ಬೆಂಗಳೂರು: ಯುವಜನರಿಗೆ ಫಲಿತಾಶ ಪ್ರೇರಿತ ಮತ್ತು ಉನ್ನತ ಗುಣಮಟ್ಟದ ಕೌಶಲ್ಯ ತರಬೇತಿ ನೀಡಲು ಮತ್ತು ಅವರನ್ನು 2047ರ ವೇಳೆಗೆ ವಿಕಸಿತ್ ಭಾರತದ ಧ್ಯೇಯೋದ್ದೇಶ ಸಾಧಿಸಲು ವೇಗವರ್ಧಕವಾಗಿಲು ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೊರೇಷನ್(ಎನ್.ಎಸ್.ಡಿ.ಸಿ), ಬೆಂಗಳೂರಿನ ಎಥ್ನೊಟೆಕ್ ಅಕಾಡೆಮಿಕ್ ಸಲ್ಯೂಷನ್ಸ್ ಪ್ರೈ. ಲಿ. ಸಹಯೋಗದಲ್ಲಿ ಕರ್ನಾಟಕದ ಕಲಬುರಗಿಯಲ್ಲಿ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ಸ್ ಪ್ರಾರಂಭಿಸಿದ್ದು ಇದು ಯುವಜನರ ಸಾಮರ್ಥ್ಯಗಳನ್ನು ಭವಿಷ್ಯದ ಕೌಶಲ್ಯಗಳೊಂದಿಗೆ ಉನ್ನತೀಕರಿಸುತ್ತದೆ.
ಭಾರತ ಸರ್ಕಾರದ ಮಾನ್ಯ ಉನ್ನತ ಶಿಕ್ಷಣ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಮತ್ತು ಮಾನ್ಯ ಸಂಸದರಾದ ಉಮೇಶ್ ಜಾಧವ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಎನ್.ಎಸ್.ಡಿ.ಸಿ.ಯ ಸಿಇಒ ಮತ್ತು ಎನ್.ಎಸ್.ಡಿ.ಸಿ. ಇಂಟರ್ನ್ಯಾಷನಲ್ ಎಂ.ಡಿ. ವೇದ್ ಮಣಿ ತಿವಾರಿ; ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್(ಐ.ಎಸ್.ಟಿ.ಇ.) ಡಾ.ಪ್ರತಾಪ್ ಸಿಂಹ ದೇಸಾಯಿ; ಎಥ್ನೊಟೆಕ್ ಕಂಪನಿಗಳ ಸಮೂಹದ ಅಧ್ಯಕ್ಷ ಡಾ.ಕಿರಣ್ ಕೆ. ರಾಜಣ್ಣ; ಕಲಬುರಗಿಯ ಎಚ್.ಕೆ.ಇ. ಸೊಸೈಟಿಯ ಅಧ್ಯಕ್ಷ ಡಾ. ಭೀಮಾಶಂಕರ್ ಸಿ. ಬಿಳಿಗುಂಡಿ; ಚೆನ್ನೈನ ಅಣ್ಣಾ ಯೂನಿವರ್ಸಿಟಿಯ ಕುಲಪತಿ ಆರ್. ವೇಲರಾಜ್; ಭಟಿಂಡಾದ ಮಹಾರಾಜ ರಂಜಿತ್ ಸಿಂಗ್ ಪಂಜಾಬ್ ಟೆಕ್ನಿಕಲ್ ಯೂನಿವರ್ಸಿಟಿಯ ಕುಲಪತಿ ಪ್ರೊ(ಡಾ) ಬೂಟಾ ಸಿಂಗ್ ಸಿಧು; ಮತ್ತು ಗ್ವಾಲಿಯರ್ ನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಅಂಡ್ ಮ್ಯಾನೇಜ್ ಮೆಂಟ್ ನಿರ್ದೇಶಕ ಡಾ.ಎಸ್.ಎನ್. ಸಿಂಗ್ ಕೂಡಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಂಪ್ರದಾಯಿಕ ಕಲಿಕೆಯನ್ನು ಹೊಸ ಯುಗದ ಕಲಿಕೆಯೊಂದಿಗೆ ಸಂಯೋಜಿಸಿದ ಈ ಪ್ಲಾಟ್ ಫಾರಂ ಕೌಶಲ್ಯದ ಅಂತರ ತುಂಬುತ್ತದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ(ಎನ್.ಇ.ಪಿ.) 2020ಕ್ಕೆ ಪೂರಕವಾಗಿ ಇಂಟರ್ನ್ ಶಿಪ್ ಮತ್ತು ಉದ್ಯೋಗಾರ್ಹತೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಈ ಪ್ಲಾಟ್ ಫಾರಂ ಹೊಸ ಯುಗದ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಪೂರಕ ವಾತಾವರಣ ಕಲ್ಪಿಸುತ್ತದೆ ಮತ್ತು ವ್ಯಕ್ತಿಗಳಿಗೆ ಅವರ ಕೌಶಲ್ಯಗಳಿಗೆ ಜಾಗತಿಕ ಮಾನ್ಯತೆ ಪಡೆಯಲು ಮತ್ತು ಅವರ ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಪ್ರಮಾಣೀಕರಣ ಪಡೆಯಲು ಅವಕಾಶ ಕಲ್ಪಿಸುತ್ತದೆ.
ಭಾರತ ಸರ್ಕಾರದ ಮಾನ್ಯ ಉನ್ನತ ಶಿಕ್ಷಣದ ರಾಜ್ಯ ಸಚಿವ ಸುಭಾಷ್ ಸರ್ಕಾರ್, “ಎನ್.ಎಸ್.ಡಿ.ಸಿ.ಯ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ಸ್ ನಮ್ಮ ದೇಶದಲ್ಲಿ ಸುಧಾರಿತ ಕೌಶಲ್ಯಾಭಿವೃದ್ಧಿ ಮತ್ತು ಶಿಕ್ಷಣ ಸುಧಾರಣೆಯಲ್ಲಿ ಮಹತ್ತರ ಹೆಜ್ಜೆಯಾಗಿದೆ. ಈ ಕೌಶಲ್ಯಾಭಿವೃದ್ಧಿ ಕೇಂದ್ರಗಳು ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಆದ್ಯತೆ ನೀಡಿದ್ದು ಯುವಜನರನ್ನು ಭವಿಷ್ಯದ ಕೆಲಸಕ್ಕೆ ಸಿದ್ಧಗೊಳಿಸುವಲ್ಲಿ ಬಹಳು ಮುಖ್ಯವಾಗಿದ್ದಾರೆ, ಅದು ಭಾರತವನ್ನು ಕುಶಲಿ ಮಾನವ ಸಂಪನ್ಮೂಲಗಳ ಜಾಗತಿಕ ಕೇಂದ್ರವಾಗಿಸುವ ಮಾನ್ಯ ಪ್ರಧಾನಮಂತ್ರಿಗಳ ಧ್ಯೇಯೋದ್ದೇಶಕ್ಕೆ ಪೂರಕವಾಗಿದೆ. ಈ ಸಮಗ್ರ ತರಬೇತಿಯ ಚೌಕಟ್ಟು, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಉತ್ತಮ ತರಬೇತಿ ಪಡೆದ ವ್ಯಕ್ತಿಗಳು ಯುವಜನರಿಗೆ ಶಕ್ತಿ ತುಂಬಲಿದ್ದು ಜಾಗತಿಕ ಮಾರುಕಟ್ಟೆಗಳಲ್ಲಿ ಉದ್ಯೋಗಾರ್ಹತೆಯ ಉನ್ನತೀಕರಣಕ್ಕೆ ಬಾಗಿಲುಗಳನ್ನು ತೆರೆಯುತ್ತದೆ. ಯುವಜನರ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಉನ್ನತೀಕರಿಸುತ್ತಿರುವುದಕ್ಕೆ ಹಾಗೂ ಖ್ಯಾತ ಸಂಸ್ಥೆಗಳಿಗೆ ಪ್ರತಿಭಾನ್ವೇಷಣೆಗೆ ಅವಕಾಶಗಳನ್ನು ಒದಗಿಸುತ್ತಿರುವುದಕ್ಕೆ ಎನ್.ಎಸ್.ಡಿ.ಸಿ.ಯ ಸಿಇಒಗೆ ನಾನು ಅಭಿನಂದಿಸುತ್ತೇನೆ. ಮತ್ತು ಎಥ್ನೊಟೆಕ್ ಕಂಪನಿಗಳ ಸಮೂಹದ ಅಧ್ಯಕ್ಷ ಡಾ.ಕಿರಣ್ ಕೆ.ರಾಜಣ್ಣ ಅವರಿಗೂ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಅತ್ಯಾಧುನಿಕ ಸೆಂಟರ್ ಫಾರ್ ಫ್ಯೂಚರ್ ಸ್ಕಿಲ್ಸ್ ಪ್ರಾರಂಭಿಸಿರುವುದಕ್ಕೆ ಮತ್ತು ಕೇಂದ್ರ ಪ್ರಾಯೋಜಕತ್ವದ ಯೋಜನೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಗೆ ಎಚ್.ಕೆ.ಇ. ಸೊಸೈಟಿಯ ಅಧ್ಯಕ್ಷ ಡಾ.ಬಿಳಿಗುಂಡಿ ಅವರಿಗೆ ನಮ್ಮ ಅಭಿನಂದನೆಗಳನ್ನು ತಿಳಿಸುತ್ತೇನೆ” ಎಂದರು.
ಈ ಪ್ರಾರಂಭ ಕುರಿತು ಎನ್.ಎಸ್.ಡಿ.ಸಿ. ಸಿಇಒ ಮತ್ತು ಎನ್.ಎಸ್.ಡಿ.ಸಿ. ಇಂಟರ್ನ್ಯಾಷನಲ್ ಎಂ.ಡಿ. ವೇದ್ ಮಣಿ ತಿವಾರಿ, “ಆಟೊಮೇಷನ್, ಕೃತಕ ಬುದ್ಧಿಮತ್ತೆ, ಡೇಟಾ ಅನಲಿಟಿಕ್ಸ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಮೂಲಕ ಪ್ರೇರಿತವಾದ ತಾಂತ್ರಿಕ ಸುಧಾರಣೆಯ ತೀವ್ರ ವೇಗವು ಮೂಲಭೂತವಾಗಿ ಕೈಗಾರಿಕೆಗಳು ಮತ್ತು ಉದ್ಯೋಗಗಳನ್ನು ಬದಲಾಯಿಸುತ್ತಿವೆ. ಕೌಶಲ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಎಐ, ಎಂಎಲ್ ಮತ್ತು ರೊಬೊಟಿಕ್ಸ್ ನಂತಹ ಉದಯೋನ್ಮುಖ ತಂತ್ರಜ್ಞಾನದ ಸಾಮರ್ಥ್ಯಗಳು ಮತ್ತು ಜ್ಞಾನದೊಂದಿಗೆ ಸನ್ನದ್ಧವಾಗಿಸುವ ಅಗತ್ಯ ಉಂಟು ಮಾಡಿದ್ದು ಅವು ಮಾನ್ಯ ಪ್ರಧಾನಮಂತ್ರಿಯವರ ಭಾರತವನ್ನು 2047ರ ವೇಳೆಗೆ `ವಿಕಸಿತ ಭಾರತ’ವಾಗಿಸುವ ಧ್ಯೇಯಕ್ಕೆ ಪೂರಕವಾಗಿದೆ. ಈ ಕೇಂದ್ರವು ವಿದ್ಯಾರ್ಥಿಗಳಿಗೆ ಅಪಾರವಾಗಿ ಅನುಕೂಲ ಕಲ್ಪಿಸಲಿದೆ ಮತ್ತು ಆಕಾಂಕ್ಷೆಗಳು ಮತ್ತು ಉದ್ಯಮದ ಬೇಡಿಕೆಗಳ ನಡುವಿನ ಅಂತರ ತುಂಬಲಿದ್ದು ಯುವಜನರು ಪರಿವರ್ತನೀಯ ತರಬೇತಿ ಪಡೆಯುವ, ಪ್ರಮಾಣೀಕರಣ ಪಡೆಯುವ ಮತ್ತು ಅವರ ಭವಿಷ್ಯವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ದಾರಿದೀಪವಾಗಲಿದೆ” ಎಂದರು.
ಅಲ್ಲದೆ ಈ ಕೇಂದ್ರವು ಭಾರತದಲ್ಲಿ ಅಲ್ಪಾವಧಿ ಶುಲ್ಕ ಆಧರಿತ ಸರ್ಟಿಫಿಕೇಷನ್ ಕೋರ್ಸ್ ಗಳನ್ನು ಉದಯೋನ್ಮುಖ ತಂತ್ರಜ್ಞಾನಗಳಾದ ಎಐ, ಎಂಎಲ್, ರೊಬೊಟಿಕ್ಸ್ ಇತ್ಯಾದಿ ಕ್ಷೇತ್ರಗಳಲ್ಲಿ ನೀಡಲಿದ್ದು ಮೈಕ್ರೊಸಾಫ್ಟ್, ಸಿಸ್ಕೊ, ಎಡಬ್ಲ್ಯೂಎಸ್, ಶ್ನೀಡರ್ ಇತ್ಯಾದಿ ಜಾಗತಿಕ ಕಾರ್ಪೊರೇಟ್ ಗಳ ಮೂಲಕ ಕೊಡಿಸಲಿದೆ. ಇದು ವಿದ್ಯಾರ್ಥಿಗಳಿಗೆ ಸಮಗ್ರವಾದ ಕಲಿಕಾ ಅನುಭವ ನೀಡುವಲ್ಲಿ ಮತ್ತು ಅವರಿಗೆ ವಿಸ್ತಾರಗೊಳ್ಳುತ್ತಿರುವ ಜಾಗತಿಕ ಕ್ಷೇತ್ರದಲ್ಲಿ ಅಗತ್ಯ ಕೌಶಲ್ಯಗಳನ್ನು ತಂದುಕೊಡುವಲ್ಲಿ ಉದ್ಯಮದ ಪರಿಣಿತರೊಂದಿಗೆ ಸಹಯೋಗಕ್ಕೆ ಆದ್ಯತೆ ನೀಡಲಿದೆ.
ಶಿಕ್ಷಣ ನೀತಿಯು ಶಿಕ್ಷಣದತ್ತ ಸಮಗ್ರ ಮತ್ತು ಬಹು ಶಿಸ್ತೀಯ ವಿಧಾನವನ್ನು ಹೊಂದಿದ್ದು ಶೈಕ್ಷಣಿಕ ಜ್ಞಾನವನ್ನು ಪ್ರಾಯೋಗಿಕ ಕೌಶಲ್ಯಗಳೊಂದಿಗೆ ಸೇರ್ಪಡೆ ಮಾಡಲು ಒತ್ತು ನೀಡುತ್ತದೆ. ಈ ಉಪಕ್ರಮವು ಹೇಗೆ ಶಿಕ್ಷಣ ಸಂಸ್ಥೆಯು ಎನ್.ಇ.ಪಿ. ರೂಪಿಸಿದ ತತ್ವಗಳನ್ನು ಅನುಷ್ಠಾನಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಬಹುದು ಎನ್ನುವುದಕ್ಕೆ ಪರಿಪೂರ್ಣ ಉದಾಹರಣೆಯಾಗಿದೆ. ಇದು ವಿದ್ಯಾರ್ಥಿಗಳನ್ನ ಏರಿಳಿತದ ಉದ್ಯೋಗದ ಮಾರುಕಟ್ಟೆಯ ಸವಾಲುಗಳಿಗೆ ಸಿದ್ಧವಾಗಿಸುವ ಅನುಕೂಲಕರ ಮತ್ತು ಚಲನಶೀಲ ಶಿಕ್ಷಣ ವ್ಯವಸ್ಥೆ ಸೃಷ್ಟಿಸುವ ಅಗತ್ಯಕ್ಕೆ ಸದೃಢ ಆದ್ಯತೆಯನ್ನೂ ನೀಡುತ್ತದೆ.
ಎನ್.ಎಸ್.ಡಿ.ಸಿ. ಹಲವು ಶಿಕ್ಷಣ ಸಂಸ್ಥೆಗಳು, ಪಾಲುದಾರರು, ಉದ್ಯಮ ನಾಯಕರು, ಹಣಕಾಸು ಸಂಸ್ಥೆಗಳೊಂದಿಗೆ ಸಹಯೋಗ ಹೊಂದಿದ್ದು ಕೌಶಲ್ಯದ ಇಕೊಸಿಸ್ಟಂ ವಿಸ್ತರಿಸಲು ಸಹಕ್ರಿಯೆಗಳನ್ನು ಸೃಷ್ಟಿಸುತ್ತದೆ. ಇದು ಹೊಸ ಮತ್ತು ಆವಿಷ್ಕಾರಕ ಉತ್ಪನ್ನಗಳನ್ನು ಪರಿಚಯಿಸಲು ಬದ್ಧವಾಗಿದ್ದು ಸಮಗ್ರ ಮತ್ತು ಸುಸ್ಥಿರವಾದ ಕೌಶಲ್ಯದ ವ್ಯವಸ್ಥೆಯ ಪ್ರಗತಿ ರೂಪಿಸುತ್ತದೆ.