿಸುವುದರೊಂದಿಗೆ ಪ್ರಸ್ತುತ ವರ್ಷ 2024 ರಲ್ಲಿ ಈ ಬೆಳವಣಿಗೆಯ ಆವೇಗವು ಮುಂದುವರೆದಿದೆ. 70% ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರುವ ಟಿಪಿಇಎಂ ಈ ವೇಗವಾಗಿ ಬೆಳೆಯುತ್ತಿರುವ ವಿಭಾಗದಲ್ಲಿ ಮಾರುಕಟ್ಟೆಯ ನಾಯಕನಾಗಿದೆ.