ಬೆಂಗಳೂರು: ಸ್ಯಾಮ್ಸಂಗ್ ಆರ್ & ಡಿ ಇನ್ಸ್ಟಿಟ್ಯೂಟ್ ಬೆಂಗಳೂರು (ಎಸ್ಆರ್ಐ-ಬಿ) ಹುಬ್ಬಳ್ಳಿಯ ಕೆಎಲ್ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಕೆಎಲ್ಇಐಟಿ) ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಈ ಮೂಲಕ ಭವಿಷ್ಯದ ಟೆಕ್ ಕ್ಷೇತ್ರ ಗಳಾದ ಮೆಷಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಮತ್ತು ಡೇಟಾ ಸೈನ್ಸ್ ನಲ್ಲಿ ಯುವಜನತೆಯ ಕೌಶಲ್ಯ ಹೆಚ್ಚಿಸುವ ಕ್ರಮ ಕೈಗೊಳ್ಳಲಿದೆ. ಈ ಉಪಕ್ರಮವು #PoweringDigitalIndia ದೂರದೃಷ್ಟಿಯ ಭಾಗವಾಗಿ ಸರ್ಕಾರದ ಸ್ಕಿಲ್ ಇಂಡಿಯಾ ಉಪಕ್ರಮದ ಕಡೆಗಿನ ಸ್ಯಾಮ್ಸಂಗ್ ನ ಬದ್ಧತೆಯನ್ನು ಬಲಪಡಿಸುತ್ತದೆ.
ತರಗತಿಯಲ್ಲಿಯೇ ಕೆಎಲ್ಇಐಟಿ ಯಲ್ಲಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಸುಧಾರಿತ ತಂತ್ರಜ್ಞಾನದ ತರಬೇತಿ ಮತ್ತು ವಿದ್ಯಾರ್ಥಿಗಳನ್ನು ಉದ್ಯಮಕ್ಕೆ-ಸಿದ್ಧರನ್ನಾಗಿಸಲು ಮೆಷಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಕೃತಕ ಬುದ್ಧಿಮತ್ತೆ), ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಮತ್ತು ಡೇಟಾ ಸೈನ್ಸ್ ನಂತಹ ಕ್ಷೇತ್ರಗಳ ಪ್ರೊಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಾರೆ. ತಂತ್ರಜ್ಞಾನ, ಬೇಸಿಕ್ ಸಾಫ್ಟ್ ವೇರ್ ಕೌಶಲ್ಯಗಳು ಮತ್ತು ಉದಯೋನ್ಮುಖ ಸಾಮರ್ಥ್ಯಗಳ ಏಕೀಕರಣದ ಮೂಲಕ, ಈ ಕಾರ್ಯಕ್ರಮವು ಭಾಗವಹಿಸುವವರಿಗೆ ಸುಸಜ್ಜಿತ ವೃತ್ತಿಪರರಾಗಿ ಬೆಳೆಯುವ ಅಧಿಕಾರ ನೀಡಲು ಪ್ರಯತ್ನಿಸುತ್ತದೆ. ಹೆಚ್ಚುವರಿಯಾಗಿ, ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ನಡುವಿನ ಅಂತರವನ್ನು ಕಡಿಮೆ ಮಾಡಲು, ಎಸ್ಆರ್ಐ -ಬಿಯ ಮಾರ್ಗದರ್ಶನದ ಮೂಲಕ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲೂ ಸಹ ಉಪಕ್ರಮವು ಉದ್ದೇಶಿಸಿದೆ.
ಎಸ್ಆರ್ಐ-ಬಾಲೋಂಗ್ ನ ಸಿಟಿಓ ಶ್ರೀ ಮೋಹನ್ ರಾವ್ ಗೋಲಿ, ಐಐಟಿ ಧಾರವಾಡದ ಡೀನ್ (ಆರ್ & ಡಿ) ಪ್ರೊ. ರಾಜೇಶ್ ಹೆಗ್ಡೆ ಅವರು ಕೆಎಲ್ಇಐಟಿಯಲ್ಲಿ ಸ್ಯಾಮ್ಸಂಗ್ ಇನ್ನೋವೇಶನ್ ಲ್ಯಾಬ್ ಅನ್ನು ಉದ್ಘಾಟಿಸಿದರು. ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ್ ಶೆಟ್ಟರ್, ಟೆಕ್ ಸ್ಟ್ರಾಟಜಿ ಮುಖ್ಯಸ್ಥರು ಶ್ರೀ ಶ್ರೀಮನು ಪ್ರಸಾದ್, ಎಸ್ಆರ್ಐ-ಬಿ ಮತ್ತು ಕೆಎಲ್ಇಐಟಿಯ ಪ್ರಾಂಶುಪಾಲ ಪ್ರೊ.ಶರದ್ ಜೋಶಿ ಸೇರಿದಂತೆ ಸದಸ್ಯರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
“ಶಿಕ್ಷಣ, ತರಬೇತಿ ಮತ್ತು ಅಭಿವೃದ್ಧಿಯ ಮೂಲಕ ಯುವಜನತೆಯನ್ನು ಸಬಲೀಕರಣಗೊಳಿಸುವ ಮೂಲಕ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವುದು ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ನ ಗುರಿಯಾಗಿದೆ. ಕೆಎಲ್ಇಐಟಿಯೊಂದಿಗಿನ ನಮ್ಮ ಪಾಲುದಾರಿಕೆಯು ಯುವಕರು ಮತ್ತು ತರಬೇತುದಾರರ ಸಾಮರ್ಥ್ಯವನ್ನು ಪ್ರದರ್ಶಿಸುವ ನಾವೀನ್ಯತೆ ಕೇಂದ್ರವನ್ನು ರಚಿಸುವತ್ತ ಒಂದು ಹೆಜ್ಜೆಯಾಗಿದೆ. ಈ ಸಹಯೋಗವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಬಿಗ್ ಡೇಟಾ, ಮತ್ತು ಐಓಟಿ ಮುಂತಾದ ಕ್ಷೇತ್ರಗಳಲ್ಲಿ ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳನ್ನು ಹೆಚ್ಚಿಸುವುದಲ್ಲದೆ, ಸಮಸ್ಯೆಗಳಿಗೆ ನವೀನ ಪರಿಹಾರಗಳನ್ನು ಒದಗಿಸುವ ಪ್ರತಿಭಾ ವಲಯದೊಂದಿಗೆ ನಮಗೆ ಸಂಪರ್ಕ ಒದಗಿಸುತ್ತದೆ” ಎಂದು ಬೆಂಗಳೂರಿನ ಸ್ಯಾಮ್ಸಂಗ್ ಆರ್ & ಡಿ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೋಹನ್ ರಾವ್ ಗೋಲಿ ಹೇಳಿದರು.
“ಈ ಇನ್ನೋವೇಷನ್ ಕೇಂದ್ರ ರಚನೆಯ ಮೂಲಕ, ನಮ್ಮ ವಿದ್ಯಾರ್ಥಿಗಳು ಉದ್ಯಮ ಎದುರಿಸುತ್ತಿರುವ ಸವಾಲುಗಳ ಅಮೂಲ್ಯವಾದ ಒಳನೋಟ ಪಡೆಯುತ್ತಾರೆ ಮತ್ತು ಸವಾಲುಗಳನ್ನು ಪರಿಹರಿಸುವ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಲಿಯುತ್ತಾರೆ. ಈ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಗೆ ಗಣನೀಯ ಕೊಡುಗೆ ನೀಡಲು ಸ್ಯಾಮ್ಸಂಗ್ ಜೊತೆಗಿನ ನಮ್ಮ ಪಾಲುದಾರಿಕೆಯ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ. ಇದು ಸಕಾರಾತ್ಮಕ ಬದಲಾವಣೆಯನ್ನು ತರಲು ಭಾರತದ ಯುವಜನರನ್ನು ಸಶಕ್ತಗೊಳಿಸುತ್ತದೆ” ಎಂದು ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಶೋಕ್ ಶೆಟ್ಟರ್ ಹೇಳಿದರು.
ಈ ಉಪಕ್ರಮದ ಮೂಲಕ, ಎಸ್ಆರ್ಐ-ಬಿ ಕೆಎಲ್ಇಐಟಿಯಲ್ಲಿ ವರ್ಷಕ್ಕೆ ಸುಮಾರು 100 ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಕೌಶಲ್ಯವನ್ನು ಹೆಚ್ಚಿಸಲು ಯೋಜಿಸಿದೆ. ಎಸ್ಆರ್ಐ-ಬಿ ಈಗಾಗಲೇ ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ನಾಲ್ಕು ಎಂಜಿನಿಯರಿಂಗ್ ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ, ಕೋಡಿಂಗ್ & ಪ್ರೋಗ್ರಾಮಿಂಗ್, ಐಓಟಿ ಮತ್ತು ಬಿಗ್ ಡೇಟಾ ಕೋರ್ಸ್ಗಳಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ತಮ್ಮ ತರಬೇತಿ ಪೂರ್ಣಗೊಂಡ ಪ್ರಮಾಣಪತ್ರವನ್ನು ಪಡೆದಿದ್ದಾರೆ.
ಮೆಷಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್ನಲ್ಲಿ ಜ್ಞಾನ ಹೊಂದಿರುವ ಇಂಜಿನಿಯರ್ಗಳು/ವಿಜ್ಞಾನಿಗಳಿಗೆ ಬೇಡಿಕೆ ಹೆಚ್ಚಿದೆ. ಕೃತಕ ಬುದ್ಧಿಮತ್ತೆ ಮತ್ತು ಮೆಷೀನ್ ಲರ್ನಿಂಗ್ ನ ಬೇಡಿಕೆಯಿಂದಾಗಿ, ಸ್ಯಾಮ್ಸಂಗ್ ಈ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ಅಗತ್ಯವಿರುವ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ ನ ಪಠ್ಯಕ್ರಮವನ್ನು ಕೌಶಲ್ಯ ಬೆಳೆಸಲು ಮತ್ತು ವಿದ್ಯಾರ್ಥಿಗಳು ತಮ್ಮ ಉದ್ಯೋಗ ಹುದ್ದೆಗಳಲ್ಲಿ ಬೆಳವಣಿಗೆ ಅವಕಾಶಗಳನ್ನು ಪಡೆಯಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್ಗಳಿಗೆ ಎಸ್ಆರ್ಐ -ಬಿ ತಜ್ಞರೊಂದಿಗೆ ಕೆಲಸ ಮಾಡುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಇದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಸವಾಲುಗಳನ್ನು ಪರಿಹರಿಸಲು ಪ್ರಾತ್ಯಕ್ಷಿಕೆಗಳ ಮೂಲಕ ತಂತ್ರಜ್ಞಾನಗಳ ಆಳವಾದ ತಿಳುವಳಿಕೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ ಕಂಪನಿಯ ಜಾಗತಿಕ ಪೌರತ್ವ ಕಾರ್ಯಕ್ರಮವಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಪರಿಣತಿ ಒದಗಿಸುವ ಮೂಲಕ ದೇಶದಲ್ಲಿ ಪ್ರಾವೀಣ್ಯತೆಯ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಸ್ಯಾಮ್ಸಂಗ್ ತನ್ನ ಸ್ಯಾಮ್ಸಂಗ್ ಇನ್ನೋವೇಶನ್ ಕ್ಯಾಂಪಸ್ ಕಾರ್ಯಕ್ರಮದ ಭಾಗವಾಗಿ ಐಐಟಿ-ದೆಹಲಿ, ಐಐಟಿ-ಕಾನ್ಪುರ್, ಐಐಟಿ-ಹೈದರಾಬಾದ್, ಐಐಟಿ-ಖರಗ್ಪುರ, ಐಐಟಿ-ರೂರ್ಕಿ ಮತ್ತು ಐಐಟಿ-ಗುವಾಹಟಿ, ಐಐಐಟಿಡಿಎಂ-ಕರ್ನೂಲ್ ಮತ್ತು ಐಐಟಿ-ಜೋಧ್ಪುರದಲ್ಲಿ ಇದುವರೆಗೆ ಎಂಟು ಸ್ಯಾಮ್ಸಂಗ್ ಇನ್ನೋವೇಶನ್ ಲ್ಯಾಬ್ಗಳನ್ನು ಸ್ಥಾಪಿಸಿದೆ. ಇಲ್ಲಿಯವರೆಗೆ, ಈ ಪ್ರಯೋಗಾಲಯಗಳು 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿವೆ.