ಕರ್ನಾಟಕ: ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಬದ್ಧತೆಯಡಿ, ಕೋಟಕ್ ಮಹಿಂದ್ರ ಬ್ಯಾಂಕ್ ಲಿಮಿಟೆಡ್ (“KMBL”/“Bank”), ಗಂಭೀರವಾದ ಆರೋಗ್ಯಶುಶ್ರೂಷಾ ತುರ್ತುಸ್ಥಿತಿಗಾಗಿ ಸಂಪೂರ್ಣವಾಗಿ ಸಜ್ಜುಗೊಂಡ ಕಾರ್ಡಿಯಾಕ್ ಆಂಬುಲೆನ್ಸ್ ಒದಗಿಸುವ ಮೂಲಕ ಕರ್ನಾಟಕದ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (GIMS), ಬೆಂಬಲ ವಿಸ್ತರಿಸಿದೆ. ಈ ಕಾರ್ಡಿಯಾಕ್ ಆಂಬುಲೆನ್ಸ್ಅನ್ನು, ಕರ್ನಾಟಕದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿಯ ಸನ್ಮಾನ್ಯ ಸಚಿವರಾದ ಡಾ. ಶರಣಪ್ರಕಾಶ ರುದ್ರಪ್ಪ ಪಾಟಿಲ್ ಉದ್ಘಾಟಿಸಿದರು. ಇವರೊಡನೆ, ಜಿಐಎಮ್ಎಸ್ನ ನಿರ್ದೇಶಕ ಹಾಗೂ ಡೀನ್ ಡಾ. ಉಮೇಶ್ ಎಸ್.ಆರ್, ಕೋಟಕ್ ಮಹಿಂದ್ರ ಬ್ಯಾಂಕ್ನ ಸರ್ಕಾರೀ ವ್ಯವಹಾರಗಳ ವಿಭಾಗದ ಬಿಜಿನೆಸ್ ಮುಖ್ಯಸ್ಥರಾದ ಆರ್. ವರದರಾಜನ್ ಹಾಜರಿದ್ದರು.
ಜಿಐಎಮ್ಎಶ್ನ ಸಹಯೋಗದೊಂದಿಗೆ ಈ CSR ಮೂಲಕ, ಸ್ಥಳೀಯ ಸಮುದಾಯಗಳಿಗೆ ಆರೋಗ್ಯಶುಶ್ರೂಷೆಗೆ ಪ್ರವೇಶಾವಕಾಶವನ್ನು ಬಲಪಡಿಸುವುದು ಕೋಟಕ್ನ ಗುರಿಯಾಗಿದೆ. ಈ ಸಂಪೂರ್ಣವಾಗಿ ಸಜ್ಜುಗೊಂಡಿರುವ ಕಾರ್ಡಿಯಾಕ್ ಆಂಬುಲೆನ್ಸ್, ಕಾರ್ಡಿಯಾಕ್(ಹೃದ್ರೋಗ) ಮತ್ತು ಶ್ವಾಸ ಕಾಯಿಲೆಗಳು ಮುಂತಾದ ಆರಂಭಿಕ ತುರ್ತುಸ್ಥಿತಿ ಚಿಕಿತ್ಸೆಗಳನ್ನು ಒದಗಿಸಲಿದೆ. ಪ್ರತಿತಿಂಗಳೂ, ಸರಾಸರಿ 500 ರೋಗಿಗಳಿಗೆ ಬೆಂಬಲ ಒದಗಿಸಿ, ಗುಲ್ಬರ್ಗಾದ ಸಮುದಾಯದ ಆರೋಗ್ಯಶುಶ್ರೂಷಾ ಅಗತ್ಯಗಳಿಗೆ ಮಹತ್ತರ ಕೊಡುಗೆ ಸಲ್ಲಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಕೋಟಕ್ ಮಹಿಂದ್ರ ಬ್ಯಾಂಕ್ ಲಿಮಿಟೆಡ್ನ ಸರ್ಕಾರೀ ವ್ಯವಹಾರಗಳ ವಿಭಾಗದ ಬಿಜಿನೆಸ್ ಮುಖ್ಯಸ್ಥರಾದ ಆರ್. ವರದರಾಜನ್,” ಸ್ಥಳೀಯ ಸಮುದಾಯಗಳಿಗೆ ಆರೋಗ್ಯಶುಶ್ರೂಷಾ ಅಗತ್ಯಗಳಿಗೆ ಬೆಂಬಲ ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯೊಂದಿಗಿನ ನಮ್ಮ CSR ಸಹಯೋಗದ ಮೂಲಕ ನಾವು, ಹೃದ್ರೋಗ ಮತ್ತು ಶ್ವಾಸಂಬಂಧಿತ ರೋಗಗಳಿರುವ ರೋಗಿಗಳಿಗೆ ತುರ್ತುಸ್ಥಿತಿ ಬೆಂಬಲ ಒದಗಿಸಿ ರಾಜ್ಯದಲ್ಲಿ ಅತ್ಯುತ್ಕೃಷ್ಟ ಆರೋಗ್ಯಶುಶ್ರೂಷಾ ಸೇವೆಗಳ ಅಗತ್ಯಗಳಿಗೆ ಕೊಡುಗೆ ಸಲ್ಲಿಸಲಿದ್ದೇವೆ.”ಎಂದು ಹೇಳಿದರು.
ಜಿಐಎಮ್ಎಸ್ನ ನಿರ್ದೇಶಕ ಹಾಗೂ ಡೀನ್ ಡಾ. ಉಮೇಶ್ ಎಸ್.ಆರ್, “ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬದ್ಧತೆಯನ್ನು ಹೋಲುವ ಹಾಗೂ ಆಸ್ಪತ್ರೆಯ ಸೇವಾ_ಕೇಂದ್ರಿತ ಸಂಪ್ರದಾಯಕ್ಕೆ ಅನುಗುಣವಾಗಿರುವ ಮತ್ತೊಂದು ಸಾಧನೆಯನ್ನು ನೋಡಲು ನಮಗೆ ಸಂತೊಷವಾಗುತ್ತಿದೆ. ಅವಕಾಶವಂಚಿತ ಜನರಿಗೆ ಸೇವೆ ಸಲ್ಲಿಸಲಿರುವ ಈ ಇತ್ತೀಚಿನ ಕಾರ್ಡಿಯಾಕ್ ಆಂಬುಲೆನ್ಸ್ ಸೇರ್ಪಡೆಯು, ಹೃದ್ರೋಗಿಗಳಿಗೆ ಒಂದು ವರದಾನವಾಗಲಿದೆ. ಬಡವರಿಗೆ ಸೇವೆ ಒದಗಿಸಿ, ಚಿಕಿತ್ಸೆಯ ಗುಣಮಟ್ಟವನ್ನು ವರ್ಧಿಸುವ ನಮ್ಮ ಧ್ಯೇಯೋದ್ದೇಶವನ್ನು ಪೂರೈಸುವಲ್ಲಿ ನಮಗೆ ಬೆಂಬಲ ಒದಗಿಸಿರುವ ಕೋಟಕ್ ಮಹಿಂದ್ರ ಬ್ಯಾಂಕ್ಗೆ ನಾವು ಧನ್ಯವಾದ ಅರ್ಪಿಸುತ್ತೇವೆ.” ಎಂದು ಹೇಳಿದರು.
ಕೋಟಕ್ ಕರ್ಮ(Kotak Karma), ಕೋಟಕ್ ಮಹಿಂದ್ರಾ ಗ್ರೂಪ್ ಆಫ್ ಸಂಸ್ಥೆಗಳ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ(CSR) ಗುರುತಾಗಿದೆ.