ಮೈಸೂರು : ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್ನ ದೃಶ್ಯ ಸಂವಹನ ವಿಭಾಗವು ‘ಸಿನಿರಮಾʼ-2024, 6 ನೇ ರಾಷ್ಟ್ರೀಯ ಕಿರುಚಿತ್ರೋತ್ಸವವನ್ನು ಆಯೋಜಿಸುತ್ತಿದೆ. ಈ ಕಿರುಚಿತ್ರೋತ್ಸವವು ಇದೇ ಫೆಬ್ರವರಿ 16 ಮತ್ತು 17 ರಂದು ಬೋಗಾದಿ ಎರಡನೇ ಹಂತದಲ್ಲಿರುವ ಅಮೃತ ವಿಶ್ವವಿದ್ಯಾಪೀಠಂನ ಆವರಣದಲ್ಲಿ ನಡೆಯಲಿದೆ.
ಸಿನಿರಮಾ ಕಿರುಚಿತ್ರೋತ್ಸವದ ಉದ್ಘಾಟನಾ ಸಮಾರಂಭವು ಫೆಬ್ರವರಿ 16ರಂದು ಬೆಳಗ್ಗೆ 10.00 ಗಂಟೆಗೆ ನಡೆಯಲಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ವಿನಯಾ ಪ್ರಸಾದ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಿರುಚಿತ್ರೋತ್ಸವದ ಸಮಾರೋಪ ಸಮಾರಂಭವು ಫೆಬ್ರವರಿ 17ರಂದು ಸಂಜೆ 5.30 ಕ್ಕೆ ನಡೆಯಲಿದ್ದು, ಕನ್ನಡ ಚಿತ್ರರಂಗದ ಹೆಸರಾಂತ ನಟ ನೆನಪಿರಲಿ ಪ್ರೇಮ್ ಹಾಗೂ ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮೈಸೂರಿನ ಡಿಆರ್ಸಿ ಮಲ್ಟಿಪ್ಲೆಕ್ಸ್ ಸಿನೆಮಾಸ್ನ ಮಾಲೀಕರಾದ ವೈಶಾಲಿ ಹನುಮಂತ್ ಹಾಗೂ ಹನುಮಂತ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಿರುಚಿತ್ರೋತ್ಸವದಲ್ಲಿ ಸಿನಿಮಾ ಕ್ಷೇತ್ರಕ್ಕೆ ಸಂಬAಧಿಸಿದAತೆ ಕಾರ್ಯಾಗಾರಗಳು ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿದ್ದು ಚಿತ್ರರಂಗದ ಗಣ್ಯರು ಹಾಗೂ ತಜ್ಞರು ಈ ಕಾರ್ಯಾಗಾರಗಳನ್ನು ನಡೆಸಿಕೊಡಲಿದ್ದಾರೆ. ನಿರ್ದೇಶಕ ಹಾಗೂ ಎಡಿಟರ್ ಅಪ್ಪು ಭಟ್ಟಾತಿರಿ ಚಲನಚಿತ್ರ ಸಂಕಲನದ ಕುರಿತು ‘ಸೆಲೆಕ್ಟೆಡ್ ಟೇಕ್ಸ್ʼ ಎನ್ನುವ ಗೋಷ್ಠಿಯನ್ನು; ಹಾಗೂ ನೆಟ್ಫ್ಲಿಕ್ಸ್ ಇಂಡಿಯಾದ ಒರಿಜಿನಲ್ ನಾನ್ ಫಿಕ್ಷನ್ ಮ್ಯಾನೇಜರ್ ಸ್ವಾತಿ ಸ್ವಪ್ನರವರು ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಯಾವ ಬಗೆಯ ಕಂಟೆAಟ್ಗಳನ್ನು
ಸೃಷ್ಟಿಸಬಹುದು ಹಾಗೂ ನಾನ್ಫಿಕ್ಷನ್ ಕ್ಷೇತ್ರದಲ್ಲಿ ಇರುವ ಉದ್ಯೋಗಾವಕಾಶಗಳ ಕುರಿತು ‘ಟೇಲ್ಸ್ ಓವರ್ ದಿ ಟಾಪ್ʼ ಎನ್ನುವ ಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ.
ಚಿತ್ರನಿರ್ಮಾಣದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಹಾಗೂ ಯುವ ನಿರ್ದೇಶಕರಿಗೆ ಸಿನಿರಮಾ ಒಂದು ದೊಡ್ಡ ವೇದಿಕೆಯಾಗಿದ್ದು, ಅವರ ಕೌಶಲ್ಯ ಹಾಗೂ ನೈಪುಣ್ಯತೆಯನ್ನು ಮತ್ತಷ್ಟು ಕುಶಲಗೊಳಿಸಲು ಅವಕಾಶವನ್ನು ಕೊಡುತ್ತಿದೆ.
ಕಿರುಚಿತ್ರೋತ್ಸವದಲ್ಲಿ ಈಗಾಗಲೇ ವಿಜೇತರಾದವರಿಗೆ ನಗದು ಬಹುಮಾನವನ್ನು ನೀಡಲಾಗುತ್ತದೆ.
ಪ್ರಥಮ ಅತ್ಯುತ್ತಮ ಕಿರುಚಿತ್ರ- ರೂ.10,000
ದ್ವಿತೀಯ ಅತ್ಯುತ್ತಮ ಕಿರುಚಿತ್ರ- ರೂ. 7000
ತೃತೀಯ ಅತ್ಯುತ್ತಮ ಕಿರುಚಿತ್ರ- ರೂ. 5000
ಇದರ ಜೊತೆಗೆ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕಥೆ, ಅತ್ಯುತ್ತಮ ನಟ/ನಟಿ, ಅತ್ಯುತ್ತಮ ಸಿನೆಮಾಟೋಗ್ರಾಫರ್ ಹಾಗೂ ಅತ್ಯುತ್ತಮ ಎಡಿಟರ್ ಎನ್ನುವ ವಿಶೇಷ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು.
ಈ ಬಾರಿಯ ಸಿನಿರಮಾ ಕಿರುಚಿತ್ರೋತ್ಸವದಲ್ಲಿ ‘60 ಅವರ್ ಫಿಲ್ಮ್ ಮೇಕಿಂಗ್ ಚಾಲೆಂಜ್ʼನ್ನು ಪರಿಚಯಿಸಲಾಗಿದ್ದು ಉದಯೋನ್ಮುಖ ಚಿತ್ರ ನಿರ್ದೇಶಕರಿಗೆ ಒಂದು ಒಳ್ಳೆಯ ವೇದಿಕೆಯನ್ನು ಕಲ್ಪಿಸಿದೆ. ಈ ವಿಭಾಗದಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ.
ಪ್ರಥಮ ಅತ್ಯುತ್ತಮ ಕಿರುಚಿತ್ರ- ರೂ.10,000
ದ್ವಿತೀಯ ಅತ್ಯುತ್ತಮ ಕಿರುಚಿತ್ರ- ರೂ. 7000
ತೃತೀಯ ಅತ್ಯುತ್ತಮ ಕಿರುಚಿತ್ರ- ರೂ. 4000
ಕಾರ್ಯಾಗಾರಗಳಲ್ಲಿ ಭಾಗವಹಿಸಲು ಆಸಕ್ತಿಯಿರುವವರು 9164461193 ಸಂಪರ್ಕಿಸಲು ಕೋರಲಾಗಿದೆ.