ಬೆಂಗಳೂರು: ಬೋಯಿಂಗ್ [NYSE: BA], ಯೂನಿವರ್ಸಿಟಿ ವಿದ್ಯಾರ್ಥಿಗಳು ಮತ್ತು ಆರಂಭಿಕ ಹಂತದ ನವೋದ್ಯಮಿಗಳನ್ನು ಒಳಗೊಂಡಿದ್ದ ಏಳು ತಂಡಗಳನ್ನು ಬೋಯಿಂಗ್ ವಿಶ್ವವಿದ್ಯಾಲಯದ ಇನ್ನೋವೇಶನ್ ಲೀಡರ್ಶಿಪ್ ಡೆವಲಪ್ಮೆಂಟ್ (ಬಿಲ್ಡ್) ಕಾರ್ಯಕ್ರಮ 2023-24 ರ ಮೂರನೇ ಆವೃತ್ತಿಯ ವಿಜೇತರು ಎಂದು ಘೋಷಿಸಿದೆ.
ಏಳು ವಿಜೇತ ತಂಡಗಳ ಹೆಸರುಗಳು ಹೀಗಿವೆ: ಫೌಂಡೇಶನ್ ಫಾರ್ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಟ್ರಾನ್ಸ್ಫರ್ (Fಐಐಟಿ) – ಐಐಟಿ ದೆಹಲಿ ಇಂದ ಅಬ್ಯೋಮ್ ಸ್ಪೇಸ್ಟೆಕ್ ಮತ್ತು ಡಿಫೆನ್ಸ್ ಪ್ರೈ. ಲಿಮಿಟೆಡ್ ಮತ್ತು ಗ್ರೀನ್ ಏರೋ ಪ್ರೊಪಲ್ಷನ್ ಪ್ರೈ. ಲಿಮಿಟೆಡ್. ಸೊಸೈಟಿ ಫಾರ್ ಇನ್ನೋವೇಶನ್ ಅಂಡ್ ಎಂಟರ್ಪ್ರೆನ್ಯೂರ್ಶಿಪ್ (SINE) ಐಐಟಿ ಮುಂಬೈ ದ ಗ್ಲೋವಾಟ್ರಿಕ್ಸ್ ಪ್ರೈ ಲಿಮಿಟೆಡ್. ಐಐಟಿ ಮದ್ರಾಸ್ ಇನ್ಕ್ಯುಬೇಷನ್ ಸೆಲ್ನಿಂದ ಡಿವರ್ಸ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್. ಟೆಕ್ನಾಲಜಿ ಬ್ಯುಸಿನೆಸ್ ಇನ್ಕ್ಯುಬೇಟರ್ (ಟಿಬಿಐ) – ಕೆಐಐಟಿ, ಭುವನೇಶ್ವರ್ ನಿಂದ ಬ್ಯಾಕ್ಯಾರ್ಡ್ ಕ್ರಿಯೇಟರ್ಸ್ ಪ್ರೈ. ಲಿಮಿಟೆಡ್, ಬಾನ್ವಿ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು ಕೊರಾಟಿಯಾ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್. ಬೋಯಿಂಗ್ ಮತ್ತು ಅದರ ಆಯಾ ಇನ್ಕ್ಯುಬೇಟರ್ ಸಹಭಾಗಿಗಳು ತಮ್ಮ ಕಲ್ಪನೆಗಳನ್ನು ಮಾರುಕಟ್ಟೆಗೆ ಸಿದ್ಧಪಡಿಸಲು ಮತ್ತು ಕಾರ್ಯಸಾಧ್ಯವಾದ ಪರಿಹಾರಗಳನ್ನಾಗಿಸಲಿ ಈ ವಿಜೇತರಿಗೆ ಇನ್ನೂ ಕೆಲವು ತಿಂಗಳ ಕಾಲ ನೆರವನ್ನು ಒದಗಿಸುತ್ತವೆ.
ಶ್ರೀ ಶರತ್ ಕುಮಾರ್ ಬಚ್ಚೇಗೌಡ, ಅಧ್ಯಕ್ಷರು, ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಕರ್ನಾಟಕ ವಿಧಾನಸಭೆ ಸದಸ್ಯರು; ಶ್ರೀ ಸಿ.ಬಿ. ಅನಂತಕೃಷ್ಣನ್, ಸಿಎಂಡಿ, ಎಚ್ಎಎಲ್; ಡಾ. ಜಿ. ಸತೀಶ್ ರೆಡ್ಡಿ, ಅಧ್ಯಕ್ಷರು, ದಿ ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾ (ಮಾಜಿ ಕಾರ್ಯದರ್ಶಿ ಡಿಡಿ ಆರ್ & ಡಿ, ಅಧ್ಯಕ್ಷರು ಡಿಆರ್ಡಿಒ ಮತ್ತು ರಕ್ಷಾ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರು), ಡಾ. ವಿನೋದ್ ಕುಮಾರ್, ನಿರ್ದೇಶಕರು, ಇನ್-ಸ್ಪೇಸ್ ನ ಪ್ರಚಾರ ನಿರ್ದೇಶನಾಲಯ, ಬಾಹ್ಯಾಕಾಶ ಇಲಾಖೆ, ಜೊತೆಗೆ ಬೋಯಿಂಗ್ ನಾಯಕರು ಮತ್ತು ಏಳು ಇನ್ಕ್ಯುಬೇಟರ್ ಪಾಲುದಾರರು ಬೆಂಗಳೂರಿನ ಹೊಸ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಕ್ಯಾಂಪಸ್ನಲ್ಲಿ ಆಯೋಜಿಸಲಾದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿಯನ್ನು ನೀಡಿದರು.
“BUILDಮ್ ಒಂದು ಮಹತ್ವಾಕಾಂಕ್ಷೆಯ ಮತ್ತು ಕ್ರಿಯಾತ್ಮಕ ನವೋದ್ಯಮ ವೇದಿಕೆಯಾಗಿ ವಿಕಾಸಗೊಂಡಿದೆ. ಸರಿಯಾದ ಕೌಶಲ್ಯ ಮತ್ತು ಕಾರ್ಯಾಚರಣೆಗಳನ್ನು ಹೆಚ್ಚಿಸಲು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಮತ್ತು ರಾಷ್ಟ್ರದ ಮೇಲೆ ಪರಿಣಾಮ ಬೀರುವ ಆಲೋಚನೆಗಳನ್ನು ಕಾರ್ಯಗತಗೊಳಿಸಲು ಸಹಾಯ ಮಾಡುವ ಮೂಲಕ ದೇಶದ ಹಾಗೂ ಜಗತ್ತಿನ ಯುವ ಉದ್ಯಮಶೀಲ ಮನಸ್ಸನ್ನು ಪೋಷಿಸುತ್ತಿದೆ. ಇಷ್ಟು ವರ್ಷಗಳ ಕಾಲ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುತ್ತ ಬಂದಿರುವ ನಮ್ಮ ಇನ್ಕ್ಯುಬೇಟರ್ ಪಾಲುದಾರರನ್ನು ಮತ್ತು ಈ ವರ್ಷ ಸಕ್ರಿಯವಾಗಿ ಭಾಗವಹಿಸಿದ ವಿಜೇತರು ಮತ್ತು ಅರ್ಜಿದಾರರನ್ನು ಅಭಿನಂದಿಸಲು ಬಯಸುತ್ತೇನೆ. ನಮ್ಮ ಉದ್ಯಮ-ಅಕಾಡೆಮಿಯ ಸಹಯೋಗಗಳು ಮತ್ತು ಪಾಲುದಾರಿಕೆಗಳ ಮೂಲಕ ದೇಶದ ಉಜ್ವಲ ಪ್ರತಿಭೆಗಳನ್ನು ಮತ್ತು ಕಲ್ಪನೆಗಳನ್ನು ಪೋಷಿಸುವ ಮೂಲಕ ಆವಿಷ್ಕಾರಗಳಿಗೆ ಉತ್ತೇಜನ ನೀಡಲು ನಾವು ಸದಾ ಬದ್ಧರಾಗಿರುತ್ತೇವೆ” ಎಂದು ಬೋಯಿಂಗ್ ಇಂಡಿಯಾದ ಅಧ್ಯಕ್ಷ ಸಲೀಲ್ ಗುಪ್ತೆ ಹೇಳಿದರು.
ಈ ಏಳು ತಂಡಗಳಲ್ಲಿ ಪ್ರತಿಯೊಂದಕ್ಕೂ10 ಲಕ್ಷ ರೂಗಳ ಹಣಕಾಸಿನ ಅನುದಾನ ದೊರೆತಿದೆ. ಮತ್ತು ಅವರ ಕಲ್ಪನೆಗಳು ಸಮುದಾಯದ ಅಭಿವೃದ್ಧಿ, ರಕ್ಷಣೆ ಮತ್ತು ಬಾಹ್ಯಾಕಾಶ ಉದ್ಯಮ ಮತ್ತು ಸುಸ್ಥಿರತೆಗೆ ನೆರವಾಗುವ ಪರಿಹಾರಗಳನ್ನು ಒಳಗೊಂಡಿವೆ.
ತನ್ನ ಮೂರನೇ ಆವೃತ್ತಿಯಲ್ಲಿ, ಬೋಯಿಂಗ್ ಏಳು ಇನ್ಕ್ಯುಬೇಟರ್ಗಳೊಂದಿಗೆ ಪಾಲುದಾರಿಕೆಯನ್ನು ಮುಂದುವರೆಸಿದೆ, ಅವುಗಳೆಂದರೆ, SINE – ಐಐಟಿ ಮುಂಬೈ, ಎಫ್ಐಐಟಿ – ಐಐಟಿ ದೆಹಲಿ, ನಾವೀನ್ಯತೆ ಮತ್ತು ಉದ್ಯಮಶೀಲತಾ ಕೇಂದ್ರ – ಐಐಟಿ ಗಾಂಧಿನಗರ, ಐಐಟಿ ಮದ್ರಾಸ್ ಇನ್ಕ್ಯುಬೇಶನ್ ಸೆಲ್, ಸೊಸೈಟಿ ಫಾರ್ ಇನ್ನೋವೇಶನ್ ಮತ್ತು ಡೆವಲಪ್ಮೆಂಟ್ – ಐ.ಐ.ಎಸ್.ಸಿ ಬೆಂಗಳೂರು, ಟಿ-ಹಬ್ ಹೈದರಾಬಾದ್, ಮತ್ತು ಟಿಬಿಐ – ಕೆಐಐಟಿ ಭುವನೇಶ್ವರ್, ಭಾರತದಲ್ಲಿ BUILD ಅನ್ನು ಆಯೋಜಿಸಲು. ಏರೋಸ್ಪೇಸ್ ಮತ್ತು ಡಿಫೆನ್ಸ್, ಟೆಕ್ನಾಲಜಿ ಸ್ಟಾರ್ಟ್ ಅಪ್, ಸಾಮಾಜಿಕ ಪರಿಣಾಮ ಮತ್ತು ಸುಸ್ಥಿರತೆಯ ಕ್ಷೇತ್ರಗಳಲ್ಲಿನ ತಮ್ಮ ಕಲ್ಪನೆಗಳನ್ನು ಸಲ್ಲಿಸಲು ಅರ್ಜಿದಾರರನ್ನು ಆಹ್ವಾನಿಸಲಾಗಿದೆ.
ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ನ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಬೋಯಿಂಗ್ ಇಂಡಿಯಾದ ಮುಖ್ಯ ಇಂಜಿನಿಯರ್ ಅಹ್ಮದ್ ಎಲ್ಶೆರ್ಬಿನಿ: “ಪ್ರತಿ ವರ್ಷ, ನಾವು ಬಿಲ್ಡ್ ಗಾಗಿ ಕಲ್ಪನೆಗಳನ್ನು ಆಹ್ವಾನಿಸುವಾಗ, ಈ ಯುವ ಮನಸ್ಸುಗಳು ಮತ್ತು ಅವರ ಆಲೋಚನೆಗಳು ದೇಶಕ್ಕಾಗಿ ತರುವ ಸಾಧ್ಯತೆಗಳ ಬಗ್ಗೆ ನಾವು ಉತ್ಸುಕರಾಗಿರುತ್ತೇವೆ. ಪ್ರತಿ ಕಲ್ಪನೆಯನ್ನು ಕಾರ್ಯಸಾಧ್ಯವಾದ ವ್ಯವಹಾರ ಪರಿಹಾರವನ್ನಾಗಿ ಮಾಡಲು ನೆರವಾಗುವ ಸಂಪೂರ್ಣ ಪ್ರಕ್ರಿಯೆಯನ್ನು ನಮ್ಮ ಎಂಜಿನಿಯರ್ಗಳು, ತಂತ್ರಜ್ಞರು, ಪಾಲುದಾರ ಇನ್ಕ್ಯುಬೇಟರ್ಗಳು ಮತ್ತು ವಿದ್ಯಾರ್ಥಿ ಮತ್ತು ಸ್ಟಾರ್ಟ್-ಅಪ್ ಸಮುದಾಯದ ನಡುವಿನ ಸಂವಹನಗಳ ಮೂಲಕ ವಿತರಿಸಲಾಗುತ್ತದೆ. ಮಾರ್ಗದರ್ಶನ, ಸಂಪನ್ಮೂಲಗಳು ಮತ್ತು ಸರಿಯಾದ ನೆಟ್ವರ್ಕ್ಗಳ ಸುಲಭಲಭ್ಯತೆ ಈ ನವೋದ್ಯಮಿಗಳು ಮತ್ತು ಉದ್ಯಮಿಗಳ ಕೇಂದ್ರ ಬೆಳವಣಿಗೆಗೆ ಸಹಾಯ ಮಾಡುತ್ತವೆ.
2023 ರಲ್ಲಿ, ಬಿಲ್ಡ್ ಭಾರತದಾದ್ಯಂತ 1, 2, ಮತ್ತು 3 ಹಂತದ ನಗರಗಳಿಂದ ಅರ್ಜಿ ಸಲ್ಲಿಸಿದ 2200+ ವಿದ್ಯಾರ್ಥಿಗಳು ಮತ್ತು ನವೋದ್ಯಮಿಗಳು ಭಾಗವಹಿಸಿ 1200+ ಕಲ್ಪನೆಗಳನ್ನು ಸಲ್ಲಿಸಿದ್ದರು. ಇದೊಂದು ದಾಖಲೆ. ಕಠಿಣ ಮೌಲ್ಯಮಾಪನ ಪ್ರಕ್ರಿಯೆಯ ನಂತರ 75 ಆಯ್ದ ತಂಡಗಳು ಪ್ರಾದೇಶಿಕ ಬೂಟ್ ಕ್ಯಾಂಪ್ ಗೆ ಅರ್ಹತೆ ಪಡೆದವು. ಇದರಲ್ಲಿದ್ದ ಪ್ರಾದೇಶಿಕ ಮತ್ತು ರಾಷ್ಟ್ರೀಯ ಫೈನಲಿಸ್ಟ್ ಗಳು ಪರಿಸರ ವ್ಯವಸ್ಥೆ ನವೋದ್ಯಮ ತಜ್ಞರು, ಇನ್ಕ್ಯುಬೇಟರ್ ಪಾಲುದಾರರು ಮತ್ತು ಬೋಯಿಂಗ್ ಎಂಜಿನಿಯರ್ಗಳಿಂದ ಮಾರ್ಗದರ್ಶನ ಪಡೆದರು. ನಂತರ ಭಾಗವಹಿಸಿದ್ದವರು ಬೋಯಿಂಗ್ನ ಇನ್ನೊವೇಶನ್ ಇಕೊಸಿಸ್ಟಂ ಗೂ ಪ್ರವೇಶವನ್ನು ಪಡೆದರು.
ಇಷ್ಟು ವರ್ಷಗಳಲ್ಲಿ, ಹೊರೈಜಾನ್ಎಕ್ಸ್ ಇಂಡಿಯಾ ಇನ್ನೋವೇಶನ್ ಚಾಲೆಂಜ್, ಎಕ್ಸಲರೇಟೆಡ್ ಏರ್ಕ್ರಾಫ್ಟ್ ಮೆಂಟೆನೆನ್ಸ್ ಇಂಜಿನಿಯರ್ಸ್ ಅಪ್ರೆಂಟಿಸ್ಶಿಪ್ ಮತ್ತು ಐಐಟಿಯೊಂದಿಗೆ ರಾಷ್ಟ್ರೀಯ ಏರೋಮಾಡೆಲಿಂಗ್ ಸ್ಪರ್ಧೆಯಂತಹ ಇತರ ಕಾರ್ಯಕ್ರಮಗಳ ಮೂಲಕ ಬೋಯಿಂಗ್ ಇಂಡಿಯಾ ದೇಶದಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ.