ಬೆಂಗಳೂರು: ಭಾರತದ ಪ್ರಮುಖ ಆಟೋಮೋಟಿವ್ ತಯಾರಕರಾದ ಟಾಟಾ ಮೋಟಾರ್ಸ್ ಇಂದು ಭಾರತದ ಮೊದಲ ಎಎಂಟಿ ಸಿಎನ್ಜಿ ಕಾರುಗಳಾದ ಟಿಯಾಗೋ ಮತ್ತು ಟಿಗೋರ್ ಐಸಿಎನ್ಜಿ ಎಎಂಟಿ ಬಿಡುಗಡೆಯನ್ನು ಘೋಷಿಸಿದೆ. 28.06 ಕಿಮೀ/ಕೆಜಿಯ ಆಕರ್ಷಕ ಮೈಲೇಜ್ ಹೊಂದಿರುವ ಕಾರುಗಳಾದ ಟಿಯಾಗೋ ಐಸಿಎನ್ಜಿ ₹ 7.89 ಲಕ್ಷಗಳ ಆರಂಭಿಕ ಬೆಲೆಯಲ್ಲಿ ಮತ್ತು ಟಿಗೋರ್ ಐಸಿಎನ್ಜಿ (ಎಕ್ಸ್-ಶೋ ರೂಂ ದೆಹಲಿ) ₹ 8.84 ಲಕ್ಷಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಪ್ರಸ್ತುತ ಇರುವ ಬಣ್ಣಗಳ ಜೊತೆಗೆ, ಕಂಪನಿಯು ಟಿಯಾಗೋಗೆ ಆಸಕ್ತಿಕರ ಹೊಸ ಟೊರ್ನಾಡೊ ಬ್ಲೂ ಬಣ್ಣ ಸೇರಿಸಿದೆ. ಟಿಯಾಗೊ ಎನ್ಆರ್ಜಿಯಲ್ಲಿ ಗ್ರಾಸ್ಲ್ಯಾಂಡ್ ಬೀಜ್ ಮತ್ತು ಟಿಗೋರ್ನಲ್ಲಿ ಮಿಟಿಯೋರ್ ಬ್ರೋಂಜ್ ಬಣ್ಣ ದೊರೆಯುತ್ತದೆ.
ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ನ ಚೀಫ್ ಕಮರ್ಷಿಯಲ್ ಆಫೀಸರ್ ಅಮಿತ್ ಕಾಮತ್, “ಸಿಎನ್ಜಿ, ಅದರ ವ್ಯಾಪಕ ಲಭ್ಯತೆ ಮತ್ತು ಬಳಕೆಯಿಂದ ಹೆಸರುವಾಸಿಯಾಗಿದೆ. ಇದು ಹಲವು ವರ್ಷಗಳಲ್ಲಿ ಉತ್ತಮವಾಗಿ ಸ್ವೀಕರಿಸಲ್ಪಟ್ಟಿದೆ. ಟಾಟಾ ಮೋಟಾರ್ಸ್ ಸಿಎನ್ಜಿ ವಿಭಾಗದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದು, ಟ್ವಿನ್-ಸಿಲಿಂಡರ್ ತಂತ್ರಜ್ಞಾನ (ಹೆಚ್ಚಿನ ಬೂಟ್ ಸ್ಪೇಸ್ ಒದಗಿಸಲು ಸಹಾಯ ಮಾಡುತ್ತದೆ), ಉನ್ನತ ಮಟ್ಟದ ಫೀಚರ್ ಆಯ್ಕೆಗಳು ಮತ್ತು ಸಿಎನ್ಜಿ ನಲ್ಲಿ ಡೈರೆಕ್ಟ್ ಸ್ಟಾರ್ಟ್ ನಂತಹ ವಿವಿಧ ಉದ್ಯಮದ ಪ್ರಥಮ ವೈಶಿಷ್ಟ್ಯಗಳನ್ನು ಒದಗಿಸಿದೆ. ಟಾಟಾ ಮೋಟಾರ್ಸ್ ಟಿಯಾಗೋ, ಟಿಗೋರ್, ಅಲ್ಟ್ರೋಜ್ ಮತ್ತು ಪಂಚ್ ಸೇರಿದಂತೆ ವಿಸ್ತಾರವಾದ ಸಿಎನ್ಜಿ ಉತ್ಪನ್ನಗಳ ಪೋರ್ಟ್ ಪೋಲಿಯೊವನ್ನು ಹೊಂದಿದೆ. ಸಿಎನ್ಜಿ ಮಾರುಕಟ್ಟೆಯಲ್ಲಿ ಅಗ್ರ 2 ಬ್ರ್ಯಾಂಡ್ಗಳಲ್ಲಿ ಒಂದಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಆರ್ಥಿಕ ವರ್ಷ 24ರಲ್ಲಿ ಸಿಎನ್ಜಿ ಮಾರಾಟದಲ್ಲಿ ನಾವು ಗಮನಾರ್ಹವಾದ 67.9% ಬೆಳವಣಿಗೆಯನ್ನು ಅನುಭವಿಸಿದ್ದೇವೆ. ಈ ಇಂಟೆಲಿಜೆಂಟ್, ಸೇಫ್ ಮತ್ತು ಪವರ್ಫುಲ್ ಅವಳಿ ಉತ್ಪನ್ನಗಳ ಪರಿಚಯದೊಂದಿಗೆ, ಈ ವಿಧದ ಇಂಧನ ಆಯ್ಕೆಯ ಉತ್ಪನ್ನಗಳ ಬೇಡಿಕೆಯನ್ನು ಮತ್ತಷ್ಟು ಸುಧಾರಿಸುವ ವಿಶ್ವಾಸವನ್ನು ನಾವು ಹೊಂದಿದ್ದೇವೆ ಮತ್ತು ಪ್ರಯಾಣಿಕ ಕಾರುಗಳಲ್ಲಿ ನಮ್ಮ ಬೆಳವಣಿಗೆಯ ಆವೇಗವನ್ನು ಉಳಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.
ಉತ್ಪನ್ನಗಳ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಹತ್ತಿರದ ಅಧಿಕೃತ ಟಾಟಾ ಮೋಟಾರ್ಸ್ ಡೀಲರ್ ಶಿಪ್ ಅನ್ನು ಸಂಪರ್ಕಿಸಿ ಅಥವಾ ಕಂಪನಿಯ ವೆಬ್ ಸೈಟ್ ಗೆ ಭೇಟಿ ಕೊಡಿ- https://cars.tatamotors.com/